Site icon Vistara News

Jawan Movie: ‘ಜವಾನ್‌’ ಕ್ಲಿಪ್‌ಗಳು ವೈರಲ್‌ ಆದ ಬೆನ್ನಲ್ಲೇ ಕೇಸ್‌ ದಾಖಲಿಸಿದ ಶಾರುಖ್‌ ಖಾನ್!

Shah Rukh Khan

ಅಟ್ಲಿ ನಿರ್ದೇಶನ, ಶಾರುಖ್ ಖಾನ್ ಅಭಿನಯದ ‘ಜವಾನ್’ (Jawan Movie) ಟನ್ ಆಫ್ ದಿ ಟಾಕ್ ಆಗಿದೆ. ಈ ಪ್ರಾಜೆಕ್ಟ್‌ ಪೋಸ್ಟ್‌ಗಳು ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲು ಶುರು ಮಾಡಿದ್ದಾರೆ. ಆದರೆ ‘ಜವಾನ್’ ಸಿನಿಮಾದ ಪೋಸ್ಟರ್‌ ಮತ್ತು ಹಾಡುಗಳು ಕುತೂಹಲವನ್ನು ಕೆರಳಿಸುತ್ತಿದ್ದಂತೆ, ಚಿತ್ರದ ಕೆಲವು ತುಣುಕುಗಳು ಆನ್‌ಲೈನ್‌ನಲ್ಲಿ ಲೀಕ್ ಆಗುತ್ತಲೇ ಇವೆ. ‘ಜವಾನ್’ ಕ್ಲಿಪ್‌ಗಳನ್ನು ಕದ್ದು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅವುಗಳು ವೈರಲ್ ಆಗಿವೆ. ಹಾಗಾಗಿ ಶಾರುಖ್‌ ಹಾಗಾಗಿ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಈ ಮಧ್ಯೆ ಶಾರುಖ್​ ಖಾನ್ ಒಡೆತನದ ರೆಡ್​ ಚಿಲ್ಲೀಸ್ ಎಂಟರ್​ಟೇನ್​ಮೆಂಟ್ (Red Chillies Entertainment) ದೂರೊಂದನ್ನು ನೀಡಿದೆ. ಇದನ್ನು ಆಧರಿಸಿ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ (Shah Rukh Khan filed a case). ಚಿತ್ರೀಕರಣದ ಸಮಯದಲ್ಲಿಯೂ ಸಹ, ಹಲವು ಕ್ಲಿಪ್‌ಗಳು (Jawan clips leaked) ಈ ಹಿಂದೆ ವೈರಲ್‌ ಆಗಿತ್ತು. ಚಿತ್ರೀಕರಿಸಿದ ಸ್ಥಳದಲ್ಲಿ ಮೊಬೈಲ್ ಫೋನ್ ಅಥವಾ ಇತರ ಯಾವುದೇ ರೆಕಾರ್ಡಿಂಗ್ ಸಾಧನಗಳನ್ನು ನಿಷೇಧಿಸಲಾಗಿತ್ತು. ಇದರ ಹೊರತಾಗಿಯೂ, ಕ್ಲಿಪ್‌ಗಳು ವೈರಲ್‌ ಆಗಿದ್ದವು. ಕ್ಲಿಪ್‌ಗಳನ್ನು ಹಂಚಿಕೊಂಡಿರುವ ಐದು ಟ್ವಿಟರ್ ಹ್ಯಾಂಡಲ್‌ಗಳಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ.

ಇದನ್ನೂ ಓದಿ: Jawan Movie: ಶಾರುಖ್‌ ಅಭಿನಯದ `ಜವಾನ್‌’ ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ ಅಲ್ಲು ಅರ್ಜುನ್‌?

ಆಗಸ್ಟ್ 10ರಂದು ಮುಂಬೈನ ಸಾಂತಾಕ್ರ್ಯೂಜ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.ಸಿನಿಮಾದ ಕ್ಲಿಪ್​ಗಳು ತಂಡದವರನ್ನು ಹೊರತುಪಡಿಸಿ ಮತ್ತಾರಿಗೂ ಸಿಗುವುದಿಲ್ಲ. ಶಾರುಖ್​ಗೆ ಈ ಬಗ್ಗೆ ಅನುಮಾನ ಮೂಡಿದೆಯೇ ಎನ್ನುವ ಪ್ರಶ್ನೆ ಮೂಡಿದೆ.ಜವಾನ್​’ ಚಿತ್ರವನ್ನು ರೆಡ್ ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ತಮಿಳಿನಲ್ಲಿ ಬ್ಯಾಕ್​ ಟು ಬ್ಯಾಕ್ ಹಿಟ್ ನೀಡಿರುವ ಅಟ್ಲೀ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇದೇ ಸೆಪ್ಟೆಂಬರ್‌ 7ಕ್ಕೆ ತೆರೆಗೆ

ಈ ಚಿತ್ರದಲ್ಲಿ ಶಾರುಖ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಕಳೆದ ವಾರ ವರದಿಯಾಗಿತ್ತು. ಟೈಮ್ಸ್ ನೌ ಪ್ರಕಾರ ಕಿಂಗ್ ಖಾನ್ ಚಿತ್ರದಲ್ಲಿ ಫೈಟರ್ (ತಂದೆ) ಮತ್ತು ಜೈಲರ್ (ಮಗ) ಪಾತ್ರವನ್ನು ನಿರ್ವಹಿಸಲಿದ್ದಾರೆ. ಎಸ್‌ಆರ್‌ಕೆ ಆರು ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಜವಾನ್‌ನಲ್ಲಿ ಶಾರುಖ್ ಖಾನ್ ಅವರ ಜೈಲರ್ ಪಾತ್ರಕ್ಕೆ ಆಜಾದ್ ಎಂದು ಹೆಸರಿಡಲಾಗಿದೆ. ಶಾರುಖ್‌ (Jawan release date) ಜತೆಗೆ, ಜವಾನ್ ಸಿನಿಮಾದಲ್ಲಿ ನಯನತಾರಾ, ವಿಜಯ್ ಸೇತುಪತಿ ಮತ್ತು ಸನ್ಯಾ ಮಲ್ಹೋತ್ರಾ ಕೂಡ ನಟಿಸಿದ್ದಾರೆ.

ಇದನ್ನೂ ಓದಿ: Jawan New Song: ಶಾರುಖ್‌-ನಯನತಾರಾ ರೊಮ್ಯಾಂಟಿಕ್‌ ಟ್ರ್ಯಾಕ್‌ ಶೀಘ್ರವೇ ಬಿಡುಗಡೆ!

ಈ ಹಿಂದೆ ದೀಪಿಕಾ ಪಡುಕೋಣೆ ಕೂಡ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಇದೀಗ ದೀಪಿಕಾ ನಟಿಸುತ್ತಿರುವುದು ಕನ್‌ಫರ್ಮ್‌ ಆಗಿದೆ. ಈ ಹಿಂದೆ ಬಿಡುಗಡೆಯಾದ ಟೀಸರ್‌ನಲ್ಲಿ ಶಾರುಖ್ ಬ್ಯಾಂಡೇಜ್‌ನಲ್ಲಿ ಕಾಣಿಸಿಕೊಂಡಿದ್ದರು.ಈಗಾಗಲೇ ಜವಾನ್‌ ಪ್ರಿವ್ಯೂ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ.‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸುತ್ತಿದ್ದು, ಅಟ್ಲಿಯವರ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರದ ಮ್ಯೂಸಿಕ್‌ ರೈಟ್ಸ್‌ ಈಗಾಗಲೇ 36 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.

Exit mobile version