Site icon Vistara News

Pathaan Press Meet: ಪಠಾಣ್‌ ಪಾರ್ಟ್‌ 2 ಖಚಿತ? ಶಾರುಖ್‌ ಖಾನ್‌ ಮಹತ್ವದ ಘೋಷಣೆ

Pathaan Press Meet

#image_title

ಮುಂಬೈ: ಶಾರುಖ್‌ ಖಾನ್‌ ಹಾಗೂ ದೀಪಿಕಾ ಪಡುಕೋಣೆ ನಟನೆಯ ಪಠಾಣ್‌ ಸಿನಿಮಾ ವಿಶ್ವಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ರೂ.ಗಿಂತ ಹೆಚ್ಚಿನ ಹಣ ಬಾಚಿದೆ. ಇದರ ಬೆನ್ನಲ್ಲೇ, ಶಾರುಖ್‌ ಖಾನ್‌ ಸೇರಿ ಪಠಾಣ್‌ ಸಿನಿಮಾದ ತಾರಾಗಣವು ಸುದ್ದಿಗೋಷ್ಠಿ (Pathaan Press Meet) ನಡೆಸಿದ್ದು, ಪಠಾಣ್‌ ಪಾರ್ಟ್‌ 2 ಕುರಿತು ಶಾರುಖ್‌ ಖಾನ್‌ ಮಹತ್ವದ ಘೋಷಣೆ ಮಾಡಿದ್ದಾರೆ. ಹಾಗಾಗಿ, ಪಠಾಣ್‌ ಸಿನಿಮಾದ ಎರಡನೇ ಭಾಗ ತೆರೆಕಾಣುವುದು ಖಚಿತವಾಗಿದೆ.

ಸುದ್ದಿಗೋಷ್ಠಿಯಲ್ಲಿ ಸಿನಿಮಾ ಯಶಸ್ಸಿನ ಕುರಿತು ಮಾತನಾಡುವಾಗ, ಪಠಾಣ್‌ ಪಾರ್ಟ್‌ 2 ಬಗ್ಗೆ ಸುದ್ದಿಗಾರರು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಶಾರುಖ್‌ ಖಾನ್‌, “ಪಠಾಣ್‌ ಸಿನಿಮಾದ ಯಶಸ್ಸು ನಮಗೆ ಸಂತಸ ತಂದಿದೆ. ಇದು ನಮಗೆ, ನಮ್ಮ ಕುಟುಂಬಕ್ಕೆ ತುಂಬ ಸಂತೋಷ ತಂದುಕೊಟ್ಟ ದಿನ. ಪಠಾಣ್‌ ಸಿನಿಮಾದ ಎರಡನೇ ಭಾಗ ನಿರ್ದೇಶನ ಮಾಡುತ್ತೇನೆ ಎಂದು ನಿರ್ದೇಶಕ ಸಿದ್ಧಾರ್ಥ್‌ ಆನಂದ್‌ ಹೇಳಿದರೆ, ನಾನು ಖಂಡಿತವಾಗಿಯೂ ಮಾಡುತ್ತೇನೆ. ಪಠಾಣ್‌ 2 ಸಿನಿಮಾದಲ್ಲಿಯೂ ನಟಿಸುವುದು ನನಗೆ ಇಷ್ಟ” ಎಂದು ಹೇಳಿದ್ದಾರೆ. ‌

ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶವಿಲ್ಲ ಎಂದ ಖಾನ್

ಪಠಾಣ್‌ ಸಿನಿಮಾದ ಹಾಡು ವಿವಾದವುಂಟಾದ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಶಾರುಖ್‌ ಖಾನ್‌ ಆ ಕುರಿತು ಮಾತನಾಡಿದರು. “ನಮಗೆ ಯಾರ ಮನಸ್ಸಿಗೂ ನೋವುಂಟು ಮಾಡುವ, ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿಲ್ಲ. ಸಿನಿಮಾ, ಆ ಪಾತ್ರ ಏನು ಬಯಸುತ್ತದೆಯೋ, ಅದನ್ನು ಪ್ರೀತಿಯಿಂದ ಮಾಡುತ್ತೇವೆ. ಸಿನಿಮಾದಿಂದ ಪ್ರೀತಿಯನ್ನು ಹಂಚುವುದೇ ನಮ್ಮ ಉದ್ದೇಶವಾಗಿದೆ” ಎಂದು ಹೇಳಿದರು.

ಪಠಾಣ್‌ ಸಿನಿಮಾದ ನಿರ್ದೇಶಕ ಸಿದ್ಧಾರ್ಥ್‌ ಆನಂದ್‌, ನಟಿ ದೀಪಿಕಾ ಪಡುಕೋಣೆ, ನಟ ಜಾನ್‌ ಅಬ್ರಾಹಂ ಅವರು ಕೂಡ ಪಠಾಣ್‌ ಸಿನಿಮಾದ ಯಶಸ್ಸಿನ ಕುರಿತು ಸಂತಸ ಹಂಚಿಕೊಂಡರು. ಇದಾದ ಬಳಿಕ ಶಾರುಖ್‌ ಖಾನ್‌ ಸೇರಿ ನಾಲ್ವರೂ ವೇದಿಕೆ ಮೇಲೆಯೇ ಪಠಾಣ್‌ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದರು.

ಇದನ್ನೂ ಓದಿ: Pathaan Movie: ವಿಶ್ವಾದ್ಯಂತ 542 ಕೋಟಿ ರೂ. ಬಾಚಿದ ಪಠಾಣ್‌

Exit mobile version