Site icon Vistara News

Actress Nayanthara: ವಿಘ್ನೇಶ್ ಶಿವನ್‌ಗೆ ನಯನತಾರಾ ಬಗ್ಗೆ ಎಚ್ಚರಿಕೆ ಕೊಟ್ಟ ಶಾರುಖ್‌ ಖಾನ್‌!

ಬೆಂಗಳೂರು: ಅಟ್ಲೀ ನಿರ್ದೇಶನ, ಶಾರುಖ್‌ ಖಾನ್‌ ಅಭಿನಯದ ʻಜವಾನ್‌ʼ ಸಿನಿಮಾದ ಪ್ರಿವ್ಯೂ ಈಗಾಗಲೇ ಬಿಡುಗಡೆಗೊಂಡಿದೆ. ಈ ಸಣ್ಣ ಝಲಕ್‌ ನೋಡಿ ಶಾರುಖ್‌ ಅಭಿಮಾನಿಗಳು ಸಖತ್‌ ಫಿದಾ ಆಗಿದ್ದಾರೆ. ಸೆಪ್ಟೆಂಬರ್‌ನಲ್ಲಿ ಶಾರುಖ್ ಖಾನ್ ಅವರ ಜವಾನ್ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೇ ನಯನತಾರಾ ಲುಕ್‌ ಕಂಡು ಕೂಡ ಸಿನಿರಸಿಕರು ಮನಸೋತಿದ್ದಾರೆ. ಇದೇ ಮೊದಲ ಬಾರಿಗೆ ನಯನತಾರಾ ಶಾರುಖ್‌ ಜತೆ ಜವಾನ್‌ ಸಿನಿಮಾ ಮೂಲಕ ತೆರೆ ಹಂಚಿಕೊಳ್ಳುತ್ತಿದ್ದಾರೆ. ನಯನತಾರಾ (Actress Nayanthara) ಪತಿ ವಿಘ್ನೇಶ್ ಶಿವನ್​ಗೆ ಶಾರುಖ್ ಖಾನ್ ಅವರು ಪ್ರೀತಿಯಿಂದ ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.

ಜವಾನ್‌ ಪ್ರಿವ್ಯೂ ಬಿಡುಗಡೆಯಾದ ಬಳಿಕ ವಿಘ್ನೇಶ್ ಶಿವನ್​ ಪೋಸ್ಟ್‌ ಹಂಚಿಕೊಂಡು ಸಂತಸ ಹೊರಹಾಕಿದ್ದರು. ʻʻಹಾಲಿವುಡ್‌ ರೇಂಜ್‌ನಲ್ಲಿ ಸಿನಿಮಾ ಮೂಡಿ ಬರುವಂತೆ ಕಂಡಿದೆ. ಅಟ್ಲೀ ಅವರ ಈ ಸಾಹಸಕ್ಕೆ ನನ್ನ ಧನ್ಯವಾದ. ನಿಮ್ಮ ಪ್ರಯತ್ನಗಳು, ತಾಳ್ಮೆ ಮತ್ತು ಕಠಿಣ ಪರಿಶ್ರಮಕ್ಕೆ ನನ್ನ ಅಪ್ಪುಗೆʼʼಎಂದು ಬರೆದುಕೊಂಡಿದ್ದಾರೆ. ಇದರ ಸ್ಕ್ರೀನ್​​ಶಾಟ್ ಹಂಚಿಕೊಂಡು ಟ್ವೀಟ್ ಮಾಡಿರುವ ಶಾರುಖ್, ‘ಎಲ್ಲಾ ಪ್ರೀತಿಗೆ ಧನ್ಯವಾದಗಳು. ನಯನತಾರಾ ಅವರು ಅದ್ಭುತ. ಆದರೆ ಅವರ ಬಗ್ಗೆ ನೀವು ಹುಷಾರಾಗಿರಿ. ಅವರು ಈಗ ಕೆಲವು ಪ್ರಮುಖ ಫೈಟ್​ಗಳನ್ನು ಕಲಿತಿದ್ದಾರೆ’ ಎಂದು ಶಾರುಖ್ ಬರೆದುಕೊಂಡಿದ್ದಾರೆ. ಇದಕ್ಕೆ ಉತ್ತರಿಸಿರುವ ವಿಘ್ನೇಶ್ ಶಿವನ್, ‘ಧನ್ಯವಾದಗಳು ಸರ್. ಸಿನಿಮಾದಲ್ಲಿ ನಿಮ್ಮ ಮಧ್ಯೆ ತುಂಬಾ ಒಳ್ಳೆಯ ರೊಮ್ಯಾನ್ಸ್ ಇದೆ ಎಂದು ನಾನು ಕೇಳಿದ್ದೇನೆ. ಇದನ್ನು ಅವಳು ಪ್ರಣಯ ರಾಜನಿಂದ ಕಲಿತಿದ್ದಾಳೆ. ಜವಾನ್ ಸೂಪರ್ ಹಿಟ್ ಆಗಲಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Shah Rukh Khan: ಯುಎಸ್​ನಲ್ಲಿ ಆಸ್ಪತ್ರೆಗೆ ದಾಖಲಾಗಿ, ಸರ್ಜರಿಗೆ ಒಳಗಾದ ಶಾರುಖ್​ ಖಾನ್​; ಈಗೆಲ್ಲಿದ್ದಾರೆ?

ವಿಘ್ನೇಶ್ ಶಿವನ್​, ಶಾರುಖ್‌ ಪೋಸ್ಟ್‌

ಇದೀಗ ಶಾರುಖ್‌ ಅವರ ಪೋಸ್ಟ್‌ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಾರುಖ್‌ ಜತೆಗೆ, ಜವಾನ್ ಸಿನಿಮಾದಲ್ಲಿ ನಯನತಾರಾ, ವಿಜಯ್ ಸೇತುಪತಿ ಮತ್ತು ಸನ್ಯಾ ಮಲ್ಹೋತ್ರಾ ಕೂಡ ನಟಿಸಿದ್ದಾರೆ.

ಇದನ್ನೂ ಓದಿ: Jawan Prevue: ಚಿಯಾನ್ ವಿಕ್ರಮ್ ಲುಕ್‌ ಕಾಪಿ ಮಾಡಿದ್ರಾ ಶಾರುಖ್‌; ಗುರುಗಳ ಹಾದಿಯಲ್ಲೇ ನಡೆದ್ರಾ ಅಟ್ಲೀ?

ಈ ಚಿತ್ರದಲ್ಲಿ ಶಾರುಖ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಕಳೆದ ವಾರ ವರದಿಯಾಗಿತ್ತು. ಟೈಮ್ಸ್ ನೌ ಪ್ರಕಾರ ಕಿಂಗ್ ಖಾನ್ ಚಿತ್ರದಲ್ಲಿ ಫೈಟರ್ (ತಂದೆ) ಮತ್ತು ಜೈಲರ್ (ಮಗ) ಪಾತ್ರವನ್ನು ನಿರ್ವಹಿಸಲಿದ್ದಾರೆ. ಎಸ್‌ಆರ್‌ಕೆ ಆರು ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಜವಾನ್‌ನಲ್ಲಿ ಶಾರುಖ್ ಖಾನ್ ಅವರ ಜೈಲರ್ ಪಾತ್ರಕ್ಕೆ ಆಜಾದ್ ಎಂದು ಹೆಸರಿಡಲಾಗಿದೆ. ಜವಾನ್’ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸುತ್ತಿದ್ದು, ಅಟ್ಲಿಯವರ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರದ ಮ್ಯೂಸಿಕ್‌ ರೈಟ್ಸ್‌ ಈಗಾಗಲೇ 36 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.

Exit mobile version