Shivanna Birthday | ಜೀ ಟಿವಿಯಲ್ಲಿ ಶಿವರಾಜೋತ್ಸವ; 60 ಗಂಟೆ ಪ್ರಸಾರವಾಗಲಿದೆ ಶಿವಣ್ಣನ ಸಿನಿಮಾ - Vistara News

ಕಿರುತೆರೆ

Shivanna Birthday | ಜೀ ಟಿವಿಯಲ್ಲಿ ಶಿವರಾಜೋತ್ಸವ; 60 ಗಂಟೆ ಪ್ರಸಾರವಾಗಲಿದೆ ಶಿವಣ್ಣನ ಸಿನಿಮಾ

ನಟ ಶಿವರಾಜ್‌ಕುಮಾರ್‌ ಜು. 12ರಂದು 60ನೇ ವರ್ಷಕ್ಕೆ (Shiva Rajkumar Birthday) ಕಾಲಿಡಲಿದ್ದಾರೆ. ಆದರೆ ಅವರು ಈ ಬಾರಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೆ ಜೀ ವಾಹಿನಿ ಅವರ ಹುಟ್ಟು ಹಬ್ಬದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.

VISTARANEWS.COM


on

Shiva Rajkumar Birthday
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಮಂಗಳವಾರ (ಜು.12) ಅವರ (Shivanna Birthday ) ಜನುಮದಿನ. ಅಂದು ಅವರು ೬೦ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆದರೆ ಪುನೀತ್‌ ರಾಜ್‌ಕುಮಾರ್‌ ನಿಧನದ ಹಿನ್ನೆಲೆಯಲ್ಲಿ ಈ ವರ್ಷ ತಾವು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಶಿವಣ್ಣ ಈಗಾಗಲೇ ಪ್ರಕಟಿಸಿದ್ದಾರೆ.

ಇದರಿಂದಾಗಿ ಶಿವಣ್ಣನ ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರವಾಗಿದೆ. ಈ ಬೇಸರ ನೀಗಿಸಲೆಂಬಂತೆ ಜೀ ವಾಹಿನಿಯು ಶಿವಣ್ಣನ ಹುಟ್ಟುಹಬ್ಬವನ್ನು ಆಯೋಜಿಸಿದ್ದು, ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.

ಜೀ ಪಿಚ್ಚರ್‌ನಲ್ಲಿ ಶಿವಣ್ಣನ ಹುಟ್ಟು ಹಬ್ಬದ ಅಂಗವಾಗಿ, ಅವರು ಅಭಿನಯಿಸಿದ ಚಿತ್ರಗಳನ್ನು 60 ಗಂಟೆಗಳ ನಾನ್‌ ಸ್ಟಾಪ್‌ ಆಗಿ ಪ್ರಸಾರ ಮಾಡಲಾಗುತ್ತದೆ. ಶಿವಣ್ಣ ಅಭಿನಯದ ಬರೋಬ್ಬರಿ 20 ಸಿನಿಮಾಗಳು 3 ದಿನಗಳ ಕಾಲ ನಿರಂತರವಾಗಿ ಜೀ ಪಿಚ್ಚರ್‌ನಲ್ಲಿ ಪ್ರಸಾರವಾಗಲಿವೆ. ಇದೇ ಭಾನುವಾರ ಜು.10ರಂದು ಬೆಳಗ್ಗೆ 9ಕ್ಕೆ ಭಾಗ್ಯದ ಬಳೆಗಾರ ಸಿನಿಮಾದಿಂದ ಈ ಸರಣಿ ಚಿತ್ರಗಳ ಪ್ರದರ್ಶನ ಆರಂಭವಾಗುತ್ತದೆ.

ಇದನ್ನೂ ಓದಿ | Bairagee Movie | ಹ್ಯಾಟ್ರಿಕ್‌ ಹೀರೋ ನೋಡಲು ಮುಗಿಬಿದ್ದ ಫ್ಯಾನ್ಸ್‌ : ಅಪ್ಪು ಹೆಸರಿನಲ್ಲಿ ಜೈಕಾರ

ಮಂಗಳವಾರ ಜುಲೈ 12ರ ರಾತ್ರಿ 9 ಗಂಟೆಯವರಗೆ ನಿರಂತರವಾಗಿ ಶಿವರಾಜ್‌ಕುಮಾರ್ ಸಿನಿಮಾಗಲೇ ಪ್ರಸಾರವಾಗಲಿವೆ. ಇದರಿಂದ ಶಿವಣ್ಣನ ಅಭಿಮಾನಿಗಳು ಅವರ ಅಭಿನಯದ ಚಿತ್ರಗಳನ್ನು ಒಂದೇ ಕಡೆ ಒಂದರ ಹಿಂದೊಂದರಂತೆ ನೋಡಬಹುದು.

DKD ಡಾನ್ಸ್ ವೇದಿಕೆಯಲ್ಲಿ ಓಂ ಸಿನಿಮಾ ಅವತಾರ ತಾಳಿದ ಶಿವಣ್ಣ

ಇನ್ನು ಜೀ ವಾಹಿನಿಯ ಪ್ರಸಿದ್ಧ ರಿಯಾಲ್ಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (DKD)ನಲ್ಲಿಯೂ ಶಿವರಾಜ್‌ ಕುಮಾರ್‌ ಅವರ ಹುಟ್ಟು ಹಬ್ಬ ನಡೆಯಲಿದೆ. ಈ ಶೋನಲ್ಲಿ ಅವರು ತೀರ್ಪುಗಾರರೂ ಆಗಿರುವುದರಿಂದ ವಿಶೇಷವಾಗಿ ʼಶಿವರಾಜೋತ್ಸವ’ ವನ್ನು ಈ ಕಾರ್ಯಕ್ರಮದಲ್ಲಿ ಆಯೋಜಿಸಲಾಗುತ್ತಿದೆ.

ಸ್ಪರ್ಧಿಗಳು ವಿಶೇಷವಾಗಿ ಡ್ಯಾನ್ಸ್ ಮಾಡುವ ಮೂಲಕ ಶಿವಣ್ಣಗೆ ಗೌರವ ಅರ್ಪಿಸಲಿದ್ದಾರೆ. ಶಿವರಾಜ್​ಕುಮಾರ್ ನಟನೆಯ ‘ಓಂ​’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಚಿತ್ರಮಂದಿರದಲ್ಲಿ ಸಾಕಷ್ಟು ಬಾರಿ ಮರು ಬಿಡುಗಡೆ ಕೂಡ ಕಂಡಿತ್ತು. ಈಗ ಈ ಸಿನಿಮಾದಲ್ಲಿನಲ್ಲಿ ತಾವು ಕಂಡ ಸ್ಟೈಲ್‌ನಲ್ಲಿಯೇ ಶಿವರಾಜ್​ಕುಮಾರ್ ಡಿಕೆಡಿ ವೇದಿಕೆ ಏರಲಿದ್ದಾರೆ.

ಶಿವರಾಜ್​ಕುಮಾರ್ ಅವರ ಎಂಟ್ರಿಗೆ ಸಂಬಂಧಿಸಿದಂತೆ ಜೀ ಕನ್ನಡ ವಾಹಿನಿ ಪ್ರೋಮೋ ವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಶಿವಣ್ಣನ ಭರ್ಜರಿ ಎಂಟ್ರಿಗೆ ಇನ್ನಿತರ ತೀರ್ಪುಗಾರರಾದ ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ ಖುಷಿಯಿಂದ ಕೂಗಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಜೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಇದನ್ನೂ ಓದಿ | Vedha Movie | ಶಿವರಾಜ್‌ ಕುಮಾರ್‌ 125ನೇ ಚಿತ್ರದ ನಿರ್ಮಾಪಕಿ ಗೀತಾ; ಪೋಸ್ಟರ್‌ ರಿಲೀಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Star Suvarna: ಬಹುಮಾನದ ಜತೆಗೆ ಮನೋರಂಜನೆ ಹೊತ್ತು ಬರುತ್ತಿದೆ ʼಸುವರ್ಣ ಗೃಹಮಂತ್ರಿʼ; ಯಾವಾಗ ಪ್ರಸಾರ?

Star Suvarna: ಸದಾ ಹೊಸತನದ ಧಾರಾವಾಹಿ, ಕಾರ್ಯಕ್ರಮ, ರಿಯಾಲಿಟಿ ಶೋ ನೀಡುವ ಮೂಲಕ ಗಮನ ಸೆಳೆಯುವ ಸ್ಟಾರ್‌ ಸುವರ್ಣ ಇದೀಗ ಮತ್ತೊಂದು ವಿಭಿನ್ನ ಕಾನ್ಸೆಪ್ಟ್‌ ಹೊತ್ತು ಬಂದಿದೆ. ಕರುನಾಡಿನ ಗೃಹಿಣಿಯರಿಗಾಗಿ ‘ಸುವರ್ಣ ಗೃಹಮಂತ್ರಿ’ ಎನ್ನುವ ಶೋ ಆರಂಭಿಸಲಿದೆ. ಇದೇ ಮೊದಲ ಬಾರಿಗೆ ಜನಪ್ರಿಯ ನಿರೂಪಕ ಮುರಳಿ ಸ್ಟಾರ್ ಸುವರ್ಣ ವಾಹಿನಿಗೆ ಲಗ್ಗೆಯಿಟ್ಟಿದ್ದು, ‘ಸುವರ್ಣ ಗೃಹಮಂತ್ರಿ’ ಕಾರ್ಯಕ್ರಮದ ಸಾರಥಿಯಾಗಿ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕರ್ನಾಟಕದ ಗೃಹಿಣಿಯರಿಗಾಗಿಯೇ ಸಿದ್ಧವಾಗಿರೋ ಈ ಕಾರ್ಯಕ್ರಮದಲ್ಲಿ ಮುರಳಿ ಅವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆ ಉಡುಗೊರೆಯಾಗಿ ರೇಷ್ಮೆ ಸೀರೆ, ಬೆಳ್ಳಿ-ಬಂಗಾರ ನೀಡಲಿದ್ದಾರೆ. ಈ ಕಾರ್ಯಕ್ರಮ ಮೇ 13ರಿಂದ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ.

VISTARANEWS.COM


on

Star Suvarna
Koo

ಬೆಂಗಳೂರು: ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ (Star Suvarna) ವಾಹಿನಿಯು ಇದೀಗ ವೀಕ್ಷಕರಿಗೆ ಮಧ್ಯಾಹ್ನದ ಮನರಂಜನೆಯನ್ನು ಇನ್ನಷ್ಟು ದುಪ್ಪಟ್ಟುಗೊಳಿಸಲು ‘ಸುವರ್ಣ ಗೃಹಮಂತ್ರಿ’ (Suvarna GruhaMantri) ಎಂಬ ಹೊಸದೊಂದು ರಿಯಾಲಿಟಿ ಶೋ ಅನ್ನು ಪ್ರಸಾರ ಮಾಡಲು ಸಜ್ಜಾಗಿದೆ.

ಇದೊಂದು ವಿಭಿನ್ನ ರೀತಿಯ ರಿಯಾಲಿಟಿ ಶೋ. ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡುವ ಗೃಹಿಣಿಯರನ್ನು/ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ. ಮನೆ ಮಂದಿಯನ್ನು ಅವರು ಎಷ್ಟೇ ಚೆನ್ನಾಗಿ ನೋಡಿಕೊಂಡರೂ ‘ಥ್ಯಾಂಕ್ ಯೂ’ ಕೂಡ ಯಾರೂ ಹೇಳುವುದಿಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರನ್ನು ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜತೆ ರೇಷ್ಮೆ ಸೀರೆ, ಚಿನ್ನ, ಬೆಳ್ಳಿ ಹಾಗೂ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ ʼಸುವರ್ಣ ಗೃಹಮಂತ್ರಿʼ ಕಾರ್ಯಕ್ರಮದ ಕಾನ್ಸೆಪ್ಟ್‌.

ಇನ್ನು ಇದೇ ಮೊದಲ ಬಾರಿಗೆ ಜನಪ್ರಿಯ ನಿರೂಪಕ ಮುರಳಿ ಸ್ಟಾರ್ ಸುವರ್ಣ ವಾಹಿನಿಗೆ ಲಗ್ಗೆಯಿಟ್ಟಿದ್ದು, ‘ಸುವರ್ಣ ಗೃಹಮಂತ್ರಿ’ ಕಾರ್ಯಕ್ರಮದ ಸಾರಥಿಯಾಗಿ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕರ್ನಾಟಕದ ಗೃಹಿಣಿಯರಿಗಾಗಿಯೇ ಸಿದ್ಧವಾಗಿರೋ ಈ ಕಾರ್ಯಕ್ರಮದಲ್ಲಿ ಮುರಳಿ ಅವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆ ಉಡುಗೊರೆಯಾಗಿ ರೇಷ್ಮೆ ಸೀರೆ, ಬೆಳ್ಳಿ-ಬಂಗಾರ ನೀಡಲಿದ್ದಾರೆ. ಈ ಮೂಲಕ ಮನೆ ಗೃಹಿಣಿಯನ್ನು ಹಾರೈಸಿ, ರಾಣಿ ಸೀಟಿನಲ್ಲಿ ಕೂರಿಸಿ ಗೌರವಿಸಲಿದ್ದಾರೆ. ಅಷ್ಟೇ ಅಲ್ಲದೆ ಅವರ ಮನೆಗೆ ಬಂದಿರುವ ಆಪ್ತ ಸಂಬಂಧಿಕರಿಗೆ ಹಾಗೂ ಸ್ನೇಹಿತರನ್ನೂ ಆಟವನ್ನು ಆಡಿಸಿ ಬಹುಮಾನಗಳನ್ನು ನೀಡಲಿದ್ದಾರೆ.

ಸದ್ಯ ‘ಸುವರ್ಣ ಗೃಹಮಂತ್ರಿ’ಯ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಈ ಕಾರ್ಯಕ್ರಮದಲ್ಲಿ ಬಹುಮಾನಗಳ ಮಹಾ ಮಳೆಯೇ ಸುರಿಯಲಿದ್ದು ಪ್ರೇಕ್ಷಕರಿಗೆ ಮನೋರಂಜನೆ ಸಿಗುವುದಂತು ಖಚಿತ.

ಯಾವಾಗ ಪ್ರಸಾರ?

ಕರುನಾಡಿನ ಗೃಹಿಣಿಯರನ್ನು ಸಂಭ್ರಮಿಸಲು ರಾಣಿ ಸೀಟಿನೊಂದಿಗೆ ನಿಮ್ಮನೆಗೆ ಬರುತ್ತಿರುವ ಹೊಸ ಶೋ ‘ಸುವರ್ಣ ಗೃಹಮಂತ್ರಿ’ ಇದೇ ಸೋಮವಾರ(ಮೇ 13)ದಿಂದ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ಮನೋರಂಜನೆ ಜತೆಗೆ ಬಹುಮಾನ ಗೆಲ್ಲಲು ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ವೀಕ್ಷಿಸಿ.

ಇದನ್ನೂ ಓದಿ: Suvarna Superstar: ʻಸುವರ್ಣ ಸೂಪರ್ ಸ್ಟಾರ್‌ʼಗೆ 1000 ಸಂಚಿಕೆಗಳ ಸಂಭ್ರಮ!

Continue Reading

ಕಿರುತೆರೆ

Kannada Serials TRP: ಟಾಪ್‌ 3ರಲ್ಲಿ ಇವೆ ಎರಡು ಧಾರಾವಾಹಿಗಳು; ʻಪುಟ್ಟಕ್ಕನ ಮಕ್ಕಳುʼ ಸೀರಿಯಲ್‌ನದ್ದೇ ಪಾರುಪತ್ಯ!

Kannada Serials TRP: ಈ ವಾರ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ.‘ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದಾಗಿ ಈಗ ಲಕ್ಷ್ಮೀ ನಿವಾಸಟಿಆರ್‌ಪಿ ಅಂಕದಲ್ಲಿ ಕುಸಿತ ಕಂಡಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.ಎರಡನೇ ಸ್ಥಾನದಲ್ಲಿ ಈ ಬಾರಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಗೆ ಈ ಬಾರಿ ಮೂರನೇ ಸ್ಥಾನ ಸಿಕ್ಕಿದೆ. ಎರಡೂ ಧಾರಾವಾಹಿಗಳಿಗೆ ಸಮಾನ ಬೇಡಿಕೆ ಸೃಷ್ಟಿ ಆಗಿದೆ.

VISTARANEWS.COM


on

Kannada Serials TRP Puttakkana makkalu TOP one
Koo

ಪ್ರತಿ ಬಾರಿ ಜೀ ಕನ್ನಡ ವಾಹಿನಿ ಧಾರಾವಾಹಿಯ (Kannada Serials TRP) ʻಲಕ್ಷ್ಮೀ ನಿವಾಸʼ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿತ್ತು. ಆದರೆ ʻಪುಟ್ಟಕನ ಮಕ್ಕಳುʼ ಧಾರಾವಾಹಿಯಲ್ಲಿ ಪುಟ್ಟಕ್ಕ ಮಗಳು ಸಹನಾ ಎಪಿಸೋಡ್‌ ಪ್ರಸಾರವಾಗುತ್ತಿರುವುದರಿಂದ ಭರ್ಜರಿ ಟಿಆರ್‌ಪಿ ಪಡೆದುಕೊಳ್ಳುತ್ತಿದೆ. ಕಲರ್ಸ್‌ ಕನ್ನಡದ ʻರಾಮಾಚಾರಿʼ ಸಿನಿಮಾ ಕೂಡ ಟಾಪ್‌ 5ನಲ್ಲಿ ಇದೆ.

‘ಪುಟ್ಟಕ್ಕನ ಮಕ್ಕಳು’

ಈ ವಾರ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಪುಟ್ಟಕ್ಕ ಕುಟುಂಬ ಸಹನಾ ತೀರಿ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಸಹನಾ ಏನನ್ನಾದರೂ ಸಾಧಿಸಬೇಕೆಂಬ ಛಲ ಹೊತ್ತಿದ್ದಾಳೆ. ಹೀಗಾಗಿ ಈ ಕಥೆ ಹಲವು ಟ್ವಿಸ್ಟ್ ಪಡೆದು ಸಾಗುತ್ತಿರುವುದರಿಂದ ಪ್ರೇಕ್ಷಕರು ಕೂಡ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Kannada Serials TRP: ಈ ವಾರ ಟಿಆರ್‌ಪಿಯಲ್ಲಿʻ ಪುಟ್ಟಕ್ಕನ ಮಕ್ಕಳುʼ ಟಾಪ್‌ 1: ಕಲರ್ಸ್‌ನಲ್ಲಿ ‘ರಾಮಾಚಾರಿ’ಗೆ ಮೊದಲ ಸ್ಥಾನ!

‘ಲಕ್ಷ್ಮೀ ನಿವಾಸ’ ಧಾರಾವಾಹಿ

ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ‌ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಆರಂಭದಲ್ಲಿ ಒಳ್ಳೆಯ ಟಿಆರ್‌ಪಿಯನ್ನು ಪಡೆದುಕೊಂಡಿತ್ತು. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದಾಗಿ ಈಗ ಟಿಆರ್‌ಪಿ ಅಂಕದಲ್ಲಿ ಕುಸಿತ ಕಂಡಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.ಎರಡನೇ ಸ್ಥಾನದಲ್ಲಿ ಈ ಬಾರಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ.

ಸೀತಾ ರಾಮ

‘ಸೀತಾ ರಾಮ’ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ಮುನ್ನಡೆ ಸಾಧಿಸಿದೆ. ಧಾರಾವಾಹಿ ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಗೆ ಈ ಬಾರಿ ಮೂರನೇ ಸ್ಥಾನ ಸಿಕ್ಕಿದೆ. ಎರಡೂ ಧಾರಾವಾಹಿಗಳಿಗೆ ಸಮಾನ ಬೇಡಿಕೆ ಸೃಷ್ಟಿ ಆಗಿದೆ.

ಶ್ರಾವಣಿ ಸುಬ್ರಮಣ್ಯ

ಕೆಲವು ದಿನಗಳ ಹಿಂದೆಯಷ್ಟೇ ಜೀ ಕನ್ನಡ ಧಾರಾವಾಹಿಯಲ್ಲಿ ಶ್ರಾವಣಿ ಸುಬ್ರಮಣ್ಯ ಪ್ರಸಾರ ಕಾಣುತ್ತಿದೆ. ಇದು ಐದನೇ ಸ್ಥಾನದಲ್ಲಿದೆ. ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜತೆ ಎರಡು ಹೃದಯಗಳ ಕಥೆಯನ್ನು ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಚಾನೆಲ್‌ ಪ್ರೇಕ್ಷಕರ ಮುಂದಿಟ್ಟಿದೆ. ಹಿರಿಯ ಕಲಾವಿದರಾದ ಮೋಹನ್‌ ಮತ್ತು ಬಾಲರಾಜ್‌ , ಕಿರುತೆರೆಯ ಖ್ಯಾತ ಕಲಾವಿದೆಯೆರಾದ ಅಪೂರ್ವ ಮತ್ತು ಸ್ನೇಹ ಇವರು ಜೊತೆ ಯುವ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Kannada Serials TRP: ಈ ವಾರ ಟಿಆರ್‌ಪಿಯಲ್ಲಿ ʻಲಕ್ಷ್ಮೀ ನಿವಾಸʼಕ್ಕೆ ಎರಡನೇ ಸ್ಥಾನ: ಟಾಪ್‌ 5ನಲ್ಲಿ ʻಅಮೃತಧಾರೆʼ!

ಅಮೃತಧಾರೆ

ಅಮೃತಧಾರೆ’ ಧಾರಾವಾಹಿ ಸಾಕಷ್ಟು (amrithadhare serial kannada) ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಭೂಮಿಕಾ ತಮ್ಮ ಜೀವಾ ಈಗಾಗಲೇ ಕೆಲಸ ಕಳೆದುಕೊಂಡಿರುವ ವಿಚಾರ ಗೌತಮ್‌ಗೆ ಗೊತ್ತಾಗಿದೆ. ಫುಡ್‌ ಡೆಲವರಿ ಬಾಯ್‌ ಆಗಿ ಕೆಲಸ ಮಾಡುತ್ತಿರುವ ವಿಚಾರ ಗೊತ್ತಾಗಿದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರ ಕಾಂಬಿನೇಷನ್ ಜನರಿಗೆ ಇಷ್ಟ ಆಗಿದೆ. ಈ ಧಾರಾವಾಹಿ ಉತ್ತಮ ಟಿಆರ್​ಪಿ (Kannada Serials TRP) ಪಡೆದುಕೊಳ್ಳುತ್ತಿದೆ. ನಟರಂಗ, ಛಾಯಾ ಸಿಂಗ್, ಸಾರಾ ಅಣ್ಣಯ್ಯ ಮೊದಲಾದವರು ನಟಿಸುತ್ತಿದ್ದಾರೆ.

‘ರಾಮಾಚಾರಿ’

ಕಲರ್ಸ್ ಕನ್ನಡದ ಧಾರಾವಾಹಿ ‘ರಾಮಾಚಾರಿ’ (Ramachari Serila Kannada) ಐದನೇ ಸ್ಥಾನ ಪಡೆದುಕೊಂಡಿದೆ. ಮೌನ, ರುತ್ವಿಕ್ ಕೃಪಾಕರ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಿಟ್ಟಿಯ ಪಾತ್ರ ಕೂಡ ಜನ ಮೆಚ್ಚಿದ್ದಾರೆ. ಇದು ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.ಐದನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ‘ರಾಮಾಚಾರಿ’ ಧಾರಾವಾಹಿ ಇದೆ.

Continue Reading

ಕಿರುತೆರೆ

Kendasampige Serial: `ಕೆಂಡಸಂಪಿಗೆ’ ಧಾರಾವಾಹಿಗೆ ಕಾವ್ಯ ಶೈವ ಗುಡ್‌ ಬೈ; ಬದಲಾದ ಸುಮನಾ ಪಾತ್ರಧಾರಿ ಯಾರು?

Kendasampige Serial: ಕಥಾನಾಯಕಿ ಸುಮನಾ ಪಾತ್ರಕ್ಕೆ ನಟಿ ಕಾವ್ಯ ಶೈವ ಬಣ್ಣ ಹಚ್ಚಿದ್ದರು. ಇದೀಗ ಸುಮನಾ ಪಾತ್ರಕ್ಕೆ ಬೇರೊಬ್ಬ ನಟಿ ಎಂಟ್ರಿ ಕೊಟ್ಟಿದ್ದಾರೆ. ‘ಕೆಂಡಸಂಪಿಗೆ’ ಧಾರಾವಾಹಿಯಿಂದ ಕಾವ್ಯ ಶೈವ ಹೊರಬಂದಿದ್ದು ಯಾಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ಕಾತ್ಯಾಯಿನಿ ಆಗಿ ನಟಿ ಚೈತ್ರಾ ರಾವ್ ಸಚಿನ್, ತೀರ್ಥಂಕರ್ ಪ್ರಸಾದ್ ಆಗಿ ನಟ ಆಕಾಶ್, ಸಾಧನಾ ಆಗಿ ನಟಿ ಅಮೃತಾ ರಾಮಮೂರ್ತಿ, ಕೇಶವ್ ಪ್ರಸಾದ್ ಆಗಿ ನಟ ದೊಡ್ಡಣ್ಣ, ಪದ್ಮ ಆಗಿ ನಟಿ ಜ್ಯೋತಿ ಬಂಟ್ವಾಳ ಅಭಿನಯಿಸುತ್ತಿದ್ದಾರೆ.

VISTARANEWS.COM


on

Kendasampige Serial Madhumitha Entry
Koo

ಕಲರ್ಸ್‌ ಕನ್ನಡ ವಾಹಿನಿಯ ಟಾಪ್‌ ಧಾರಾವಾಹಿಗಳಲ್ಲಿ ‘ಕೆಂಡಸಂಪಿಗೆ’ ಕೂಡ (Kendasampige Serial) ಒಂದು. ಇದೀಗ ಈ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ  ನಟಿ ಕಾವ್ಯ ಶೈವ (Kavya Shaiva) ಹೊರ ಬಂದಿದ್ದಾರೆ.

ಕಥಾನಾಯಕಿ ಸುಮನಾ ಪಾತ್ರಕ್ಕೆ ನಟಿ ಕಾವ್ಯ ಶೈವ ಬಣ್ಣ ಹಚ್ಚಿದ್ದರು. ಇದೀಗ ಸುಮನಾ ಪಾತ್ರಕ್ಕೆ ಬೇರೊಬ್ಬ ನಟಿ ಎಂಟ್ರಿ ಕೊಟ್ಟಿದ್ದಾರೆ.

ಧಾರಾವಾಹಿಯಲ್ಲಿ ಸುಮನಾಳ ಕಿಡ್ನ್ಯಾಪ್‌ನಿಂದ ‘ಕೆಂಡಸಂಪಿಗೆ’ ಸೀರಿಯಲ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಮಧ್ಯೆ ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ಈ ದೊಡ್ಡ ಬದಲಾವಣೆಯಾಗಿದೆ.

ಇದನ್ನೂ ಓದಿ: Thug Life Movie: ಕಮಲ್‌ ಹಾಸನ್‌ ಸಿನಿಮಾಗೆ ಕಾಲಿವುಡ್‌ ನಟ ಸಿಂಬು ಎಂಟ್ರಿ!

‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ಇದೀಗ ಸುಮನಾ ಪಾತ್ರಕ್ಕಾಗಿ ಬಣ್ಣ ಹಚ್ಚಿರುವವರು ಮಧುಮಿತ (Madhumitha).

ಈ ಮುಂಚೆ ಮಧುಮಿತ ‘ಜೇನುಗೂಡು’ ಸೀರಿಯಲ್‌ನಲ್ಲಿ ಅಭಿನಯಿಸಿದ್ದರು.‘ಯುವರತ್ನ’ ಚಿತ್ರದಲ್ಲಿ ಸಮೀರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ಮಧುಮಿತ ಅವರು ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘’ ಒಳ್ಳೆಯ ಕೆಲಸಗಳಿಗೆ ಸಮಯ ಹಿಡಿಯುತ್ತದೆ ಎಂಬುದು ನಿಜಕ್ಕೂ ಸತ್ಯ. ತುಂಬಾ ಧನ್ಯವಾದಗಳು ವಿಶ್ವಕ್ಕೆ. ನಾನು ಬಯಸಿದ್ದನ್ನು ನೀವು ನನಗೆ ನೀಡಿದ್ದೀರಿ. ಈ ಯೋಜನೆಯ ಭಾಗವಾಗಿರಲು ತುಂಬ ಸಂತಸವಾಗುತ್ತಿದೆ. ನನಗೆ ಈ ಅವಕಾಶವನ್ನು ನೀಡಿದ ಕಲರ್ಸ್‌ ಕನ್ನಡದವರಿಗೆ ತುಂಬಾ ಧನ್ಯವಾದಗಳು. ಸುಮನಾ ಆಗಿ ಸೈನ್ ಇನ್ ಮಾಡಲು ನಿಮ್ಮೆಲ್ಲರ ಆಶೀರ್ವಾದ ಬೇಕು. ಇಲ್ಲಿಗೆ ತಲುಪಲು ನನಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ರಾಯರಿದ್ದಾರೆʼʼ ಎಂದು ನಟಿ ಮಧುಮಿತ ಸೋಷಿಯಲ್ ಮೀಡಿಯಾದ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

Continue Reading

ಕಿರುತೆರೆ

Jyothi Rai: ಯುಟ್ಯೂಬ್‌ ಸಬ್‌ಸ್ಕ್ರೈಬ್‌ ಮಾಡಿದ್ರೆ ಜ್ಯೋತಿ ರೈ ವಿಡಿಯೊ ಅಪ್‌ಲೋಡ್‌ ಮಾಡ್ತೀನಿ ಎಂದ ಕಿಡಿಗೇಡಿ!

Jyothi Rai:  ಕನ್ನಡದಲ್ಲಿ ‘ಜೋಗುಳ’ (Jyothi Rai), ‘ಕನ್ಯಾದಾನ’, ‘ಅನುರಾಗ ಸಂಗಮ, ‘ಗೆಜ್ಜೆಪೂಜೆ’, ‘ಲವಲವಿಕೆ’, ‘ಗೆಜ್ಜೆಪೂಜೆ’, ‘ಪ್ರೇರಣಾ’, ‘ಕಿನ್ನರಿ’, ‘ಮೂರು ಗಂಟು’, ‘ಕಸ್ತೂರಿ ನಿವಾಸ’ ಸೇರಿದಂತೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ನಟಿ ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಬೋಲ್ಡ್ ಆಗಿ ಇರುವ ಫೋಟೊವನ್ನು ಶೇರ್ ಮಾಡುತ್ತ ಇರುತ್ತಾರೆ. ತೆಲುಗಿನಲ್ಲಿ ಪ್ರಿಟಿ ಗರ್ಲ್ ಎಂಬ ವೆಬ್‌ ಸಿರೀಸ್‌ನಲ್ಲಿ ಜ್ಯೋತಿ ರೈ ನಟಿಸುತ್ತಿದ್ದು, ಆ ಸೀರೀಸ್‌ಗೆ ಸಂಬಂಧಿಸಿದ ಪೋಟೊಗಳು ಇವೆ.

VISTARANEWS.COM


on

Jyothi Rai video Leak miscreants say to subscribe to the youtube channel
Koo

ಬೆಂಗಳೂರು: ನಟಿ ಜ್ಯೋತಿ ರೈ (Jyothi Rai) ಎಂದಾಕ್ಷಣ ಕನ್ನಡಿಗರಿಗೆ ನೆನಪಾಗೋದು ʻಜೋಗುಳʼ ಸೀರಿಯಲ್. ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಈ ಧಾರಾವಾಹಿಯಲ್ಲಿ ದೇವಕಿ ಪಾತ್ರ ಮಾಡುತ್ತಿದ್ದ ಜ್ಯೋತಿ ರೈ ಅವರನ್ನು ಅಭಿಮಾನಿಗಳು ಮರೆತಿಲ್ಲ. ಇದೀಗ ಜ್ಯೋತಿ ರೈ ಅವರದ್ದೇ ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೊ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಈ ಅಶ್ಲೀಲ ಫೋಟೊ ಮತ್ತು ವಿಡಿಯೊ ಫೇಸ್‌ಬುಕ್‌, ಎಕ್ಸ್‌ ಖಾತೆ, ಟೆಲಿಗ್ರಾಂ ಸೇರಿದಂತೆ ಹಲವು ಸೋಷಿಯಲ್‌ ಮೀಡಿಯಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಶೇರ್‌ ಆಗುತ್ತಿದೆ. ಜತೆಗೆ ಕಿಡಿಗೇಡಿಯೊಬ್ಬ ಎಕ್ಸ್‌ ಖಾತೆಯಲ್ಲಿ ತನ್ನ ಯುಟ್ಯೂಬ್‌ ಸಬ್‌ಸ್ಕ್ರೈಬ್‌ ಮಾಡಿದರೆ ಜ್ಯೋತಿ ರೈ ವಿಡಿಯೊ ಕಳುಹಿಸುತ್ತೇನೆ ಎಂದು ಪೋಸ್ಟ್‌ ಮಾಡಿದ್ದಾನೆ.

ತನ್ನ ಖಾತೆಯಲ್ಲಿ ಇದೀಗ ಜ್ಯೋತಿ ರೈ ಎನ್ನಲಾದ ವಿಡಿಯೊ ಮತ್ತು ಫೋಟೊಗಳು ವೈರಲ್‌ ಆಗಿವೆ. 1000 ಸಬ್‌ಸ್ಕ್ರೈಬ್‌ ಆದರೆ ಮತ್ತಷ್ಟು ವಿಡಿಯೊವನ್ನು ಅಪ್‌ಲೋಡ್‌ ಮಾಡುತ್ತೇನೆ ಎಂದಿದ್ದಾನೆ ಈ ಕಿಡಿಗೇಡಿ. ಈಗಾಗಲೇ ಈ ಅಕೌಂಟ್‌ನಲ್ಲಿ 7 ವಿಡಿಯೊಗಳು ಅಪ್‌ ಆಗಿವೆ. ತನ್ನ ಸಬ್‌ಸ್ಕ್ರೈಬ್‌ ಹೆಚ್ಚಿಸಿಕೊಳ್ಳಲು ಇಂತಹ ನೀಚ ಕೃತ್ಯಕ್ಕೆ ಇಳಿದಿದ್ದಾನೆ.

ಇದನ್ನೂ ಓದಿ: Jyothi Rai: ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಲಷ್ಟನೆ ಹೀಗಿದೆ!

ನಟಿಯ ಸ್ಲಷ್ಟನೆ ಹೀಗಿದೆ!

ಜ್ಯೋತಿ ರೈದು ಎನ್ನಲಾದ ಮೂರು ಅಶ್ಲೀಲ ವಿಡಿಯೊ ಹಾಗೂ ಕೆಲವು ಫೋಟೊಗಳು ವೈರಲ್ ಆಗಿದ್ದವು. ಇದೀಗ ನಟಿ ಈ ಬಗ್ಗೆ ಸುದೀರ್ಘವಾಗಿ ಪತ್ರವನ್ನು ಬರೆದಿದ್ದಾರೆ. ʻʻನಾನು ಅಪರಿಚಿತ ವ್ಯಕ್ತಿಗಳಿಂದ ಕೆಲವು ಸಂದೇಶಗಳನ್ನು ಸ್ವೀಕರಿಸಿ ಆಘಾತಕ್ಕೆ ಒಳಗಾಗಿದ್ದೇನೆ. ಇಂತಹ ವ್ಯಕ್ತಿಗಳ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ನನ್ನ ಕುಟುಂಬದ ಪ್ರತಿಷ್ಠೆ ಅಪಾಯದಲ್ಲಿದೆ. ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ, ಸರಿ ಮಾಡಲು ಸಾಧ್ಯವಾದಂತಹ ಡ್ಯಾಮೇಜ್ ಆಗಲಿದೆ. ನಿಮ್ಮ ತನಿಖೆಗೆ ಅನುಕೂಲವಾಗುವಂತೆ ಯೂಸರ್ ಐಡಿಗಳನ್ನು ಪೋಸ್ಟ್‌ ಮಾಡಿದ್ದೇನೆ.” ಎಂದು ಹೇಳಿಕೊಂಡಿದ್ದರು. ಹಾಸನದ ಎಂಪಿ ಪ್ರಜ್ವಲ್ ರೇವಣ್ಣ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಜ್ಯೋತಿ ರೈ ಅವರದ್ದೇ ಎನ್ನಲಾದ ಅಶ್ಲೀಲ ವಿಡಿಯೋಗಳ ಬಗ್ಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಕನ್ನಡದಲ್ಲಿ ‘ಜೋಗುಳ’ (Jyothi Rai), ‘ಕನ್ಯಾದಾನ’, ‘ಅನುರಾಗ ಸಂಗಮ, ‘ಗೆಜ್ಜೆಪೂಜೆ’, ‘ಲವಲವಿಕೆ’, ‘ಗೆಜ್ಜೆಪೂಜೆ’, ‘ಪ್ರೇರಣಾ’, ‘ಕಿನ್ನರಿ’, ‘ಮೂರು ಗಂಟು’, ‘ಕಸ್ತೂರಿ ನಿವಾಸ’ ಸೇರಿದಂತೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ನಟಿ ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಬೋಲ್ಡ್ ಆಗಿ ಇರುವ ಫೋಟೊವನ್ನು ಶೇರ್ ಮಾಡುತ್ತ ಇರುತ್ತಾರೆ. ತೆಲುಗಿನಲ್ಲಿ ಪ್ರಿಟಿ ಗರ್ಲ್ ಎಂಬ ವೆಬ್‌ ಸಿರೀಸ್‌ನಲ್ಲಿ ಜ್ಯೋತಿ ರೈ ನಟಿಸುತ್ತಿದ್ದು, ಆ ಸೀರೀಸ್‌ಗೆ ಸಂಬಂಧಿಸಿದ ಪೋಟೊಗಳು ಇವೆ.

ಬೋಲ್ಡ್‌ ಫೋಟೊ ಅಲ್ಲದೇ ವೈಯಕ್ತಿಕ ವಿಚಾರಗಳಿಗೂ ಸುದ್ದಿಯಾಗಿದ್ದರು. ನಟಿ ‘ಶುಕ್ರ’, ‘ಮಾತರಾನಿ ಮೌನಮಿದಿ’, ‘ಎ ಮಾಸ್ಟರ್ ಪೀಸ್’ ಚಿತ್ರಗಳನ್ನು ನಿರ್ದೇಶಿಸಿದ ಸುಕುಪುರ್ವಜ್ ಅಲಿಯಾಸ್ ಸುರೇಶ್ ಕುಮಾರ್‌ ಜತೆ ಜತೆ ಸಹಜೀವನ ನಡೆಸುತ್ತಿದ್ದಾರೆ.

20ನೇ ವಯಸ್ಸಿನಲ್ಲಿ ಮದುವೆ

ಕೊಡಗಿನಲ್ಲಿ ಹುಟ್ಟಿ ಬೆಳೆದ ನಟಿ ಜ್ಯೋತಿ ರೈ ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಂದೇ ಬರತಾವ ಕಾಲ’ ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿಂದ ಮುಂದೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದರು. ನಿರೂಪಕಿಯಾಗಿಯೂ ಗಮನ ಸೆಳೆದು. 20ನೇ ವಯಸ್ಸಿನಲ್ಲಿ ಮದುವೆ ಆಗಿದ್ದರು .

ಜ್ಯೋತಿ ರೈ ಕೇವಲ ಕನ್ನಡ ಮಾತ್ರವಲ್ಲ ‘ಸೀತಾರಾಮ ಕಲ್ಯಾಣ’ ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಕನ್ಯಾದಾನಂ’ ಧಾರಾವಾಹಿ ಮೂಲಕ ಆಕೆ ತೆಲುಗು ಕಿರುತೆರೆಗೆ ಪರಿಚಿತರಾಗಿದ್ದರು. ‘ಗುಪ್ಪೆಡಂತ ಮನಸು’ ಧಾರಾವಾಹಿ ಪಾತ್ರ ಒಳ್ಳೆ ಹೆಸರು ತಂದುಕೊಂಡಿತ್ತು.

ಇದನ್ನೂ ಓದಿ: Jyothi Rai: ನಿರ್ದೇಶಕನ ಜತೆ ʻಜೋಗುಳʼ ಖ್ಯಾತಿಯ ಜ್ಯೋತಿ ರೈ‌  ಎಂಗೇಜ್‌!

ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದ ಮಗ

ನೆಟ್‌ವರ್ಕಿಂಗ್ ಇಂಜಿನಿಯರ್ ಪದ್ಮನಾಭ ಎಂಬುವವರ ಕೈ ಹಿಡಿದಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಜ್ಯೋತಿ ರೈ ಮಗ ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದ. ಮಗನಿಗೆ ಒಂದು ವರ್ಷ ತುಂಬಿದ ಬಳಿಕ ಆತ ಯಾರೊಂದಿಗೆ ಐ ಕಾಂಟ್ಯಾಕ್ಟ್‌ ಮಾಡಿ ಮಾತನಾಡಿಸುತ್ತಿರಲಿಲ್ಲ. ಇಎನ್‌ಟಿ ಡಾಕ್ಟರ್‌ ಬಳಿ ಹೋದಾಗಲೂ ಯಾವುದೇ ಸಹಾಯವಾಗಲಿಲ್ಲ. ಬಳಿಕ ಥೆರಫಿ, ಶ್ಯಾಡೋ ಟೀಚರ್‌ ಮುಖಾಂತರ ಜ್ಯೋತಿ ರೈ ಪುತ್ರ ಬೆಳವಣಿಗೆಗೆ ಸಹಾಕಾರಿ ಆಗಿದೆ ಎಂದು ನಟಿ ಹಿಂದೊಮ್ಮೆ ಹೇಳಿಕೆ ನೀಡಿದ್ದರು.

Continue Reading
Advertisement
Dietary Guidelines
Latest5 mins ago

Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

Lover refused to marriage Young woman committed suicide in kalaburagi
ಕಲಬುರಗಿ9 mins ago

Self Harming: ಪ್ರೀತಿಸಲು ಓಕೆ, ಮದುವೆಗೆ ನೋ ಎಂದ ಪ್ರಿಯಕರ; ಮನನೊಂದು ಯುವತಿ ಆತ್ಮಹತ್ಯೆ

Jay Shah
ಪ್ರಮುಖ ಸುದ್ದಿ9 mins ago

Jay Shah : ”ನಾನವನಲ್ಲ, ನಾನವನಲ್ಲ”; ಶ್ರೇಯಸ್​, ಇಶಾನ್ ವಿವಾದಕ್ಕೆ ಸ್ಪಷ್ಟನೆ ನೀಡಿದ ಜಯ್​ ಶಾ

Naxals K
ದೇಶ13 mins ago

Naxals Encounter: ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 12 ನಕ್ಸಲರ ಹತ್ಯೆ

Veg v/s Non Veg Thali
ಆರೋಗ್ಯ18 mins ago

Veg v/s Non Veg Thali: ಭಾರತದಲ್ಲಿ ನಾನ್‌ವೆಜ್‌ ಊಟಕ್ಕಿಂತ ವೆಜ್ ಊಟ ದುಬಾರಿ! ಏಕೆ ಗೊತ್ತಾ?

Maruti Suzuki
ಆಟೋಮೊಬೈಲ್19 mins ago

Maruti Suzuki: ಶೀಘ್ರ ರಸ್ತೆಗಿಳಿಯಲಿದೆ ಬರೋಬ್ಬರಿ 26 ಕಿ.ಮೀ ಮೈಲೇಜ್ ಕೊಡುವ ಮಾರುತಿ ಸ್ವಿಫ್ಟ್​; ಶುರುವಾಗಿದೆ ಬುಕಿಂಗ್​

Prajwal Revanna Case
ಕರ್ನಾಟಕ28 mins ago

Prajwal Revanna Case: ರೇವಣ್ಣ ಬಸವನಗುಡಿ ನಿವಾಸದಲ್ಲಿ 2ನೇ ಬಾರಿ ಸ್ಥಳ ಮಹಜರು

Arvind Kejriwal
ದೇಶ29 mins ago

Arvind Kejriwal: ಪ್ರಜಾಪ್ರಭುತ್ವ ಉಳಿಸಲು ಹೋರಾಟ; ಜೈಲಿಂದ ಬಿಡುಗಡೆ ಬಳಿಕ ಕೇಜ್ರಿವಾಲ್‌ ಫಸ್ಟ್‌ ರಿಯಾಕ್ಷನ್!

Xiaomi Smart Phone
ಗ್ಯಾಜೆಟ್ಸ್47 mins ago

Xiaomi Smart Phone: ವರ್ಷಾಂತ್ಯಕ್ಕೆ ಬರಲಿದೆ ಶಿಯೊಮಿಯ ಫೋಲ್ಡಿಂಗ್​ ಫೋನ್​ಗಳು; ಇಲ್ಲಿದೆ ಸಂಪೂರ್ಣ ವಿವರ

Rahul Dravid
Latest56 mins ago

Rahul Dravid : ವಿಶ್ವ ಕಪ್​ ಬಳಿಕ ದ್ರಾವಿಡ್​ ಭಾರತದ ಕೋಚ್ ಅಗಿರುವುದಿಲ್ಲ; ಮುಂದೆ ಯಾರು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse The public prosecutor called the client woman to the lodge
ಕ್ರೈಂ5 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ7 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ8 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ15 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ22 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ23 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ23 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಟ್ರೆಂಡಿಂಗ್‌