ಬೆಂಗಳೂರು: ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಮೂವರು ಖಾನ್‌ಗಳು (Ambani Bash) ಅಂದರೆ ಶಾರುಖ್, ಸಲ್ಮಾನ್, ಆಮೀರ್ ಅವರನ್ನು ಒಟ್ಟಿಗೆ ಸೇರಿಸಲು ಅಂಬಾನಿ ಭಾರಿ ಹಣವನ್ನು ಖರ್ಚು ಮಾಡಿರಬೇಕು ಎಂದು ಬಹಳಷ್ಟು ಜನರು ಊಹಿಸಿದ್ದುಂಟು. ಆದರೆ ವರದಿಗಳ ಪ್ರಕಾರ ಈ ಮೂವರೂ ಅನಂತ್ ಅಂಬಾನಿ ಅವರ ವಿವಾಹ ಪೂರ್ವ ಆಚರಣೆಗಳಲ್ಲಿ ಪ್ರದರ್ಶನ ನೀಡಲು ಒಂದು ಪೈಸೆಯನ್ನೂ ಪಡೆದುಕೊಂಡಿಲ್ಲ ಎಂದು ವರದಿಯಾಗಿದೆ.
ಚಡ್ಡಿ, ಬನಿಯನ್ ಮಾರಿದ್ರೂ ಇದು ಸಾಧ್ಯವಿಲ್ಲ!
ಅನಂತ್ ಅಂಬಾನಿ ಅವರ ವಿವಾಹ ಪೂರ್ವ ಸಂಭ್ರದಲ್ಲಿ ಶಾರುಖ್, ಆಮೀರ್, ಸಲ್ಮಾನ್ ʻಆರ್‌ಆರ್ ಆರ್ʼ ಸಿನಿಮಾದ ʻನಾಟು ನಾಟುʼ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿರುವ ವಿಡಿಯೊ ವೈರಲ್ ಆಗಿತ್ತು. ಇದಾದ ಬಳಿಕ ಶಾರುಖ್ ಅವರ ಹಳೆಯ ಸಂದರ್ಶನದ ವಿಡಿಯೊ ಭಾರಿ ಸದ್ದು ಮಾಡಿತ್ತು.
ಶಾರುಖ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ʻʻನಮ್ಮ ಮೂವರು ಖಾನ್ರನ್ನು ಒಟ್ಟಿಗೆ ಒಂದೇ ಕಡೆ ಸೇರಿಸುವಷ್ಟು ಸಂಪತ್ತು ಯಾರ ಬಳಿಯೂ ಇಲ್ಲ. ಚಡ್ಡಿ, ಬನಿಯನ್ ಮಾರಿದ್ರೂ ಇದು ಸಾಧ್ಯವಿಲ್ಲʼʼ ಎಂದು ಹೇಳಿಕೆ ನೀಡಿದ್ದರು. ಆದರೀಗ ಮುಕೇಶ್ ಅಂಬಾನಿ ಮಾಡಿ ತೋರಿಸಿದ್ದಾರೆ ಎಂಬ ಟ್ರೋಲ್‌ಗಳು ಹರಿದಾಡಿದವು. ಇಷ್ಟಾದರೂ ಈ ಮೂವರು ಪಡೆದ ಸಂಭಾವನೆ ಎಷ್ಟು ಎಂಬುದೇ ಜನರಿಗೆ ಇದ್ದ ಕುತೂಹಲ.
ಇದನ್ನೂ ಓದಿ: Kangana Ranaut : ಅಂಬಾನಿ ಮದುವೆ ಸಂಭ್ರಮದಲ್ಲಿ ʻಖಾನ್ʼಗಳ ಡ್ಯಾನ್ಸ್: ಇಂಥ ಆಮಿಷಗಳಿಗೆ ನಾನಂತೂ ಬಗ್ಗಲಿಲ್ಲ ಎಂದ ಕಂಗನಾ!
Salman x Shahrukh = Aamir Dancing on #NaatuNaatu song from #RRRMovie, #AnantAmbani#SalmanKhan #ShahRukhKhan #AamirKhan #AmbaniWedding pic.twitter.com/9guZmjSTWV
— Sajid Anwar SALMAN Bhai (@SajidAnwarBhai) March 4, 2024
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರ ಕಾಕ್‌ಟೈಲ್ ಪಾರ್ಟಿಯಲ್ಲಿ ಪ್ರದರ್ಶನ ನೀಡಲು ರಿಹಾನ್ನಾಗಿಂತ ಆಮೀರ್, ಶಾರುಖ್ ಮತ್ತು ಸಲ್ಮಾನ್ ಕಡಿಮೆ ಸಂಭಾವನೆ ಪಡೆದಿದ್ದಾರೆ ಎಂಬ ವದಂತಿಗಳು ಹುಟ್ಟುಕೊಂಡಿದ್ದವು. ಅಷ್ಟೇ ಅಲ್ಲ ಈ ಬಗ್ಗೆ ಟ್ರೋಲ್ ಹರಿದಾಡಿತ್ತು.
“ಅಂಬಾನಿ ತಮ್ಮ ವಿವಾಹಪೂರ್ವ ಸಮಾರಂಭದಲ್ಲಿ ಪ್ರದರ್ಶನ ನೀಡಲು ರಿಹಾನ್ನಾಗೆ 52 ಕೋಟಿ ರೂ. ಸಂಭಾವನೆ ನೀಡಿದ್ದಾರೆ. ಆದರೆ ಸಲ್ಮಾನ್, ಅಮೀರ್ ಮತ್ತು ಶಾರುಖ್ ಒಟ್ಟಿಗೆ ಪ್ರದರ್ಶನ ನೀಡಿದ್ದರೂ ಅಷ್ಟೂ ಹಣ ಅವರಿಗೆ ಸಿಕ್ಕಿಲ್ಲ. ಕಾರ್ಪೊರೇಟ್‌ಗಳಲ್ಲಿ ಹಾಗೇ. ಹಳೆಯ ಉದ್ಯೋಗಿಗಳು ಹಲವು ವರ್ಷಗಳಿಂದ ಕಷ್ಟಪಟ್ಟು ಕೆಲಸ ಮಾಡುತ್ತಾರೆ. 5-10% ಮಾತ್ರ ಸಂಬಳ ಹೆಚ್ಚಳವಿರುತ್ತದೆ. ಆದರೆ ಹೊಸ ಉದ್ಯೋಗಿಗಳಿಗೆ 30-40% ಹೆಚ್ಚಳದಲ್ಲಿ ನೇಮಕಗೊಳ್ಳುತ್ತಾರೆʼ ಎಂದು ಖಾನ್‌ಗಳನ್ನು ಟ್ರೋಲ್ ಮಾಡಿದ್ದರು ನೆಟ್ಟಿಗರು.
This it It🔥🔥🔥 Salman Khan,Shahrukh Khan and Aamir Khan dancing on Naatu Naatu at Anant Ambani’s wedding bash.
— Salman Khan Universe Fan Club (@salmanuniv) March 3, 2024
pic.twitter.com/DRSoOEg1uV
ಆದರೆ ಮೂಲಗಳ ಪ್ರಕಾರ ಈ ಮೂವರು ಖಾನ್‌ಗಳು ವಿವಾಹ ಪೂರ್ವ ಆಚರಣೆಗಳಲ್ಲಿ ಪ್ರದರ್ಶನ ನೀಡಲು ಒಂದು ಪೈಸೆಯನ್ನೂ ಪಡೆದುಕೊಂಡಿಲ್ಲ ಎಂದು ವರದಿಯಾಗಿದೆ. ಈ ಮೂವರನ್ನು ಒಟ್ಟಿಗೆ ವೇದಿಕೆ ಮೇಲೆ ತರಲು ಯಾವುದೇ ಪ್ರೀ ಪ್ಲ್ಯಾನಿಂಗ್ ಇಲ್ಲವಾಗಿತ್ತು ಎನ್ನಲಾಗಿದೆ. ಈ ಮೂವರು ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬದೊಂದಿಗೆ ವೈಯಕ್ತಿಕವಾಗಿ ಒಳ್ಳೆಯ ಸಂಬಂಧವನ್ನು ಹೊಂದಿದ್ದಾರೆ. ಆದ್ದರಿಂದ ಈ ಮೂವರು ಪ್ರೀತಿಯಿಂದ ಪ್ರದರ್ಶನ ನೀಡಿದ್ದರು ಎಂದು ವರದಿಯಾಗಿದೆ.