Site icon Vistara News

Actor Vishal | ರಾಜ್‌ ಕುಟುಂಬ ಶಕ್ತಿಧಾಮವನ್ನು ಚೆನ್ನಾಗಿ ನೋಡಿಕೊಳ್ತಿದೆ, ಸದ್ಯ ಯಾರ ನೆರವೂ ಬೇಕಿಲ್ಲ ಎಂದ ನಟ ವಿಶಾಲ್‌

Actor Vishal

ಮೈಸೂರು: ಕಾಲಿವುಡ್‌ ನಟ ವಿಶಾಲ್‌ (Actor Vishal) ನಟನೆಯ ʻಲಾಠಿʼ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಚಿತ್ರತಂಡ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದೆ. ಡಿಸೆಂಬರ್ 22ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡ, ತಮಿಳು, ತೆಲುಗು ಸೇರಿದಂತೆ ಆರು ಭಾಷೆಯಲ್ಲಿ ಚಿತ್ರ ರಿಲೀಸ್‌ ಆಗುತ್ತಿದೆ. ಈ ವೇಳೆ ಶಕ್ತಿಧಾಮದ ಮಕ್ಕಳಿಗೆ ಸಹಾಯ ಮಾಡುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ನಟ ವಿಶಾಲ್‌.

ಮೈಸೂರಿನಲ್ಲಿ ನಟ ವಿಶಾಲ್ ಮಾಧ್ಯಮದವರೊಂದಿಗೆ ಮಾತನಾಡಿ ʻʻಶಕ್ತಿಧಾಮದ ಮಕ್ಕಳ ವಿಚಾರದಲ್ಲಿ‌ ಸಹಾಯ ಮಾಡಲು ನಾನು ಎಂದಿಗೂ ಸಿದ್ಧ. ಆದರೆ ಯಾವ ರೀತಿ ಸಹಾಯ ಬೇಕು ಎಂಬುದರ ಬಗ್ಗೆ ಡಾ.ರಾಜ್ ಕುಟುಂಬದಿಂದ ಅಧಿಕೃತ ಮಾಹಿತಿ ಬಂದಿಲ್ಲ. ಅವರು ಅಧಿಕೃತವಾಗಿ ಹೇಳಿದರೆ ನಾನು‌ ಯಾವ ಸಹಾಯಕ್ಕೂ ಸಿದ್ದ.
ನಾನು ಶಕ್ತಿಧಾಮದ ಸ್ವಯಂ ಸೇವಕನಾಗಿ ಯಾವಾಗಲೂ ಇರುತ್ತೇನೆ. ಮಕ್ಕಳ ದತ್ತು ಪಡೆಯುವ ವಿಚಾರ ಇರಬಹುದು, ಶಾಲಾ ಕಟ್ಟಡ ನಿರ್ಮಾಣ ವಿಚಾರ ಇರಬಹುದು ರಾಜ್ ಫ್ಯಾಮಿಲಿಯಿಂದ ಅನುಮತಿ ಸಿಕ್ಕರೆ ನಾನು ಎಲ್ಲಾ ಕೊಡುಗೆಗೆ ಸಿದ್ಧ. ಪ್ರಕಾಶ್‌ ರೈ ಅಪ್ಪು ಹೆಸರಿನಲ್ಲಿ ಆಂಬ್ಯುಲೆನ್ಸ್ ಕೊಡುತ್ತಿದ್ದಾರೆ‌. ಅವರು ನನ್ನ ಬಳಿ ಈ ಬಗ್ಗೆ ಮಾತನಾಡಿದ್ದಾರೆ. ಸದ್ಯಕ್ಕೆ ಶಕ್ತಿಧಾಮಕ್ಕೆ ಯಾವ ಸಹಾಯವೂ ಅಗತ್ಯ ಇದ್ದಂತೆ ಇಲ್ಲ. ರಾಜ್ ಕುಟುಂಬ ಶಕ್ತಿಧಾಮವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಹೊಟ್ಟೆ ತುಂಬಿದಾಗ ನಾವು ಮತ್ತೆ ಒಂದು ತುತ್ತು ತಿನ್ನಿಸಲು ಸಾಧ್ಯವಿಲ್ಲʼʼ ಎಂದರು.

ಇದನ್ನೂ ಓದಿ | Rashmika Mandanna | ರಶ್ಮಿಕಾ ಜತೆ ಡೇಟಿಂಗ್‌ ಹೋಗಬೇಕು ಎಂದ ನಟ ವಿಶಾಲ್‌!

ದಕ್ಷಿಣ ಭಾರತದ ಸಿನಿಮಾಗಳು ದೇಶದಲ್ಲಿ ದೊಡ್ಡ ಹೆಸರು ಮಾಡುತ್ತಿವೆ!
ಮಾತು ಮುಂದುವರಿಸಿ ʻʻದಕ್ಷಿಣ ಭಾರತದ ಸಿನಿಮಾಗಳು ದೇಶದಲ್ಲಿ ದೊಡ್ಡ ಹೆಸರು ಮಾಡುತ್ತಿವೆ. ಕನ್ನಡದಲ್ಲಿ ಕೆಜಿಎಫ್ ನಂತರ ಕಾಂತಾರ ಒಳ್ಳೆಯ ಸಿನಿಮಾ. ನಾನು ಸಹ ಕಾಂತಾರ ನೋಡಿದ್ದೇನೆ. ರಿಷಬ್‌ ಅವರಿಗೆ ಕರೆ ಮಾಡಿ ಸಿನಿಮಾ ಚೆನ್ನಾಗಿ ಮಾಡಿದ್ದೀರ ಎಂದು ಹೇಳಿದ್ದೇನೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಇಲ್ಲಿನ ಕಲೆ, ಸಂಸ್ಕೃತಿಯನ್ನು ತೋರಿಸುತ್ತಿದ್ದೇವೆ. ಇದು ಉತ್ತರ ಭಾರತದವರಿಗೆ ಇಷ್ಟವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ, ಉತ್ತರ ಭಾರತದ ಸಿನಿಮಾ ಅಂತೇನಿಲ್ಲ. ಎಲ್ಲವೂ ಭಾರತದ ಸಿನಿಮಾ. ನನಗೆ ಕನ್ನಡದಲ್ಲಿ ಸಿನಿಮಾ ಮಾಡುವ ಆಸೆ ಇದೆ.
2024ರ ನಂತರ ಅದು ಸಾಧ್ಯವಾಗಬಹುದು. ನನ್ನ ತಂದೆಗೆ ನಾನು ಕನ್ನಡದಲ್ಲಿ ಸಿನಿಮಾ ಮಾಡಬೇಕೆಂಬುದು ದೊಡ್ಡ ಆಸೆ. ಕೆಲವರು ನನ್ನನ್ನು ಸಂಪರ್ಕಿಸಿದ್ದಾರೆ. ಅದನ್ನು ನಾನು ಬಹಿರಂಗವಾಗಿ ಹೇಳಲು ಆಗುವುದಿಲ್ಲ.
ಶೀಘ್ರದಲ್ಲೇ ಕನ್ನಡ ಸಿನಿಮಾ ಅಸಾಧ್ಯʼʼಎಂದು ಹೇಳಿಕೆ ನೀಡಿದ್ದಾರೆ.

‘ಲಾಠಿ’ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡದಲ್ಲೂ ತೆರೆಗೆ ಬರಲಿದೆ. ಎ. ವಿನೋದ್ ಕುಮಾರ್ ನಿರ್ದೇಶನದ ಈ ಸಿನಿಮಾವನ್ನು ನಂದ ಮತ್ತು ರಮಣ ನಿರ್ಮಾಣ ಮಾಡುತ್ತಿದ್ದಾರೆ. ಸ್ಯಾಮ್ ಸಿ.ಎಸ್. ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಇದನ್ನೂ ಓದಿ | Actor Vishal | ವಿಶೇಷ ಚೇತನ ನಟಿ ಜತೆ ನಟ ವಿಶಾಲ್‌ ಡೇಟಿಂಗ್‌?

Exit mobile version