Site icon Vistara News

Shiva 143 | ಧೀರೇನ್‌ ರಾಮ್‌ಕುಮಾರ್‌ ಚಿತ್ರ ಶಿವ 143 ರಾಜ್ಯಾದ್ಯಂತ ಬಿಡುಗಡೆ : ಅಪ್ಪು ಕಟೌಟ್ ಮುಖ್ಯ ಆಕರ್ಷಣೆ!

Shiva 143

ಬೆಂಗಳೂರು : ವರನಟ ರಾಜಕುಮಾರ್ ಪುತ್ರಿ ಪೂರ್ಣಿಮಾ ಮಗ ಧೀರೇನ್‌ ರಾಮ್‌ಕುಮಾರ್‌ ಅವರ ಚೊಚ್ಚಲ ʻʻಶಿವ 143ʼʼ ಸಿನಿಮಾ (Shiva 143) ರಾಜ್ಯಾದ್ಯಂತ ಬಿಡುಗಡೆಗೊಂಡಿದೆ. ಚಿತ್ರಮಂದಿರ ಮುಂದೆ ಪುನೀತ್‌ ರಾಜ್‌ಕುಮಾರ್‌ ಅವರ ಕಟೌಟ್ ರಾರಾಜಿಸುತ್ತಿವೆ. ಹಾಗೂ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ.

ನಟ ಶಿವರಾಜ್ ಕುಮಾರ್ ಅವರು ಕೂಡ ಈಗಾಗಲೇ ಶಿವನಿಗೆ ಶುಭ ಹಾರೈಸಿದ್ದಾರೆ. ದೊಡ್ಮನೆ ಕುಟುಂಬದ ಮತ್ತೊಬ್ಬ ಸ್ಟಾರ್ ನಟನ ಎಂಟ್ರಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ ದೊಡ್ಮನೆ ಕುಟುಂಬದ ಅಭಿಮಾನಿಗಳು. ರಾಜ್ಯಾದ್ಯಂತ 180 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಶಿವನ ಅಬ್ಬರ ಶುರುವಾಗಿದೆ. ಬೆಂಗಳೂರು, ಹುಬ್ಬಳ್ಳಿ,…ಹೊಸಪೇಟೆ…ಸೇರಿದಂತೆ ಹಲವು ಚಿತ್ರಮಂದಿರಗಳ ಅಂಗಳದಲ್ಲಿ ರಾಜವಂಶದ ಫ್ಯಾನ್ಸ್ ಸಂಭ್ರಮ ಜೋರಾಗಿದೆ.

ವೈಭವ ಹೆಚ್ಚಿಸಿದ್ದ ಮೇನ್ ಥಿಯೇಟರ್ ಓಪನ್‌..!

ಕಳೆದ 8 ತಿಂಗಳಿಂದ ಸ್ಥಗಿತಗೊಂಡಿದ್ದ ಸಂತೋಷ್ ಚಿತ್ರಮಂದಿರ ಅಣ್ಣಾವ್ರ ಮೊಮ್ಮಗನ ಸಿನಿಮಾದಿಂದ ರೀ ಓಪನ್ ಭಾಗ್ಯ ಲಭಿಸಿದೆ. ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಗೊಂಡಿದೆ.

ಖುಷಿ ವ್ಯಕ್ತಪಡಿಸಿದ್ದ ಅಪ್ಪು!

ಶಿವ ೧೪೩ ಚಿತ್ರದ ಬಗ್ಗೆ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ತಮ್ಮ ಕುಟುಂಬದ ಕುಡಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ. ಮೈಸೂರಿನಲ್ಲಿ ಚಿತ್ರೀಕರಣದ ವೇಳೆ ಧೀರೇನ್‌ ನಟನೆಯನ್ನು ನೋಡಿ ಪುನೀತ್‌ ಖುಷಿ ವ್ಯಕ್ತಪಡಿಸಿದ್ದರು. ಸ್ನೇಹಿತರೊಬ್ಬರ ಬಳಿ ಮಾತನಾಡಿದ್ದ ಅಪ್ಪು, ʻಅವನ ಕಣ್ಣುಗಳನ್ನು ನೋಡಿ, ಹೊಳಪು ಕಾಣುತ್ತಿದೆ. ನಮ್ಮ ಕುಟುಂಬದಿಂದ ಒಳ್ಳೆಯ ಹೀರೋ ಒಬ್ಬ ಬರುತ್ತಿದ್ದಾನೆʼʼ ಎಂದು ಸಂತೋಷ ಪಟ್ಟಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ | Shiva 143 | ದೊಡ್ಮನೆ ಕುಟುಂಬದ ಕುಡಿ ಧೀರೇನ್‌ ರಾಮ್‌ಕುಮಾರ್ ನಟನೆಯ ಶಿವ 143 ರಿಲೀಸ್‌ ಡೇಟ್‌ ಫಿಕ್ಸ್‌!

ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರು ಸಿನಿಮಾದ ಟೀಸರ್‌ ಬಿಡುಗಡೆಗೊಳಿಸಿದ್ದರು. ಈ ಕುರಿತು ಧೀರೇನ್‌ ರಾಮ್‌ಕುಮಾರ್ ʻʻಅಪ್ಪು ಮಾಮಾ ಬಿಡುಗಡೆ ಮಾಡಿದ್ದಷ್ಟೇ ಖುಷಿಯಾಯ್ತುʼʼ ಎಂದು ಹೇಳಿಕೊಂಡಿದ್ದರು.

ಈ ಚಿತ್ರಕ್ಕೆ ರವಿವರ್ಮ ಸಾಹಸ ನಿರ್ದೇಶನವಿದೆ. ಅನಿಲ್‌ ಕುಮಾರ್‌ ಚಿತ್ರದ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಜಯಣ್ಣ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ಮೂಡಿ ಬಂದಿದೆ. ಛಾಯಾಗ್ರಹಣ ಜವಾಬ್ದಾರಿಯನ್ನು ಶಿವ ಹೊತ್ತಿದ್ದಾರೆ. ಜಯಣ್ಣ, ಭೋಗೇಂದ್ರ ಮತ್ತು ಡಾ. ಸೂರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ನಾಯಕಿಯಾಗಿ ಮಾನ್ವಿತಾ ಕಾಮತ್‌ ನಟಿಸಿದ್ದಾರೆ. ಚರಣ್‌ ರಾಜ್‌ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಾಧು ಕೋಕಿಲ ಹಾಗೂ ಚಿಕ್ಕಣ್ಣ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ | ಕೃಷ್ಣ ಜನ್ಮಾಷ್ಟಮಿ ದಿನ ಅವಳಿ ಮಕ್ಕಳನ್ನು ಪರಿಚಯಿಸಿದ ಸ್ಯಾಂಡಲ್‌ವುಡ್‌ ಕ್ವೀನ್‌ ಅಮೂಲ್ಯ

Exit mobile version