ಕೃಷ್ಣ ಜನ್ಮಾಷ್ಟಮಿ ದಿನ ಅವಳಿ ಮಕ್ಕಳನ್ನು ಪರಿಚಯಿಸಿದ ಸ್ಯಾಂಡಲ್‌ವುಡ್‌ ಕ್ವೀನ್‌ ಅಮೂಲ್ಯ - Vistara News

ಲೈಫ್‌ಸ್ಟೈಲ್

ಕೃಷ್ಣ ಜನ್ಮಾಷ್ಟಮಿ ದಿನ ಅವಳಿ ಮಕ್ಕಳನ್ನು ಪರಿಚಯಿಸಿದ ಸ್ಯಾಂಡಲ್‌ವುಡ್‌ ಕ್ವೀನ್‌ ಅಮೂಲ್ಯ

ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಅವರು ತಮ್ಮ ಅವಳಿ ಮಕ್ಕಳನ್ನು ಕೃಷ್ಣ ಜನ್ಮಾಷ್ಟಮಿ ದಿನ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

VISTARANEWS.COM


on

Amulya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಅವರು ತಮ್ಮಿಬ್ಬರು ಮಕ್ಕಳನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಶ್ರೀಕೃಷ್ಣ ಜನ್ಮಾಷ್ಟಮಿ ಶುಭಾಶಯ ತಿಳಿಸಿದ್ದಾರೆ. ಮಕ್ಕಳ ವಿಶೇಷ ಫೋಟೊಗ್ರಫಿಯನ್ನು ಮಾಡಿರುವ ಅಮೂಲ್ಯ- ಜಗದೀಶ್‌ ದಂಪತಿ ಸಾಮಾಜಿಕ ಜಾಲತಾಣಗಳ ಮೂಲಕ ಪೋಸ್ಟ್ ಮಾಡಿದ್ದಾರೆ. ಈ ಮಕ್ಕಳು ಶಿವರಾತ್ರಿ ದಿನ ಹುಟ್ಟಿದ್ದು, ಜನ್ಮಾಷ್ಟಮಿ ದಿನ ಎಲ್ಲರಿಗೂ ಪರಿಚಿತರಾಗಿದ್ದಾರೆ.

ಸ್ಯಾಂಡಲ್‌ವುಡ್ ಕ್ವೀನ್‌ ಅಮೂಲ್ಯ ಅವರು ಕಳೆದ ಮಾರ್ಚ್‌ ೨೧ರಂದು ಅಂದರೆ ಶಿವರಾತ್ರಿ ದಿನ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅವರ ಪತಿ ಜಗದೀಶ್ ಆರ್‌. ಚಂದ್ರ ಅವರು ಆ ಸುದ್ದಿಯನ್ನು ಟ್ವೀಟ್‌ ಮೂಲಕ ಪ್ರಕಟಿಸಿದ್ದರು. ಇದೀಗ ಮಕ್ಕಳ ಚಿತ್ರವನ್ನು ಪ್ರಕಟಿಸಿ ಹರಸುವಂತೆ ಕೋರಿದ್ದಾರೆ.

ಮಕ್ಕಳ ಫೋಟೋಗೆ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದ ಅಮೂಲ್ಯ ಅವರ ಮಕ್ಕಳ ಚಿತ್ರಗಳನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

ಸ್ಯಾಂಡಲ್‌ವುಡ್‌ ಕ್ವೀನ್‌ ಬೆಳೆದು ಬಂದ ಹಾದಿ

ಬಾಲನಟಿಯಾಗಿದ್ದ ಅಮೂಲ್ಯ ‘ಚೆಲುವಿನ ಚಿತ್ತಾರ’ ಸಿನಿಮಾದ ಮೂಲಕ ನಾಯಕಿಯಾಗಿ ಬಡ್ತಿ ಪಡೆದಿದ್ದರು. ಸಣ್ಣ ವಯಸ್ಸಿನಲ್ಲಿಯೇ ಪ್ರಮುಖ ಕಲಾವಿದರೊಂದಿಗೆ ನಟಿಸಿ ಖ್ಯಾತಿ ಗಳಿಸಿಕೊಂಡಿದ್ದರು. ಗಣೇಶ್​, ಯಶ್​, ಪ್ರೇಮ್​, ಕೃಷ್ಣ ಅಜಯ್​ ರಾವ್​, ದುನಿಯಾ ವಿಜಯ್​ ಮುಂತಾದ ಸ್ಟಾರ್​ ಕಲಾವಿದರ ಜತೆ ಅಮೂಲ್ಯ ನಟಸಿದ್ದಾರೆ. ‘ನಾನು ನನ್ನ ಕನಸು’ ಸಿನಿಮಾದಲ್ಲಿ ಬಹುಭಾಷಾ ಕಲಾವಿದ ಪ್ರಕಾಶ್​ ರೈ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದರು ಅಮೂಲ್ಯ. ‘ಮುಗುಳು ನಗೆ’ ಚಿತ್ರದಲ್ಲಿ ಕೊನೆಯ ಬಾರಿಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಚಿತ್ರರಂಗದಲ್ಲಿ ​ಬೇಡಿಕೆ ಇರುವಾಗಲೇ ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಉದ್ಯಮಿ ಜಗದೀಶ್​ ಚಂದ್ರ ಜೊತೆ 017ರ ಮೇ ತಿಂಗಳಲ್ಲಿ ವಿವಾಹವಾಗಿದ್ದರು. ಬಳಿಕ ಸಿನಿಮಾ ಕ್ಷೇತ್ರದಿಂದ ದೂರವುಳಿದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Star Fashion: ಏನಿದು ನಟಿ ಶ್ರೀ ಲೀಲಾ ಧರಿಸಿ ಮಿಂಚಿದ್ದ ಘರಾರ ಡ್ರೆಸ್?

ದುಬೈ ಮೂಲದ ಡಿಸೈನರ್‌ವೇರ್‌ ಪ್ರಿಂಟೆಡ್‌ ಫ್ಲೋರಲ್‌ ಘರಾರ ಡ್ರೆಸ್‌ನಲ್ಲಿ ಬಹುಭಾಷಾ ತಾರೆ ಶ್ರೀ ಲೀಲಾ (Star Fashion) ಮಿಂಚಿದ್ದಾರೆ. ತೆರೆಮರೆಗೆ ಸರಿದಿದ್ದ, ಘರಾರ ಫ್ಯಾಷನ್‌ ಇದೀಗ ಮತ್ತೊಮ್ಮೆ ಹೊಸ ರೂಪದಲ್ಲಿ ಮರಳಿದೆ. ಏನಿದು ಘರಾರ ಡ್ರೆಸ್? ಇಲ್ಲಿದೆ ಮಾಹಿತಿ.

VISTARANEWS.COM


on

Star Fashion
ಚಿತ್ರಗಳು: ಶ್ರೀ ಲೀಲಾ, ಸ್ಯಾಂಡಲ್‌ವುಡ್‌ ನಟಿ, ಫೋಟೋಕೃಪೆ: ಡಾಟ್‌ ಮೆಟ್ರಿಕ್ಸ್ ಕ್ರಿಯೇಟಿವ್ಸ್
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬ್ಯೂಟಿಫುಲ್‌ ಘರಾರ ಡ್ರೆಸ್‌ನಲ್ಲಿ ಸ್ಯಾಂಡಲ್‌ವುಡ್‌ ತಾರೆ ಶ್ರೀ ಲೀಲಾ (Star Fashion) ಮಿಂಚಿದ್ದಾರೆ. ದುಬೈ ಮೂಲದ ಬೋಟಿಕ್‌ವೊಂದರ ಡಿಸೈನರ್‌ವೇರ್‌ ಇದಾಗಿದೆ. ಜಾರ್ಜೆಟ್‌ ಫ್ಯಾಬ್ರಿಕ್‌ ಮರೂನ್‌ ಶೇಡ್‌ನ ಗಾರ್ಡನ್‌ ಪ್ರಿಂಟ್ಸ್ ಇರುವ ಈ ಡ್ರೆಸ್ ಅದೇ ಬಣ್ಣದ ಫ್ಲೋರಲ್‌ ಕ್ರಾಪ್‌ ಬ್ಲೌಸ್, ಪ್ಯಾಂಟ್‌ ಹಾಗೂ ಕೇಪ್‌ ಹೊಂದಿದೆ. ಈ ತ್ರೀ ಪೀಸ್‌ನ ಘರಾರ ಕೋ ಆರ್ಡ್ ಸೆಟ್‌ ಡ್ರೆಸ್‌ನಲ್ಲಿ ನಟಿ ಶ್ರೀ ಲೀಲಾ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಇದರಿಂದ ನಮ್ಮಲ್ಲಿ ತೆರೆಮರೆಗೆ ಸರಿದಿದ್ದ ಘರಾರ ಫ್ಯಾಷನ್‌ಗೆ ಮರು ಹುಟ್ಟು ಸಿಕ್ಕಿದೆ.

Star Fashion

ನಟಿ ಶ್ರೀ ಲೀಲಾ ಫ್ಯಾಷನ್‌ ಲವ್‌

ಕನ್ನಡದ ಕಿಸ್‌ ಚಲನಚಿತ್ರ ಸೇರಿದಂತೆ ನಾನಾ ಸಿನಿಮಾಗಳಲ್ಲಿ ನಟಿಸಿರುವ ಸ್ಯಾಂಡಲ್‌ವುಡ್‌ ನಟಿ ಶ್ರೀ ಲೀಲಾ, ಇದೀಗ ತೆಲುಗು ಸಿನಿಮಾಗಳಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಈಕೆ ಫ್ಯಾಷನ್‌ ಲವ್ವರ್‌ ಕೂಡ. ತಮ್ಮದೇ ಆದ ಫ್ಯಾಷನ್‌ ಸೆನ್ಸ್ ಹೊಂದಿರುವ ಶ್ರೀ ಲೀಲಾ ಆಗಾಗ್ಗೆ ಪ್ರಯೋಗಾತ್ಮಕ ಫ್ಯಾಷನ್‌ ಔಟ್‌ಫಿಟ್‌ಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ದುಬೈ ಮೂಲದ ಡಿಸೈನರ್‌ವೇರ್ ಘರಾರ ಡ್ರೆಸ್‌ನಲ್ಲಿ ಅಭಿಮಾನಿಗಳನ್ನು ಸೆಳೆದಿದ್ದಾರೆ.

Star Fashion

ಏನಿದು ಘರಾರ ಕೋ ಆರ್ಡ್ ಸೆಟ್‌ ಡ್ರೆಸ್‌?

ಮೂಲತಃ ಉತ್ತರ ಭಾರತ ಹಾಗೂ ಮುಸ್ಲಿಂ ಹೆಣ್ಣುಮಕ್ಕಳು ಧರಿಸುವ ರಾಯಲ್‌ ಔಟ್‌ಫಿಟ್‌ ಇದು. ಮದುವೆ ಹಾಗೂ ಇನ್ನಿತರೇ ಸಮಾರಂಭಗಳಲ್ಲಿ ಗ್ರ್ಯಾಂಡ್‌ ಲುಕ್‌ಗಾಗಿ ಈ ಘರಾರ ಡ್ರೆಸ್‌ಗಳನ್ನು ಧರಿಸುವುದು ಮೊದಲಿನಿಂದಲೂ ಬೆಳೆದು ಬಂದಿದೆ. ನೋಡಲು ಶರಾರ ಡ್ರೆಸ್‌ನಂತೆ ಕಂಡರೂ ಇದು ಅದಲ್ಲ! ಮಂಡಿವರೆಗೂ ಅಥವಾ ಮಂಡಿಯ ಮೇಲಿನವರೆಗೂ ಕೊಂಚ ಫಿಟ್ಟಿಂಗ್‌ ಪ್ಯಾಂಟ್‌, ಈ ಘರಾರ ಡ್ರೆಸ್‌ನಲ್ಲಿ ಕಾಣಬಹುದು. ಕೆಳಗೆ ಮಾತ್ರ ಲೂಸಾಗಿರುತ್ತವೆ. ನೋಡಲು ನೆರಿಗೆ ಅಥವಾ ಹರಡಿದಂತಹ ಪಲ್ಹಾಜೊ ಪ್ಯಾಂಟಿನಂತಿರುತ್ತವೆ. ಇನ್ನು, ಇತ್ತೀಚೆಗೆ ಘರಾರಗೆ ಕ್ರಾಪ್‌ ಬ್ಲೌಸ್‌ಗಳು ಜೊತೆಯಾಗಿವೆ. ಅದರೊಂದಿಗೆ ಕೇಪ್‌ ಕೋಟ್‌ ಕೂಡ ಬಂದಿವೆ. ಹಾಗಾಗಿ ಕೊಂಚ ಗ್ಲಾಮರಸ್‌ ಲುಕ್‌ ಬಯಸುವರು ಲಾಂಗ್‌ ಬ್ಲೌಸ್‌ ಬದಲು ಕ್ರಾಪ್‌ ಬ್ಲೌಸ್‌ ಘರಾರಗಳನ್ನು ಆಯ್ಕೆ ಮಾಡತೊಡಗಿದ್ದಾರೆ. ಸೋ, ಇದೀಗ ಗ್ಲಾಮರಸ್‌ ಟ್ರೆಡಿಷನಲ್‌ ಡ್ರೆಸ್‌ ಫ್ಯಾಷನ್‌ನ ಟಾಪ್‌ ಲಿಸ್ಟ್‌ಗೆ ಸೇರಿವೆ.

Star Fashion

ಸೆಲೆಬ್ರೆಟಿಗಳ ರಾಯಲ್‌ಲುಕ್‌ಗೆ ಘರಾರ ಡ್ರೆಸ್

ಬಾಲಿವುಡ್‌ ಸೆಲೆಬ್ರೆಟಿಗಳು ಕೂಡ ವೆಡ್ಡಿಂಗ್‌ ಹಾಗೂ ಟ್ರೆಡಿಷನಲ್‌ ಕಾರ್ಯಕ್ರಮಗಳಲ್ಲಿ ಕ್ರಾಪ್‌ ಬ್ಲೌಸ್‌ ಘರಾರ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಕೋ ಆರ್ಡ್ ಸೆಟ್‌ನಂತಿರುವ ಈ ಘರಾರ ಔಟ್‌ಫಿಟ್‌ಗಳು ಇದೀಗ ಗ್ಲಾಮರಸ್‌ ಡಿಸೈನ್‌ನಲ್ಲೂ ಲಭ್ಯ ಎನ್ನುತ್ತಾರೆ ಸೆಲೆಬ್ರೆಟಿ ಸ್ಟೈಲಿಸ್ಟ್ ರಾಜ್‌.

( ಲೇಖಕಿ : ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Hairstyle Craze: ಸೋಷಿಯಲ್‌ ಮೀಡಿಯಾದಲ್ಲಿ ರಂಗೇರಿದ ಹೇರ್‌ ಸ್ಟೈಲ್ಸ್

Continue Reading

ಫ್ಯಾಷನ್

Cannes 2024 Sandalwood Actress Interview: ಕಾನ್‌ನಲ್ಲಿ ಹ್ಯಾಟ್ರಿಕ್‌ ವಾಕ್‌ ಮಾಡಿದ ಸ್ಯಾಂಡಲ್‌ವುಡ್‌ ನಟಿ ಇತಿ ಆಚಾರ್ಯ ಹೇಳಿದ್ದೇನು?

ಕಾನ್‌ ರೆಡ್‌ ಕಾರ್ಪೆಟ್‌ನಲ್ಲಿ ಸತತವಾಗಿ ಮೂರನೇ ಬಾರಿ ಹ್ಯಾಟ್ರಿಕ್‌ ವಾಕ್‌ ಮಾಡಿದ ಹೆಗ್ಗಳಿಕೆ ಸ್ಯಾಂಡಲ್‌ವುಡ್‌ ನಟಿ, ಮಾಡೆಲ್‌ ಇತಿ ಆಚಾರ್ಯಗೆ ಸಲ್ಲುತ್ತದೆ. ಈ ಬಾರಿ ಹ್ಯಾಟ್ರಿಕ್‌ ವಾಕ್‌ ಮಾಡಿದ ಅವರು ದೂರದ ಫ್ರಾನ್ಸ್ ನಿಂದ ವಿಸ್ತಾರ ನ್ಯೂಸ್‌ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಅವರ ಸಂದರ್ಶನದ (Cannes 2024 Sandalwood Actress Interview) ಸಾರಂಶ ಇಲ್ಲಿದೆ.

VISTARANEWS.COM


on

Cannes 2024 Sandalwood Actress Interview
ಚಿತ್ರಗಳು: 2024 ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ 3ನೇ ಬಾರಿ ವಾಕ್‌ ಮಾಡಿದ ಸ್ಯಾಂಡಲ್‌ವುಡ್‌ ನಟಿ, ಮಾಡೆಲ್‌ ಇತಿ ಆಚಾರ್ಯ
Koo

ಸಂದರ್ಶನ : ಶೀಲಾ ಸಿ. ಶೆಟ್ಟಿ
ಸ್ಯಾಂಡಲ್‌ವುಡ್‌ ನಟಿ ಹಾಗೂ ಮಾಡೆಲ್‌ ಇತಿ ಆಚಾರ್ಯ, ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸತತವಾಗಿ 3 ನೇ ಬಾರಿ ರೆಡ್‌ ಕಾರ್ಪೆಟ್‌ ವಾಕ್‌ ಮಾಡಿ, ಹ್ಯಾಟ್ರಿಕ್‌ ಬಾರಿಸಿದ್ದಾರೆ. ಯಾರಿದು ಇತಿ ಆಚಾರ್ಯ? ಕಳೆದೆರಡು ಬಾರಿಯೂ ಕಾನ್‌ ಫೆಸ್ಟಿವಲ್‌ನಲ್ಲಿ ಸ್ಯಾಂಡಲ್‌ವುಡ್‌ ಪ್ರತಿನಿಧಿಸಿರುವ ಇತಿ ಆಚಾರ್ಯ, ಸಾಕಷ್ಟು ಸ್ಯಾಂಡಲ್‌ವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇಕೆ! ಸಾಕಷ್ಟು ಫ್ಯಾಷನ್‌ ಶೋಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿಯೂ ರ್ಯಾಂಪ್‌ ವಾಕ್‌ ಮಾಡಿದ್ದಾರೆ. ಇಂಟರ್‌ನ್ಯಾಷನಲ್‌ ಆಲ್ಬಂ ಸಿಂಗರ್‌ ಮರ್ಲಿನ್‌ ಬಾಬಾಜೀ ಜೊತೆ ಆಲ್ಬಂನಲ್ಲೂ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿ ಕಾನ್‌ನಲ್ಲಿ ಲ್ಯಾವೆಂಡರ್‌ ಎಲಾಂಗೆಟೆಡ್‌ ನೆಟ್‌ ಗೌನ್‌ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಕಳೆದ ಬಾರಿಯೂ ಇದೇ ರೀತಿ ಟ್ರೆಂಡಿ ಡಿಸೈನರ್‌ ಗೌನ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಈ ಬಾರಿ ದೂರದ ಫ್ರಾನ್ಸ್‌ನಿಂದಲೇ ವಿಸ್ತಾರ ನ್ಯೂಸ್‌ನೊಂದಿಗೆ ಸಂತಸ ಹಂಚಿಕೊಂಡ ಇತಿ ಆಚಾರ್ಯ ಪುಟ್ಟ ಸಂದರ್ಶನ (Cannes 2024 Sandalwood Actress Interview) ನೀಡಿದರು.

Iti Acharya

ಕಾನ್‌ 2024 ರೆಡ್‌ಕಾರ್ಪೆಟ್‌ನಲ್ಲಿ ನಿಮ್ಮ ಲುಕ್‌ ಬಗ್ಗೆ ನೀವು ಹೇಳುವುದೇನು?

ಸ್ಕೈ ಬ್ಲ್ಯೂ ಶೇಡ್‌ನ ಶಿಮ್ಮರ್‌ ಅಸೆಮ್ಮಿಟ್ರಿಕಲ್‌ ಸಿಂಗಲ್‌ ಶೋಲ್ಡರ್ ಫಿಶ್‌ ಟೇಲ್‌ ಗೌನ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಸಾಕಷ್ಟು ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಂಡರೂ, ಹೆಚ್ಚು ಹೈಲೈಟಾದ ಗೌನ್‌ ಇದು.

Iti Acharya

ಕಾನ್‌ ರೆಡ್‌ಕಾರ್ಪೆಟ್‌ ವಾಕ್‌ ನಿಮಗೆ ಕಲಿಸಿದ್ದೇನು?

ಈಗಾಗಲೇ ಸತತವಾಗಿ 3ನೇ ಬಾರಿ ವಾಕ್‌ ಮಾಡಿರುವುದು ನನಗೆ ಆತ್ಮವಿಶ್ವಾಸ ಹೆಚ್ಚಿಸಿದೆ. ಕೇವಲ ಫ್ಯಾಷನ್‌ ಮಾತ್ರವಲ್ಲ, ಸಿನಿಮಾ ಕುರಿತಂತೆಯೂ ಸಾಕಷ್ಟು ವಿಚಾರ-ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಿಸಿದೆ.

Iti Acharya

ನಿಮ್ಮ ಪ್ರಕಾರ, ಕಾನ್‌ ಫೆಸ್ಟಿವಲ್‌ ಚಿತ್ರಣ ಹೇಗಿತ್ತು?

ಜಾಗತೀಕ ಮಟ್ಟದ ಫ್ಯಾಷನ್‌ ಸ್ಟಾರ್‌ಗಳು ವಾಕ್‌ ಮಾಡುವುದನ್ನು ನೋಡುವುದೇ ಒಂದು ಖುಷಿ!. 23 ಸಾವಿರಕ್ಕೂ ಹೆಚ್ಚು ಇಂಟರ್‌ನ್ಯಾಷನಲ್‌ ಬ್ರಾಂಡ್‌ಗಳು ಭಾಗವಹಿಸಿದ್ದವು. ಬೆಂಗಳೂರಿನ ಜ್ಯುವೆಲರಿ ಬ್ರಾಂಡ್‌ ಕೂಡ ಕಾಣಿಸಿಕೊಂಡಿತು. ಪ್ರಪಂಚಾದಾದ್ಯಂತ ಇರುವ ಡಿಸೈನರ್‌ಗಳಿಗೆ ಇದು ದೊಡ್ಡ ವೇದಿಕೆಯಾಗಿದ್ದು, ಪ್ರಾಕ್ಟಿಕಲ್‌ ಪಾಠದ ಪ್ರದರ್ಶನದಂತಿತ್ತು.

Iti Acharya

ಕಾನ್‌ ಫ್ಯಾಷನ್‌ನಲ್ಲಿ ವಾಕ್‌ ಮಾಡುವುದು ಸುಲಭವೇ!

ಖಂಡಿತಾ ಇಲ್ಲ! ಇಂಡಿಯನ್‌ ನಟಿಯರಿಗೆ ಡಿಸೈನರ್‌ ಜೊತೆ ಹೋಗಲು ಅವಕಾಶವಿರುವುದಿಲ್ಲ. ಒಬ್ಬರೇ ಭಾರಿ ಗಾತ್ರದ ಡಿಸೈನರ್‌ವೇರ್‌ ಧರಿಸಿ ವಾಕ್‌ ಮಾಡಬೇಕಾಗುತ್ತದೆ. ಜಾರಿ ಬಿದ್ದರೇ ನಗೆಪಾಟಲಿಗೀಡಾಗುವುದಂತೂ ಗ್ಯಾರಂಟಿ!

ಇದನ್ನೂ ಓದಿ: Summer Dress Fashion: ಸೀಸನ್‌ ಎಂಡ್‌ ಫ್ಯಾಷನ್‌ಗೆ ಕಾಲಿಟ್ಟ ಸಮುದ್ರದ ಅಲೆ ಬಿಂಬಿಸುವ ವೆವಿ ಡ್ರೆಸ್‌!

ಕಾನ್‌ನಲ್ಲಿ 3 ನೇ ಬಾರಿ ವಾಕ್‌ ಮಾಡಿದ ಮೊದಲ ಕನ್ನಡ ನಟಿಯಾದ ನಿಮ್ಮ ಅಭಿಪ್ರಾಯವೇನು?

ಹೆಮ್ಮೆ ಎಂದೆನಿಸುತ್ತದೆ. ಕನ್ನಡದ ನಟಿಯರೂ ಕಡಿಮೆಯೇನಿಲ್ಲ! ಎಂಬುದನ್ನು ಅಂತರಾಷ್ಟ್ರೀಯ ಮಟ್ಟದ ರೆಡ್‌ಕಾರ್ಪೆಟ್‌ನಲ್ಲಿ 3 ಬಾರಿ ವಾಕ್‌ ಮಾಡುವುದರ ಮೂಲಕ ಪ್ರೂವ್‌ ಮಾಡಿ ತೋರಿಸಿದ್ದೇನೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಆರೋಗ್ಯ

Tamarind Fruit Benefits: ಜೀರ್ಣಶಕ್ತಿ ಹೆಚ್ಚಿಸಿ ತೂಕ ಇಳಿಸಲು ಹುಣಸೇ ಹಣ್ಣು ಸುಲಭದ ಉಪಾಯ!

ಜೀವನಶೈಲಿ, ಕೆಲಸದ ಒತ್ತಡ, ಹೊರಗೆ ತಿನ್ನುವ ಅಭ್ಯಾಸ, ಚಟುವಟಿಕೆಗಳಿಲ್ಲದ ಕೆಲಸ, ಹಾರ್ಮೋನ್‌ ಸಮಸ್ಯೆ, ರಾತ್ರಿಪಾಳಿ ಸೇರಿದಂತೆ ಅನೇಕ ವಿಚಾರಗಳು ಇಂದು ತೂಕ ಏರಿಕೆಗೆ ಕಾರಣವಾಗುತ್ತದೆ. ಆದರೆ ಇಳಿಸುವ ಬಗ್ಗೆ ಪ್ರಯತ್ನಕ್ಕೆ ತಕ್ಕ ಫಲ ದೊರೆಯುವುದು ಕಡಿಮೆ. ಎಲ್ಲರ ಸಮಸ್ಯೆಯೂ ಇದೇ. ವ್ಯಾಯಾಮ, ಜಾಗಿಂಗ್‌, ಯೋಗ ಇತ್ಯಾದಿ ಮಾಡಿದರೂ ತೂಕ ಮಾತ್ರ ಇಳಿಯುವುದಿಲ್ಲ ಎಂಬುದು. ಏನೆಲ್ಲ ಪ್ರಯತ್ನಿಸಿ ನೋಡಿದ ನೀವು ಹುಣಸೆ ಹಣ್ಣನ್ನೂ (Tamarind Fruit Benefits) ಯಾಕೆ ಒಮ್ಮೆ ಪ್ರಯತ್ನಿಸಿ ನೋಡಬಾರದು?

VISTARANEWS.COM


on

Tamarind Fruit Benefits
Koo

ತೂಕ ಇಳಿಸುವುದು ಹೇಗೆ ಎಂಬುದು ಸದ್ಯ ಎಲ್ಲರ ನಡುವೆ ಚರ್ಚೆಯಾಗುವ ಅತ್ಯಂತ ಸಾಮಾನ್ಯ ವಿಷಯ. ಜೀವನಶೈಲಿ, ಕೆಲಸದ ಒತ್ತಡ, ಹೊರಗೆ ತಿನ್ನುವ ಅಭ್ಯಾಸ, ಚಟುವಟಿಕೆಗಳಿಲ್ಲದ ಕೆಲಸ, ಹಾರ್ಮೋನ್‌ ಸಮಸ್ಯೆ, ರಾತ್ರಿಪಾಳಿ ಸೇರಿದಂತೆ ಅನೇಕ ವಿಚಾರಗಳು ಇಂದು ತೂಕ ಏರಿಕೆಗೆ ಕಾರಣವಾಗುತ್ತದೆ. ಆದರೆ ಇಳಿಸುವ ಬಗ್ಗೆ ಪ್ರಯತ್ನಕ್ಕೆ ತಕ್ಕ ಫಲ ದೊರೆಯುವುದು ಕಡಿಮೆ. ಎಲ್ಲರ ಸಮಸ್ಯೆಯೂ ಇದೇ. ವ್ಯಾಯಾಮ, ಜಾಗಿಂಗ್‌, ಯೋಗ ಇತ್ಯಾದಿ ಮಾಡಿದರೂ ತೂಕ ಮಾತ್ರ ಇಳಿಯುವುದಿಲ್ಲ ಎಂಬುದು. ಏನೆಲ್ಲ ಪ್ರಯತ್ನಿಸಿ ನೋಡಿದ ನೀವು ಹುಣಸೆ ಹಣ್ಣನ್ನೂ ಯಾಕೆ ಒಮ್ಮೆ ಪ್ರಯತ್ನಿಸಿ ನೋಡಬಾರದು? ಹುಣಸೆಹಣ್ಣಿಗೂ ತೂಕಕ್ಕೂ ಏನು ಸಂಬಂಧ ಅಂತೀರಾ? ಸಂಬಂಧ ಇದೆ. ಹುಳಿಯಾದ ಹುಣಸೇಹಣ್ಣನ್ನು ನೀವು ಚಿಕ್ಕವರಿದ್ದಾಗ ಚಪ್ಪರಿಸಿ ತಿಂದಿರಬಹುದು, ಈಗ ಕ್ಯಾಂಡಿಗಳ ರೂಪದಲ್ಲೋ, ಚಟ್ನಿ ರೂಪದಲ್ಲೋ, ಅಥವಾ ಅಡುಗೆಗೆ ಬಳಸುವ ಮೂಲಕ ಮಾತ್ರ ಹುಣಸೆ ಹಣ್ಣನ್ನು ಬಳಸುತ್ತಿರಬಹುದು. ಆದರೆ ಹುಣಸೆ ಹಣ್ಣಿನ (Tamarind Fruit Benefits) ನೀರನ್ನು ತೂಕ ಇಳಿಕೆಗೆ ನೀವು ಬಳಸಿಲ್ಲವಾದರೆ ಒಮ್ಮೆ ಬಳಸಿ ನೋಡಿ. ಇದೂ ಕೂಡಾ ತೂಕ ಇಳಿಸಲು ನೆರವಾಗುತ್ತದೆ.

Tamarind Fruit

ಕಡಿಮೆ ಕ್ಯಾಲರಿಯಿದೆ

ಹುಣಸೆ ಹಣ್ಣಿನ ನೀರು ಅತ್ಯಂತ ಕಡಿಮೆ ಕ್ಯಾಲರಿಯನ್ನು ಹೊಂದಿದೆ. ಒಂದು ಹುಣಸೆಹಣ್ಣಿನಲ್ಲಿ ಕೇವಲ ಐದರಿಂದ ಆರು ಕ್ಯಾಲರಿ ಇರುತ್ತದಂತೆ. ಹಾಗಾಗಿ ಇದರ ಮೂಲಕ ಕ್ಯಾಲರಿ ಹೆಚ್ಚು ತೆಗೆದುಕೊಂಡ ಭಯವಿಲ್ಲ. ಇದಕ್ಕೆ ಸಿಹಿ ಹಾಗೂ ಮಸಾಲೆಗಳನ್ನು ಸೇರಿಸಿದರೆ ಖಂಡಿತವಾಗಿಯೂ ಕ್ಯಾಲರಿ ಬದಲಾವಣೆಯಾಗುತ್ತದೆ.

healthy internal organs of human digestive system

ಜೀರ್ಣಕ್ರಿಯೆಗೆ ಒಳ್ಳೆಯದು

ತೂಕ ಇಳಿಕೆಯ ಹಾದಿಯಲ್ಲಿ ಜೀರ್ಣಕ್ರಿಯೆಯ ಸಮಸ್ಯೆ ಯಾವತ್ತಿಗೂ ಇರಬಾರದು. ಆಹಾರ ಚೆನ್ನಾಗಿ ಜೀರ್ಣವಾಗಬೇಕು. ನಿಮ್ಮ ಜೀರ್ಣಕ್ರಿಯೆಯ ಆರೋಗ್ಯವನ್ನು ಹೆಚ್ಚಿಸಬೇಕಾದರೆ, ಬಹುಬೇಗನೆ ಸರಿಯಾಗಿ ಆಹಾರ ಜೀರ್ಣವಾಗಬೇಕೆಂದರೆ ಈ ಹುಣಸೇ ಹಣ್ಣಿನ ನೀರು ಸಹಾಯ ಮಾಡುತ್ತದೆ. ಇದು ಪಚನಕ್ರಿಯೆಯನ್ನು ಚುರುಕಾಗಿಸುವ ಮೂಲಕ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ನಾರಿನಂಶವಿದೆ

ಹುಣಸೇಹಣ್ಣಿನಲ್ಲಿ ಸಾಕಷ್ಟು ನಾರಿನಂಶ ಇದೆ. ನಾರಿನಂಶವು ಜೀರ್ಣಕ್ರಿಯೆಗೆ ಒಳ್ಳೆಯದು. ಅಷ್ಟೇ ಅಲ್ಲ, ಇದು ತೂಕವನ್ನೂ ಇಳಿಸುತ್ತದೆ. ಹೊಟ್ಟೆ ತುಂಬಿರುವ ಫೀಲ್‌ ನೀಡುವುದರಿಂದ ಬೇರೆ ತಿನ್ನುವ ಬಯಕೆಯಾಗುವುದಿಲ್ಲ.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ

ಹುಣಸೇ ಹಣ್ಣಿನ ನೀರನ್ನು ಯಾಕೆ ಕುಡಿಯಬೇಕು ಎಂದರೆ ಹುಣಸೇಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಹುಣಸೆಯಲ್ಲಿ ಟಾರ್ಟಾರಿಕ್‌ ಆಸಿಡ್‌ ಎಂಬ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್‌ ಇದ್ದು ಇದು ಫ್ರೀ ರ್ಯಾಡಿಕಲ್‌ಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಆಂಟಿ ಆಕ್ಸಿಡೆಂಟ್‌ನಿಂದ ಸಮೃದ್ಧವಾಗಿರುವ ಆಹಾರವು ಆರೋಗ್ಯವನ್ನು ಹೆಚ್ಚಿಸಿ, ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚು ಮಾಡಿ ತೂಕವನ್ನು ಇಳಿಸುತ್ತದೆ. ಹಾಗಾದರೆ, ಹುಣಸೆ ಹಣ್ಣಿನ ನೀರನ್ನು ಮಾಡುವುದು ಹೇಗೆ ಅಂತೀರಾ? ಇದೇನೂ ಬ್ರಹ್ಮವಿದ್ಯೆಯಲ್ಲ. ಹುಣಸೆ ಹಣ್ಣಿನ ಒಂದು ಸಣ್ಣ ತುಂಡನ್ನು ಬಿಸಿನೀರಿನಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ನೆನೆಸಿಡಿ. ಇದು ಮೆತ್ತಗಾದ ಮೇಲೆ ಇದನ್ನು ಸ್ವಲ್ಪ ಕಿವುಚಿ ರಸ ಹಿಂಡಿ. ಹಿಂಡಿದ ಮೇಲೆ ಉಳಿದ ರಸಹೀನ ಹುಣಸೇ ಹಣ್ಣನ್ನು ಎಸೆಯಿರಿ. ನಂತರ ಈ ಹುಣಸೇ ಹಣ್ಣಿನ ನೀರಿಗೆ ನಿಮಗೆ ಬೇಕಾದಷ್ಟು ರುಚಿಗೆ ತಕ್ಕಂತೆ ನೀರು ಸೇರಿಸಿ ಕುಡಿಯಿರಿ. ರುಚಿಯಾಗಿ ಕುಡಿಯಬೇಕೆಂಬ ಬಯಕೆಯಿದ್ದರೆ, ಬೆಲ್ಲದ ಪುಡಿ, ಕಾಳು ಮೆಣಸಿನ ಪುಡಿ ಅಥವಾ ಚಾಟ್‌ ಮಸಾಲಾ ಹಾಕಿಯೂ ಕುಡಿಯಬಹುದು. ಆದರೆ ಇದು ನಿಮ್ಮ ರುಚಿಗೆ ಬಿಟ್ಟದ್ದು. ಹೀಗೆ ಮಾಡಿದಾಗ ಖಂಡಿತವಾಗಿ ನೀವು ಸೇವಿಸುವ ಕ್ಯಾಲರಿಯಲ್ಲಿ ವ್ಯತ್ಯಾಸವಾಗುತ್ತದೆ. ತೂಕ ಇಳಿಕೆಯ ಲಾಭ ಪಡೆಯಬೇಕೆಂದಿದ್ದರೆ ಬೆಳಗ್ಗಿನ ಹೊತ್ತು, ಇದಕ್ಕೆ ಸಿಹಿ, ಮಸಾಲೆ ಸೇರಿಸದೆ ಹಾಗೆಯೇ ಕುಡಿಯಿರಿ

Continue Reading

ಆರೋಗ್ಯ

World Digestive Health Day: ಜೀರ್ಣಕ್ರಿಯೆಯಲ್ಲಿ ತೊಡಕು ಅನಾರೋಗ್ಯಕ್ಕೆ ದಾರಿ; ಈ ಸಲಹೆ ಪಾಲಿಸಿ

ದೇಹದ ಸ್ವಾಸ್ಥ್ಯ ಹೆಚ್ಚಿಸಿಕೊಳ್ಳುವ ದಾರಿಯಲ್ಲಿ ಜೀರ್ಣಾಂಗಗಳ ಆರೋಗ್ಯ ರಕ್ಷಣೆ ಎಷ್ಟು ಮಹತ್ವದ್ದು ಎಂಬುದನ್ನು ಜನರಿಗೆ ಮನದಟ್ಟು ಮಾಡಿಸುವುದು ವಿಶ್ವ ಜೀರ್ಣಾಂಗಗಳ ಆರೋಗ್ಯ ದಿನದ ಉದ್ದೇಶ. ಪ್ರತಿ ವರ್ಷ ಮೇ ತಿಂಗಳ 29ನೇ (World Digestive Health Day) ದಿನವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಜೀರ್ಣಾಂಗ ಆರೋಗ್ಯ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

World Digestive Health Day
Koo

ಸರ್ವ ರೋಗಕ್ಕೂ ಹೊಟ್ಟೆಯೇ ಮೂಲ (Gut is the butt of every problem) ಎಂಬ ಮಾತೊಂದಿದೆ. ಈ ಮಾತು ಸುಳ್ಳೇನಲ್ಲ, ದೇಹದ ಹಲವು ಸಮಸ್ಯೆಗಳಿಗೆ ನಮ್ಮ ಆಹಾರ ಪದ್ಧತಿಗಳು, ಜೀರ್ಣಾಂಗದ ಏರುಪೇರುಗಳು ಕಾರಣವಾಗುತ್ತವೆ. ಬೊಜ್ಜು, ಮಧುಮೇಹದಂಥ ಸಮಸ್ಯೆಗಳಿಂದ ಹಿಡಿದು ಎಷ್ಟೋ ಸಮಸ್ಯೆಗಳು ಕಾಡುವುದು ದೇಹದ ಚಯಾಪಚಯ ಸರಿಯಿಲ್ಲದ ಸಂದರ್ಭಗಳಲ್ಲೇ. ದೇಹದ ಸ್ವಾಸ್ಥ್ಯ ಹೆಚ್ಚಿಸಿಕೊಳ್ಳುವ ದಾರಿಯಲ್ಲಿ ಜೀರ್ಣಾಂಗಗಳ ಆರೋಗ್ಯ ರಕ್ಷಣೆ ಎಷ್ಟು ಮಹತ್ವದ್ದು ಎಂಬುದನ್ನು ಜನರಿಗೆ ಮನದಟ್ಟು ಮಾಡಿಸುವುದು ವಿಶ್ವ ಜೀರ್ಣಾಂಗಗಳ ಆರೋಗ್ಯ ದಿನದ ಉದ್ದೇಶ. ಪ್ರತಿ ವರ್ಷ ಮೇ ತಿಂಗಳ 29ನೇ ದಿನವನ್ನು (World Digestive Health Day) ಇದಕ್ಕಾಗಿ ಮೀಸಲಿಡಲಾಗಿದೆ. ಎಲ್ಲರ ಕರುಳಿನಲ್ಲೂ ಅಸಂಖ್ಯಾತ ಬ್ಯಾಕ್ಟೀರಿಯಗಳಿರುತ್ತವೆ. ಇವುಗಳನ್ನು ಒಳ್ಳೆಯವು ಮತ್ತು ಕೆಟ್ಟವೆಂದು ವಿಂಗಡಿಸಲಾಗಿದೆ. ಜೀರ್ಣಾಂಗಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಿದಷ್ಟೂ ದೇಹ ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಕೆಟ್ಟ ಬ್ಯಾಕ್ಟೀರಿಯಗಳ ಪ್ರಮಾಣ ಹೆಚ್ಚಿದಷ್ಟೂ ದೇಹ ರೋಗಗಳ ಗೂಡಾಗುತ್ತದೆ. ಜೀರ್ಣಾಂಗಗಳ ಆರೋಗ್ಯ ಚೆನ್ನಾಗಿದ್ದರೆ ತೂಕ ನಿರ್ವಹಣೆ, ಸತ್ವಗಳನ್ನು ಹೀರಿಕೊಳ್ಳುವುದು, ಚೋದಕಗಳ ನಿರ್ವಹಣೆ, ಉರಿಯೂತ ನಿವಾರಣೆ, ಚಯಾಪಚಯ ಸರಿಪಡಿಸುವಂಥ ಕೆಲಸಗಳು ಕಷ್ಟವಿಲ್ಲದೆ ನೆರವೇರುತ್ತವೆ. ಹಾಗಾದರೆ ಜೀರ್ಣಾಂಗಗಳ ಆರೋಗ್ಯ ನಿರ್ವಹಣೆಗೆ ಏನು ಮಾಡಬೇಕು? ಯಾವ ಕ್ರಮಗಳನ್ನು ಅನುಸರಿಸಬೇಕು?

Vegetables and Fruits

ವೈವಿಧ್ಯಮವಾಗಿರಲಿ

ಋತುಮಾನಕ್ಕೆ ಸರಿಯಾದ ಹಣ್ಣು-ತರಕಾರಿಗಳು, ಕಾಯಿ-ಬೀಜಗಳು, ಕಾಳು-ಬೇಳೆಗಳು, ಇಡೀ ಧಾನ್ಯಗಳು, ಡೇರು ಉತ್ಪನ್ನಗಳಿಂದ ಆಹಾರ ಸಮೃದ್ಧವಾಗಿರಬೇಕು. ಇದರಿಂದ ಕರುಳಿನ ಒಳ್ಳೆಯ ಬ್ಯಾಕ್ಟೀರಿಯಗಳಿಗೆ ಬೇಕಾದ ಆಹಾರ ದೊರೆತು ಅವುಗಳ ಸಂಖ್ಯೆ ಹೆಚ್ಚುತ್ತದೆ. ಅಷ್ಟೇ ಅಲ್ಲ, ಕರುಳಿನಲ್ಲಿರುವ ಒಳ್ಳೆಯ ಸೂಕ್ಷ್ಮಾಣುಗಳೂ ವೈವಿಧ್ಯಮಯವಾಗುತ್ತವೆ. ಇದರಿಂದ ಬಗೆಬಗೆಯ ಪ್ರಯೋಜನಗಳಿವೆ.

ಪ್ರಿಬಯಾಟಿಕ್‌, ಪ್ರೊಬಯಾಟಿಕ್

ಜೀರ್ಣಾಂಗಗಳ ಆರೋಗ್ಯ ನಿರ್ವಹಣೆಗೆ ಇದು ಪ್ರಧಾನ ಪಾತ್ರ ವಹಿಸುತ್ತದೆ. ಹುದುಗು ಬಂದಿರುವಂಥ ಮೊಸರು, ಮಜ್ಜಿಗೆಯಂಥ ಆಹಾರಗಳು, ಹಸಿಯಾದ ಮೊಳಕೆ ಕಾಳುಗಳಂಥ ಆಹಾರಗಳು ಅಗತ್ಯವಾದ ಪ್ರಿಬಯಾಟಿಕ್‌ ಮತ್ತು ಪ್ರೊಬಯಾಟಿಕ್‌ ಅಂಶಗಳನ್ನು ಒದಗಿಸುತ್ತವೆ. ಕರುಳಿನ ಸೂಕ್ಷ್ಮಾಣುಗಳ ಸಮತೋಲನಕ್ಕೆ ಇದು ಅತಿ ಮುಖ್ಯ.

ನೀರು-ನಾರು-ನಿದ್ದೆ

ಇವೆಲ್ಲವೂ ಸಾಕಷ್ಟು ಬೇಕು. ದಿನಕ್ಕೆ ಮೂರು ಲೀ. ನೀರು ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸಬಲ್ಲದು. ಇದರೊಂದಿಗೆ ನಾರಿನಂಶವೂ ಸಾಕಷ್ಟು ಸೇರಿದರೆ ಅಜೀರ್ಣ, ಮಲಬದ್ಧತೆಯಂಥ ತೊಂದರೆಗಳು ಮಾಯವಾಗುತ್ತವೆ. ರೆಸ್ಟ್‌-ಡೈಜೆಸ್ಟ್‌ ಎಂಬುದು ದೇಹಕ್ಕೆ ಚೆನ್ನಾಗಿ ಅರ್ಥವಾಗುವ ವಿಚಾರ. ಹಾಗಾಗಿ ದಿನಕ್ಕೆ ಏಳೆಂಟು ತಾಸಿನಷ್ಟು ನಿದ್ದೆ ಮಾಡಿದರೆ ಜೀರ್ಣಾಂಗಗಳ ರಿಪೇರಿ ಕೆಲಸ ಸಾಂಗವಾಗಿ ನೆರವೇರುತ್ತದೆ.

Best Food To Eat At Night

ಮುಕ್ಕಬೇಡಿ

ಆಹಾರ ಸೇವನೆಗೊಂದು ಕ್ರಮವಿದೆ. ಈಗಿನ ದರ್ಶಿನಿ ಸಂಸ್ಕೃತಿಯಲ್ಲ ತಿನ್ನುವಾಗ ಬೇಕಿರುವುದು. ಅಂದರೆ ಗಡಿಬಿಡಿಯಲ್ಲಿ ಒಂದಿಷ್ಟು ಮುಕ್ಕಿ ಓಡುವುದಲ್ಲ. ನೆಮ್ಮದಿಯಿಂದ ಕುಳಿತು, ಚೆನ್ನಾಗಿ ಅಗಿದು ತಿನ್ನಿ. ಇದರಿಂದ ಅತಿಯಾಗಿ ತಿನ್ನುವುದು, ಅಗತ್ಯಕ್ಕಿಂತ ಹೆಚ್ಚು ತಿನ್ನುವುದನ್ನೆಲ್ಲ ಕಡಿಮೆ ಮಾಡಬಹುದು. ಜೊತೆಗೆ, ಆಹಾರ ತಿಂದ ತೃಪ್ತಿಯೂ ದೊರೆಯುತ್ತದೆ.

Cooking Oils

ಆರೋಗ್ಯಕರ ಎಣ್ಣೆ

ಗಾಣದ ಎಣ್ಣೆಗಳು ಅಥವಾ ಕೋಲ್ಡ್‌ ಪ್ರೆಸ್‌ ಮಾಡಿದ ಎಣ್ಣೆಗಳು ಬಳಕೆಗೆ ಹೆಚ್ಚು ಸುರಕ್ಷಿತ. ರಿಫೈನ್‌ ಮಾಡಿದ ಎಣ್ಣೆಗಳು, ಮರು ಬಳಕೆಯ ಎಣ್ಣೆಗಳು ಸೂಕ್ತವಲ್ಲ. ಇಂಥವುಗಳಿಂದ ದೇಹದಲ್ಲಿ ಉರಿಯೂತ ಹೆಚ್ಚುತ್ತದೆ. ಹಾಗಾಗಿ ತಾಜಾ ಮತ್ತು ಆರೋಗ್ಯಕರ ಎಣ್ಣೆಗಳನ್ನೇ ಅಡುಗೆಗೆ ಬಳಸಿ. ಪಚನಾಂಗಗಳ ಆರೋಗ್ಯ ರಕ್ಷಣೆಗೆ ಇವೂ ಮುಖ್ಯವಾದವು.

stress

ಒತ್ತಡ

ಮಾನಸಿನ ಒತ್ತಡ ಹೆಚ್ಚಿದಷ್ಟೂ ಜೀರ್ಣಾಂಗಗಳ ಏರುಪೇರು ಹೆಚ್ಚುತ್ತದೆ. ಇವೆರಡರ ನಡುವೆ ನೇರ ಸಂಬಂಧವಿದೆ. ಹಾಗಾಗಿ ಮಾನಸಿನ ಒತ್ತಡ ನಿರ್ವಹಣೆಗೆ ಧ್ಯಾನ, ಯೋಗ, ಪ್ರಾಣಾಯಾಮ, ಆರೋಗ್ಯ ಹವ್ಯಾಸಗಳನ್ನು ರೂಢಿಸಿಕೊಳ್ಳುವಂಥ ಕೆಲಸಗಳು ಒಳ್ಳೆಯ ಪರಿಣಾಮ ಬೀರುತ್ತವೆ. ಇಂಥ ಕ್ರಮಗಳಿಂದಲೂ ಕರುಳಿನ ಆರೋಗ್ಯ ಸುಧಾರಿಸಬಹುದು.

ಇದನ್ನೂ ಓದಿ: AC Side Effects: ಅತಿಯಾದ ಎಸಿ ಬಳಕೆಯಿಂದ ಏನಾಗುತ್ತದೆ ಎಂಬ ಅರಿವಿರಲಿ

ಇವುಗಳು ಬೇಡ

ಪ್ರತಿ ದಿನ ಒಂದೇ ರೀತಿಯ ಆಹಾರವನ್ನು ಸೇವಿಸಬೇಡಿ. ಆರೋಗ್ಯಕರವಾದ ವೈವಿಧ್ಯಮಯ ಆಹಾರಗಳು ಜೀರ್ಣಾಂಗಗಳ ಸ್ಥಿತಿಯನ್ನು ಸುಧಾರಿಸುತ್ತವೆ. ಸಂಸ್ಕರಿತ ಆಹಾರಗಳು ಬೇಡ. ಇದರಿಂದ ಕರುಳಿನ ಉರಿಯೂತ ಹೆಚ್ಚುತ್ತದೆ. ಗಬಗಬ ತಿನ್ನುವುದರ ಬದಲು, ಸಾವಧಾನವಾಗಿ ತಿನ್ನುವುದನ್ನು ರೂಢಿಸಿಕೊಳ್ಳಿ. ಕೃತಕ ಸಿಹಿ, ರುಚಿ, ಬಣ್ಣಗಳೆಲ್ಲ ಉರಿಯೂತ ಹೆಚ್ಚಿಸುತ್ತವೆ. ಬದಲಿಗೆ ನೈಸರ್ಗಿಕ ರುಚಿ, ಬಣ್ಣಗಳಿಗೆ ಆದ್ಯತೆ ನೀಡಿ.

Continue Reading
Advertisement
Girlfriend
ದೇಶ1 hour ago

Girlfriend: ‘ಬಾಡಿಗೆ ಗರ್ಲ್‌ಫ್ರೆಂಡ್‌’ ಆಗಲು ಸಿದ್ಧಳೆಂದ ಯುವತಿ; ಈಕೆಯ ‘ದರಪಟ್ಟಿ’ ನೋಡಿ,‌ ನೀವೂ ಟ್ರೈ ಮಾಡಿ

CAA Certificate
ದೇಶ2 hours ago

CAA Certificate: ದೀದಿ ವಿರೋಧದ ಮಧ್ಯೆಯೂ ಬಂಗಾಳದಲ್ಲಿ ಸಿಎಎ ಜಾರಿಗೆ ತಂದ ಕೇಂದ್ರ; ಪೌರತ್ವ ಪ್ರದಾನ!

Modi Meditation
ದೇಶ3 hours ago

Modi Meditation: ಮೋದಿಗೆ ಧ್ಯಾನ ಮಾಡಲು ಬಿಡಬೇಡಿ; ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮೊರೆ!

T20 World Cup 2024
ಕ್ರೀಡೆ3 hours ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಎಷ್ಟು ಬೌಲರ್​ಗಳು ಹ್ಯಾಟ್ರಿಕ್​ ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ?

Self Harming
ಕರ್ನಾಟಕ3 hours ago

Self Harming: ಶಾಲೆಗೆ ಹೋಗಲು ಬೇಸತ್ತು 11 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

Rudram II
ದೇಶ4 hours ago

Rudram II: ಆಗಸದಿಂದಲೇ ವೈರಿಗಳನ್ನು ನಾಶಪಡಿಸುವ ರುದ್ರಂ II ಕ್ಷಿಪಣಿ ಪ್ರಯೋಗ ಯಶಸ್ವಿ; ಶತ್ರುಗಳಿಗೆ ನಡುಕ!

Chahal-Dhanashree
ಕ್ರೀಡೆ4 hours ago

Chahal-Dhanashree: ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದ್ದಾರಾ ಚಹಲ್?; ಕುತೂಹಲ ಮೂಡಿಸಿದ ಪತ್ನಿಯ ಪೋಸ್ಟ್!

Timing change of 5 trains arriving at Sri Siddharooda Swamiji Railway Station Hubballi
ಹುಬ್ಬಳ್ಳಿ4 hours ago

Hubballi Train: ಪ್ರಯಾಣಿಕರೇ ಗಮನಿಸಿ; ಹುಬ್ಬಳ್ಳಿಗೆ ಆಗಮಿಸುವ 5 ರೈಲುಗಳ ಸಮಯ ಬದಲಾಗಿದೆ

Valmiki corporation Scam
ಕರ್ನಾಟಕ4 hours ago

Valmiki Corporation Scam: ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ; ಎಂಡಿ, ಲೆಕ್ಕಾಧಿಕಾರಿ ಅಮಾನತು

PM Kisan Samman
ಕೃಷಿ5 hours ago

PM Kisan Samman: ಪಿಎಂ ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಬಿಡುಗಡೆ ಯಾವಾಗ? ಪರಿಶೀಲಿಸುವುದು ಹೇಗೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ7 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌