Site icon Vistara News

Shivanna Birthday | ಜೀ ಟಿವಿಯಲ್ಲಿ ಶಿವರಾಜೋತ್ಸವ; 60 ಗಂಟೆ ಪ್ರಸಾರವಾಗಲಿದೆ ಶಿವಣ್ಣನ ಸಿನಿಮಾ

Shiva Rajkumar Birthday

ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಮಂಗಳವಾರ (ಜು.12) ಅವರ (Shivanna Birthday ) ಜನುಮದಿನ. ಅಂದು ಅವರು ೬೦ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆದರೆ ಪುನೀತ್‌ ರಾಜ್‌ಕುಮಾರ್‌ ನಿಧನದ ಹಿನ್ನೆಲೆಯಲ್ಲಿ ಈ ವರ್ಷ ತಾವು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಶಿವಣ್ಣ ಈಗಾಗಲೇ ಪ್ರಕಟಿಸಿದ್ದಾರೆ.

ಇದರಿಂದಾಗಿ ಶಿವಣ್ಣನ ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರವಾಗಿದೆ. ಈ ಬೇಸರ ನೀಗಿಸಲೆಂಬಂತೆ ಜೀ ವಾಹಿನಿಯು ಶಿವಣ್ಣನ ಹುಟ್ಟುಹಬ್ಬವನ್ನು ಆಯೋಜಿಸಿದ್ದು, ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.

ಜೀ ಪಿಚ್ಚರ್‌ನಲ್ಲಿ ಶಿವಣ್ಣನ ಹುಟ್ಟು ಹಬ್ಬದ ಅಂಗವಾಗಿ, ಅವರು ಅಭಿನಯಿಸಿದ ಚಿತ್ರಗಳನ್ನು 60 ಗಂಟೆಗಳ ನಾನ್‌ ಸ್ಟಾಪ್‌ ಆಗಿ ಪ್ರಸಾರ ಮಾಡಲಾಗುತ್ತದೆ. ಶಿವಣ್ಣ ಅಭಿನಯದ ಬರೋಬ್ಬರಿ 20 ಸಿನಿಮಾಗಳು 3 ದಿನಗಳ ಕಾಲ ನಿರಂತರವಾಗಿ ಜೀ ಪಿಚ್ಚರ್‌ನಲ್ಲಿ ಪ್ರಸಾರವಾಗಲಿವೆ. ಇದೇ ಭಾನುವಾರ ಜು.10ರಂದು ಬೆಳಗ್ಗೆ 9ಕ್ಕೆ ಭಾಗ್ಯದ ಬಳೆಗಾರ ಸಿನಿಮಾದಿಂದ ಈ ಸರಣಿ ಚಿತ್ರಗಳ ಪ್ರದರ್ಶನ ಆರಂಭವಾಗುತ್ತದೆ.

ಇದನ್ನೂ ಓದಿ | Bairagee Movie | ಹ್ಯಾಟ್ರಿಕ್‌ ಹೀರೋ ನೋಡಲು ಮುಗಿಬಿದ್ದ ಫ್ಯಾನ್ಸ್‌ : ಅಪ್ಪು ಹೆಸರಿನಲ್ಲಿ ಜೈಕಾರ

ಮಂಗಳವಾರ ಜುಲೈ 12ರ ರಾತ್ರಿ 9 ಗಂಟೆಯವರಗೆ ನಿರಂತರವಾಗಿ ಶಿವರಾಜ್‌ಕುಮಾರ್ ಸಿನಿಮಾಗಲೇ ಪ್ರಸಾರವಾಗಲಿವೆ. ಇದರಿಂದ ಶಿವಣ್ಣನ ಅಭಿಮಾನಿಗಳು ಅವರ ಅಭಿನಯದ ಚಿತ್ರಗಳನ್ನು ಒಂದೇ ಕಡೆ ಒಂದರ ಹಿಂದೊಂದರಂತೆ ನೋಡಬಹುದು.

DKD ಡಾನ್ಸ್ ವೇದಿಕೆಯಲ್ಲಿ ಓಂ ಸಿನಿಮಾ ಅವತಾರ ತಾಳಿದ ಶಿವಣ್ಣ

ಇನ್ನು ಜೀ ವಾಹಿನಿಯ ಪ್ರಸಿದ್ಧ ರಿಯಾಲ್ಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (DKD)ನಲ್ಲಿಯೂ ಶಿವರಾಜ್‌ ಕುಮಾರ್‌ ಅವರ ಹುಟ್ಟು ಹಬ್ಬ ನಡೆಯಲಿದೆ. ಈ ಶೋನಲ್ಲಿ ಅವರು ತೀರ್ಪುಗಾರರೂ ಆಗಿರುವುದರಿಂದ ವಿಶೇಷವಾಗಿ ʼಶಿವರಾಜೋತ್ಸವ’ ವನ್ನು ಈ ಕಾರ್ಯಕ್ರಮದಲ್ಲಿ ಆಯೋಜಿಸಲಾಗುತ್ತಿದೆ.

ಸ್ಪರ್ಧಿಗಳು ವಿಶೇಷವಾಗಿ ಡ್ಯಾನ್ಸ್ ಮಾಡುವ ಮೂಲಕ ಶಿವಣ್ಣಗೆ ಗೌರವ ಅರ್ಪಿಸಲಿದ್ದಾರೆ. ಶಿವರಾಜ್​ಕುಮಾರ್ ನಟನೆಯ ‘ಓಂ​’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಚಿತ್ರಮಂದಿರದಲ್ಲಿ ಸಾಕಷ್ಟು ಬಾರಿ ಮರು ಬಿಡುಗಡೆ ಕೂಡ ಕಂಡಿತ್ತು. ಈಗ ಈ ಸಿನಿಮಾದಲ್ಲಿನಲ್ಲಿ ತಾವು ಕಂಡ ಸ್ಟೈಲ್‌ನಲ್ಲಿಯೇ ಶಿವರಾಜ್​ಕುಮಾರ್ ಡಿಕೆಡಿ ವೇದಿಕೆ ಏರಲಿದ್ದಾರೆ.

ಶಿವರಾಜ್​ಕುಮಾರ್ ಅವರ ಎಂಟ್ರಿಗೆ ಸಂಬಂಧಿಸಿದಂತೆ ಜೀ ಕನ್ನಡ ವಾಹಿನಿ ಪ್ರೋಮೋ ವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಶಿವಣ್ಣನ ಭರ್ಜರಿ ಎಂಟ್ರಿಗೆ ಇನ್ನಿತರ ತೀರ್ಪುಗಾರರಾದ ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ ಖುಷಿಯಿಂದ ಕೂಗಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಜೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಇದನ್ನೂ ಓದಿ | Vedha Movie | ಶಿವರಾಜ್‌ ಕುಮಾರ್‌ 125ನೇ ಚಿತ್ರದ ನಿರ್ಮಾಪಕಿ ಗೀತಾ; ಪೋಸ್ಟರ್‌ ರಿಲೀಸ್‌

Exit mobile version