Shiva Rajkumar Birthday: `ಬಿಗ್‌ ಡ್ಯಾಡಿ' ಟೀಸರ್‌ ಔಟ್‌; ಕಣ್ಣಲ್ಲೇ ಹೆದರಿಸಿದ ಶಿವಣ್ಣ! - Vistara News

South Cinema

Shiva Rajkumar Birthday: `ಬಿಗ್‌ ಡ್ಯಾಡಿ’ ಟೀಸರ್‌ ಔಟ್‌; ಕಣ್ಣಲ್ಲೇ ಹೆದರಿಸಿದ ಶಿವಣ್ಣ!

Shiva Rajkumar Birthday: ಶಿವರಾಜಕುಮಾರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

VISTARANEWS.COM


on

Bigg Dady Teaser Out
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ (Shiva Rajkumar Birthday) ಅಭಿನಯದ ಘೋಸ್ಟ್‌ ಸಿನಿಮಾ ಇದೀಗ ಟೀಸರ್‌ ಬಿಡುಗಡೆಗೊಳಿಸಿದೆ. ಘೋಸ್ಟ್‌ ಸಿನಿಮಾದಿಂದ ‘ಬಿಗ್ ಡ್ಯಾಡಿ’ ಟೀಸರ್ ಶಿವಣ್ಣನ ಜನುಮದಿನಕ್ಕೆ​ ರಿಲೀಸ್​ ಆಗಿದೆ. ಶಿವರಾಜ್‌ಕುಮಾರ್‌ ಅವರ ರಗಡ್‌ ಡೈಲಾಗ್‌ ಹಾಗೂ ಲುಕ್‌ಗೆ ಅವರ ಫ್ಯಾನ್ಸ್‌ ಸಖತ್‌ ಖುಷ್‌ ಆಗಿದ್ದಾರೆ. ʻʻನೀವು ಗನ್‌ ಅಲ್ಲಿ ಎಷ್ಟು ಜನ ಹೆದ್ರಿಸಿದ್ದೀರೋ ಅದಕ್ಕಿಂತ ಜಾಸ್ತಿ ನಾನು ಕಣ್ಣಲ್ಲಿ ಹೆದ್ರಿಸಿದ್ದೀನಿ. ನಾನು ಒರಿಜಿನಲ್‌ ಗ್ಯಾಂಗ್‌ಸ್ಟರ್‌ʼʼ ಎಂದು ಶಿವಣ್ಣ ಖಡಕ್‌ ಡೈಲಾಗ್‌ನಲ್ಲಿ ಅಬ್ಬರಿಸಿದ್ದಾರೆ.

ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಪ್ರಮುಖ ಪಾತ್ರದಲ್ಲಿ ಕೆಜಿಎಫ್‌ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Shiva Rajkumar: `ಬಿಗ್‌ ಡ್ಯಾಡಿ’ ಹೊಸ ಲುಕ್‌ ಔಟ್‌; ಹೊಸ ಅಪ್‌ಡೇಟ್‌ ಹಂಚಿಕೊಂಡ ಶಿವಣ್ಣ!

ಟೋಪಿವಾಲ, ಶ್ರೀನಿವಾಸ ಕಲ್ಯಾಣ, ಓಲ್ಡ್‌ ಮಾಂಕ್‌ ಸಿನಿಮಾ ಖ್ಯಾತಿಯ ಎಂ.ಜಿ.ಶ್ರೀನಿವಾಸ್‌ ಅವರು ಘೋಸ್ಟ್‌ ಸಿನಿಮಾನವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾಗೆ ಅರ್ಜುನ್‌ ಜನ್ಯಾ ಸಂಗೀತ ಇದ್ದರೆ, ಸಂದೇಶ್‌ ನಾಗರಾಜ್‌ ನಿರ್ಮಾಪಕರಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

The Birthday Boy: ಹೆಸರು ಬದಲಾಯಿಸಿ ಕದ್ದು ಮುಚ್ಚಿ ಸಿನಿಮಾ ಮಾಡಿ, ಮಾಸ್ಕ್‌ ಧರಿಸಿ ಬಂದ ನಿರ್ದೇಶಕ! ಏನು ಕಥೆ?

The Birthday Boy: ವಿಸ್ಕಿ ನಿರ್ದೇಶನದ ಸಿನಿಮಾಗಳನ್ನು ಅವರ ಮನೆಯವರು ಇಷ್ಟಪಡುವುದಿಲ್ಲ. ಹೀಗಾಗಿ ಅವರಿಗೆ ಗೊತ್ತಾಗದಂತೆ ವೇಷ ಬದಲಿಸಿ ತಿರುಗಾಡುತ್ತಿದ್ದಾರೆ. ನನಗೆ ಪ್ರಚಾರದ ಅವಶ್ಯಕತೆಯಿಲ್ಲ. ನಾನು ಬರೀ ಸಿನಿಮಾ ನಿರ್ದೇಶನ ಮಾಡಿ ಹೋಗೊಕೆ ಬಂದೆ ಅಷ್ಟೆ. ನನಗೆ ಕ್ಯಾಮೆರಾ ಮುಂದೆ ಬಂದು ಮಾತನಾಡುವುದಕ್ಕೆ ಇಷ್ಟವಿಲ್ಲ.

VISTARANEWS.COM


on

The Birthday Boy Director Whisky Real Life Story
Koo

ಬೆಂಗಳೂರು: ಸಾಮಾನ್ಯವಾಗಿ ಅನೇಕರು ಸಿನಿಮಾ ನಿರ್ದೇಶನದ ಮೂಲಕವೇ ಜನಪ್ರಿಯರಾಗಬೇಕೆಂದು ಯೋಚಿಸುತ್ತಾರೆ. ಆದರೆ ತೆಲುಗು (The Birthday Boy) ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ನಿರ್ದೇಶಕರೊಬ್ಬರು ತಮ್ಮ ಹೆಸರನ್ನು “ವಿಸ್ಕಿ’ ಎಂದು ಬದಲಾಯಿಸಿಕೊಂಡು ಸಿನಿಮಾ ನಿರ್ದೇಶಿಸಿದ್ದಾರೆ. ಪ್ರತಿ ಸಿನಿಮಾದ ಪ್ರಚಾರ ವೇಳೆ ಮುಖ ಕಾಣದಂತೆ ಮಾಸ್ಕ್‌ ಧರಿಸುತ್ತಾರೆ. ನಿರ್ದೇಶಕ ಈ ರೀತಿ ಇರೋದ್ಯಾಕೆ ಎಂದು ತಿಳಿಯಲು ಮುಂದೆ ಓದಿ.

ವಿಸ್ಕಿ ನಿರ್ದೇಶನದ ಸಿನಿಮಾಗಳನ್ನು ಅವರ ಮನೆಯವರು ಇಷ್ಟಪಡುವುದಿಲ್ಲ. ಹೀಗಾಗಿ ಅವರಿಗೆ ಗೊತ್ತಾಗದಂತೆ ವೇಷ ಬದಲಿಸಿ ತಿರುಗಾಡುತ್ತಿದ್ದಾರೆ. ನನಗೆ ಪ್ರಚಾರದ ಅವಶ್ಯಕತೆಯಿಲ್ಲ. ನಾನು ಬರೀ ಸಿನಿಮಾ ನಿರ್ದೇಶನ ಮಾಡಿ ಹೋಗೊಕೆ ಬಂದೆ ಅಷ್ಟೆ. ನನಗೆ ಕ್ಯಾಮೆರಾ ಮುಂದೆ ಬಂದು ಮಾತನಾಡುವುದಕ್ಕೆ ಇಷ್ಟವಿಲ್ಲ. ನಿಜ ಹೇಳಬೇಕು ಅಂದರೆ ನಾನು ಚಿತ್ರರಂಗಕ್ಕೆ ಬಂದಿರುವುದು ನಮ್ಮ ಮನೆಯವರಿಗೆ ಗೊತ್ತಿಲ್ಲ. ಕದ್ದು ಮುಚ್ಚಿ ಬಂದಿದ್ದೀನಿ. ಆ ವಿಚಾರ ಅವರಿಗೆ ಗೊತ್ತಾದರೆ ನೋವಾಗುತ್ತದೆ ಎನ್ನುತ್ತಿದ್ದಾರೆ. ಮಾಸ್ಕ್ ಹಾಕಿಕೊಂಡು ಸಿನಿಮಾ ಸುದ್ದಿಗೋಷ್ಠಿ, ಸಂದರ್ಶನದಲ್ಲಿ ಭಾಗಿ ಆಗುತ್ತಿದ್ದಾರೆ.

ಇದೀಗ ರ‌ವಿಕೃಷ್ಣ, ಸ‌ಮೀರ್ ಮ‌ಲ್ಲಾ ಮುಖ್ಯಭೂಮಿಕೆಯಲ್ಲಿರುವ ‘ದಿ ಬರ್ತ್‌ಡೇ ಬಾಯ್‌’ ತೆಲುಗು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಕ್ಕೆ ವಿಸ್ಕಿ ಎಂಬುವವರು ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಇದು ಅವರ ನಿಜವಾದ ಹೆಸರಲ್ಲ, ಚಿತ್ರಕ್ಕಾಗಿ ಬದಲಿಸಿಕೊಂಡಿದ್ದಾರೆ.

ಈ ಚಿತ್ರ ಇದೇ ತಿಂಗಳ 19 ರಂದು ಬಿಡುಗಡೆಯಾಗಲಿದೆ. ಭರತ್ ಇಮ್ಮಲರಾಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರವಿಕೃಷ್ಣ ಮತ್ತು ರಾಜೀವ್ ಕಣಕಾಲ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. “ವಿಸ್ಕೀ” (ನಿರ್ದೇಶಕ ವಿಸ್ಕಿ) ಎಂಬ ಹೆಸರನ್ನು ಇಟ್ಟುಕೊಳ್ಳಲು ಕಾರಣವೆಂದರೆ ಅವರು ಒಂದು ನಾಯಿಮರಿಯನ್ನು ಸಾಕಿದ್ದರು. ನಾಯಿ ಕರೋನಾ ಸಮಯದಲ್ಲಿ ಸತ್ತು ಹೋಯ್ತು. ಅವರು ಅದಕ್ಕೆ ವಿಸ್ಕಿ ಎಂದು ಹೆಸರಿಟ್ಟಿದ್ದರು. ಹೀಗಾಗಿ ತಮ್ಮನ್ನು ಈ ರೀತಿ ಪರಿಚಯಿಸಿಕೊಂಡಿದ್ದಾರೆ.

ಇದನ್ನೂ ಓದಿ: Kannada New Movie: ಹೊಸಬರ ತಂಡ ಸಿದ್ದಪಡಿಸಿರುವ ಹೊಸತನದ ಸಿನಿಮಾ; ಲೈಫ್ ಆಫ್ ಮೃದುಲ ಹಾಡು ಬಿಡುಗಡೆ!

ಐವರು ಅನಿವಾಸಿ ಭಾರತೀಯರ ಬದುಕಿನ ಮೂಲ ಕಥೆಗೆ ಸಿನಿಮಾ ಅಂಶಗಳನ್ನು ಸೇರಿಸಿ ಸಿನಿಮಾ ಮಾಡಲಾಗಿದೆ. ನನ್ನ ಎರಡು ಸಿನಿಮಾಗಳು ಫ್ಲಾಪ್ ಆದರೆ ಚಿತ್ರರಂಗ ಬಿಟ್ಟುಬಿಡುತ್ತೇನೆ ಎಂದು ನಿರ್ದೇಶಕ ವಿಸ್ಕಿ ಹೇಳಿದ್ದಾರೆ. ಸದ್ಯ ಮಾಸ್ಕ್ ಹಾಕಿಕೊಂಡು ಆತ ಸಿನಿಮಾ ಪ್ರಚಾರ ಮಾಡುತ್ತಿರುವುದು ವೈರಲ್ ಆಗುತ್ತಿದೆ.


Continue Reading

ಕಾಲಿವುಡ್

Vijay Sethupathi: ವಿಜಯ್​ ಸೇತುಪತಿ ನಟನೆಯ’ʻವಿಡುತಲೈ 2ʼ ಫಸ್ಟ್‌ ಲುಕ್‌ ಔಟ್‌!

vijay sethupathi: ಆರ್‌ಎಸ್ ಇನ್‌ಫರ್‌ಟೈನ್‌ಮೆಂಟ್ ಪ್ರೈ. ಲಿಮಿಟೆಡ್ ಬ್ಯಾನರ್‌ದಲ್ಲಿ ಸಿದ್ದಗೊಳ್ಳುತ್ತಿರುವ ಸಿನಿಮಾದ ಫಸ್ಟ್ ಲುಕ್ ಯಾವ ರೀತಿ ಇರಬಹುದೆಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಮಿಕ್ಕಂತೆ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ತಂಡವು ಹೇಳಿಕೊಂಡಿದೆ.

VISTARANEWS.COM


on

Vijay Sethupathi 'Viduthalai 2' first look out now
Koo

ಬೆಂಗಳೂರು: ಕಳೆದ ವರ್ಷ ಬಿಡುಗಡೆಗೊಂಡಿದ್ದ ’ʻವಿಡುತಲೈʼ ’ ಚಿತ್ರವು ಯಶಸ್ಸು ಕಂಡು ಕಲಾವಿದರು ಸೇರಿದಂತೆ ತಂತ್ರಜ್ಞರುಗಳಿಗೆ ಅವಕಾಶಗಳು ಒಲಿದು ಬಂದವು. ಇದರಿಂದ ಸ್ಪೂರ್ತಿಗೊಂಡ ನಿರ್ದೇಶಕ ವೆಟ್ರಿ ಮಾರನ್ ಮತ್ತು ನಿರ್ಮಾಪಕ ಎಲ್ರಡ್ ಕುಮಾರ್ ಭಾಗ-2 ಬರುವುದಾಗಿ (Vijay Sethupathi) ಘೋಷಣೆ ಮಾಡಿದ್ದರು. ಬಹುತೇಕ ಹಿಂದಿನ ಚಿತ್ರದಲ್ಲಿ ಕೆಲಸ ಮಾಡಿದವರು ಇದರಲ್ಲೂ ಮುಂದುವರೆದಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಸಿನಿಮಾದ ಫಸ್ಟ್ ಲುಕ್‌ನ ಎರಡು ಪೋಸ್ಟರ್‌ನ್ನು ಅನಾವರಣಗೊಳಿಸಲಿದ್ದಾರೆ. ಎರಡು ಲುಕ್‌ಗಳಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ.

ತಾರಾಗಣದಲ್ಲಿ ವಿಜಯ್ ಸೇತುಪತಿ, ಸೂರಿ, ಮಂಜುವಾರಿಯರ್, ಅನುರಾಗ್ ಕಶ್ಯಪ್, ಕಿಶೋರ್, ಗೌತಂ ವಾಸುದೇವ್‌ಮೆನನ್, ರಾಜೀವ್ ಮೆನನ್, ಚೇತನ್ ಮುಂತಾದವರು ನಟಿಸಿದ್ದಾರೆ. ಸಂಗೀತ ಇಳಯರಾಜ, ಛಾಯಾಗ್ರಹಣ ಆರ್.ವೆಲ್ವರಾಜ್, ಕಲೆ ಜಾಕಿ, ಸಂಕಲನ ರಮರ್, ವಸ್ರ್ತಾಂಲಕಾರ ಉತ್ತರ ಮೆನನ್, ಸಾಹಸ ಪೀಟರ್ ಹೈನ್-ಸ್ವಂಟ್ ಶಿವ, ವಿಎಫ್‌ಎಕ್ಸ್ ಆರ್.ಹರಿಹರಸುಧನ್ ಅವರದಾಗಿದೆ.

ಆರ್‌ಎಸ್ ಇನ್‌ಫರ್‌ಟೈನ್‌ಮೆಂಟ್ ಪ್ರೈ. ಲಿಮಿಟೆಡ್ ಬ್ಯಾನರ್‌ದಲ್ಲಿ ಸಿದ್ದಗೊಳ್ಳುತ್ತಿರುವ ಸಿನಿಮಾದ ಫಸ್ಟ್ ಲುಕ್ ಯಾವ ರೀತಿ ಇರಬಹುದೆಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಮಿಕ್ಕಂತೆ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ತಂಡವು ಹೇಳಿಕೊಂಡಿದೆ.

ಇದನ್ನೂ ಓದಿ: Actor  Karthi: ನಟ ಕಾರ್ತಿ ಸಿನಿಮಾ ಸೆಟ್‌ನಲ್ಲಿ ಅವಘಡ; 20 ಅಡಿಯಿಂದ ಬಿದ್ದು ಸ್ಟಂಟ್‌ ಮ್ಯಾನ್‌ ಸಾವು

ಈ ಚಿತ್ರಕ್ಕೆ ಎಲ್‌ರೆಡ್‌ ಕುಮಾರ್‌ ಬಂಡವಾಳ ಹೂಡಿದ್ದಾರೆ. ಜಿಯಾ ಮೆನನ್‌ ಬರೆದ ʻತುನೈವನ್‌ʼ ಸಣ್ಣ ಕಥೆ ಆಧರಿಸಿ ಸಿನಿಮಾ ಕಟ್ಟಿಕೊಡಲಾಗಿದೆ.

ದೊಡ್ಡ ಬಜೆಟ್‌ ಸಿನಿಮಾ ʻವಿಡುತಲೈʼ!
ಎರಡು ಭಾಗಗಳಲ್ಲಿ ಬಿಡುಗಡೆಯಾಗುವ ಈ ಚಿತ್ರ ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗಿದೆ. ತಮಿಳಿನ ದುಬಾರಿ ಚಿತ್ರಗಳ ಪೈಕಿಗೆ ‘ವಿಡುತಲೈ’ ಸೇರ್ಪಡೆಯಾಗಲಿದೆ. ಈ ಚಿತ್ರವನ್ನು ಕೋಟ್ಯಂತರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗಿದ್ದು, ಚಿತ್ರಕ್ಕಾಗಿ ವಿಶೇಷವಾಗಿ 10 ಕೋಟಿ ರೂ. ವೆಚ್ಚದ ರೈಲು ಮತ್ತು ರೈಲ್ವೇ ಸೇತುವೆಯ ಸೆಟ್​ ನಿರ್ಮಾಣ ಮಾಡಲಾಗಿತ್ತು. ನಿಜವಾದ ರೈಲ್ವೆ ಬೋಗಿಗಳು ಮತ್ತು ಸೇತುವೆಯನ್ನು ನಿರ್ಮಿಸುವುದಕ್ಕೆ ಬಳಸಲಾಗುವ ಪರಿಕರಗಳನ್ನೇ ಈ ಸೆಟ್​ ನಿರ್ಮಾಣಕ್ಕೂ ಬಳಸಲಾಗಿದೆ ಎನ್ನಲಾಗಿತ್ತು.

ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಇಳಯರಾಜ ಅವರು ಈ ಚಿತ್ರದ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ವೇಲ್​ರಾಜ್​ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ರೆಡ್​ ಜೈಂಟ್​ ಮೂವೀಸ್​ ವಹಿಸಿಕೊಂಡಿದೆ.

Continue Reading

ಕಾಲಿವುಡ್

Actor  Karthi: ನಟ ಕಾರ್ತಿ ಸಿನಿಮಾ ಸೆಟ್‌ನಲ್ಲಿ ಅವಘಡ; 20 ಅಡಿಯಿಂದ ಬಿದ್ದು ಸ್ಟಂಟ್‌ ಮ್ಯಾನ್‌ ಸಾವು

Actor  Karthi: ಚೆನ್ನೈನ ಸಾಲಿಗ್ರಾಮದಲ್ಲಿರುವ ಎಲ್ ವಿ ಪ್ರಸಾದ್ ಸ್ಟುಡಿಯೋದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅಪಘಾತದ ಬಗ್ಗೆ ವಿರುಗಂಬಕ್ಕಂ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ. ಎಲುಮಲೈ ಅವರಿಗೆ 54 ವರ್ಷ ವಯಸ್ಸಾಗಿತ್ತು.

VISTARANEWS.COM


on

Actor  Karthi Stuntman falls 20 ft to his death
Koo

ಬೆಂಗಳೂರು: ಪಿಎಸ್ ಮಿತ್ರನ್ ಅವರ ಕಾರ್ತಿ ಅಭಿನಯದ ಸರ್ದಾರ್ 2ರ ( Sardar 2) ಸೆಟ್‌ನಲ್ಲಿ ಸ್ಟಂಟ್‌ಮ್ಯಾನ್ ಮೃತಪಟ್ಟಿದ್ದಾರೆ. ಚಿತ್ರೀಕರಣದಲ್ಲಿ ಅವಘಡ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಎಲುಮಲೈ (Elumalai ) ಎಂಬ ಸ್ಟಂಟ್‌ಮ್ಯಾನ್ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ಮಾಡುವಾಗ ರೋಸ್ಟ್ರಮ್‌ನಿಂದ 20 ಅಡಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಚೆನ್ನೈನ ಸಾಲಿಗ್ರಾಮದಲ್ಲಿರುವ ಎಲ್ ವಿ ಪ್ರಸಾದ್ ಸ್ಟುಡಿಯೋದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅಪಘಾತದ ಬಗ್ಗೆ ವಿರುಗಂಬಕ್ಕಂ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ. ಎಲುಮಲೈ ಅವರಿಗೆ 54 ವರ್ಷ ವಯಸ್ಸಾಗಿತ್ತು. ಅವರು ಬಿದ್ದ ನಂತರ ಗಂಭೀರ ಗಾಯಗೊಂಡರು. ರಾತ್ರಿ 11:30ಕ್ಕೆ ರಕ್ತಸ್ರಾವದಿಂದ ಅವರು ನಿಧನರಾದರು. ಇದೀಗ ಸರ್ದಾರ್ 2 ಚಿತ್ರೀಕರಣ ಸ್ಥಗಿತಗೊಂಡಿದೆ.

ಸರ್ದಾರ್ 2ರ ಪ್ರೊಡಕ್ಷನ್ ಹೌಸ್ ಪ್ರಿನ್ಸ್ ಪಿಕ್ಚರ್ಸ್ ಈ ಸುದ್ದಿಯನ್ನು ಖಚಿತಪಡಿಸಿದೆ, “ನಮ್ಮ ಸರ್ದಾರ್ 2 ಚಿತ್ರದ ಸೆಟ್‌ಗಳಲ್ಲಿ ಸ್ಟಂಟ್ ರಿಗ್ ಮ್ಯಾನ್ ಆಗಿ ಕೆಲಸ ಮಾಡಿದ ಸ್ಟಂಟ್ ಯೂನಿಯನ್ ಸದಸ್ಯ ಎಲುಮಲೈ ಅವರ ಸಾವಿನ ಬಗ್ಗೆ ತಿಳಿಸಲು ವಿಷಾದಿಸುತ್ತೇವೆ. ಜುಲೈ 16 ರ ಮಂಗಳವಾರ ಸಂಜೆ, ಸ್ಟಂಟ್ ಸೀಕ್ವೆನ್ಸ್ ಚಿತ್ರೀಕರಣದ ನಂತರ, ಎಲುಮಲೈ ಅವರು 20 ಅಡಿ ಎತ್ತರದ ರೋಸ್ಟ್ರಮ್ನಿಂದ ಆಕಸ್ಮಿಕವಾಗಿ ಬಿದ್ದು ಗಾಯಗೊಂಡರು. ನರಬಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕೂಡಲೇ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ರಾತ್ರಿ 11.30 ರ ಸುಮಾರಿಗೆ ನಿಧನರಾದರು. ನಮ್ಮ ಇಡೀ ತಂಡವು ಎಲುಮಲೈ ಅವರ ಕುಟುಂಬಕ್ಕೆ ಸಂತಾಪವನ್ನು ಸೂಚಿಸುತ್ತದೆ ಎಂದುʼʼಬರೆದುಕೊಂಡಿದೆ. ಕಾರ್ತಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: Kannada New Movie: ರಾಜವರ್ಧನ್ ‘ಹಿರಣ್ಯ’ ಸಿನಿಮಾದಲ್ಲಿ ಮೈ ಚಳಿ ಬಿಟ್ಟು ಡ್ಯಾನ್ಸ್‌ ಮಾಡಿದ ದಿವ್ಯಾ ಸುರೇಶ್!

ಜುಲೈ 12 ರಂದು ಮಿತ್ರನ್ ಮತ್ತು ಕಾರ್ತಿ ಈ ಸಿನಿಮಾ ಮುಹೂರ್ತ ನೆರವೇರಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ತಿ ಅವರ ತಂದೆ ನಟ ಶಿವಕುಮಾರ್ ಕೂಡ ಭಾಗವಹಿಸಿದ್ದರು. ಚಿತ್ರದ ಶೂಟಿಂಗ್ ಜುಲೈ 15 ರಂದು ಚೆನ್ನೈನಲ್ಲಿ ಪ್ರಾರಂಭವಾಯಿತು. ಈ ಚಿತ್ರವು ಮಿತ್ರನ್ ಮತ್ತು ಕಾರ್ತಿ ಅವರ 2022 ರ ಚಲನಚಿತ್ರ ಸರ್ದಾರ್‌ನ ಮುಂದುವರಿದ ಭಾಗವಾಗಿದೆ. ನಟನನ್ನು ದ್ವಿಪಾತ್ರಗಳಲ್ಲಿ ಕಂಡ ಸ್ಪೈ ಥ್ರಿಲ್ಲರ್ ಆಗಿದೆ.

Continue Reading

ಟಾಲಿವುಡ್

Sudha Murty: ಅಂಬಾನಿ ಮದುವೆಗೆ ಮಂಗಳ ಸೂತ್ರ ಮಾತ್ರವೇ ಧರಿಸಿ ಬಂದ ಸುಧಾ ಮೂರ್ತಿ; ಶೋ-ಆಫ್ ಇಲ್ಲ ಅಂದ್ರು ನೆಟ್ಟಿಗರು!

Sudha Murty: ಸುಧಾ ಮೂರ್ತಿ ಅವರು ವಿವಾಹ ಸಮಾರಂಭದಲ್ಲಿ ನೇರಳೆ ಬಣ್ಣದ ಸೀರೆಯನ್ನು ಧರಿಸಿ, ಕೇವಲ ಮಂಗಳಸೂತ್ರ ಮತ್ತು ಸ್ಮಾರ್ಟ್ ವಾಚ್‌ನೊಂದಿಗೆ ಸಿಂಪಲ್‌ ಆಗಿ ಬಂದಿದ್ದರು. ಅವರ ಸರಳತೆಗೆ ಹೆಚ್ಚು ಪ್ರಶಂಸೆಯನ್ನು ಗಳಿಸಿದರು. ನಮ್ರತಾ ಶಿರೋಡ್ಕರ್ ಅವರು ಸುಧಾ ಮೂರ್ತಿ ಅವರೊಂದಿಗಿನ ಚಿತ್ರವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Sudha Murty praised for simplicity at Ambani wedding
Koo

ಮುಂಬೈ: ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ಅದ್ದೂರಿ ವಿವಾಹದಲ್ಲಿ ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಪಾಲ್ಗೊಂಡಿದ್ದರು.   (Sudha Murty) ಅವರ ಜತೆ ಮಹೇಶ್‌ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಸುಧಾ ಮೂರ್ತಿ ಜೊತೆಗಿನ ಫೋಟೊ ಶೇರ್ ಮಾಡಿ, ಈ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ನಮ್ರತಾ ಶಿರೋಡ್ಕರ್ ಬರೆದುಕೊಂಡಿದ್ದಾರೆ. ಜತೆಗೆ ಸುಧಾ ಮೂರ್ತಿ ಅವರ ಸರಳತೆಗೆ ನೆಟ್ಟಿಗರು ಹಾಡಿ ಹೊಗಳಿದ್ದಾರೆ. ಮಾತ್ರವಲ್ಲ ಕೊರಳಲ್ಲಿ ಮಂಗಳ ಸೂತ್ರ ಮಾತ್ರ ಧರಿಸಿ ಸಿಂಪಲ್‌ ಆಗಿ ಕಂಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಸುಧಾ ಮೂರ್ತಿ ಅವರು ವಿವಾಹ ಸಮಾರಂಭದಲ್ಲಿ ನೇರಳೆ ಬಣ್ಣದ ಸೀರೆಯನ್ನು ಧರಿಸಿ, ಕೇವಲ ಮಂಗಳಸೂತ್ರ ಮತ್ತು ಸ್ಮಾರ್ಟ್ ವಾಚ್‌ನೊಂದಿಗೆ ಸಿಂಪಲ್‌ ಆಗಿ ಬಂದಿದ್ದರು. ಅವರ ಸರಳತೆಗೆ ಹೆಚ್ಚು ಪ್ರಶಂಸೆಯನ್ನು ಗಳಿಸಿದರು. ನಮ್ರತಾ ಶಿರೋಡ್ಕರ್ ಅವರು ಸುಧಾ ಮೂರ್ತಿ ಅವರೊಂದಿಗಿನ ಚಿತ್ರವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ಬುದ್ಧಿವಂತ ಮಹಿಳೆಯ ಬಗ್ಗೆ ತುಂಬಾ ಕೇಳಿದ್ದೆ, ಅವರನ್ನು ಭೇಟಿಯಾದ ನಂತರ ನನ್ನ ನಂಬಿಕೆಯು ನಿಜವಾಯಿತು. ರೋಮಾಂಚಕ, ಜೀವನದಲ್ಲಿ ನೀಡಲು ತುಂಬಾ ಪ್ರೀತಿಯಿದೆ ಎನಿಸಿತು ಎಂದು ಮಹೇಶ್ ಬಾಬು ಪತ್ನಿ ನಮ್ರತಾ ಬಣ್ಣಿಸಿದ್ದಾರೆ.

ಇದನ್ನೂ ಓದಿ: Sudha Murty: ಸುಧಾ ಮೂರ್ತಿ 30 ವರ್ಷಗಳಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ; ಇದಕ್ಕೆ ಕಾರಣ ಕಾಶಿಯಂತೆ!

ಇನ್ನು ಈ ಫೋಟೊ ವೈರಲ್‌ ಆಗುತ್ತಿದ್ದಂತೆ ಸುಧಾ ಮೂರ್ತಿ ಅವರನ್ನು ನೆಟ್ಟಿಗರು ಹೊಗಳಿದ್ದಾರೆ. ʻʻಬಿಲಿಯನೇರ್ ಮಹಿಳೆ ಕೇವಲ ಮಂಗಳಸೂತ್ರದೊಂದಿಗೆ ಹಾಜರಾಗುವುದನ್ನು ನೋಡಲು ಖುಷಿ ಆಗುತ್ತೆʼʼಎಂದು ಒಬ್ಬರು ಕಮೆಂಟ್‌ ಮಾಡಿದರೆ, ʻಸರಳ ಮತ್ತು ವಿನಮ್ರʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ʻಸ್ಫೂರ್ತಿದಾಯಕ ಮಹಿಳೆ. ಶೋ-ಆಫ್ ಇಲ್ಲʼʼಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ತಮ್ಮ ಸರಳತೆಯಿಂದಲೇ ಸುದ್ದಿಯಲ್ಲಿರುವ ರಾಜ್ಯಸಭೆಯ ನೂತನ (Rajya Sabha) ಸದಸ್ಯೆ (MP), ಲೇಖಕಿ, ಇನ್ಫೋಸಿಸ್‌ನ ಸಂಸ್ಥಾಪಕ (Infosys chairman) ನಾರಾಯಣ ಮೂರ್ತಿ (Narayana Murthy) ಅವರ ಪತ್ನಿ ಸುಧಾ ಮೂರ್ತಿ (Sudha Murty) ಅವರು ಕಳೆದ 30 ವರ್ಷಗಳಿಂದ ಒಂದೇ ಒಂದು ಸೀರೆಯನ್ನೂ ಖರೀದಿ ಮಾಡಿಲ್ಲವಂತೆ! ಇತ್ತೀಚಿಗೆ ಅವರು ನೀಡಿರುವ ಸಂದರ್ಶನವೊಂದರಲ್ಲಿ ಈ ವಿಚಾರ ಬಹಿರಂಗಪಡಿಸಿದ್ದರು.

ಇದಕ್ಕೆ ಮುಖ್ಯ ಕಾರಣ ಕಾಶಿಗೆ ಪ್ರವಾಸ ಮಾಡಿರುವುದು ಎಂಬುದಾಗಿ ಅವರು ತಿಳಿಸಿದ್ದರು. ಅಪಾರ ಸಂಪತ್ತು ಇದ್ದರೂ ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ತಮ್ಮ ಸರಳವಾದ ಉಡುಗೆ ತೊಡುಗೆಗಳಿಂದ, ಸಾಮಾನ್ಯ ಜೀವನ ಶೈಲಿಯಿಂದ ಎಲ್ಲರಿಗೂ ಸ್ಫೂರ್ತಿಯಾಗಿದ್ದರು ದಿ ವಾಯ್ಸ್ ಆಫ್ ಫ್ಯಾಶನ್‌ಗೆ ನೀಡಿದ ಸಂದರ್ಶನದಲ್ಲಿ ಸುಧಾ ಮೂರ್ತಿ ಅವರು ಈ ವಿಚಾರವನ್ನು ಹೀಗೆ ಹಂಚಿಕೊಂಡಿದ್ದರು

Continue Reading
Advertisement
International Cricket Council
ಕ್ರಿಕೆಟ್22 seconds ago

International Cricket Council : ಟಿ20 ವಿಶ್ವಕಪ್ ಆಯೋಜನೆಯಲ್ಲಿ ಐಸಿಸಿಗೆ 167 ಕೋಟಿ ರೂಪಾಯಿ ನಷ್ಟ

Team India Srilanka Tour
ಪ್ರಮುಖ ಸುದ್ದಿ10 mins ago

Team India Srilanka Tour : ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಸೂರ್ಯಕುಮಾರ್​ಗೆ ಟಿ20 ನಾಯಕತ್ವ

Viral Video
Latest38 mins ago

Viral Video: ಬಸ್‌ ಡ್ರೈವರ್‌ನ ರೀಲ್ಸ್‌ ಕ್ರೇಜ್‌ಗೆ 2 ಎತ್ತುಗಳು ಬಲಿ; ರೈತನ ಸ್ಥಿತಿ ಗಂಭೀರ

Train Accident
ದೇಶ38 mins ago

Train Derail: ಹಳಿ ತಪ್ಪಿದ ರೈಲು; ಅಪಘಾತದ ಹಿಂದೆ ಇದ್ಯಾ ವಿಧ್ವಂಸಕ ಕೃತ್ಯ?

Crime News
ಪ್ರಮುಖ ಸುದ್ದಿ48 mins ago

Bangalore News : ಬೆಂಗಳೂರಲ್ಲಿ ಆಘಾತಕಾರಿ ಘಟನೆ; ಗಾಂಜಾ ನಶೆಯಲ್ಲಿ ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಬಾಲಕಿಯರನ್ನು ಬೆದರಿಸಿದ ಪುಂಡರು

Lady Police Officer
Latest59 mins ago

Lady Police Officer: ಗೂಂಡಾಗಿರಿ ಮಾಡಿದರೆ ಹುಷಾರ್‌! ಪುಂಡರಿಗೆ ಲೇಡಿ ಪೊಲೀಸ್ ವಾರ್ನಿಂಗ್‌; ವಿಡಿಯೊ ವೈರಲ್

kiccha sudeep‌ Fans
ಸಿನಿಮಾ1 hour ago

Kiccha Sudeep: ಸೆಲ್ಫಿಗಾಗಿ 2 ಗಂಟೆ ಕಾದ ಅಭಿಮಾನಿಗೆ ಕಿಚ್ಚ ಸುದೀಪ್ ಅವಮಾನ! ವಿಡಿಯೊ ನೋಡಿ

Ratna Bhandar
ದೇಶ2 hours ago

Ratna Bhandar: ಒಂದೇ ವಾರದಲ್ಲಿ ಎರಡನೇ ಬಾರಿ ತೆರೆದ ಪುರಿ ಜಗನ್ನಾಥನ ʼರತ್ನ ಭಂಡಾರʼ

GT World Mall
ಪ್ರಮುಖ ಸುದ್ದಿ2 hours ago

GT World Mall : ಜಿಟಿ ಮಾಲ್​ ಏಳು ದಿನಗಳ ಕಾಲ ಬಂದ್​, ಮಾಲೀಕರಿಂದಲೇ ಸ್ವಯಂಪ್ರೇರಿತ ಕ್ರಮ

Viral Video
Latest2 hours ago

Viral Video: ಗರ್ಭಗುಡಿಗೆ ನುಗ್ಗಿ ದೇವರ ಕಿರೀಟಕ್ಕೇ ಕನ್ನ ಹಾಕಿದ ಕಳ್ಳ! ಪರಾರಿಯಾಗುವಾಗ ಮಾಡಿದ್ದೇನು? ವಿಡಿಯೊ ನೋಡಿ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ5 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಟ್ರೆಂಡಿಂಗ್‌