ಬೆಂಗಳೂರು: ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ (Shiva Rajkumar) ಇದೇ ಮೊದಲ ಬಾರಿಗೆ ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ವಿಶೇಷ ಅಂದರೆ ಕರಟಕ ದಮನಕ (karataka damanaka) ಸಿನಿಮಾಗೆ ಯೋಗರಾಜ್ ಭಟ್ ಅವರ ನಿರ್ದೇಶನವಿದೆ. ವರಲಕ್ಷ್ಮಿ ಹಬ್ಬದ ಶುಭದನದಂದು ಕರಟಕ ದಮನಕ ಮೋಷನ್ ಪೋಸ್ಟರ್ ಅನಾವರಣಗೊಂಡಿದೆ. ಕನ್ನಡ ಚಿತ್ರರಂಗದ ಪ್ರತಿಷ್ಠಿತ ಸಂಸ್ಥೆ ರಾಕ್‌ಲೈನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.
‘ಕರಟಕ ದಮನಕ’ ಎಂದರೇನು?
ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಕರಟಕ ದಮನಕ ಎಂದರೆ ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ ಇನ್ನೊಂದರ ಹೆಸರು ದಮನಕ. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಈ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ. ಎಚ್ಚರಿಕೆ’ ಎಂದು ಫೋಸ್ಟ್ ಮಾಡಿದ್ದಾರೆ. ಹಲವು ದಿನಗಳಿಂದ ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ರಾಕ್ ಲೈನ್ ವೆಂಕಟೇಶ್ ಕೂಡ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅವರು ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: Kannada New Film | K ಕರಟಕ D ದಮನಕ; ಇದು ಶಿವಣ್ಣ-ಪ್ರಭುದೇವ-ಭಟ್ಟರ ಹೊಸ ಸಿನಿಮಾ ಜಾತಕ!
ಸಿನಿಮಾ ಕುರಿತು ಮಾಧ್ಯಮದ ಜತೆ ಈ ಹಿಂದೆ ಯೋಗರಾಜ್ ಭಟ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು ʻʻಕರಟಕ ದಮನಕ ಲಾಕ್ ಡೌನ್‌ನಲ್ಲಿ ಹುಟ್ಟಿದ ಕಥೆ. ಈ ಚಿತ್ರಕ್ಕೂ ಮೊದಲು ಸರಸ್ವತಿ ಎಂಬ ಟೈಟಲ್‌ನಲ್ಲಿ ಅಪ್ರೋಚ್ ಮಾಡಿದ್ದೆ. ಶಿವಣ್ಣ ಕೂಡ ಕಥೆ ಒಪ್ಕೊಂಡಿದ್ದರು. ನಮ್ಮ ಇಡೀ ತಂಡ ಎನರ್ಜಿ ಕಲಿತಿದ್ದೆ ಶಿವಣ್ಣ ಅವರಿಂದ, ಪ್ರಭು ದೇವ್ ಹಾಗೂ ಶಿವಣ್ಣ ಸಿನಿಮಾದಲ್ಲಿ ಇಬ್ಬರು ದೋಸ್ತ್ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ 7 ಹಾಡುಗಳಿದ್ದು, ಹರಿಕೃಷ್ಣ ಮುತ್ತು ಪೋಣಿಸಿದಂತೆ ಹಾಡುಗಳ ಕೊಟ್ಟಿದ್ದಾರೆʼʼಎಂದು ಹೇಳಿಕೊಂಡಿದ್ದರು.
ವಿ ಹರಿಕೃಷ್ಣ ಸಂಗೀತ ಸಂಯೋಜನೆಯ 7 ಹಾಡುಗಳು ಚಿತ್ರದಲ್ಲಿದೆ. ಸಂತೋಷ್ ರೈ ಪಾತಾಜೆ ಈ ಚಿತ್ರದ ಛಾಯಾಗ್ರಾಹಕರು. ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಾಯಕಿಯರು. ಮುಖ್ಯ ಮಂತ್ರಿ ಚಂದ್ರು ಹಾಗೂ ತನಿಕೆಲ್ಲ ಭರಣಿ ಅವರಂತಹ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.