Site icon Vistara News

Shahrukh Khan | ಬೇಷರಮ್‌ ಹಾಡು ಅಶ್ಲೀಲ ಅಷ್ಟೇ ಅಲ್ಲ, ಪ್ರಚೋದನಕಾರಿಯೂ ಆಗಿದೆ: ನಟ ಮುಕೇಶ್ ಖನ್ನಾ

Shahrukh Khan

ಬೆಂಗಳೂರು: ಶಾರುಖ್‌ (Shahrukh Khan)-ದೀಪಿಕಾ ಪಡುಕೋಣೆ ನಟನೆಯ ಪಠಾಣ್‌ ಸಿನಿಮಾ ಕೇಸರಿ ವಿವಾದ ಭಾರಿ ಚರ್ಚೆಗೀಡು ಮಾಡಿದೆ. ಕಳೆದ ಕೆಲವು ದಿನಗಳಿಂದ ಕೇಸರಿ ಬಿಕಿನಿ ಬಗ್ಗೆ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ದಿಗ್ಗಜರು ಪರ-ವಿರೋಧ ಪ್ರತಿಕ್ರಿಯೆಗಳನ್ನು ನೀಡುತ್ತಲೇ ಇದ್ದಾರೆ. ಇತ್ತೀಚೆಗೆ ಶಕ್ತಿಮಾನ್‌ ಖ್ಯಾತಿಯ ಮುಕೇಶ್‌ ಖನ್ನಾ ಕೂಡ ದೀಪಿಕಾ ಪಡುಕೋಣೆ ಅವರ ಉಡುಗೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಕೇಶ್ ಖನ್ನಾ ‘ಬೇಷರಮ್’ ಹಾಡಿನ ಬಗ್ಗೆ ಚರ್ಚೆಯಾಗಬೇಕಿರುವುದು ದೀಪಿಕಾ ತೊಟ್ಟ ಬಿಕಿನಿಯ ಬಣ್ಣದ ಬಗ್ಗೆ ಅಲ್ಲ ಎಂದಿದ್ದಾರೆ. “ಇಲ್ಲಿ ಚರ್ಚೆಯಾಗಬೇಕಿರುವುದು ನಟಿ ತೊಟ್ಟ ಬಿಕಿನಿ ಬಣ್ಣದ ಬಗ್ಗೆ ಅಲ್ಲ. ವಿಷಯ ಬೇರೆನೇ ಇದೆ. ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಸಿನಿಮಾದ ಬೇಷರಮ್‌ ಹಾಡು ಅಶ್ಲೀಲವಾಗಿರುವುದಷ್ಟೇ ಅಲ್ಲ. ಪ್ರಚೋದನಕಾರಿಯಾಗಿದೆ. ಇಂತಹ ಹಾಡನ್ನು ಸೆನ್ಸಾರ್‌ ಬೋರ್ಡ್‌ ಬಿಡಲು ಹೇಗೆ ಸಾಧ್ಯ. ನಾವು ಭಾರತದಲ್ಲಿ ಇದ್ದೇವೆ. ಈ ಹಾಡು ಯುವಕ ನಿದ್ದೆ ಕೆಡಿಸುವುದಲ್ಲದೆ. ಅವರನ್ನು ತಪ್ಪುದಾರಿಗೆ ಎಳೆಯುತ್ತೆ. ಸೆನ್ಸಾರ್ ಬೋರ್ಡ್ ಇಂತಹ ಹಾಡುಗಳನ್ನು ಬಿಡಬಾರದುʼʼ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ | Shahrukh Khan | ʻದೇಶಭಕ್ತಿ ಸಾರುವ ಚಿತ್ರ ಪಠಾಣ್‌ʼ: ಟ್ವೀಟ್‌ನಲ್ಲಿ ಅಭಿಮಾನಿಗಳ ಜತೆ ಶಾರುಖ್‌ ಹೇಳಿದ್ದೇನು?

ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್‌’ ಮುಂದಿನ ವರ್ಷ ಜನವರಿ 25 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಕೂಡ ನಟಿಸಿದ್ದಾರೆ. ಈಗಾಗಲೇ ಒಂದು ಗುಂಪು ಪಠಾಣ್‌ ಸಿನಿಮಾದ ʻಬೇಷರಮ್‌ ರಂಗ್‌ʼ ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಅವಮಾನಿಸಿ ಕೆಲವರ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ, ಸಿನಿಮಾ ಬಾಯ್ಕಾಟ್‌ ಮಾಡಬೇಕೆಂದು ಕರೆ ನೀಡಿದೆ.

ಇದನ್ನೂ ಓದಿ | Pathaan Controversy | ಮುಸ್ಲಿಂ ಸಂಘಟನೆಗಳಿಂದಲೂ ʻಪಠಾಣ್‌ʼ ಸಿನಿಮಾ ನಿಷೇಧಿಸುವಂತೆ ಒತ್ತಾಯ!

Exit mobile version