Site icon Vistara News

Shilpa Shetty: ಪುಟ್ಟ ಮಗಳ ಪಾದ ಪೂಜೆ ಮೂಲಕ ನವರಾತ್ರಿ ಆಚರಿಸಿದ ಶಿಲ್ಪಾ ಶೆಟ್ಟಿ ದಂಪತಿ

Shilpa Shetty couple perform kanya pooja with daughter

ಮುಂಬಯಿ: ಕೆಲವು ದಿನದ ಹಿಂದಷ್ಟೇ ಡೈವೋರ್ಸ್‌ ವದಂತಿ (Divorce rumour) ಹರಡಿ ಎಲ್ಲರ ಹುಬ್ಬೇರಿಸಿದ್ದ ನಟಿ ಶಿಲ್ಪಾ ಶೆಟ್ಟಿ (Actress Shilpa Shetty) ಮತ್ತು ಉದ್ಯಮಿ ರಾಜ್​ ಕುಂದ್ರಾ (Businessman Raj Kundra) ಜೋಡಿ ಈಗ ಇನ್ನೊಮ್ಮೆ ಸದ್ದು ಮಾಡಿದೆ. ಈ ಬಾರಿ ಅವರು ನವರಾತ್ರಿ ಸಂದರ್ಭದಲ್ಲಿ ತಮ್ಮ ಪುತ್ರಿ ಸಮೀಷಾಳ ಪಾದ ಪೂಜೆ (Navaratri pada pooje) ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್‌ ಕುಂದ್ರಾ 2009ರಲ್ಲಿ ಮದುವೆಯಾಗಿದ್ದರು. 2012ರಲ್ಲಿ ಅವರಿಗೆ ಮಗ ವಿಯಾನ್‌ ಹುಟ್ಟಿದ್ದ. ಅದಾದ ಬಳಿಕ 2020ರಲ್ಲಿ ಬಾಡಿಗೆ ತಾಯ್ತನದ ಮೂಲಕ ಅವರು ಹೆಣ್ಣು ಮಗುವನ್ನು ಪಡೆದಿದ್ದಾರೆ. ಅವಳೇ ಸಮೀಷಾ!

ಸಮೀಷಾಳಿಗೆ ಈಗ ಮೂರುವರೆ ವರ್ಷ. ಸಮೀಷಾ ಹುಟ್ಟಿದ ಬಳಿಕ ಕೊರೊನಾ ಬಂದಿದ್ದರಿಂದ ಪುಟ್ಟ ಮಗುವಿನ ಒಂದು ಮತ್ತು ಎರಡನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಆಗಿರಲಿಲ್ಲ. ಹೀಗಾಗಿ ಕಳೆದ ಫೆಬ್ರವರಿಯಲ್ಲಿ ದಂಪತಿ ಸಂಭ್ರಮದಿಂದ ಆಚರಣೆ ಮಾಡಿದ್ದರು. ಇದೀಗ ಸಮೀಷಾಳಿಗೆ ನವರಾತ್ರಿಯ ಅಚ್ಚರಿ ಕಾದಿತ್ತು.

ನವರಾತ್ರಿಯ ಸಂದರ್ಭದಲ್ಲಿ ದೇವಿಯ ಆರಾಧನೆಯ ಖುಷಿಯಲ್ಲಿ ರಾಜ್​ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರು ಮಗಳ ಪಾದ ಪೂಜೆ ಮಾಡಿದ್ದಾರೆ. ಮತ್ತು ಈ ಬಗ್ಗೆ ವಿಡಿಯೊ ಪೋಸ್ಟ್‌ ವಿಡಿಯೊ ಮಾಡಿದ್ದಾರೆ.

ಅಷ್ಟಮಿಯ ಶುಭ ಸಂದರ್ಭದಲ್ಲಿ ನಾವು ನಮ್ಮದೇ ಆದ ದೇವಿಯಾದ ಸಮೀಷದೊಂದಿಗೆ ಕನ್ಯಾ ಪೂಜೆ ಮಾಡಿದ್ದೇವೆ. ಇದು ಪರಮ ದೇವಿ ಮಹಾ ಗೌರಿಗೆ ಮತ್ತು ಆಕೆಯ ಒಂಬತ್ತು ದೈವಿಕ ರೂಪಗಳಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುವ ವಿಧಾನ ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ.

ಮಗಳನ್ನು ದೇವರ ಕೋಣೆಯ ಮುಂದೆ ಕುರ್ಚಿಯಲ್ಲಿ ಕೂರಿಸಿ ಅವಳಿಗೆ ಆರತಿ ಬೆಳಗಿ, ಕಾಲುಗಳನ್ನು ತೊಳೆದು ಕಾಲುಗಳಿಗೆ ಗಂಧ ಕುಂಕುಮವನ್ನು ಹಚ್ಚಿ ನಮಸ್ಕರಿಸಿದ್ದಾರೆ. ಪುಟ್ಟ ಮಗಳು ಇದನ್ನೆಲ್ಲ ಖುಷಿಯಿಂದ ಮತ್ತು ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದಾಳೆ. ಇದೇ ವೇಳೆ ಮಗ ವಿಹಾನ್‌ಗೆ ಕೂಡಾ ಆರತಿ ಬೆಳಗಿದ್ದಾರೆ ಶಿಲ್ಪಾ ಶೆಟ್ಟಿ.

ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ದಂಪತಿ ತಮ್ಮ ಮಕ್ಕಳನ್ನು ಅತ್ಯಂತ ಪ್ರೀತಿ ಮತ್ತು ಜತನದಿಂದ ನೊಡಿಕೊಳ್ಳುತ್ತಿದ್ದಾರೆ. ಅವರ ಬೇಕು ಬೇಡಗಳನ್ನು ತೀರಿಸುವುದು ಮಾತ್ರವಲ್ಲ ವಿಭಿನ್ನ ಕಲ್ಪನೆಗಳೊಂದಿಗೆ ಬೆಳೆಸುತ್ತಿದ್ದಾರೆ. ಈ ಮಕ್ಕಳು ಮಲಗುವ ಕೋಣೆಗಳನ್ನು ಅವರಿಗೆ ಇಷ್ಟವಾದ ಬಣ್ಣಗಳಿಂದ ಅಲಂಕರಿಸಲಾಗಿದೆ. ಗೋಡೆಗಳ ಒಂದು ಬದಿಯಲ್ಲಿ ಆನೆ ಮತ್ತು ಜಿರಾಫೆ ಮತ್ತು ಚಿಟ್ಟೆಗಳು ಸೇರಿದಂತೆ ಹಲವಾರು ಪ್ರಾಣಿಗಳನ್ನು ಚಿತ್ರಿಸಲಾಗಿದೆ.

ಡೈವೋರ್ಸ್‌ ವದಂತಿ ಹರಡಿದ ದಂಪತಿ!

ಈ ನಡುವೆ, ರಾಜ್‌ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರು ಇನ್‌ಸ್ಟಾ ಗ್ರಾಂ ಖಾತೆಯಲ್ಲಿ ನಾವು ಪ್ರತ್ಯೇಕಗೊಳ್ಳುತ್ತಿದ್ದೇವೆ ಎಂದು ಪೋಸ್ಟ್‌ ಮಾಡಿ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದ್ದರು. ಬೇರಾಗುವುದಿದ್ದರೆ ರಾಜ್‌ ಕುಂದ್ರಾ ಸೆಕ್ಸ್‌ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಾಗ ಬೇರಾಗಬೇಕಿತ್ತು. ಈಗ ಯಾಕೆ ಬೇರಾಗುತ್ತಿದ್ದಾರೆ ಎಂಬ ಪ್ರಶ್ನೆ ಎದುರಾಗಬೇಕಾಗಿತ್ತು.

ಇದನ್ನೂ ಓದಿ: Raj Kundra: ಶಿಲ್ಪಾ ಶೆಟ್ಟಿ-ರಾಜ್‌ ವೈವಾಹಿಕ ಜೀವನದಲ್ಲಿ ಬಿರುಕು; ಟ್ವೀಟ್‌ ವೈರಲ್‌!

ಆದರೆ, ಬಳಿಕ ಅವರಿಬ್ಬರೂ ತಾವು ಪ್ರತ್ಯೇಕವಾಗುತ್ತಿರುವುದು ಕೆಲವು ತಿಂಗಳುಗಳಿಂದ ಧರಿಸುತ್ತಿದ್ದ ಮಾಸ್ಕ್​ನಿಂದ ಎಂದು ಹೇಳುವ ಮೂಲಕ ನಿರಾಳರಾಗಿದ್ದರು.

Exit mobile version