ಬೆಂಗಳೂರು: ಶಾರುಖ್ ಖಾನ್ (Shah Rukh Khan), ಕಾಜೋಲ್ ಮತ್ತು ರಾಣಿ ಮುಖರ್ಜಿ (Rani Mukerji) ನಟಿಸಿರುವ ‘ಕುಚ್ ಕುಚ್ ಹೋತಾ ಹೈ’ (Kuch Kuch Hota Hai) ಕರಣ್ ಜೋಹರ್ ಅವರ ನಿರ್ದೇಶನದ ಮೊದಲ ಸಿನಿಮಾ ಆಗಿತ್ತು. ಚಿತ್ರ 1998ರ ಅಕ್ಟೋಬರ್ 16ರಂದು ಬಿಡುಗಡೆಯಾಗಿತ್ತು. ಇಂದಿಗೆ ಸಿನಿಮಾ 25 ವರ್ಷ ಪೂರೈಸಿದೆ. ಈ ಸಂಭಮ್ರಕ್ಕೆ ಅಕ್ಟೋಬರ್ 15ರಂದು ಕೇವಲ 25 ರೂಪಾಯಿಗಳಿಗೆ ಅಭಿಮಾನಿಗಳಿಗಾಗಿ ಮುಂಬೈನಲ್ಲಿ ಮೂರು ವಿಶೇಷ ಪ್ರದರ್ಶನಗಳನ್ನು ಆಯೋಜಿಸಿತ್ತು. ಕರಣ್ ಜೋಹರ್ ಜತೆಗೆ ಶಾರುಖ್ ಖಾನ್ ಮತ್ತು ರಾಣಿ ಮುಖರ್ಜಿ ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಪ್ರದರ್ಶನದಲ್ಲಿ ಭಾಗಿಯಾಗಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದರು. ಆದರೆ ಈಗ ಸುದ್ದಿಯಾಗುತ್ತಿರುವುದು ಶಾರುಖ್ ವಿಚಾರಕ್ಕೆ. ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ರಾಣಿ ಮುಖರ್ಜಿ ಅವರ ಸೆರಗು ಹಿಡಿದು ಶಾರುಖ್ ಥಿಯೇಟರ್ಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು.
‘ಕುಚ್ ಕುಚ್ ಹೋತಾ ಹೈ’ ಚಿತ್ರವನ್ನು ಕರಣ್ ಜೋಹರ್ ನಿರ್ದೇಶಿಸಿದ್ದಾರೆ, ಅತಿಥಿ ಪಾತ್ರವನ್ನು ಸಹ ಮಾಡಿದ್ದಾರೆ. ಚಿತ್ರದಲ್ಲಿ ಅನುಪಮ್ ಖೇರ್, ಅರ್ಚನಾ ಪುರಾನ್ ಸಿಂಗ್ ಮತ್ತು ಫರೀದಾ ಜಲಾಲ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. 25ನೇ ವರ್ಷದ ಸಂಭ್ರಮಾಚರಣೆಯ ನಿಮಿತ್ತ ಅ.15ರ ರಾತ್ರಿ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂಭ್ರಮದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: Shah Rukh Khan: ಪ್ರಶಾಂತ್ ನೀಲ್ಗೆ ಹೆದರಿದ್ರಾ ಶಾರುಖ್; ʻಡಂಕಿʼ ಮುಂದಕ್ಕೆ?
ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ಶಾರುಖ್ ಅವರು ರಾಣಿ ಮುಖರ್ಜಿ ಅವರ ಸೆರಗು ನಾಜೂಕಾಗಿ ಹಿಡಿದುಕೊಂಡು ಥಿಯೇಟರ್ ವೇದಿಕೆಗೆ ಬಂದರು. ಎಲ್ಲಿ ರಾಣಿ ಮುಖರ್ಜಿ ಅವರ ಕಾಲಿಗೆ ಸಿಲುಕಬಹುದೆಂಬ ಕಾಳಜಿಗೆ ಸೆರಗನ್ನು ಹಿಡುದುಕೊಂಡೇ ಇದ್ದರು. ವೇದಿಕೆಗೆ ಬರುತ್ತಿದ್ದಂತೆ ಸೆರಗನ್ನು ನೆಲದ ಮೇಲೆ ಬಿಟ್ಟರು. ಅಭಿಮಾನಿಗಳು ಶಾರುಖ್ ಅವರ ಈ ನಡೆಗೆ ಅವರ ‘ಜೆಂಟಲ್ಮ್ಯಾನ್’ ಎಂದು ಕರೆದಿದ್ದಾರೆ. “ರಾಣಿಯ ಸೀರೆಯನ್ನು ಹಿಡಿದುಕೊಂಡ ಶಾರುಖ್ ಮುದ್ದಾಗಿ ಕಂಡಿದ್ದರುʼʼಎಂದು ಕಮೆಂಟ್ ಮಾಡಿದ್ದಾರೆ.
‘ಕುಚ್ ಕುಚ್ ಹೋತಾ ಹೈ’ 25 ವರ್ಷಗಳನ್ನು ಪೂರೈಸುತ್ತಿದ್ದಂತೆ, ಧರ್ಮ ಪ್ರೊಡಕ್ಷನ್ಸ್ನ ಟಿಕೆಟ್ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿಯನ್ನು ಹಂಚಿಕೊಂಡಿತ್ತು. ಮುಂಬೈನಲ್ಲಿ ಮೂರು ಪರದೆಗಳಲ್ಲಿ ‘ಕುಚ್ ಕುಚ್ ಹೋತಾ ಹೈ’ ಪ್ರದರ್ಶನಗೊಂಡಿತು. ಇದು 25ನೇ ವರ್ಷದ ಸೆಲೆಬ್ರೇಷನ್ ಆದ್ದರಿಂದ ಈ ಟಿಕೆಟ್ಗಳನ್ನು ಕೇವಲ 25 ರೂಪಾಯಿಗೆ ಮಾರಾಟ ಮಾಡಲಾಗಿದೆ. ಕಡಿಮೆ ಬೆಲೆಗೆ ಟಿಕೆಟ್ ಲಭ್ಯ ಇರುವುದು ಕೂಡ ಸೋಲ್ಡ್ ಔಟ್ ಆಗಲು ಪ್ರಮುಖ ಕಾರಣ.