Kangana Ranaut : ಅಂಬಾನಿ ಮದುವೆ ಸಂಭ್ರಮದಲ್ಲಿ ʻಖಾನ್‌ʼಗಳ ಡ್ಯಾನ್ಸ್‌: ಇಂಥ ಆಮಿಷಗಳಿಗೆ ನಾನಂತೂ ಬಗ್ಗಲಿಲ್ಲ ಎಂದ ಕಂಗನಾ! - Vistara News

ಬಾಲಿವುಡ್

Kangana Ranaut : ಅಂಬಾನಿ ಮದುವೆ ಸಂಭ್ರಮದಲ್ಲಿ ʻಖಾನ್‌ʼಗಳ ಡ್ಯಾನ್ಸ್‌: ಇಂಥ ಆಮಿಷಗಳಿಗೆ ನಾನಂತೂ ಬಗ್ಗಲಿಲ್ಲ ಎಂದ ಕಂಗನಾ!

Kangana Ranaut : ಅಂಬಾನಿ ಪುತ್ರನ ಮದುವೆ ಸಮಾರಂಭದಲ್ಲಿ ಮೂರು ʻಖಾನ್‌ʼಗಳು ಒಟ್ಟಾಗಿ ವೇದಿಕೆಯಲ್ಲಿ ಕಂಡದ್ದು, ಪ್ರೆಗ್ನೆಂಟ್‌ ದೀಪಿಕಾ ಡ್ಯಾನ್ಸ್‌ ಮಾಡಿದ್ದು ಹೀಗೆ ಅನೇಕ ವಿಚಾರಗಳೂ ಟ್ರೋಲ್‌ಗೆ ಗುರಿಯಾಗಿವೆ. ಆದರೀಗ ನಟಿ ಕಂಗನಾ ಯಾರ ಹೆಸರನ್ನೂ ಉಲ್ಲೇಖಿಸಿದೇ ಈ ಬಗ್ಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

VISTARANEWS.COM


on

Kangana Ranaut takes indirect dig at Bollywood celebs
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಾಲಿವುಡ್‌ನಲ್ಲಿ ಸದ್ಯಕ್ಕೆ ಸುದ್ದಿಯಲ್ಲಿರುವುದು ಮುಕೇಶ್‌ ಅಂಬಾನಿ ಪುತ್ರನ ಮದುವೆ. ಇದರಲ್ಲಿ ಬಹುತೇಕ ಎಲ್ಲಾ ಬಾಲಿವುಡ್​​ ನಟ-ನಟಿಯರೂ ಭಾಗವಹಿಸಿ, ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ. ಮೂರು ʻಖಾನ್‌ʼಗಳು ಒಟ್ಟಾಗಿ ವೇದಿಕೆಯಲ್ಲಿ ಕಂಡದ್ದು, ಪ್ರೆಗ್ನೆಂಟ್‌ ದೀಪಿಕಾ ಡ್ಯಾನ್ಸ್‌ ಮಾಡಿದ್ದು ಹೀಗೆ ಅನೇಕ ವಿಚಾರಗಳೂ ಟ್ರೋಲ್‌ಗೆ ಗುರಿಯಾಗಿವೆ. ಆದರೀಗ ನಟಿ ಕಂಗನಾ ಯಾರ ಹೆಸರನ್ನೂ ಉಲ್ಲೇಖಿಸಿದೇ ಮೂರು ಖಾನ್‌ಗಳು ಒಟ್ಟಿಗೆ ಕಾಣಿಸಿಕೊಂಡಿದ್ದರ ಬಗ್ಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

ಈ ಹಿಂದೆ ಶಾರುಖ್‌ ಅವರು ʻʻನಮ್ಮ ಮೂವರು ಖಾನ್​ರನ್ನು ಒಟ್ಟಿಗೆ ಒಂದೇ ಕಡೆ ಸೇರಿಸುವಷ್ಟು ಸಂಪತ್ತು ಯಾರ ಬಳಿಯೂ ಇಲ್ಲ. ಚಡ್ಡಿ, ಬನಿಯನ್​ ಮಾರಿದ್ರೂ ಇದು ಸಾಧ್ಯವಿಲ್ಲʼʼ ಎಂದು ಹೇಳಿಕೆ ನೀಡಿದ್ದರು. ಆದರೀಗ ಮುಕೇಶ್‌ ಅಂಬಾನಿ ಮಾಡಿ ತೋರಿಸಿದ್ದಾರೆ ಎಂಬ ಟ್ರೋಲ್‌ಗಳು ಹರಿದಾಡಿದವು. ಇದೀಗ ಈ ಬಗ್ಗೆ ಕಂಗನಾ ಪರೋಕ್ಷವಾಗಿ ಮಾತನಾಡಿದ್ದಾರೆ.

ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ನಟಿ, ಹಿರಿಯ ಗಾಯಕಿ, ದಿವಂಗತ ಲತಾ ಮಂಗೇಶ್ಕರ್ ಅವರ ಹಳೆಯ ಸಂದರ್ಶನವನ್ನು ಹಂಚಿಕೊಂಡಿದ್ದಾರೆ.  ʻʻಖಾಸಗಿ ಸಮಾರಂಭವೊಂದರಲ್ಲಿ ಲತಾ ಅವರಿಗೆ ಹಾಡಲು ಕೇಳಿಕೊಳ್ಳಲಾಗಿತ್ತು. ಆ ಹಾಡಿಗೆ ದೊಡ್ಡಮೊತ್ತದಲ್ಲೇ ಹಣ ನೀಡುವುದಾಗಿಯೂ ಆಯೋಜಕರು ಹೇಳಿದ್ದರು. ಆದರೆ, ಹಾಡಲು ಲತಾ ನಿರಾಕರಿಸಿದರಂತೆ. ದುಡ್ಡಿಗಾಗಿ ನಾನು ಹಾಡಲಾರೆ ಎಂದು ಹೇಳಿದ್ದರಂತೆʼʼ. ಇದನ್ನೇ ಹೇಳಿರುವ ಕಂಗನಾ, ತಮ್ಮನ್ನು ಲತಾ ಅವರಿಗೆ ಹೋಲಿಸಿಕೊಂಡಿದ್ದರು.

ಇದನ್ನೂ ಓದಿ: Kangana Ranaut: 12th ಫೇಲ್ ಸಿನಿಮಾ ನಿರ್ದೇಶಕನ ಪತ್ನಿ ಬಗ್ಗೆ ಗರಂ ಆದ ಕಂಗನಾ ರಣಾವತ್‌!

ʻʻಹಲವರಿಗೆ ಹೇಗಾದರೂ ಮಾಡಿ, ಯಾವುದೇ ಮೂಲೆಗಳಿಂದ ಸಂಪತ್ತನ್ನು ಗಳಿಸುವ ಹಂಬಲ. ಆದರೆ ನಾನು ಹಾಗಲ್ಲ, ಇಂಥ ಆಮಿಷಗಳಿಗೆ ನಾನು ಒಳಗಾಗುವವಳಲ್ಲ. ನಾನು ಮದುವೆಯಲ್ಲಿ ಎಂದಿಗೂ ನೃತ್ಯ ಮಾಡಲಿಲ್ಲ. ಅನೇಕ ಸೂಪರ್ ಹಿಟ್ ಐಟಂ ಸಾಂಗ್​ಗಳಿಗೆ ನರ್ತಿಸುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ನಾನು ಅದಕ್ಕೆ ಒಪ್ಪಿದವಳಲ್ಲ. ಈ ರೀತಿಯ​ ಮಾರ್ಗ ಅನುಸರಿಸಿ ಹಣ ಮಾಡುವ ಜಾಯಮಾನ ನನ್ನದಲ್ಲʼʼ ಎಂದಿದ್ದರು. ಹೀಗೆ ಪರೋಕ್ಷವಾಗಿ ಶಾರುಖ್‌ ಹಾಗೂ ಇತರ ಬಾಲಿವುಡ್‌ ಸೆಲೆಬ್ರಟಿಗಳಿಗೆ ಟಾಂಗ್‌ ಕೊಟ್ಟಿದ್ದಾರೆ ಕಂಗನಾ.

ಅನಂತ್‌ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ಶಾರುಖ್ ಖಾನ್, ಆಮೀರ್ ಖಾನ್ ಮತ್ತು ಸಲ್ಮಾನ್ ಖಾನ್ RRR ಸ್ಟಾರ್ ರಾಮ್ ಚರಣ್ ಅವರೊಂದಿಗೆ “ನಾಟು ನಾಟು” ಹಾಡಿಗೆ ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದರು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ “ಕೇಸರಿಯಾ” ಹಾಡಿಗೆ ಸ್ಟೆಪ್ಸ್‌ ಹಾಕಿದ್ದರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ʻಗಲ್ಲನ್ ಗೂಡಿಯಾನ್‌ʼಗೆ ನೃತ್ಯ ಮಾಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Poonam Pandey: ಪೂನಂ ಪಾಂಡೆಗೆ ಮಕ್ಕಳಿಂದ ಚಿಕ್ಕ ರಿಕ್ವೆಸ್ಟ್‌; ಅಮ್ಮ ಹೊಡಿತಾರೆ ಎಂದ ಹಾಟ್‌ ಬೆಡಗಿ!

Poonam Pandey: ಪೂನಂ ಪಾಂಡೆ (Poonam Pandey) ಅವರು ಗರ್ಭಕಂಠ ಕ್ಯಾನ್ಸರ್‌ನಿಂದ (Cervical Cancer) ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಡಿ, ಮರುದಿನ ‘ಇಲ್ಲ ನಾನು ಸತ್ತಿಲ್ಲ’ ಎಂದು ನಟಿ ನೀಡಿದ ಸ್ಪಷ್ಟನೆ ಕೂಡ ಭಾರಿ ಸುದ್ದಿಯಾಗಿತ್ತು. ಇದೀಗ ಪೂನಂ ಪಾಂಡೆ (Poonam Pandey) ಇತ್ತೀಚೆಗೆ ಮುಂಬೈನಲ್ಲಿ ಸಾರ್ವಜನಿಕವಾಗಿ ಕಂಡರು. ಮೈದಾನಲ್ಲಿ ಕ್ರಿಕೆಟ್ ಆಡುತ್ತಿರುವ ಮಕ್ಕಳು ಪೂನಂ ಪಾಂಡೆ ಕಡೆ ಓದಿ ಬಂದು ಮಾತನಾಡಿಸಿದ್ದಾರೆ. ಜತೆಗೆ ಪೂನಂ ಅಭಿಮಾನಿಯೊಬ್ಬರು ತಾವೇ ಬಿಡಿಸಿದ ಚಿತ್ರವನ್ನು ಪೂನಂಗೆ ಗಿಫ್ಟ್‌ ಮಾಡಿದ್ದಾರೆ.

VISTARANEWS.COM


on

Poonam Pandey instagram id in a public place
Koo

ಬೆಂಗಳೂರು: ಪೂನಂ ಪಾಂಡೆ (Poonam Pandey) ಇತ್ತೀಚೆಗೆ ಮುಂಬೈನಲ್ಲಿ ಸಾರ್ವಜನಿಕವಾಗಿ ಕಂಡರು. ಪೂನಂ ನೋಡುತ್ತಲೇ ಮೈದಾನಲ್ಲಿ ಕ್ರಿಕೆಟ್ ಆಡುತ್ತಿರುವ ಮಕ್ಕಳು ಪೂನಂ ಪಾಂಡೆ ಕಡೆ ಓದಿ ಬಂದು ಮಾತನಾಡಿಸಿದರು. ಜತೆಗೆ ಪೂನಂ ಅಭಿಮಾನಿಯೊಬ್ಬರು ತಾವೇ ಬಿಡಿಸಿದ ಚಿತ್ರವನ್ನು ಪೂನಂಗೆ ಗಿಫ್ಟ್‌ ಮಾಡಿದ್ದಾರೆ. ಇದೀಗ ಪೂನಂ ಅವರ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಮಕ್ಕಳು ಪೂನಂ ಹತ್ತಿರ ಓಡಿ ಬರುತ್ತಿದ್ದಂತೆ ಅದರಲ್ಲಿ ಒಬ್ಬ ಬಾಲಕ ಪೂನಂ ಪಾಂಡೆಗೆ ʻನಿಮ್ಮ ಇನ್‌ಸ್ಟಾಗ್ರಾಂ ಐಡಿ ಕೊಡಿʼ ಎಂದು ಕೇಳಿದ್ದಾನೆ. ಇದಕ್ಕೆ ಪೂನಂ ʻನನ್ನ ಇನ್‌ಸ್ಟಾಗ್ರಾಂ ಐಡಿ ನಿನಗೆ ಯಾಕೆ ಬೇಕುʼ? ಅದನ್ನ ತಗೊಂಡು ನೀನೇನು ಮಾಡ್ತೀಯಾ? ಎಂದು ಮರು ಪ್ರಶ್ನೆಯನ್ನ ಹಾಕಿದ್ದಾರೆ. ʻನಿನಗೆ ನಿಮ್ಮ ಅಮ್ಮನನ್ನ ಕಂಡರೆ ಭಯ ಇಲ್ಲವಾ..? ನಿಮ್ಮ ತಾಯಿಗೆ ಈ ವಿಚಾರ ಗೊತ್ತಾದರೆ ಹೊಡೆಯುತ್ತಾರೆʼ ಎಂದಿದ್ದಾರೆ. ಈ ಸನ್ನಿವೇಶದ ವಿಡಿಯೊ ವೈರಲ್‌ ಆಗುತ್ತಿದೆ. ಪೂನಂ ಪಬ್ಲಿಸಿಟಿ ಸ್ಟಂಟ್‌ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಇನ್ನು ಮತ್ತೊಬ್ಬರು ಪೂನಂ ಚಿತ್ರವನ್ನು ಬಿಡಿಸಿ ಗಿಫ್ಟ್‌ ಕೊಟ್ಟಿರುವ ಬಗ್ಗೆ ಮಾಧ್ಯಮದ ಜತೆ ಮಾತನಾಡಿದರು. ʻʻಈ ಫೋಟೊ ಫ್ರೇಮ್‌ ನನಗೆ ಗಿಫ್ಟ್‌ ಆಗಿ ಕೊಟ್ಟಿರುವುದು ಆಸ್ಕರ್‌ಗಿಂತ ಕಡಿಮೆಯಿಲ್ಲ. ಫ್ಯಾನ್ಸ್‌ ಪ್ರೀತಿ ನೋಡಿ ನನ್ನ ಜೀವನದಲ್ಲಿ ನಾನು ಏನನ್ನಾದರೂ ಗಳಿಸಿದ್ದೇನೆ ಎಂದು ಖುಷಿಯಾಗುತ್ತಿದೆ. ನಾನು ಈ ಉದ್ಯಮಕ್ಕೆ ಬಂದು 12 ವರ್ಷಗಳು ಕಳೆದಿವೆ. ನೀವು ಜೀವನದಲ್ಲಿ ಏನು ಬೇಕಾದರೂ ಗಳಿಸಬಹುದು ನಿಜವಾದ ಅಭಿಮಾನಿಯನ್ನು ಗಳಿಸುವುದು ಕಷ್ಟʼʼ ಎಂದಿದ್ದಾರೆ.

ಇದನ್ನೂ ಓದಿ: Poonam Pandey: ಪೂನಂ ಪಾಂಡೆಗೆ ಕಾನೂನು ಸಂಕಷ್ಟ; 100 ಕೋಟಿ ರೂ. ಮಾನನಷ್ಟ ಕೇಸ್

ಪೂನಂ ಪಾಂಡೆ (Poonam Pandey) ಅವರು ಗರ್ಭಕಂಠ ಕ್ಯಾನ್ಸರ್‌ನಿಂದ (Cervical Cancer) ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಡಿ, ಮರುದಿನ ‘ಇಲ್ಲ ನಾನು ಸತ್ತಿಲ್ಲ’ ಎಂದು ನಟಿ ನೀಡಿದ ಸ್ಪಷ್ಟನೆ ಕೂಡ ಭಾರಿ ಸುದ್ದಿಯಾಗಿತ್ತು.

ಪೂನಂ ವಿಡಿಯೊದಲ್ಲಿ ʻʻನಿಮ್ಮೆಲ್ಲರೊಂದಿಗೆ ಮಹತ್ವದ ಸಂಗತಿಯೊಂದನ್ನು ಹೇಳಲೇಬೇಕಾಗಿದೆ. ನಾನು ಇನ್ನೂ ಇದ್ದೇನೆ. ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ನನ್ನನ್ನು ಬಲಿ ತೆಗೆದುಕೊಂಡಿಲ್ಲ, ದುರಂತವೆಂದರೆ, ಈ ರೋಗವನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಸಾವಿರಾರು ಮಹಿಳೆಯರು ಜೀವ ಕಳೆದುಕೊಂಡಿದ್ದಾರೆ. ಇತರ ಕೆಲವು ಕ್ಯಾನ್ಸರ್ ಗಳಿಗಿಂತ ಭಿನ್ನವಾಗಿ ಗರ್ಭಕಂಠದ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಎಚ್​ಪಿವಿ ಲಸಿಕೆ ಮತ್ತು ಆರಂಭಿಕ ಪರೀಕ್ಷೆಗಳು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ರೋಗದಿಂದ ಯಾರೂ ಪ್ರಾಣ ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮಗೆ ಹಲವಾರು ಮಾರ್ಗಗಳಿವೆ. ವಿಮರ್ಶಾತ್ಮಕ ಜಾಗೃತಿಯೊಂದಿಗೆ ಪರಸ್ಪರರನ್ನು ಸಬಲೀಕರಣಗೊಳಿಸೋಣ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರತಿಯೊಬ್ಬ ಮಹಿಳೆಗೆ ಮಾಹಿತಿ ನೀಡಬೇಕಾಗಿದೆ. ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ನನ್ನ ಬಯೊದಲ್ಲಿರುವ ಲಿಂಕ್ ಗೆ ಭೇಟಿ ನೀಡಿ. ಈ ರೋಗದ ವಿನಾಶಕಾರಿ ಪರಿಣಾಮವನ್ನು ಕೊನೆಗೊಳಿಸಲು ಒಟ್ಟಾಗಿ ಪ್ರಯತ್ನಿಸೋಣʼʼ ಎಂದು ಪೂನಂ ಪಾಂಡೆ ತಮ್ಮ ಇನ್​ಸ್ಟಾಗ್ರಾಮ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದರು..

Continue Reading

ಬಾಲಿವುಡ್

AR Rahman: ಪ್ರಶಸ್ತಿಗಳೆಲ್ಲ ಚಿನ್ನವೆಂದು ಭಾವಿಸಿ ಎಆರ್ ರೆಹಮಾನ್ ತಾಯಿ ಮಾಡಿದ್ದೇನು?

AR Rahman: ರೆಹಮಾನ್ ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು 32 ಕ್ಕೂ ಹೆಚ್ಚು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಹೊಂದಿದ್ದಾರೆ. ಅದೇ ಭಾರತೀಯ ಪ್ರಶಸ್ತಿಗಳನ್ನು ತಮ್ಮ ತವರು ಚೆನ್ನೈನಲ್ಲಿರುವ ವಿಶೇಷ ಕೋಣೆಯಲ್ಲಿ ಇಟ್ಟಿರುವುದಾಗಿ ಬಹಿರಂಗಪಡಿಸಿದರು. ಈ ಬಗ್ಗೆ ಮಾತನಾಡಿ ʻʻಕೆಲವು ಪ್ರಶಸ್ತಿಗಳು ನನ್ನ ಬಳಿ ಇದುವೆರೆಗೆ ಬಂದಿಲ್ಲ. ಕೆಲವು ನಿರ್ದೇಶಕರು ಅವುಗಳನ್ನು ಸ್ಮರಣಿಕೆಗಳಂತೆ ಇಟ್ಟುಕೊಂಡಿದ್ದಾರೆʼʼಎಂದರು.

VISTARANEWS.COM


on

AR Rahman says his mother thought his Oscar statuettes were made of gold
Koo

ಬೆಂಗಳೂರು: ಸಂಗೀತ ನಿರ್ದೇಶಕ, ಗಾಯಕ ಎಆರ್ ರೆಹಮಾನ್ (AR Rahman) ಅವರಿಗೆ 2ಆಸ್ಕರ್, 2 ಗ್ರ್ಯಾಮಿ, 1 BAFTA, 1 ಗೋಲ್ಡನ್ ಗ್ಲೋಬ್, 6 ರಾಷ್ಟ್ರ ಪ್ರಶಸ್ತಿ, 32 ಫಿಲ್ಮ್​ಫೇರ್ ಅವಾರ್ಡ್​ಗಳು ಬಂದಿವೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ. ಆದರೆ ಈ ಪ್ರಶಸ್ತಿಗಳನ್ನೆಲ್ಲ ಎಲ್ಲಿ ಇಟ್ಟಿದ್ದಾರೆ ಎಂಬ ಪ್ರಶ್ನೆ ಅವರಿಗೆ ಎದುರಾಗಿದೆ. ಆಗ ರೆಹಮಾನ್ ಅವರು ಉತ್ತರ ನೀಡಿ ʻʻನನ್ನ ತಾಯಿ ಕರೀಮಾ ಬೇಗಂ (Kareema Begum) ದುಬೈ ಮನೆಯಲ್ಲಿ ಸಂಗ್ರಹಿಟ್ಟಿದರು. ಪ್ರಶಸ್ತಿಗಳು ಚಿನ್ನದಿಂದ ಮಾಡಲ್ಪಟ್ಟಿವೆ ಎಂದು ಅವರು ಭಾವಿಸಿ ಟವೆಲ್‌ನಲ್ಲಿ ಸುತ್ತಿ ಇಟ್ಟಿದ್ದರುʼಎಂದು ಹೇಳಿದ್ದಾರೆ.

ಈ ಬಗ್ಗೆ ರೆಹಮಾನ್ ಮಾತನಾಡಿ ʻʻನಾನು ದುಬೈನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಇಟ್ಟುಕೊಂಡಿದ್ದೇನೆ. ಏಕೆಂದರೆ ಅವೆಲ್ಲವೂ ಟವೆಲ್‌ನಲ್ಲಿ ಸುತ್ತಿಡಲಾಗಿತ್ತು. ನನ್ನ ತಾಯಿ ಅದನ್ನು ಟವೆಲ್‌ನಲ್ಲಿ ಸುತ್ತಿಟ್ಟಿದ್ದರು. ಪ್ರಶಸ್ತಿಗಳನ್ನು ಚಿನ್ನದಿಂದ ಮಾಡಿದ್ದಾರೆ ಅಂದುಕೊಂಡಿದ್ದರು. ಅವರು ತೀರಿ ಹೋದ ನಂತರ ಆ ಅವಾರ್ಡ್​ಗಳನ್ನು ನಾನು ದುಬೈ ಫಿರ್ದೌಸ್ ಸ್ಟುಡಿಯೋಗೆ ನೀಡಿದ್ದೇನೆ. ಇದೊಂದು ಒಳ್ಳೆಯ ಶೋಕೇಸ್’ ಎಂದಿದ್ದಾರೆ ರೆಹಮಾನ್. 2008ರ ಚಲನಚಿತ್ರ ಸ್ಲಮ್‌ಡಾಗ್ ಮಿಲಿಯನೇರ್‌ಗಾಗಿ ʻಗೋಲ್ಡನ್ ಗ್ಲೋಬ್ʼ ಅನ್ನು ಗೆದಿದ್ದರು.

ರೆಹಮಾನ್ ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು 32 ಕ್ಕೂ ಹೆಚ್ಚು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಹೊಂದಿದ್ದಾರೆ. ಅದೇ ಭಾರತೀಯ ಪ್ರಶಸ್ತಿಗಳನ್ನು ತಮ್ಮ ತವರು ಚೆನ್ನೈನಲ್ಲಿರುವ ವಿಶೇಷ ಕೋಣೆಯಲ್ಲಿ ಇಟ್ಟಿರುವುದಾಗಿ ಬಹಿರಂಗಪಡಿಸಿದರು. ಈ ಬಗ್ಗೆ ಮಾತನಾಡಿ ʻʻಕೆಲವು ಪ್ರಶಸ್ತಿಗಳು ನನ್ನ ಬಳಿ ಇದುವೆರೆಗೆ ಬಂದಿಲ್ಲ. ಕೆಲವು ನಿರ್ದೇಶಕರು ಅವುಗಳನ್ನು ಸ್ಮರಣಿಕೆಗಳಂತೆ ಇಟ್ಟುಕೊಂಡಿದ್ದಾರೆʼʼಎಂದರು.

ಇದನ್ನೂ ಓದಿ: AR Rahman: ಪುಟಾಣಿ ಹುಡುಗಿಯ ಮಾತು ಕೇಳಿ ಎಆರ್ ರೆಹಮಾನ್ ಫಿದಾ; ಕೀಬೋರ್ಡ್ ಕೊಡುತ್ತೇನೆ ಎಂದ ಗಾಯಕ!

ಈ ಹಿಂದೆ ಮಾಧ್ಯಮವೊಂದರ ಸಂದರ್ಶನದಲ್ಲಿ ತಮ್ಮ ಕಷ್ಟದ ದಿನಗಳನ್ನು ನೆನೆದು ಭಾವುಕರಾದರು. ʻನಾನು ಸ್ಟುಡಿಯೊವನ್ನು ನಿರ್ಮಿಸಿದಾಗ, ಆಂಪ್ಲಿಫೈಯರ್ ಅಥವಾ ಈಕ್ವಲೈಸರ್ ಖರೀದಿಸಲು ನನ್ನ ಬಳಿ ಹಣವಿರಲಿಲ್ಲ. ಶೆಲ್ಫ್ ಮತ್ತು ಕಾರ್ಪೆಟ್ನೊಂದಿಗೆ ಕೇವಲ ಎಸಿ ಇತ್ತು. ಏನನ್ನೂ ಖರೀದಿಸಲು ಹಣವಿಲ್ಲದೆ ಕುಳಿತಿದ್ದೆ. ಆಗ ನನ್ನ ತಾಯಿ ಆಭರಣಗಳನ್ನು ಒತ್ತೆ ಇಡಲು ನೀಡಿದಳು. ಬಳಿಕ ಮೊದಲ ರೆಕಾರ್ಡರ್ ತಂದೆʼʼ ಎಂದು ಅವರು ಹೇಳಿದರು. ಕರೀಮಾ ಬೇಗಂ 2020ರಲ್ಲಿ ನಿಧನರಾಗಿದ್ದಾರೆ.

Continue Reading

ಬಾಲಿವುಡ್

Munjya Teaser: ʻಮುಂಜ್ಯಾʼ ಟೀಸರ್‌ ಔಟ್‌; ಇದು ಭಾರತದ ಮೊದಲ CGI ಚಿತ್ರ!

Munjya Teaser: ಅನಿಮೇಟೆಡ್ ಪಾತ್ರವನ್ನು ಒಳಗೊಂಡಿರುವ ಭಾರತದ ಮೊದಲ CGI (ಕಂಪ್ಯೂಟರ್-ಜನರೇಟೆಡ್ ಇಮೇಜರಿ) ಚಿತ್ರ ಎಂದು ಹೇಳಲಾಗಿದೆ. ‘ಮುಂಜ್ಯ’ ಚಿತ್ರದ ಟೀಸರ್ ಹಾರರ್ ಮತ್ತು ಹಾಸ್ಯದ ಸಮ್ಮಿಶ್ರಣ ಇದೆ.
ʻಮುಂಜ್ಯಾʼ ಟೀಸರ್‌ ಒಂದು ನಿಮಿಷ ಇದ್ದು, CGI ಪಾತ್ರವಾದ ಮುಂಜ್ಯನನ್ನು ಪರಿಚಯಿಸಲಾಗಿದೆ.ಮೇ 24 ರಂದು ಚಿತ್ರತಂಡ ಟ್ರೈಲರ್‌ ಅನಾವರಣಗೊಳಿಸಲಿದೆ. ಟೀಸರ್‌ ನೋಡಿದರೆ ಹಾರರ್‌ ಜತೆ ಕಾಮಿಡಿ ಕೂಡ ಇದೆ.

VISTARANEWS.COM


on

Munjya teaser unveils first computer generated actor
Koo

ಬೆಂಗಳೂರು: ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ʻಸ್ತ್ರೀʼ ಚಿತ್ರದ ನಿರ್ಮಾಪಕ ಮತ್ತೊಂದು ಭಯಾನಕ ಚಿತ್ರವೊಂದು ತೆರೆಗೆ ತರಲು ಸಜ್ಜಾಗಿದ್ದಾರೆ. ʻಮುಂಜ್ಯಾʼ ಸಿನಿಮಾದ ಹೆಸರು (Munjya Teaser). ಇದು ಭಾರತದ ಮೊದಲ CGI ನಾಯಕನನ್ನು ಒಳಗೊಂಡಿರುವ ಸಿನಿಮಾ ಎಂದು ಹೇಳಲಾಗುತ್ತಿದೆ (first computer generated actor) . ʻಮುಂಜ್ಯಾʼ ಟೀಸರ್‌ ಮೇ 21ರಂದು ರಿಲೀಸ್‌ ಆಗಿದೆ.

ಅನಿಮೇಟೆಡ್ ಪಾತ್ರವನ್ನು ಒಳಗೊಂಡಿರುವ ಭಾರತದ ಮೊದಲ CGI (ಕಂಪ್ಯೂಟರ್-ಜನರೇಟೆಡ್ ಇಮೇಜರಿ) ಚಿತ್ರ ಎಂದು ಹೇಳಲಾಗಿದೆ. ‘ಮುಂಜ್ಯ’ ಚಿತ್ರದ ಟೀಸರ್ ಹಾರರ್ ಮತ್ತು ಹಾಸ್ಯದ ಸಮ್ಮಿಶ್ರಣ ಇದೆ.

ʻಮುಂಜ್ಯಾʼ ಟೀಸರ್‌ ಒಂದು ನಿಮಿಷ ಇದ್ದು, CGI ಪಾತ್ರವಾದ ಮುಂಜ್ಯನನ್ನು ಪರಿಚಯಿಸಲಾಗಿದೆ. ಟೀಸರ್‌ನಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ 2010ರ ಬ್ಲಾಕ್‌ಬಸ್ಟರ್ ಚಿತ್ರ ದಬಾಂಗ್‌ನ ಜನಪ್ರಿಯ ಗೀತೆ ಮುನ್ನಿ ಬದ್ನಾಮ್ ಹುಯಿ ಹಾಡು ಟಿವಿಯಲ್ಲಿ ಪ್ಲೇ ಆಗುತ್ತಿದ್ದಂತೆ ʻಮುಂಜ್ಯಾʼ ಅನಾವರಣ ಆಗಿದ್ದಾನೆ. ʻಮುಂಜ್ಯಾʼ ನಗರಕ್ಕೆ ಪ್ರವೇಶಿಸುವ , ಹಾಗೇ ಟಿವಿ ನೋಡುತ್ತಿದ್ದವ ಏಕಾಏಕಿ ಟಿವಿ ಆಫ್‌ ಮಾಡುವಾಗ ಕೋಪಗೊಂಡ ʻಮುಂಜ್ಯಾʼ ಕೋಣೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸುವ ಸನ್ನಿವೇಶ ಟೀಸರ್‌ನಲ್ಲಿದೆ. ಮೇ 24 ರಂದು ಚಿತ್ರತಂಡ ಟ್ರೈಲರ್‌ ಅನಾವರಣಗೊಳಿಸಲಿದೆ. ಟೀಸರ್‌ ನೋಡಿದರೆ ಹಾರರ್‌ ಜತೆ ಕಾಮಿಡಿ ಕೂಡ ಇದೆ.

ಇದನ್ನೂ ಓದಿ: Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

ಮುಂಜ್ಯ ಚಿತ್ರವನ್ನು ಆದಿತ್ಯ ಸರ್ಪೋತದಾರ್ ನಿರ್ದೇಶಿಸಿದ್ದಾರೆ ಮತ್ತು ಶಾರ್ವರಿ, ಅಭಯ್ ವರ್ಮಾ, ಮೋನಾ ಸಿಂಗ್ ಮತ್ತು ಬಾಹುಬಲಿ ಚಲನಚಿತ್ರ ಖ್ಯಾತಿಯ ಸತ್ಯರಾಜ್ ಅವರ ಸಮಗ್ರ ತಾರಾಗಣವನ್ನು ಒಳಗೊಂಡಿದೆ. ನಿರೇನ್ ಭಟ್ ಅವರ ಚಿತ್ರಕಥೆ, ಯೋಗೇಶ್ ಚಂಡೇಕರ್ ಸಂಭಾಷಣೆ ಇದೆ. ಸಚಿನ್-ಜಿಗರ್ ಸಂಗೀತ ಸಂಯೋಜಿಸಿದ್ದಾರೆ. ಅಮಿತಾಭ್‌ ಭಟ್ಟಾಚಾರ್ಯ ಸಾಹಿತ್ಯ ಇದೆ.

ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣದ ಮುಂಜ್ಯವನ್ನು ದಿನೇಶ್ ವಿಜನ್ ಮತ್ತು ಅಮರ್ ಕೌಶಿಕ್ ನಿರ್ಮಿಸಿದ್ದಾರೆ. ಚಿತ್ರ ಜೂನ್ 7 ರಂದು ದೇಶಾದ್ಯಂತ ತೆರೆಗೆ ಬರಲಿದೆ.

Continue Reading

ಸಿನಿಮಾ

Suhana Khan: ಇಂದು ಶಾರುಖ್‌ ಪುತ್ರಿಗೆ ಹುಟ್ಟುಹಬ್ಬದ ಸಂಭ್ರಮ: ಅನನ್ಯಾ ಪಾಂಡೆ‌, ನವ್ಯಾ ಕ್ಯೂಟ್‌ ವಿಶಸ್‌!

Suhana Khan: ಬರ್ತ್‌ಡೇ ಗರ್ಲ್ ಸುಹಾನಾ ಖಾನ್‌ಗೆ, ಅನನ್ಯಾ ಪಾಂಡೆ, ಶನಯಾ ಕಪೂರ್ ಮತ್ತು ನವ್ಯಾ ಅವರಿಂದ ವಿಶೇಷವಾಗಿ ವಿಶಸ್‌ ಬಂದಿವೆ. ಮತ್ತೊಂದೆಡೆ, ನವ್ಯಾ ನವೇಲಿ ನಂದಾ ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಸುಹಾನಾ ಅವರ ಫೋಟೊವನ್ನು ಹಂಚಿಕೊಂಡು ʻʻಹುಟ್ಟುಹಬ್ಬದ ಶುಭಾಶಯಗಳು ಸುಹಾನಾ” ಎಂದು ಬರೆದಿದ್ದಾರೆ. ಸುಹಾನಾ ಖಾನ್ ಕಳೆದ ತಿಂಗಳು ಇಟಲಿಯ ಮಿಲನ್‌ಗೆ ಸೋಲೊ ಡ್ರಿಪ್‌ ಹೋಗಿದ್ದರು. ತಮ್ಮ ವಕೇಶನ್‌ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುವ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದರು.

VISTARANEWS.COM


on

Suhana Khan Birthday Big Love From Ananya Panday
Koo

ಬೆಂಗಳೂರು: ಇಂದು ಶಾರುಖ್‌ ಪುತ್ರಿ ಸುಹಾನಾ ಖಾನ್ (Suhana Khan) ಅವರಿಗೆ ಜನುಮದಿನದ ಸಂಭ್ರಮ. ಮೇ 21ರಂದು ಶಾರುಖ್ ಒಡೆತನದ ಕೋಲ್ಕತ್ತಾ ನೈಟ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದಿದೆ. ಈ ಮೂಲಕ ಸುಹಾನಾ ಬರ್ತ್​ಡೇಗೆ ಕೆಕೆಆರ್ ಗೆಲುವಿನ ಉಡುಗೊರೆ ನೀಡಿದಂತೆ ಆಗಿದೆ. ಈ ವಿಶೇಷ ಸಂದರ್ಭದಲ್ಲಿ, ಅವರ ಸ್ನೇಹಿತರಾದ ಅನನ್ಯಾ ಪಾಂಡೆ ಅವರಿಗೆ ವಿಶೇಷ ರೀತಿಯಲ್ಲಿ ಶುಭ ಹಾರೈಸಿದರು. ಅನನ್ಯಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಐಪಿಎಲ್ ಪಂದ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ. “ನನ್ನ ಮುದ್ದು ಹುಡುಗಿಗೆ ಜನ್ಮದಿನದ ಶುಭಾಶಯಗಳು! ಇಡೀ ಪ್ರಪಂಚದಲ್ಲಿ ನಿಮ್ಮಂತೆ ಯಾರೂ ಇಲ್ಲ. ನಾನು ನಿನ್ನನ್ನು ಪ್ರೀತಿಸುತ್ತೇನೆ ಸುಜಿʼʼಎಂದು ಬರೆದುಕೊಂಡಿದ್ದಾರೆ.

ಬರ್ತ್‌ಡೇ ಗರ್ಲ್ ಸುಹಾನಾ ಖಾನ್‌ಗೆ, ಅನನ್ಯಾ ಪಾಂಡೆ, ಶನಯಾ ಕಪೂರ್ ಮತ್ತು ನವ್ಯಾ ಅವರಿಂದ ವಿಶೇಷವಾಗಿ ವಿಶಸ್‌ ಬಂದಿವೆ. ಮತ್ತೊಂದೆಡೆ, ನವ್ಯಾ ನವೇಲಿ ನಂದಾ ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಸುಹಾನಾ ಅವರ ಫೋಟೊವನ್ನು ಹಂಚಿಕೊಂಡು ʻʻಹುಟ್ಟುಹಬ್ಬದ ಶುಭಾಶಯಗಳು ಸುಹಾನಾ” ಎಂದು ಬರೆದಿದ್ದಾರೆ. ಸುಹಾನಾ ಖಾನ್ ಕಳೆದ ತಿಂಗಳು ಇಟಲಿಯ ಮಿಲನ್‌ಗೆ ಸೋಲೊ ಡ್ರಿಪ್‌ ಹೋಗಿದ್ದರು. ತಮ್ಮ ವಕೇಶನ್‌ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುವ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದರು.

ಸುಹಾನಾ ತಂದೆ ಶಾರುಖ್ ಖಾನ್ ಅವರ ಆಸ್ತಿ 6300 ಕೋಟಿ ರೂಪಾಯಿಗೂ ಅಧಿಕವಾಗಿದೆ. ತಮ್ಮ ಆಸ್ತಿಯಲ್ಲಿ ಒಂದಷ್ಟನ್ನು ಶಾರುಖ್ ಖಾನ್ ಅವರು ಮಗಳ ಹೆಸರಿಗೆ ಬರೆದಿದ್ದಾರೆ. ಸುಹಾನಾ ಹೆಸರಲ್ಲಿ ಒಂದಷ್ಟು ಹೂಡಿಕೆ ಮಾಡಿದ್ದಾರೆ. ಈ ಕಾರಣದಿಂದಲೇ ಸುಹಾನಾ ಖಾನ್ ಅವರ ಆಸ್ತಿಯಲ್ಲಿ ಏರಿಕೆ ಕಾಣುತ್ತಿದೆ. ಸಿನಿಮಾದಲ್ಲಿ ನಟಿಸದ ಹೊರತಾಗಿಯೂ ಅವರು ಹಣ ಮಾಡಿದ್ದಾರೆ.

ಇದನ್ನೂ ಓದಿ: Suhana Khan: ಬ್ರೇಕಪ್‌ ಬಗ್ಗೆ ಓಪನ್‌ ಆಗಿ ಮಾತನಾಡಿದ ಶಾರುಖ್‌ ಪುತ್ರಿ ಸುಹಾನಾ ಖಾನ್‌; ವಿಡಿಯೊ ಇಲ್ಲಿದೆ

ಕಳೆದ ವರ್ಷ ಬಿಡುಗಡೆಯಾದ ʻದಿ ಆರ್ಚೀಸ್ʼ (The Archies) ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಜತೆಗೆ ಅಮಿತಾಭ್‌ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಕೂಡ ನಟಿಸಿದ್ದರು. ಈ ವೇಳೆ ಅವರಿಬ್ಬರು ಡೇಟಿಂಗ್ ನಡೆಸುತ್ತಿದ್ದರು ಎನ್ನುವ ಗುಸುಗುಸು ಹಬ್ಬಿತ್ತು. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಸುಹಾನಾ ಖಾನ್‌ ಅಭಿನಯದ ಮೊದಲ ಚಿತ್ರ ‘ದಿ ಆರ್ಚೀಸ್’ ಒಟಿಟಿಯಲ್ಲಿ ತೆರೆಕಂಡು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಸದ್ಯ ಅವರು ಶಾರುಖ್‌ ಖಾನ್‌ ಅವರೊಂದಿಗೆ ತೆರೆ ಹಂಚಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಸುಜೋಯ್‌ ಘೋಷ್‌ ಮತ್ತು ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ʼಕಿಂಗ್‌ʼ ಟೈಟಲ್‌ನ ಸಿನಿಮಾದಲ್ಲಿ ತಂದೆ-ಮಗಳು ಜತೆಯಾಗಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ತಿಂಗಳು ಈ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

Continue Reading
Advertisement
Virat kohli
ಕ್ರೀಡೆ41 seconds ago

Virat kohli : ವಿಶ್ವ ಕಪ್​ನಲ್ಲಿಯೂ ಕೊಹ್ಲಿಯೇ ಸ್ಟಾರ್​​; ಭವಿಷ್ಯ ನುಡಿದ ರಿಕಿ ಪಾಂಟಿಂಗ್​

Election campaign meeting for Congress party candidate d t Srinivas in Holalkere
ರಾಜಕೀಯ6 mins ago

MLC Election: ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್‌ಗೆ ಬೆಂಬಲಿಸಲು ಮಾಜಿ ಸಚಿವ ಎಚ್. ಆಂಜನೇಯ ಮನವಿ

Harish Poonja case Will MLA Harish Poonja be arrested in taunting case with police
ದಕ್ಷಿಣ ಕನ್ನಡ6 mins ago

Harish Poonja: ಪೊಲೀಸರಿಗೆ ಧಮ್ಕಿ ಕೇಸ್‌; ಶಾಸಕ ಹರೀಶ್ ಪೂಂಜಾ ಅರೆಸ್ಟ್‌ ಆಗ್ತಾರಾ? ಮನೆ ಮುಂದೆ ಹೈಡ್ರಾಮಾ!

Viral News
ವೈರಲ್ ನ್ಯೂಸ್12 mins ago

Viral News: ನ್ಯಾಯ ಕೊಡಿಸಿ ಎಂದು ಠಾಣೆ ಎದುರೇ ಎಸ್‌ಐ ಪತ್ನಿ ಅಹೋರಾತ್ರಿ ಧರಣಿ; ಏನಿದು ಕೇಸ್‌?

Poonam Pandey instagram id in a public place
ಸಿನಿಮಾ17 mins ago

Poonam Pandey: ಪೂನಂ ಪಾಂಡೆಗೆ ಮಕ್ಕಳಿಂದ ಚಿಕ್ಕ ರಿಕ್ವೆಸ್ಟ್‌; ಅಮ್ಮ ಹೊಡಿತಾರೆ ಎಂದ ಹಾಟ್‌ ಬೆಡಗಿ!

Virat kohli
ಪ್ರಮುಖ ಸುದ್ದಿ24 mins ago

Virat kohli : ವಿರಾಟ್​ ಕೊಹ್ಲಿಗೆ ಪ್ರಾಣ ಬೆದರಿಕೆ; ಅಭ್ಯಾಸ ಬಂದ್​, ಪಂದ್ಯದ ಗತಿ ಏನು?

UPSC
ಶಿಕ್ಷಣ24 mins ago

UPSC: ಐಇಎಸ್‌ / ಐಎಸ್‌ಎಸ್‌ಇ 2024 ಪರೀಕ್ಷೆಯ ದಿನಾಂಕ ಪ್ರಕಟ: ಇಲ್ಲಿದೆ ವೇಳಾಪಟ್ಟಿ

PM Narendra Modi
ದೇಶ44 mins ago

PM Narendra Modi: “ನನ್ನನ್ನು ದೇವರೇ ಈ ಭೂಮಿಗೆ ಕಳಿಸಿದ್ದಾನೆ..”; ಭಾರೀ ಸದ್ದು ಮಾಡ್ತಿದೆ ಮೋದಿಯ ಈ ವಿಡಿಯೊ

Prajwal Revanna Case JDS files complaint against Rahul Gandhi for Prajwal accused of mass rape of 400 women
ಕ್ರೈಂ50 mins ago

Prajwal Revanna Case: 400 ಮಹಿಳೆಯರ ಮೇಲೆ ಪ್ರಜ್ವಲ್‌ ಮಾಸ್‌ ರೇಪ್‌ ಆರೋಪ; ರಾಹುಲ್ ಗಾಂಧಿ ವಿರುದ್ಧ ಡಿಜಿಗೆ ಜೆಡಿಎಸ್‌ ದೂರು

gas leak deaths mysore
ಕ್ರೈಂ1 hour ago

Gas Leak deaths: ಮುಚ್ಚಿದ ಮನೆಯಲ್ಲಿ ಗ್ಯಾಸ್‌ ಸೋರಿಕೆ, ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ 4 ಮಂದಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ10 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ22 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌