Site icon Vistara News

Kamal Haasan: ವಿಚ್ಛೇದನ ನಂತರ ನನ್ನ ಬಳಿ ಇದ್ದದ್ದು ಕೇವಲ 60 ರೂ. : ಕಮಲ್‌ ಹಾಸನ್‌ ಮಾಜಿ ಪತ್ನಿ ಸಾರಿಕಾ ಹೇಳಿದ್ದೇನು?

Sarika Was Left With Only Rs 60 After Divorce From Kamal Haasan

ಬೆಂಗಳೂರು: ಕಮಲ್‌ ಹಾಸನ್‌ (Kamal Haasan) ಅವರ ಮಾಜಿ ಪತ್ನಿ ಹಿರಿಯ ನಟಿ ಸಾರಿಕಾ ತಮ್ಮ ಏಳನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸಾರಿಕಾ ಅವರ ಮೊದಲ ಸಿನಿಮಾ 1967ರಲ್ಲಿ ತೆರೆಕಂಡ ನಿರ್ದೇಶಕ ಬಿ.ಆರ್. ಚೋಪ್ರಾ ಅವರ ಹುಮ್ರಾಜ್ (Humraaz). ಬಾಲನಟಿಯಾಗಿ ಆಶೀರ್ವಾದ್, ಸತ್ರಕಂ, ಬಾಲಕ ಮತ್ತು ಬೇಟಿಯಂತಹ ಇತರ ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ, ಅವರು 1975ರಲ್ಲಿ ಕಾಗಜ್ ಕಿ ನಾವೊ (Kaagaz Ki Nao) ಸಿನಿಮಾ ಮೂಲ ಗುರುತಿಸಿಕೊಂಡರು. ಸಾರಿಕಾ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಆದರೆ ಸೂಪರ್‌ಸ್ಟಾರ್ ಕಮಲ್ ಹಾಸನ್‌ನಿಂದ ವಿಚ್ಛೇದನ ಪಡೆದ ನಂತರ ಸಾರಿಕಾ ಆರ್ಥಿಕ ಸಮಸ್ಯೆಗೆ ಗುರಿಯಾಗಿದ್ದು, ಹಲವು ಬಾರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸಾರಿಕಾ ರಾತ್ರೋ ರಾತ್ರಿ ಕೇವಲ 60 ರೂ. ಹಾಗೂ ಕಾರಿನೊಂದಿಗೆ ಹೊರಟುಬಿಟ್ಟೆ ಎಂದು ಹೇಳಿಕೊಂಡಿದ್ದಾರೆ.

ಪ್ರಾಮಾಣಿಕ ವ್ಯಕ್ತಿಯಾಗಿದ್ದೆ

ಸಿಮಿ ಗರೆವಾಲ್ ಅವರ ಚಾಟ್ ಶೋನಲ್ಲಿ 2000ರ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದರು ಸಾರಿಕಾ. ʻʻನಾನು ನನಗೆ ಮತ್ತು ನನ್ನ ತಾಯಿಗೆ ಸಾಕಷ್ಟು ಪ್ರಾಮಾಣಿಕ ವ್ಯಕ್ತಿಯಾಗಿ ಇದ್ದೆ. ಅವರಿಗೆ ಸಾಧ್ಯವಾಗುವಷ್ಟು ಒಳ್ಳೆಯದನ್ನೇ ಮಾಡಿದ್ದೇನೆ. ಇಲ್ಲದಿದ್ದರೆ ರಾತ್ರೋ ರಾತ್ರಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಆ ಸಮಯದಲ್ಲಿ ಕಮಲ್ ಮತ್ತು ಸಾರಿಕಾ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ನಿರ್ಧಾರ ಮಾಡಿದ್ದರು. ಕಮಲ್‌ ವಾರು ವಾಣಿ ಗಣಪತಿ ಅವರನ್ನು ವಿವಾಹವಾದ ಕಾರಣ ಹಲವಾರು ಬಾರಿ ತಮ್ಮ ಸಂಬಂಧವನ್ನು ಕೊನೆಗೊಳಿಸಲು ಪ್ರಯತ್ನಿಸಿದ್ದರು ಎಂದು ಬಹಿರಂಗಪಡಿಸಿದರು. ಕಮಲ್ ಅವರೇ ಸಾರಿಕಾ ಅವರನ್ನು ಇಷ್ಟ ಪಟ್ಟದ್ದರು. ಬಳಿಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆಗ ಸಾರಿಕಾ ಮತ್ತು ಕಮಲ್‌ ನಡುವಿನ ಸಂಬಂಧ ಕುರಿತು ಹೆಚ್ಚಾಗಿ ಚರ್ಚೆಗಳು ನಡೆದಿದ್ದವು. ಕಮಲ್ ಅವರೊಂದಿಗಿನ ಸಂಬಂಧಕ್ಕಾಗಿ ಸಾರಿಕಾ ಸಾಕಷ್ಟು ಹಿನ್ನಡೆಯನ್ನು ಅನುಭವಿಸಿದ್ದರು. ಸಾರಿಕಾ 1988ರಲ್ಲಿ ಕಮಲ್ ಅವರನ್ನು ವಿವಾಹವಾದರು. ಶ್ರುತಿ ಮತ್ತು ಅಕ್ಷರಾ ಹಾಸನ್ ಹುಟ್ಟಿದರು. ಕೊನೆಗೆ ದಂಪತಿ 2002ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ. ವಿಚ್ಛೇದನದ ನಂತರ, ಸಾರಿಕಾ ಹಲವು ಏರಿಳಿತವನ್ನು ಕಾಣುತ್ತಾರೆ.

ಇದನ್ನೂ ಓದಿ: Delhi MCD: ರಣರಂಗವಾದ ದೆಹಲಿ ಮಹಾನಗರ ಪಾಲಿಕೆ; ಬಿಜೆಪಿ ಕೌನ್ಸಿಲರ್​ಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದ ಮೇಯರ್​ ಶೆಲ್ಲಿ

ಇದಾದ ನಂತರ ಸಾರಿಕಾ ತನ್ನ ವೃತ್ತಿಜೀವನವನ್ನು ಮೊದಲಿನಿಂದಲೂ ಪುನರಾರಂಭಿಸಬೇಕಾಗಿತ್ತು. ಸಿಮಿ ಗರೆವಾಲ್ ಅವರ ಹಳೆಯ ಸಂದರ್ಶನವೊಂದರಲ್ಲಿ, ಸಾರಿಕಾ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ನನ್ನಲ್ಲಿ ಉಳಿದ್ದಿದ್ದು ಕೇವಲ 60 ರೂ. ಹಾಗೂ ಕಾರು

ಸಾರಿಕಾ ಮಾತನಾಡಿ ʻʻಡಿವೋರ್ಸ್‌ ಪಡೆದ ನಂತರ ನನ್ನಲ್ಲಿ ಉಳಿದ್ದಿದ್ದು ಕೇವಲ 60 ರೂ. ಹಾಗೂ ಕಾರು. ನಾನು ನನಗೆ ಮತ್ತು ನನ್ನ ತಾಯಿಗೆ ಸಾಕಷ್ಟು ಪ್ರಾಮಾಣಿಕ ವ್ಯಕ್ತಿಯಾಗಿ ಇದ್ದೆ. ರಾತ್ರೋರಾತ್ರಿ ನಾನು 60 ರೂಪಾಯಿ ಮತ್ತು ನನ್ನ ಕಾರಿನೊಂದಿಗೆ ಹೊರಟೆ ಬಿಟ್ಟೆ” ಎಂದು ಹೇಳಿಕೊಂಡಿದ್ದರು. ಮಾತು ಮುಂದುವರಿಸಿ ʻʻರಾತ್ರೋ ರಾತ್ರಿ ಹೊರಟೆ ಆದರೆ ಮುಂದೇನು ಎಂಬುದು ನನಗೆ ತಿಳಿದಿರಲಿಲ್ಲ. ನನ್ನ ಸ್ನೇಹಿತರ ಮನೆಗೆ ಹೋಗಿದ್ದೆ, ಅವರ ಮನೆಯಲ್ಲಿಯೇ ಸ್ನಾನ ಮಾಡಿ, ನನ್ನ ಕಾರಿನಲ್ಲಿ ಮಲಗುತ್ತಿದ್ದೆ. ಆದರೆ ಜೀವನಕ್ಕೆ ಹೆದರಿರಲಿಲ್ಲʼʼಎಂದರು.

ಕಮಲ್‌ ಈ ಬಗ್ಗೆ ಹೇಳಿದ್ದೇನು?

ಸಿಮಿ ಅವರು ತಮ್ಮ ಮಾಜಿ ಪತ್ನಿಗೆ ಆರ್ಥಿಕವಾಗಿ ಏಕೆ ಸಹಾಯ ಮಾಡಲಿಲ್ಲ ಎಂದು ಕಮಲ್ ಅವರನ್ನು ಕೇಳಿದಾಗ, ಕಮಲ್‌ ಈ ಬಗ್ಗೆ ಮಾತನಾಡಿ ʻʻಸಾರಿಕಾಳ ಕಷ್ಟದ ಪರಿಸ್ಥಿತಿ ನನಗೆ ತಿಳಿದಿತ್ತು. ಅವಳ ಆಗಿನ ಪರಿಸ್ಥಿತಿ ನೀವು ನೋಡಿದ್ದರೆ ನಿಜಕ್ಕೂ ಆಘಾತಕ್ಕೊಳಗಾಗುತ್ತೀರಿ. ಆದರೆ ಸೆಟ್‌ನಲ್ಲಿ ಅವಳು ದೊಡ್ಡ ಸ್ಟಾರ್‌ ಆಗಿ ಮಿಂಚುತ್ತಿದ್ದಳು. ಆದರೆ ಅವಳು ವಾಸಿಸುವ ಸ್ಥಳ ನೋಡಿದರೆ ಅವಳು ಸ್ಟಾರ್‌ ಅಲ್ಲ ಎಂದು ಅನಿಸುತ್ತಿತ್ತು. ಅವಳು ಎಲ್ಲಿ ವಾಸಿಸುತ್ತಿದ್ದಾರೆಂದು ಕೆಲವೇ ಜನರಿಗೆ ತಿಳಿದಿದೆ. ನಾನು ಅವಳಿಗೆ ಸಹಾನುಭೂತಿ ತೋರಿಸಿದೆ. ಆಕೆಗೆ ಆ ಸಹಾನುಭೂತಿ ಬೇಕಾಗಿರಲ್ಲ. ಸಹಾಯವೂ ಬೇಕಿರಲಿಲ್ಲ. ಅವಳಿಗೆ ಹಣದ ಸಹಾಯ ಮಾಡುತ್ತೇನೆ ಎಂದರೂ ಸಹ ಕೋಪ ಬರುತ್ತಿತ್ತು. ಆದ್ದರಿಂದ ಆಕೆಯನ್ನು ಕಂಡರೆ ನನಗೆ ಅಪಾರ ಹೆಮ್ಮೆ. ಆದ ಕಾರಣವೇ ಆಕೆಯನ್ನು ನಾನು ಮೆಚ್ಚಿ ಮದುವೆಯಾದೆʼʼ ಎಂದು ಕಮಲ್ ಉಲ್ಲೇಖಿಸಿದ್ದಾರೆ. 2004ರಲ್ಲಿ ಕಮಲ್ ಹಾಸನ್ ಮತ್ತು ಸಾರಿಕಾ ವಿಚ್ಛೇದನ ಪಡೆದುಕೊಂಡ ದೂರವಾಗಿದ್ದರು.

ಸಾರಿಕಾ 2020ರಲ್ಲಿ ಮಾಡರ್ನ್ ಲವ್ ಮುಂಬೈ ವೆಬ್ ಸಿರೀಸ್‌ ಮುಳಕ ಮತ್ತೆ ಕಮ್‌ಬ್ಯಾಕ್‌ ಆದರು. ಕೊನೆಯದಾಗಿ ಸೂರಜ್ ಬರ್ಜಾತ್ಯಾ ಅವರ ಉಂಚೈನಲ್ಲಿ ಕಾಣಿಸಿಕೊಂಡರು.

Exit mobile version