Site icon Vistara News

47ನೇ Birth day ಖುಷಿಗೆ Vanity Van ಖರೀದಿಸಿದ ಶಿಲ್ಪಾ ಶೆಟ್ಟಿ, ಏನೇನಿದೆ ಒಳಗೆ?

ಮುಂಬಯಿ: ಶಿಲ್ಪಾ ಶೆಟ್ಟಿ ಕೇವಲ ನಟಿ ಅಷ್ಟೇ ಅಲ್ಲ, ಫಿಟ್ನೆಸ್‌ ತಜ್ಞೆಯೂ ಹೌದು. ಅವರು ಹಂಚಿಕೊಳ್ಳುವ ಫಿಟ್ನೆಸ್‌ ಮಂತ್ರಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಅದರಲ್ಲೂ ಅವರು ಪಕ್ಕಾ ಯೋಗ ಎಕ್ಸ್‌ಪರ್ಟ್‌. ಹೀಗೆ ಕೈ ಇಟ್ಟ ಕಡೆ ಎಲ್ಲ ತನ್ನದೇ ಛಾಪು ಮೂಡಿಸಿರುವ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ, ಈಗ ಬೃಹತ್‌ ಗಾತ್ರದ ವ್ಯಾನಿಟಿ ವ್ಯಾನ್‌ (Vanity van) ಖರೀದಿಯ ಮೂಲಕ ಸುದ್ದಿ ಮಾಡಿದ್ದಾರೆ.

ಜೂನ್‌ 8ಕ್ಕೆ ಶಿಲ್ಪಾ ಶೆಟ್ಟಿ ಅವರ ಬರ್ತ್‌ ಡೇ ಇತ್ತು. ಈ ಖುಷಿಯಲ್ಲಿ ಅವರು ವ್ಯಾನಿಟಿ ವ್ಯಾನ್‌ ಖರೀದಿ ಮಾಡಿದ್ದಾರೆ. ಇದು ಅವರ 47ನೇ ಹುಟ್ಟುಹಬ್ಬ. ತಮ್ಮ ತಮ್ಮ 18ನೇ ವಯಸ್ಸಿಗೆ ಅಂದರೆ 1993ರಲ್ಲಿ ಶಾರುಖ್ ಖಾನ್ ಅಭಿನಯದ ‘ಬಾಜಿಗರ್’ ಚಿತ್ರದ ಮೂಲಕ ಬಾಲಿವುಡ್‌ಗೆ ಅದ್ಧೂರಿಯಾಗಿ ಪಾದಾರ್ಪಣೆ ಮಾಡಿದರು. ಮೊದಲ ಚಿತ್ರವೇ ಸೂಪರ್‌ ಹಿಟ್‌ ಆಯಿತು. ಶಿಲ್ಪಾ ಶೆಟ್ಟಿ ತಮ್ಮ 29 ವರ್ಷಗಳ ವೃತ್ತಿಜೀವನದಲ್ಲಿ ‘ಧಡ್ಕನ್’, ‘ರಿಶ್ತೆ’, ‘ಇಂಡಿಯನ್’, ‘ಮೈನ್ ಖಿಲಾಡಿ ತು ಅನಾಡಿ’ ಮತ್ತು ‘ಲೈಫ್ ಇನ್ ಎ ಮೆಟ್ರೋ’ ನಂತಹ ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡರು. ಕನ್ನಡದಲ್ಲೂ ಪ್ರೀತ್ಸೋದ್‌ ತಪ್ಪಾ, ಒಂದಾಗೋಣ ಬಾ, ಆಟೋ ಶಂಕರ ಮತ್ತಿತರ ಸಿನಿಮಾಗಳಲ್ಲಿ ನಟಿಸಿ ಜನ ಮನ ಸೆಳೆದರು. ಸದ್ಯ ಬಾಲಿವುಡ್‌ ಸಿನಿಮಾ ಹಾಗೂ ರಿಯಾಲಿಟಿ ಶೋಗಳ ಜಡ್ಜ್‌ ಆಗಿ ಬ್ಯುಸಿ ಆಗಿದ್ದಾರೆ ಶಿಲ್ಪಾ.

ಶಿಲ್ಪಾ ಶೆಟ್ಟಿ ತಮ್ಮ 47 ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಪತಿ ರಾಜ್‌ ಕುಂದ್ರಾ, ಮಗ ವಿಹಾನ್‌, ಕುಟುಂಬದ ಸ್ನೇಹಿತರು, ಚಿತ್ರೋದ್ಯಮದ ಆಪ್ತರು ಭಾಗಹಿಸಿದ್ದರು. ಜತೆಗೆ ಹಲವು ಬಾಲಿವುಡ್‌ ನಟ-ನಟಿಯರು ಉಡುಗೊರೆಗಳನ್ನು ನೀಡಿದ್ದಾರೆ. ಶಿಲ್ಪಾ ತಮ್ಮ ಇನ್‌ಸ್ಟಾಗ್ರಾಮ್ ಅಲ್ಲಿ ಹುಟ್ಟುಹಬ್ಬದ ಆಚರಣೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ. “ಎಂತಹ ಫ್ಯಾಬ್ ದಿನ. ನನ್ನ ಹುಟ್ಟುಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಿದ್ದಕ್ಕಾಗಿ ಧನ್ಯವಾದಗಳು. ದಿಲ್ ನಿಕಮ್ಮಾ ಹೋ ಗಯಾ” ಅಂತ ಬರೆದುಕೊಂಡಿದ್ದಾರೆ. ಈ ಸಂಭ್ರಮವನ್ನು ವ್ಯಾನಿಟಿ ವ್ಯಾನ್‌ ಇನ್ನಷ್ಟು ಹೆಚ್ಚಿಸಿದೆ.


ವ್ಯಾನಿಟಿ ವ್ಯಾನ್‌ ವಿಶೇಷತೆ

ಶಿಲ್ಪಾ ಅವರು ಹಂಚಿಕೊಂಡಿರುವ ವ್ಯಾನಿಟಿ ವ್ಯಾನ್‌ನ ಒಳಗಿನ ಚಿತ್ರಗಳನ್ನು ನೋಡಿರುವ ಅಭಿಮಾನಿಯೊಬ್ಬರು ʻಶಿಲ್ಪಾ ಶೆಟ್ಟಿ ವ್ಯಾನಿಟಿ ವ್ಯಾನ್‌ ನನ್ನ ಮನೆಗಿಂತ ದೊಡ್ಡದಾಗಿದೆ” ಎಂದು ಕಮೆಂಟ್ ಮಾಡಿದ್ದಾರೆ. ನಿಜಕ್ಕೂ ಇದು ಸತ್ಯವೇ! ಈ ವ್ಯಾನಿಟಿ ವ್ಯಾನ್ ವಿಶೇಷತೆಯೆಂದರೆ ಇದರಲ್ಲಿ ಅಡುಗೆ ಮನೆ, ಹೇರ್ ವಾಶ್ ಸ್ಟೇಷನ್ ಒಳಗೊಂಡಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ವ್ಯಾನ್‌ ಅಲ್ಲಿ ಯೋಗ ಮಾಡಲು ವಿಶೇಷ ಸ್ಥಳವೂ ಇದೆ. ಶಿಲ್ಪಾ ಫಿಟ್ನೆಸ್ ಪ್ರಜ್ಞೆಯುಳ್ಳವರು ಮತ್ತು ದಿನವೂ ಬಿಡದೇ ಯೋಗವನ್ನು ಮಾಡುತ್ತಾರೆ, ಆದ್ದರಿಂದ ಈ ವ್ಯಾನಿಟಿಯಲ್ಲಿ ಅದರ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಲಾಂಜ್‌ನ ಹಾಗೆ ದೊಡ್ಡ ಜಾಗ ಇದೆ, ಚಿತ್ರೀಕರಣ ಮಾಡುವಷ್ಟು ವಿಸ್ತಾರವಾಗಿದೆ. ಮೇಕಪ್‌ ಟೇಬಲ್‌ ಇದೆ. ಒಬ್ಬರು ಆರಾಮವಾಗಿ ವಿಶ್ರಾಂತಿ ಪಡೆಯಹುದು.

ಅಂದ ಹಾಗೆ, ಶಿಲ್ಪಾ ಶೆಟ್ಟಿ ಅವರ ಹೊಸ ಚಿತ್ರ ʻನಿಕಮ್ಮಾʼ ಜೂನ್‌ 17ರಂದು ಬಿಡುಗಡೆಗೆ ರೆಡಿಯಾಗಿದೆ. ಇದರಲ್ಲಿ ಅಭಿಮನ್ಯು ಮತ್ತು ಶೆರ್ಲಿ ಕೂಡಾ ನಟಿಸಿದ್ದಾರೆ. ರೋಹಿತ್‌ ಶೆಟ್ಟಿ ಅವರ ಹೊಸ ಚಿತ್ರ ʻಇಂಡಿಯನ್‌ ಪೊಲೀಸ್‌ ಫೋರ್ಸ್‌ʼನಲ್ಲಿ ಶಿಲ್ಪಾ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಇವರೊಂದಿಗೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಿವೇಕ್ ಒಬೆರಾಯ್ ಕೂಡಾ ಇದ್ದಾರೆ.

ಇದನ್ನೂ ಓದಿ:Happy birthday ಶಿಲ್ಪಾ ಶೆಟ್ಟಿ

Exit mobile version