Site icon Vistara News

Shah Rukh Khan: ಯುಎಸ್​ನಲ್ಲಿ ಆಸ್ಪತ್ರೆಗೆ ದಾಖಲಾಗಿ, ಸರ್ಜರಿಗೆ ಒಳಗಾದ ಶಾರುಖ್​ ಖಾನ್​; ಈಗೆಲ್ಲಿದ್ದಾರೆ?

shah rukh khan

Actor Shah Rukh Khan gets Y+ security cover amid threats he received during Pathaan's filming

ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan)​​ಗೆ ಅಲ್ಲಿ ಚಿತ್ರೀಕರಣದ ವೇಳೆ ಅಪಘಾತಕ್ಕೀಡಾಗಿದ್ದರು. ಈ ಅಪಘಾತದಲ್ಲಿ ಶಾರುಖ್ ಖಾನ್​ ಮೂಗಿಗೆ ಗಾಯವಾಗಿದ್ದು, ಅವರಿಗೆ ಒಂದು ಸಣ್ಣ ಸರ್ಜರಿ ಕೂಡ ಮಾಡಲಾಗಿದೆ (Shah Rukh Khan Undergoes Surgery). ಪಠಾಣ್​ ಸಿನಿಮಾ ತೆರೆಕಂಡು, ಯಶಸ್ಸುಗಳಿಸಿದ ಬೆನ್ನಲ್ಲೇ ಶಾರುಖ್ ಖಾನ್ ಅವರು ಮುಂದಿನ ಸಿನಿಮಾ ಶೂಟಿಂಗ್​ನಲ್ಲಿ ಬ್ಯೂಸಿಯಾಗಿದ್ದರು. ತಮ್ಮ ಮುಂದಿನ ಚಿತ್ರದ ಚಿತ್ರೀಕರಣಕ್ಕಾಗಿಯೇ ಅವರು ಯುಎಸ್​ನ ಲಾಸ್ ಎಂಜಲೀಸ್​ಗೆ ತೆರಳಿದ್ದರು ಎಂದು ವರದಿಯಾಗಿದೆ. ನಟ ಯಾವ ಸಿನಿಮಾ ಶೂಟಿಂಗ್​ಗೆ ಹೋಗಿದ್ದರು ಎಂಬುದು ಬಹಿರಂಗವಾಗಿಲ್ಲ. ಸದ್ಯ ಶಾರುಖ್ ಖಾನ್ ಭಾರತಕ್ಕೆ (ಮುಂಬಯಿ) ಮರಳಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಶಾರುಖ್ ಗಾಯಗೊಂಡ ಹಿನ್ನೆಲೆಯಲ್ಲಿ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಶಾರುಖ್ ಖಾನ್ ಸಿನಿಮಾದ ಸೆಟ್​ನ್ನು ಲಾಸ್​ ಎಂಜಲೀಸ್​ನಲ್ಲಿ ಹಾಕಲಾಗಿತ್ತು. ಚಿತ್ರೀಕರಣದ ವೇಳೆ ಶಾರುಖ್​ ಖಾನ್​ ಅವರಿಗೆ ಗಂಭೀರವಾಗಿ ಏಟು ಬಿತ್ತು. ಮೂಗಿನಿಂದ ಒಂದೇ ಸಮನೆ ರಕ್ತ ಬರಲು ಶುರುವಾಯಿತು. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆ ರಕ್ತ ನಿಲ್ಲಿಸಲು ಒಂದು ಸಣ್ಣ ಸರ್ಜರಿ ಮಾಡಬೇಕು ಎಂದು ವೈದ್ಯರು ಸೂಚಿಸಿದ ಹಿನ್ನೆಲೆಯಲ್ಲಿ ಆಪರೇಶನ್ ಮಾಡಲಾಗಿದೆ. ಏನೂ ಹೆದರುವ ಅಗತ್ಯವಿಲ್ಲ. ಶಾರುಖ್ ಖಾನ್ ವಾಪಸ್ ಭಾರತಕ್ಕೆ ಬಂದಿದ್ದಾರೆ. ಗುಣಮುಖರಾಗುತ್ತಿದ್ದಾರೆ ಎಂದು ಶಾರುಖ್ ಖಾನ್ ಆಪ್ತವಲಯದಿಂದ ಮಾಧ್ಯಮಗಳಿಗೆ ಮಾಹಿತಿ ಬಂದಿದ್ದಾಗಿ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Suhana Khan : ಕೃಷಿ ಜಮೀನು ಖರೀದಿಸಿದ ಶಾರುಖ್‌ ಪುತ್ರಿ ಸುಹಾನಾ; ಇದರ ಮೌಲ್ಯ ಎಷ್ಟು ನೋಡಿ!

ಬಿಡುಗಡೆಗೂ ಮುನ್ನ ‘ಕೇಸರಿ ಬಿಕಿನಿ’ ವಿವಾದ ಸೃಷ್ಟಿಸಿ, ತೆರೆಕಂಡ ಮೇಲೆ ಅದ್ಭುತ ಯಶಸ್ಸು ತಂದುಕೊಟ್ಟ ಪಠಾಣ್ ಸಿನಿಮಾ ಬಳಿಕ ಶಾರುಖ್ ಖಾನ್ ಸದ್ಯ ‘ಜವಾನ್’ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ಶಾರುಖ್ ಖಾನ್​ ಯುಎಸ್​ಗೆ ತೆರಳಿದ್ದು ಈ ‘ಜವಾನ್’ ಗೆ ಸಂಬಂಧಪಟ್ಟ ಶೂಟಿಂಗ್​ಗೆ ಅಲ್ಲ ಎನ್ನಲಾಗಿದೆ. ಇನ್ನು ಜವಾನ್ ಸಿನಿಮಾವನ್ನು ಅತ್ಲೀ ಕುಮಾರ್​ ನಿರ್ದೇಶನ ಮಾಡಿದ್ದು, ​ ಸಿನಿಮಾದಲ್ಲಿ ಶಾರುಖ್ ಖಾನ್​ ಜತೆ ನಯನತಾರಾ, ವಿಜಯ್ ಸೇತುಪತಿ ಮತ್ತಿತರು ನಟಿಸುತ್ತಿದ್ದಾರೆ. ಅನಿರುದ್​ ರವಿಚಂದರ್ ಸಂಗೀತ ನಿರ್ದೇಶನವಿದೆ, ಈ ಸಿನಿಮಾದ ಟ್ರೇಲರ್ ಇದೇ ತಿಂಗಳು 12ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಹಾಗೇ, ಇದೇ ವರ್ಷ ಸೆಪ್ಟೆಂಬರ್​ನಲ್ಲಿ ಸಿನಿಮಾ ತೆರೆಕಾಣಲಿದೆ ಎನ್ನಲಾಗಿದೆ.

Exit mobile version