Site icon Vistara News

Shiva Rajkumar Birthday: ಈ ವರ್ಷ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಬರ್ತ್‌ಡೇ ಸ್ಪೆಷಲ್ ಎಂದ ಶಿವರಾಜ್‌ ಕುಮಾರ್‌!

Shivarajkumar Press Meet

ಬೆಂಗಳೂರು: ಹ್ಯಾಟ್ರಿಕ್ ಹೀರೊ ಶಿವಣ್ಣ (Shiva Rajkumar Birthday) 4 ವರ್ಷಗಳ ಬಳಿಕ ತಮ್ಮ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜತೆ ಭರ್ಜರಿಯಾಗಿಯೇ ಆಚರಿಸಿಕೊಂಡಿದ್ದಾರೆ. ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜತೆಗೆ ಕೂತು ʼಘೋಸ್ಟ್‌ʼ ಚಿತ್ರದ ಟೀಸರ್‌ ವೀಕ್ಷಿಸಿದ್ದಾರೆ. ಇತ್ತ ಅಭಿಮಾನಿಗಳು ʼಟಗರುʼ ಶಿವಣ್ಣ ಅವರಿಗೆ ಜೈಕಾರ ಹಾಕಿದ್ದಾರೆ, ಶಿಳ್ಳೆ ಚಪ್ಪಾಳೆ‌ ಹೊಡೆದ್ದಿದ್ದಾರೆ. ʻಈ ವರ್ಷ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದೇನೆ. ಅದುವೇ ಬರ್ತ್‌ಡೇ ಸ್ಪೆಷಲ್ʼ ಎಂದು ಶಿವರಾಜ್‌ ಕುಮಾರ್‌ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್‌ ಕುಮಾರ್‌, ಟೀಸರ್‌ನಲ್ಲಿ ಬರುವ ಡೈಲಾಗ್ ಹೇಳಿ ಸಂಭ್ರಮಿಸಿದರು. ಈ ವರ್ಷ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದೇನೆ. ಅದುವೇ ಬರ್ತ್‌ಡೇ ಸ್ಪೆಷಲ್. ಮುಂದಿನ ಸಿನಿಮಾದ ಬಗ್ಗೆ ಕೂಡ ಅವರು ಅಪ್‌ಡೇಟ್‌ ಹಂಚಿಕೊಂಡರು. ಜತೆಗೆ ಕಳೆದ ಕೆಲ ದಿನಗಳಿಂದ ನಟ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ಜಟಾಪಟಿಯ ಬಗ್ಗೆ ಮಾತನಾಡಿದ ಶಿವಣ್ಣ, ಇದರ ಬಗ್ಗೆ ಎಲ್ಲರೂ ಕೂತು ಮಾತನಾಡಿ ಬಗೆಹರಿಸಬೇಕು. ಒಂದು ವಾರದಲ್ಲಿ ಇದಕ್ಕೆ ಉತ್ತರ ಸಿಗುತ್ತದೆ. ಸಮಸ್ಯೆ ಪರಿಹಾರವಾಗುತ್ತದೆʼʼ ಎಂದು ಹೇಳಿದರು.

ʻʻನಮ್ಮ ಬ್ಯಾನರ್‌ನಲ್ಲಿ ʼವೇದʼ ನನಗೆ ಒಳ್ಳೆಯ ಹೆಸರು ಕೊಟ್ಟ ಚಿತ್ರ. ನಮ್ಮ ಬ್ಯಾನರ್‌ನಲ್ಲಿಯೇ ವೇದ ಬಂದಿದ್ದು, ಬೇರೆ ಕಲಾವಿದರಿಗೆ ಒಳ್ಳೆಯ ಹೆಸರು ಬಂದಿದ್ದು ಖುಷಿ ಇತ್ತು. ಜೈಲರ್​ನಲ್ಲಿ ನನ್ನದು 10 ನಿಮಿಷಗಳ ಅತಿಥಿ ಪಾತ್ರ ಎಂದು ಶಿವಣ್ಣ ಹೇಳಿದ್ದಾರೆ. ರಜನಿಕಾಂತ್​ ಜತೆ ನಟಿಸಿದ್ದೇ ಒಂದು ಖುಷಿ ಎಂದಿದ್ದಾರೆ. ಈ ಸಿನಿಮಾಕ್ಕೆ ಅವರು ಶೂಟಿಂಗ್​ ಮುಗಿಸಿದ್ದಾರೆ.

ಇದನ್ನೂ ಓದಿ: Shiva Rajkumar Birthday: `ಬಿಗ್‌ ಡ್ಯಾಡಿ’ ಟೀಸರ್‌ ಔಟ್‌; ಕಣ್ಣಲ್ಲೇ ಹೆದರಿಸಿದ ಶಿವಣ್ಣ!

ʼಘೋಸ್ಟ್‌ʼ ಸಿನಿಮಾದಿಂದ ‘ಬಿಗ್ ಡ್ಯಾಡಿ’ ಟೀಸರ್ ಶಿವಣ್ಣನ ಜನುಮದಿನಕ್ಕೆ​ ರಿಲೀಸ್​ ಆಗಿದೆ. ಶಿವರಾಜ್‌ಕುಮಾರ್‌ ಅವರ ರಗಡ್‌ ಡೈಲಾಗ್‌ ಹಾಗೂ ಲುಕ್‌ಗೆ ಅವರ ಫ್ಯಾನ್ಸ್‌ ಸಖತ್‌ ಖುಷ್‌ ಆಗಿದ್ದಾರೆ. ʻʻನೀವು ಗನ್‌ ನಲ್ಲಿ ಎಷ್ಟು ಜನರನ್ನ ಹೆದ್ರಿಸಿದ್ದೀರೋ ಅದಕ್ಕಿಂತ ಜಾಸ್ತಿ ನಾನು ಕಣ್ಣಲ್ಲಿ ಹೆದ್ರಿಸಿದ್ದೀನಿ. ನಾನು ಒರಿಜಿನಲ್‌ ಗ್ಯಾಂಗ್‌ಸ್ಟರ್‌ʼʼ ಎಂದು ಶಿವಣ್ಣ ಖಡಕ್‌ ಡೈಲಾಗ್‌ನಲ್ಲಿ ಅಬ್ಬರಿಸಿದ್ದಾರೆ.

ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಪ್ರಮುಖ ಪಾತ್ರದಲ್ಲಿ ಕೆಜಿಎಫ್‌ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಕಾಣಿಸಿಕೊಳ್ಳಲಿದ್ದಾರೆ.

Exit mobile version