Kannada New Film | K ಕರಟಕ D ದಮನಕ; ಇದು ಶಿವಣ್ಣ-ಪ್ರಭುದೇವ-ಭಟ್ಟರ ಹೊಸ ಸಿನಿಮಾ ಜಾತಕ! - Vistara News

ಸಿನಿಮಾ

Kannada New Film | K ಕರಟಕ D ದಮನಕ; ಇದು ಶಿವಣ್ಣ-ಪ್ರಭುದೇವ-ಭಟ್ಟರ ಹೊಸ ಸಿನಿಮಾ ಜಾತಕ!

ಯೋಗರಾಜ್‌ ಭಟ್‌ ನಿರ್ದೇಶನದ (Kannada New Film) K ಕರಟಕ D ದಮನಕ ವಿಭಿನ್ನ ಶೀರ್ಷಿಕೆ ಅಡಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟರ್‌ ವೈರಲ್‌ ಆಗಿದೆ.

VISTARANEWS.COM


on

Kannada New Film
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕನ್ನಡದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ಹಳೇ ಕನ್ನಡವನ್ನೂ ಹೊಸತಾಗಿ ಪರಿಚಯಿಸುತ್ತಾ ಬಂದಿರುವ ಕ್ರಿಯೇಟಿವ್‌ ನಿರ್ದೇಶಕ ಯೋಗರಾಜ್‌ ಭಟ್‌ ಅವರ ನೋಟ ಈಗ “ಕೇಡಿ” ಮೇಲೆ ಬಿದ್ದಿದೆ! ಅವರ ಹೊಸ ಸಿನಿಮಾವೊಂದು (Kannada New Film) ಅನೌನ್ಸ್‌ ಆಗಿದ್ದು, ಅದಕ್ಕೆ ʻK ಕರಟಕ D ದಮನಕʼ ಎಂದು ಹೆಸರು ಇಟ್ಟಿರುವುದಾಗಿ ಘೋಷಿಸಿದ್ದಾರೆ.

ಟಾಲಿವುಡ್‌ ನಟ, ಇಂಡಿಯನ್ ಮೈಕೆಲ್ ಜಾಕ್ಸನ್ ಖ್ಯಾತಿಯ ಪ್ರಭುದೇವ ಅವರು ಇದೇ ಮೊದಲ ಬಾರಿಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರ ಜತೆ ಸಿನಿಮಾ ಮಾಡುತ್ತಿದ್ದಾರೆ.

ಯಾವುದೇ ಒಂದು ಸಿನಿಮಾ ಇರಲಿ, ಅದಕ್ಕೆ ಪ್ರಮೋಷನ್‌ ಬಹಳವೇ ಮುಖ್ಯ. ಹಾಗಾಗಿ ಚಿತ್ರದ ಮೋಷನ್‌ ಪೋಸ್ಟರ್‌ ಅನ್ನು ಸಾಧ್ಯವಾದಷ್ಟು ವಿಭಿನ್ನವಾಗಿ ಡಿಸೈನ್‌ ಮಾಡಿಸಿ, ಕುತೂಹಲವನ್ನು ಹುಟ್ಟುಹಾಕುವ ಪ್ರಯತ್ನ ಮಾಡಲಾಗುತ್ತದೆ. ಆದರೆ, ಈಗ ಚಿತ್ರೀಕರಣ ಪ್ರಾರಂಭವಾಗಿರುವ ʻK ಕರಟಕ D ದಮನಕʼದ ಮೋಷನ್‌ ಪೋಸ್ಟರ್‌ನಲ್ಲಿ ಯಾವ ಗ್ರಾಫಿಕ್‌ ಡಿಸೈನ್‌ಗಳೂ ಇಲ್ಲ. ಬದಲಾಗಿ ಒಂದು ಬಿಳಿ ಬೋರ್ಡ್ ಮೇಲೆ ಸ್ವತಃ ಯೋಗರಾಜ್‌ ಭಟ್‌ ಅವರು ಗೀಚಿದ ಕೆಲವು ಸಾಲುಗಳು ಇವೆ.

ಶ್ರೀ ಶಿವಣ್ಣ+ ಶ್ರೀ ಪ್ರಭುದೇವ ಎಂದು ಮೇಲ್ಭಾಗದಲ್ಲಿ ಬರೆದು ಬಳಿಕ ಒಂದು ವೃತ್ತವನ್ನು ಬರೆದಿದ್ದಾರೆ. ಆ ವೃತ್ತದೊಳಗೆ ʻK ಕರಟಕ D ದಮನಕʼ ಎಂದು ಬರೆದುಕೊಂಡಿದ್ದಾರೆ. ಕೆಳಗೆ ಶ್ರೀ ರಾಕ್‌ಲೈನ್‌ ವೆಂಕಟೇಶ್‌+ಯೋಗರಾಜ್‌ ಭಟ್‌ ಎಂದು ಬರೆದುಕೊಳ್ಳುವ ಮೂಲಕ ಚಿತ್ರದ ಟೈಟಲ್‌, ನಾಯಕರು ಹಾಗೂ ನಿರ್ಮಾಪಕ, ನಿರ್ದೇಶಕರು ಯಾರು ಎಂಬ ಮಾಹಿತಿ ಕೊಟ್ಟಿದ್ದಾರೆ. ಈ ಟೈಟಲ್‌ ಕಾರ್ಡ್‌ ಪೋಸ್ಟ್‌ ಅನ್ನು ಅವರು ತಮ್ಮ ಇನ್ಸ್ಟಾದಲ್ಲಿ ಹಾಕಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

ಬಿರುಸಿನ ಚಿತ್ರೀಕರಣ

ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದ್ದು, ಸೂಪರ್ ಸ್ಟಾರ್‌ಗಳ ಎಂಟ್ರಿಗೆ ಫ್ಯಾನ್ಸ್ ಕುತೂಹಲ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಯೋಗರಾಜ್ ಭಟ್ ಪೋಸ್ಟ್ ಒಂದನ್ನು ಹಾಕಿ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ. ಅಲ್ಲದೆ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸಹ ಇಲ್ಲಿ ಬಣ್ಣಹಚ್ಚಿದ್ದು, ಪೊಲೀಸ್‌ ಅಧಿಕಾರಿ ಪಾತ್ರವನ್ನು ನಿರ್ವಹಣೆ ಮಾಡಿದ್ದಾರೆ. ಸಹಜವಾಗಿಯೇ ಭಟ್ಟರ ಹೊಸ ಪ್ರಯತ್ನವು ಒಂದು ಕುತೂಹಲವನ್ನು ಹುಟ್ಟುಹಾಕಿದೆ.

ಶಿವಣ್ಣ ಹಾಗೂ ಪ್ರಭುದೇವ ಜತೆಗೆ ತನಿಕೆಲ್ಲ ಭರಣಿ, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಮುಂತಾದವರು ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಕನ್ನಡ ಚಿತ್ರರಂಗದ ಪ್ರತಿಷ್ಠಿತ ಸಂಸ್ಥೆ ರಾಕ್‌ಲೈನ್ ಎಂಟರ್​ಟೈನ್​ಮೆಂಟ್​ ಲಾಂಛನದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ | Sudeep birthday | ಒಟಿಟಿ ಅಖಾಡದಲ್ಲೂ ಅಬ್ಬರಿಸಲು ‘ವಿಕ್ರಾಂತ್‌ ರೋಣ’ ಸಿನಿಮಾ ಸಿದ್ಧ !

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Actor Darshan: ದರ್ಶನ್ ದೈವ ಭಕ್ತ, ಜೈಲಿಗೆ ಸೇರಿದ್ದಾಗಿನಿಂದ ವಿಜಯಲಕ್ಷ್ಮಿ ಅತ್ತಿಗೆ ಹೋರಾಟ ಜಾಸ್ತಿ ಆಗಿದೆ ಎಂದ ಲತಾ ಜೈಪ್ರಕಾಶ್!

Actor Darshan: ವಿಜಯಲಕ್ಷ್ಮಿ ಆಪ್ತೆ ಹಾಗೂ ನಿರ್ಮಾಪಕಿ ಲತಾ ಜೈಪ್ರಕಾಶ್ ಕೂಡ ದರ್ಶನ್ ಅವರ ಬಗ್ಗೆ ಮಾತನಾಡಿದ್ದು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಜಯಲಕ್ಷ್ಮಿ ಅವರು ಪ್ರತೀ ಬಾರಿ ಆಷಾಢದಲ್ಲಿ ದೇವಸ್ಥಾನಕ್ಕೆ ಬರುತ್ತಿದ್ದವರು ಈ ಬಾರಿ ಬಂದಿಲ್ಲ. ದೇವಸ್ಥಾನದಲ್ಲಿ ಪ್ರತೀ ಆಷಾಢದಲ್ಲೂ ಅತ್ತಿಗೆ ನನಗೆ ಸಿಗುತ್ತಿದ್ದರು.ನನಗೆ ಸುಮಾರು ಹತ್ತು ವರ್ಷದಿಂದಲೂ ವಿಜಯಲಕ್ಷ್ಮಿ ಅತ್ತಿಗೆ ಪರಿಚಯವಿದೆ. ದರ್ಶನ್ ಅಣ್ಣ ‘ಅಂಬರೀಶ್’ ಸಿನಿಮಾ ಮೂಲಕ ಪರಿಚಯವಾಗಿ ನನ್ನ ತಮ್ಮನಿಗೂ ಕ್ಲೋಸ್ ಆಗಿದ್ದರು. ಅತ್ತಿಗೆನೇ ಅಣ್ಣನಿಗೆ ಬಲ ಆಗಿದ್ದಾರೆʼʼಎಂದರು.

VISTARANEWS.COM


on

Actor Darshan Lata Jaiprakash says that since Darshan is a devotee of God,
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ (Actor Darshan) ಜೈಲು ಸೇರಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಅವರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.  ವಿಜಯಲಕ್ಷ್ಮಿ ಆಪ್ತೆ ಹಾಗೂ ನಿರ್ಮಾಪಕಿ ಲತಾ ಜೈಪ್ರಕಾಶ್ ಕೂಡ ದರ್ಶನ್ ಅವರ ಬಗ್ಗೆ ಮಾತನಾಡಿದ್ದು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ʻʻನನಗೆ ದರ್ಶನ್‌ ಅಣ್ಣ ಅಷ್ಟು ಆತ್ಮೀಯರು ಅಲ್ಲ. ಆದರೆ ನನ್ನ ತಮ್ಮನಿಗೆ ಕ್ಲೋಸ್‌. ಮತ್ತೆ ಮನೆ ಮಂದಿ ತರವೇ ಇದ್ದಾರೆ. ನಮ್ಮ ಮನೆಯಲ್ಲಿ ಕಲಾವಿದರಿಗೆ ಪ್ರೋತಾಹ ಕೂಡ ಕೊಡುತ್ತೇವೆ. ಅದು ಅಲ್ಲದೇ ಅವರು ದೇವರ ಭಕ್ತರಾಗಿರುವುದರಿಂದ ಈ ರೀತಿ ಘಟನೆ ಎದುರಿಸುತ್ತಿದ್ದಾರೆ ಅಂದ್ರೆ ಆಶ್ಚರ್ಯವಾಗುತ್ತದೆ. ಹೆಣ್ಣು ಮಕ್ಕಳನ್ನು ಗೌರವಿಸುವ ರೀತಿ, ಮಾತನಾಡಿಸುವ ರೀತಿ ದರ್ಶನ್ ಮುಗ್ಧ ಮನಸ್ಸಿಗೆ ಮಾತ್ರ ಇರುವುದು. ಜೈಲಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊರ ಬರುವಾಗ ಉತ್ತಮ ಸ್ಟಾರ್ ಆಗಿ ಹೊರ ಬರಲು ಅವರ ಪತ್ನಿ ವಿಜಯಲಕ್ಷ್ಮಿನೇ ಕಾರಣ. ತಪ್ಪು ಮಾಡುವುದು ಸಹಜ. ಆದರೆ ಜೀವ ಮಾತ್ರ ವಾಪಸ್ಸು ಬರಲ್ಲ. ಆದರೆ ಇದೀಗ ದರ್ಶನ್‌ ಅವರನ್ನು ಕ್ಷಮಿಸಬೇಕು ಅಂತಲ್ಲ. ಅವರಿಗೆ ಅದು ಪ್ರಾಯಶ್ಚಿತ ಆಗಬೇಕು. ಕೋರ್ಟ್‌ನಿಂದ ಏನು ತೀರ್ಪು ಬರುತ್ತೋ ಆರೋಪ ಮುಕ್ತ ಬರಲಿ ಎಂದು ಪ್ರಾರ್ಥನಿಸುತ್ತೇನೆ. ದರ್ಶನ್‌ ಬಂಡಿಮಹಾಕಾಳಿ ದರ್ಶನ ಪಡೆದು ತಡೆ ಹೊಡೆಸಿಕೊಂಡು ಹೋಗುತ್ತಿದ್ದರು. ಅಲ್ಲದೆ ದೇವಿ ಮುಂದೆ ನಿಂತು ವಿಜಯಲಕ್ಷ್ಮಿ ಪ್ರಾರ್ಥನೆ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಈ ಫೋಟೋ ಎರಡು ಮೂರು ತಿಂಗಳ ಹಳೆ ಫೋಟೋʼʼ ಎಂದು ಲತಾ ಜೈಪ್ರಕಾಶ್ ಸ್ಪಷ್ಟನೆ ಕೊಟ್ಟರು.

ಇದನ್ನೂ ಓದಿ: Actor Darshan: ವಿಗ್‌ ಹಾಕಿದ್ದರಿಂದಲೇ ದರ್ಶನ್‌ಗೆ ಕಂಟಕ ಆಯ್ತು ಎಂದ ಕಾಳಿ ಉಪಾಸಕಿ ಚಂದಾ ಪಾಂಡೇ!

ʻʻವಿಜಯಲಕ್ಷ್ಮಿ ಅವರು ತುಂಬ ಓಡಾಡುತ್ತಿದ್ದಾರೆ. ಇಬ್ಬರೂ ದೈವಭಕ್ತರು. ಏನೋ ಒಂದು ಗ್ರಹಚಾರ. ದರ್ಶನ್ ಅಣ್ಣ ದೇವಸ್ಥಾನಕ್ಕೆ ಬರುತ್ತಿದ್ದರು. ಆದರೆ ಅವರು ಜನ ಇದ್ದಾಗ ದೇವಸ್ಥಾನಕ್ಕೆ ಬರುತ್ತಿರಲಿಲ್ಲ. ದೇವಸ್ಥಾನಕ್ಕೆ ಬರಬೇಕು ಅನಿಸಿದಾಗ ಮಿಡ್ ನೈಟ್ ಆದರೂ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದರು. ಈ ಸಮಸ್ಯೆಯಿಂದ ದರ್ಶನ್ ಅಣ್ಣ ಬೇಗ ಹೊರಬರಲಿ. ವಿಜಯಲಕ್ಷ್ಮಿ ಅತ್ತಿಗೆ ಕೂಡ ಮನೆ ದೇವರು ಮುನೇಶ್ವರನಿಗೆ ಹರಕೆ ಕಟ್ಟಿಕೊಂಡಿದ್ದಾರೆʼʼ ಎಂದು ಬಂಡೆ ಮಹಾಕಾಳಮ್ಮ ದೇವಸ್ಥಾನದ ಟ್ರಸ್ಟಿ ಲತಾ ಜೈಪ್ರಕಾಶ್ ಹೇಳಿದರು.

ʻʻದರ್ಶನ್ ಅಣ್ಣ ಜೈಲು ಸೇರಿದಾಗಿನಿಂದಲೂ ವಿಜಯಲಕ್ಷ್ಮಿ ಅತ್ತಿಗೆ ಅವರ ಹೋರಾಟ ಹಾಗೂ ಓಡಾಟ ಜಾಸ್ತಿ ಆಗಿದೆ. ಇದರಿಂದಾಗಿ ವಿಜಯಲಕ್ಷ್ಮಿ ಅವರು ಪ್ರತೀ ಬಾರಿ ಆಷಾಢದಲ್ಲಿ ದೇವಸ್ಥಾನಕ್ಕೆ ಬರುತ್ತಿದ್ದವರು ಈ ಬಾರಿ ಬಂದಿಲ್ಲ. ದೇವಸ್ಥಾನದಲ್ಲಿ ಪ್ರತೀ ಆಷಾಢದಲ್ಲೂ ಅತ್ತಿಗೆ ನನಗೆ ಸಿಗುತ್ತಿದ್ದರು.ನನಗೆ ಸುಮಾರು ಹತ್ತು ವರ್ಷದಿಂದಲೂ ವಿಜಯಲಕ್ಷ್ಮಿ ಅತ್ತಿಗೆ ಪರಿಚಯವಿದೆ. ದರ್ಶನ್ ಅಣ್ಣ ‘ಅಂಬರೀಶ್’ ಸಿನಿಮಾ ಮೂಲಕ ಪರಿಚಯವಾಗಿ ನನ್ನ ತಮ್ಮನಿಗೂ ಕ್ಲೋಸ್ ಆಗಿದ್ದರು. ಅತ್ತಿಗೆನೇ ಅಣ್ಣನಿಗೆ ಬಲ ಆಗಿದ್ದಾರೆʼʼಎಂದರು.

Continue Reading

ಕ್ರೈಂ

Actor Darshan: ವಿಗ್‌ ಹಾಕಿದ್ದರಿಂದಲೇ ದರ್ಶನ್‌ಗೆ ಕಂಟಕ ಆಯ್ತು ಎಂದ ಕಾಳಿ ಉಪಾಸಕಿ ಚಂದಾ ಪಾಂಡೇ!

Actor Darshan: ಇದೀಗ ಕಾಳಿ ಉಪಾಸಕಿ ಚಂದಾ ಪಾಂಡೇ ಅಮ್ಮಾಜಿ ಅವರು ದರ್ಶನ್​ಗೆ ಈ ಸಂಕಷ್ಟ ಎದುರಾಗಲು ಅವರ ತಲೆ ಗೂದಲಿನಿಂದ ಹಿಡಿದು ಹಲವು ಕಾರಣಗಳಿವೆ ಎಂದಿದ್ದು, ಅವುಗಳ ಬಗ್ಗೆ ಮಾಹಿತಿ ಮಾಧ್ಯಮವೊಂದಕ್ಕೆ ನೀಡಿದ್ದಾರೆ. ಕಾಳಿ ಉಪಾಸಕಿ ಚಂದಾ ಪಾಂಡೆ ‘ನಾನು 2018ರಲ್ಲಿ ದರ್ಶನ್ ಗೆ ಎಚ್ಚರಿಕೆ ನೀಡಿದ್ದೆ’ ಎಂದಿದ್ದಾರೆ.

VISTARANEWS.COM


on

Actor Darshan Astrologer Chanda Pandey Said Facing Problems Because Of His vig
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ (Actor Darshan) ಜೈಲು ಸೇರಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಅವರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೀಗ ಕಾಳಿ ಉಪಾಸಕಿ ಚಂದಾ ಪಾಂಡೇ ಅಮ್ಮಾಜಿ ಅವರು ದರ್ಶನ್​ಗೆ ಈ ಸಂಕಷ್ಟ ಎದುರಾಗಲು ಅವರ ತಲೆ ಗೂದಲಿನಿಂದ ಹಿಡಿದು ಹಲವು ಕಾರಣಗಳಿವೆ ಎಂದಿದ್ದು, ಅವುಗಳ ಬಗ್ಗೆ ಮಾಹಿತಿ ಮಾಧ್ಯಮವೊಂದಕ್ಕೆ ನೀಡಿದ್ದಾರೆ. ಕಾಳಿ ಉಪಾಸಕಿ ಚಂದಾ ಪಾಂಡೆ ‘ನಾನು 2018ರಲ್ಲಿ ದರ್ಶನ್ ಗೆ ಎಚ್ಚರಿಕೆ ನೀಡಿದ್ದೆ’ ಎಂದಿದ್ದಾರೆ.

ಈಗಾಗಲೇ ಚಂಡಿ ಯಾಗ ಮಾಡಿದ್ದಾರೆ ದರ್ಶನ್‌ ಪತ್ನಿ. ಈ ಬಗ್ಗೆ ಕಾಳಿ ಉಪಾಸಕಿ ಚಂದಾ ಪಾಂಡೆ ಮಾತನಾಡಿ ʻಈ ಯಾಗದಿಂದ ಮನೆ ಊಟ ಸಿಗುವ ಸಾಧ್ಯತೆ ಇದೆ. ಅದರ ಜತೆಗೆ ಬೈಲ್‌ ಸಿಗುವಂತದ್ದು. ಯಾರು ತೀರ್ಪು ಕೊಡುತ್ತಾರೆ ಅವರ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಹಾಗಂತ ಎಲ್ಲವೂ ಸಿಕ್ಕೇ ಸಿಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ದರ್ಶನ್, ದಸರಾ ಕಾರ್ ರೇಸ್​ನಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದ್ದರು. ಆದರೆ ನಾನು ಬೇಡ, ದರ್ಶನ್​ಗೆ ಕಂಟಕ ಇದೆ. ರೇಸ್​ಗೆ ಹೋದರೆ ಮರಳಿ ಬರುವುದಿಲ್ಲ ಅದನ್ನು ತಪ್ಪಿಸು ಎಂದಿದ್ದೆ. ಹಾಗೆಯೇ ಆತ ಅದನ್ನು ತಪ್ಪಿಸಿದ. ಆದರೆ ಅದಾದ ಸ್ವಲ್ಪ ದಿನಕ್ಕೆ ದರ್ಶನ್​ಗೆ ಕಾರು ಅಪಘಾತವಾಗಿ ಕೈಗೆ ಪೆಟ್ಟಾಯ್ತು. ಆ ಘಟನೆ ಆದ ಬಳಿಕ ದರ್ಶನ್ ನನ್ನ ಬಂದು ಭೇಟಿ ಆಗಿ ಆಶೀರ್ವಾದ ಪಡೆದರುʼʼಎಂದರು.

ʻʻಚಂಡಿಯಾಗಕ್ಕೆ ಅದರದ್ದೇ ಆದ ವಿಧಿ ವಿಧಾನಗಳನ್ನು ಮಾಡಲೇ ಬೇಕು. ಮುಖ್ಯವಾಗಿ ಅಹಂ ವನ್ನು ಬಿಡಬೇಕು. ನಾನು ಎನ್ನುವ ಶಬ್ದ ಬಿಡಬೇಕು. ಅಹಂ ಎನ್ನುವುದಕ್ಕೆ ಶನಿನೂ ಕಾರಣವೇ.ನಮ್ಮಲ್ಲಿ ತರ್ಕವನ್ನು ಅಳವಡಿಸಿಕೊಳ್ಳಬೇಕು. ಆಗ ಇಂತಹ ದುರಂತಗಳು ನಡೆಯಲ್ಲ. ನನ್ನ ಸಲಹೆ ಮೀರಿ ವಿಗ್ ಹಾಕಿದ್ರು. ಇದರಿಂದಾಗಿ ಅವರ ಗ್ರಹಗತಿಯಲ್ಲಿ ಬದಲಾವಣೆ ಆಗಿದೆ. ಅವರಿಗೆ ಇನ್ನೂ ಸಾಕಷ್ಟು ಗಂಡಾಂತರ ಬರೋ ಸಾಧ್ಯತೆ ಇದೆ. ನಾನು ಪ್ರಚಾರ ತಗೋತೀನಿ ಅಂದ್ಕೋಬಾರ್ದು ಅಂತ ನಾನು ಯಾವುದನ್ನೂ ನಾನೇ ನಾನಾಗಿ ಹೇಳೋದಿಲ್ಲ. ನಾನಿವತ್ತು ಮಾತನಾಡ್ತಾ ಇರೋದು ವಿಜಯಲಕ್ಷ್ಮಿ ಅವರ ಮುಖ ನೋಡಿ, ತುಂಬಾ ನೊಂದಿದಾರೆ ಅವರು. ಜನ್ಮತಃ ಬಂದಿರುವ ಕೇಶವಿನ್ಯಾಸ ಮಾಡಿಸಿಕೊಂಡರೆ ಉತ್ತಮ’ ಎಂದಿದ್ದಾರೆ ಕಾಳಿಕಾಮಾತೆ ಉಪಾಸಕಿ ಚಂದಾ ಪಾಂಡೆ.ʼʼಎಂದರು.

ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ಕುಟುಂಬ ಭೇಟಿಯಾಗಿ ಧನ ಸಹಾಯ ಮಾಡಿದ ವಿನೋದ್‌ ರಾಜ್‌ !

(Actor Darshan) ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಲ್ಲಿದ್ದಾರೆ. ಇಷ್ಟಾದರೂ ದರ್ಶನ್‌ಗೆ ಕೆಲವು ಅಭಿಮಾನಿಗಳು ಹಾಗೂ ನಟ ನಟಿಯರು ಬೆಂಬಲ ನೀಡಿದ್ದಾರೆ. ದಿನ ಕಳೆದಂತೆ ತನಿಖೆಯಿಂದ ಬೆಚ್ಚಿ ಬೀಳಿಸುವ ಸತ್ಯಗಳು ಹೊರಬೀಳುತ್ತಿವೆ. ಕಲೆವರು ಅಂದಿನಿಂದ ದರ್ಶನ್‌ಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. 

Continue Reading

ಬಾಲಿವುಡ್

Malaika Arora: ಒಂದೇ ಈವೆಂಟ್‌ನಲ್ಲಿ ಇದ್ದರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಂಡಿಲ್ಲ! ಅರ್ಜುನ್​-ಮಲೈಕಾ ಬ್ರೇಕಪ್‌ ಖಚಿತ?

Malaika Arora: ಈವೆಂಟ್‌ನಲ್ಲಿ ಜೋಡಿಯ ಹಲವಾರು ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ವೈರಲ್‌ ಆಗಿವೆ. ಆದರೆ ಇಬ್ಬರೂ ಒಂದೇ ಈವೆಂಟ್‌ನಲ್ಲಿ ಭಾಗಿಯಾಗಿದ್ದರೂ ಈಗ ಪರಸ್ಪರ ದೂರ ಆಗಿದ್ದಾರೆ.ಇಬ್ಬರೂ ಒಂದೇ ವೇದಿಕೆ ಏರಿದ್ದಾರೆ. ಆದರೆ, ಒಬ್ಬರಿಗೊಬ್ಬರು ನಿರ್ಲಕ್ಷಿಸಿದ್ದಾರೆ. ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಂಡಿಲ್ಲ.

VISTARANEWS.COM


on

Malaika Arora breakup rumours rushes past Arjun Kapoor
Koo

ಬೆಂಗಳೂರು: ಬ್ರೇಕಪ್ ವದಂತಿಗಳ ಬಳಿಕ, ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ (Malaika Arora) ಶುಕ್ರವಾರ ದೆಹಲಿಯಲ್ಲಿ ನಡೆದ ಇಂಡಿಯಾ ಕೌಚರ್ ವೀಕ್‌ನಲ್ಲಿ ಡಿಸೈನರ್ ಕುನಾಲ್ ರಾವಲ್ ಅವರ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈವೆಂಟ್‌ನಲ್ಲಿ ಜೋಡಿಯ ಹಲವಾರು ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ವೈರಲ್‌ ಆಗಿವೆ. ಆದರೆ ಇಬ್ಬರೂ ಒಂದೇ ಈವೆಂಟ್‌ನಲ್ಲಿ ಭಾಗಿಯಾಗಿದ್ದರೂ ಈಗ ಪರಸ್ಪರ ದೂರ ಆಗಿದ್ದಾರೆ.ಇಬ್ಬರೂ ಒಂದೇ ವೇದಿಕೆ ಏರಿದ್ದಾರೆ. ಆದರೆ, ಒಬ್ಬರಿಗೊಬ್ಬರು ನಿರ್ಲಕ್ಷಿಸಿದ್ದಾರೆ. ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಂಡಿಲ್ಲ.

ವೀಡಿಯೊವೊಂದರಲ್ಲಿ, ಅರ್ಜುನ್ ಕಪೂರ್ ಮತ್ತು ಮಲೈಕಾ ಮುಂದಿನ ಸಾಲಿನಲ್ಲಿ ಕುಳಿತಿದ್ದಾರೆ. ಪರಸ್ಪರ ಅಕ್ಕ ಪಕ್ಕದಲ್ಲಿ ಕುಳಿತುಕೊಳ್ಳಲಿಲ್ಲ. ಮತ್ತೊಂದು ಕ್ಲಿಪ್‌ನಲ್ಲಿ, ಅರ್ಜುನ್ ಕಪೂರ್ ಎದುರಲ್ಲೇ ಮಲೈಕಾ ಹಾದು ಹೋಗಿದ್ದಾರೆ. ಈ ವೇಳೆ ಅಭಿಮಾನಿಗಳು ಮುತ್ತಿಕೊಳ್ಳದಂತೆ ತಡೆದಿದ್ದಾರೆ ಅರ್ಜುನ್ ಕಪೂರ್. ಆದರೆ, ಇದನ್ನು ಮಲೈಕಾ ಅರೋರಾ ಗಮನಿಸಿಯೂ ಇಲ್ಲ. ಅವರು ನೇರವಾಗಿ ಹೊರಟು ಹೋಗಿದ್ದಾರೆ. ಈ ಮೂಲಕ ಬ್ರೇಕಪ್ ವಿಚಾರ ಖಚಿತವಾಗಿದೆ. ಸ್ವತಃ ಮಲೈಕಾ ಅವರೇ ಬ್ರೇಕಪ್ ಮಾಡಿಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಅರ್ಜುನ್ ಕಪೂರ್​ಗೆ ಮಲೈಕಾ ಮೇಲೆ ಇನ್ನೂ ಕಾಳಜಿ ಇದೆ. ಆದರೆ, ಈ ಕಾಳಜಿ ಮಲೈಕಾಗೆ ಇಲ್ಲ.

ಈವೆಂಟ್‌ಗಾಗಿ, ಮಲೈಕಾ ವೈಟ್ ಬ್ಲೇಜರ್ ಕೋ-ಆರ್ಡರ್ ಸೆಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಅರ್ಜುನ್ ಕಪ್ಪು ಶೆರ್ವಾನಿ ಮತ್ತು ಧೋತಿ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: Malaika Arora: 38ರ ಅರ್ಜುನ್‌ ಕಪೂರ್‌ಗೆ 50ರ ಮಲೈಕಾ ಅರೋರಾ ಸಹವಾಸ ಸಾಕಾಯ್ತಾ?!

ಮಲೈಕಾ ಮತ್ತು ಅರ್ಜುನ್ ʼವಿಶೇಷವಾದ ಸಂಬಂಧʼವನ್ನು ಹೊಂದಿದ್ದರು. ಇಬ್ಬರೂ ಪರಸ್ಪರರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ ಇದೀಗ ಜೋಡಿ ಬೇರೆಯಾಗಬೇಕು ಎಂದು ನಿರ್ಧರಿಸಿದೆ. ಇಷ್ಟೂ ವರ್ಷಗಳಲ್ಲಿ, ಅವರು ತಮ್ಮ ಸಂಬಂಧಕ್ಕೆ ಗೌರವವನ್ನು ನೀಡಿದ್ದಾರೆ. ಒಂದು ವೇಳೆ ಬೇರೆಯಾಗಲು ನಿರ್ಧರಿಸಿದರೂ ಪರಸ್ಪರ ಅದೇ ಗೌರವವನ್ನು ಕಾಪಾಡಿಕೊಂಡು ಹೋಗುತ್ತಾರೆ ಎಂದು ವರದಿಯಾಗಿದೆ.

11 ವರ್ಷಗಳ ಅಂತರ

ಮಲೈಕಾ ಅರೋರಾ ಅವರಿಗೆ ಈಗ 50 ವರ್ಷ. ಅರ್ಜುನ್ ಕಪೂರ್​ಗೆ 38. ಇಬ್ಬರ ಮಧ್ಯೆ ಸುಮಾರು 11 ವರ್ಷಗಳ ಅಂತರ ಇದೆ. ಅರ್ಜುನ್ ಕಪೂರ್ ವಯಸ್ಸಿನಲ್ಲಿ ಸಣ್ಣವರು. ಮಾತ್ರವಲ್ಲ ಕೆಲವು ದಿನಗಳಿಂದ ಮಗು ವಿಚಾರವಾಗಿ ಸಾಕಷ್ಟು ಟ್ರೋಲ್‌ ಆಗಿತ್ತು ಜೋಡಿ. ಮಲೈಕಾ ಹಾಗೂ ಅರ್ಜುನ್ ಕಪೂರ್​ಗೆ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇತ್ತು. ಆದರೆ, ಈ ಬಗ್ಗೆ ಈ ಜೋಡಿ ಮೌನ ವಹಿಸಿದ್ದರು.

ಇತ್ತೀಚಿನ ವರದಿಗಳ ಪ್ರಕಾರ ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನಲಾಗಿದೆ. ಅರ್ಜುನ್‌ ಕಪೂರ್ ಕುಟುಂಬದವರನ್ನು ಅನ್​ಫಾಲೋ ಮಾಡಿದ್ದಾರೆ ಮಲೈಕಾ ಅರೋರಾ. ಅಷ್ಟೇ ಅಲ್ಲದೇ ಅರ್ಜುನ್ ಕಪೂರ್ ಈಗ ನಟಿ ಕುಶಾ ಕಪಿಲಾ (Kusha Kapila) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂತಲೂ ವರದಿಗಳಿವೆ.

ಈ ಮೊದಲು ಮಲೈಕಾ ಅವರು ಅರ್ಜುನ್ ಕಪೂರ್ ತಂದೆ ಬೋನಿ ಕಪೂರ್, ಕುಟುಂಬದ ಇತರ ಸದಸ್ಯರಾದ ಅನಿಲ್ ಕಪೂರ್, ಜಾನ್ವಿ ಕಪೂರ್, ಖುಷಿ ಕಪೂರ್ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡುತ್ತಿದ್ದರು. ಆದರೆ, ಇವರುಗಳನ್ನು ಮಲೈಕಾ ಅನ್​ಫಾಲೋ ಮಾಡಿದ್ದಾರೆ. ಆದರೆ, ಅರ್ಜುನ್ ಕಪೂರ್ ಅವರನ್ನು ಈಗಲೂ ಅವರು ಫಾಲೋ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿರುವ ಕರಣ್ ಜೋಹರ್ ಅವರ ಮನೆಯಲ್ಲಿ ಅರ್ಜುನ್ ಮತ್ತು ಕುಶಾ ಒಟ್ಟಿಗೆ ಪಾರ್ಟಿ ಮಾಡಿದ್ದಾಗಿನಿಂದಲೂ ಸಂಬಂಧದ ವದಂತಿಗಳು ಪ್ರಾರಂಭವಾದವು.

ಮಲೈಕಾ ಈ ಹಿಂದೆ ನಟ, ನಿರ್ಮಾಪಕ ಅರ್ಬಾಜ್ ಖಾನ್ ಅವರನ್ನು ವಿವಾಹವಾಗಿದ್ದರು. ಇಬ್ಬರು 2016ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಅವರಿಗೆ ಅರ್ಹಾನ್ ಖಾನ್ ಹೆಸರಿನ ಮಗನಿದ್ದಾನೆ. ಮಲೈಕಾ ಮತ್ತು ಅರ್ಜುನ್ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದು, 2019ರಲ್ಲಿ ಅದನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.

Continue Reading

ಕಾಲಿವುಡ್

Actor Rajinikanth: ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದ ಮೊಮ್ಮಗ; ತಾತನ ಡ್ಯೂಟಿ ಮಿಸ್ ಮಾಡ್ದೆ ಸ್ಕೂಲ್‌ಗೆ ಬಿಟ್ಟು ಬಂದ ರಜನಿಕಾಂತ್‌!

Actor Rajinikanth: ಸೌಂದರ್ಯಾ ಅವರು ತಮ್ಮ ಇನ್‌ಸ್ಟಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ರಜನಿಕಾಂತ್ ಮೊಮ್ಮಗನೊಂದಿಗೆ ಕುಳಿತು ತರಗತಿಗೆ ಕರೆದುಕೊಂಡು ಹೋಗುತ್ತಿರುವುದು ನೋಡಬಹುದು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ನಟನನ್ನು ನೋಡಿ ಅಚ್ಚರಿಗೊಂಡಿದ್ದಾರೆ. ನಟ ಮೊಮ್ಮಗನನ್ನು ಶಾಲೆಗೆ ಬಿಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದನ್ನು ಅವರ ಮಗಳು ಸೌಂದರ್ಯಾ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Actor Rajinikanth Fulfils Grandfather Duties By Dropping Grandson At School
Koo

ಬೆಂಗಳೂರು: ರಜನಿಕಾಂತ್ (Actor Rajinikanth) ದೇಶದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಹೀಗಿದ್ದರೂ ನಟ ಆಗಾಗ ಸರಳತೆಯ ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ನಟ ಮೊಮ್ಮಗನನ್ನು ಶಾಲೆಗೆ ಬಿಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದನ್ನು ಅವರ ಮಗಳು ಸೌಂದರ್ಯಾ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೌಂದರ್ಯಾ ಅವರು ತಮ್ಮ ಇನ್‌ಸ್ಟಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ರಜನಿಕಾಂತ್ ಮೊಮ್ಮಗನೊಂದಿಗೆ ಕುಳಿತು ತರಗತಿಗೆ ಕರೆದುಕೊಂಡು ಹೋಗುತ್ತಿರುವುದು ನೋಡಬಹುದು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ನಟನನ್ನು ನೋಡಿ ಅಚ್ಚರಿಗೊಂಡಿದ್ದಾರೆ. “ನನ್ನ ಮಗನಿಗೆ ಬೆಳಗ್ಗೆ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಸೂಪರ್‌ಹೀರೋ ತಾತಾ ಅಳುತ್ತಿದ್ದ ಮಗನನ್ನು ಶಾಲೆಗೆ ಬಿಟ್ಟು ಬಂದರು. ನೀವು ನಿರ್ವಹಿಸುವ ಪ್ರತಿಯೊಂದು ಪಾತ್ರದಲ್ಲೂ ನೀವು ಅತ್ಯುತ್ತಮರು. ಆನ್ ಮತ್ತು ಆಫ್ ಸ್ಕ್ರೀನ್‌ನಲ್ಲಿಯೂ ನನ್ನ ಪ್ರೀತಿಯ ಅಪ್ಪ. ಬೆಸ್ಟ್ ಅಜ್ಜ . ಬೆಸ್ಟ್ ಫಾದರ್. ಜಸ್ಟ್ ದ ಬೆಸ್ಟ್ ʼʼ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.

ರಜನಿಕಾಂತ್ ಮೊಮ್ಮೊಗ ಲಿಂಗ ರಾಜ ಜೊತೆ ರಜನಿ ಪೋಸ್ ಕೊಟ್ಟಿದ್ದಾರೆ. ಮತ್ತೊಂದು ಫೋಟೋದಲ್ಲಿ ರಜನಿಕಾಂತ್ ಶಾಲಾ ಕೊಠಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರನ್ನು ನೋಡಿ ಶಾಲಾ ಮಕ್ಕಳು ಸಖತ್ ಎಗ್ಸೈಟ್ ಆಗಿದ್ದಾರೆ. ಅದರಲ್ಲೂ ಕೊನೆಯಲ್ಲಿ ಕುಳಿತ ಬಾಲಕಿ ಖುಷಿ ತಡೆಯಲಾರದೆ ಎರಡೂ ಕೈಯನ್ನು ಮುಖದಮೇಲೆ ಇಟ್ಟಿದ್ದಾಳೆ.

ಇದನ್ನೂ ಓದಿ: Actor Rajinikanth: ಈ ಬಾರಿಯೂ ಮೋದಿ ಗೆಲ್ಲಬಹುದಾ ಎಂಬ ಪ್ರಶ್ನೆಗೆ ರಜನಿಕಾಂತ್ ಕೊಟ್ಟ ಉತ್ತರ ಏನು?

ಈ ಫೋಟೊ ವೈರಲ್‌ ಆಗುತ್ತಿದ್ದಂತೆ ಫ್ಯಾನ್ಸ್‌ ʻಸೂಪರ್ ಸ್ಟಾರ್ ಆಗಿದ್ದರೂ ಅವರು ಯಾವಾಗಲೂ ವಿಶೇಷರುʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಈ ಫೋಟೋ ಹಂಚಿಕೊಂಡ ಸೌಂದರ್ಯಾಗೆ ಧನ್ಯವಾದ ಹೇಳಿದ್ದಾರೆ. ಇನ್ನೂ ಕೆಲವರು ರಜನಿಕಾಂತ್ ಅವರ ದರ್ಶನ ಸಿಕ್ಕಿ ಖುಷಿಯಾದ ಮಕ್ಕಳ ಬಗ್ಗೆ ಬರೆದುಕೊಂಡಿದ್ದಾರೆ.

ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಇತ್ತೀಚೆಗೆ ʻವೆಟ್ಟೈಯಾನ್‌ʼ ಸಿನಿಮಾ ಶೂಟಿಂಗ್‌ ಪೂರ್ಣಗೊಳಿಸಿದ್ದಾರೆ. ಚಿತ್ರದ ಸೆಟ್‌ನ ಕೊನೆಯ ದಿನದ ಫೋಟೋ ವೈರಲ್‌ ಆಗಿತ್ತು. ವೆಟ್ಟೈಯನ್ ಚಿತ್ರವನ್ನು ಟಿ ಜೆ ಜ್ಞಾನವೇಲ್ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಅಮಿತಾಭ್‌ ಬಚ್ಚನ್, ಫಹದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್, ದುಶಾರ ವಿಜಯನ್, ಕಿಶೋರ್ ಮತ್ತು ರೋಹಿಣಿ ಅವರ ಸಮಗ್ರ ತಾರಾಗಣದೊಂದಿಗೆ ರಜನಿಕಾಂತ್ ನಾಯಕನಾಗಿ ನಟಿಸಿದ್ದಾರೆ. ಇದನ್ನು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುಬಾಸ್ಕರನ್ ಅಲ್ಲಿರಾಜ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದು, ಎಸ್ ಆರ್ ಕತಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನ ಮಾಡುತ್ತಿದ್ದಾರೆ. ಹೊಸ ಪೋಸ್ಟರ್ ಅನ್ನು ಅನಾವರಣ ಮಾಡುವುದರ ಜೊತೆಗೆ, ಈ ವರ್ಷ ಅಕ್ಟೋಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

Continue Reading
Advertisement
Actor Darshan Lata Jaiprakash says that since Darshan is a devotee of God,
ಸಿನಿಮಾ8 mins ago

Actor Darshan: ದರ್ಶನ್ ದೈವ ಭಕ್ತ, ಜೈಲಿಗೆ ಸೇರಿದ್ದಾಗಿನಿಂದ ವಿಜಯಲಕ್ಷ್ಮಿ ಅತ್ತಿಗೆ ಹೋರಾಟ ಜಾಸ್ತಿ ಆಗಿದೆ ಎಂದ ಲತಾ ಜೈಪ್ರಕಾಶ್!

Paris Olympics
ಕ್ರೀಡೆ12 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೊದಲ ಡೋಪಿಂಗ್‌ ಪ್ರಕರಣ ಪತ್ತೆ; ಜೂಡೊಪಟು ತಾತ್ಕಾಲಿಕ ಅಮಾನತು

illicit relationship raichur siravara
ಕ್ರೈಂ22 mins ago

Illicit Relationship: ವಿಚ್ಛೇದಿತ ನರ್ಸ್‌ ಜೊತೆ ಲವ್ವಿ ಡವ್ವಿ; ಪೊಲೀಸಪ್ಪನಿಗೇ ಕಾನೂನು ರುಚಿ ತೋರಿಸಿದ ಪತ್ನಿ

Gold Rate Today
ಚಿನ್ನದ ದರ22 mins ago

Gold Rate Today: ಬಜೆಟ್‌ ಬಳಿಕ ಇದೇ ಮೊದಲ ಬಾರಿ ಏರಿಕೆ ಕಂಡ ಚಿನ್ನದ ದರ; ಇಂದು ಇಷ್ಟು ದುಬಾರಿ

Actor Darshan Astrologer Chanda Pandey Said Facing Problems Because Of His vig
ಕ್ರೈಂ42 mins ago

Actor Darshan: ವಿಗ್‌ ಹಾಕಿದ್ದರಿಂದಲೇ ದರ್ಶನ್‌ಗೆ ಕಂಟಕ ಆಯ್ತು ಎಂದ ಕಾಳಿ ಉಪಾಸಕಿ ಚಂದಾ ಪಾಂಡೇ!

Encounter in Kupwara
ದೇಶ1 hour ago

Encounter in Kupwara: ಕುಪ್ವಾರಾದಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ: ಮೂವರು ಸೈನಿಕರಿಗೆ ಗಾಯ; ಓರ್ವ ಉಗ್ರ ಹತ

Champions Trophy 2025
ಕ್ರೀಡೆ1 hour ago

Champions Trophy 2025: ನಾವು ತುಂಬಾ ಒಳ್ಳೆಯವರು, ಪಾಕಿಸ್ತಾನಕ್ಕೆ ಬನ್ನಿ; ಟೀಮ್ ಇಂಡಿಯಾಗೆ ಪಾಕ್​ ಆಟಗಾರನ ಮನವಿ

Murder in PG Case
ಕ್ರೈಂ1 hour ago

Murder in PG: ಪಿಜಿಯಲ್ಲಿ ಯುವತಿ ಕೊಲೆ ಮಾಡಿದ ಪಾತಕಿ ಮಧ್ಯಪ್ರದೇಶದಲ್ಲಿ ಸೆರೆ

kaveri aarti
ಪ್ರಮುಖ ಸುದ್ದಿ2 hours ago

Kaveri Aarti: ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ; ದಸರಾ ಹೊತ್ತಿಗೆ ರೆಡಿ

Malaika Arora breakup rumours rushes past Arjun Kapoor
ಬಾಲಿವುಡ್2 hours ago

Malaika Arora: ಒಂದೇ ಈವೆಂಟ್‌ನಲ್ಲಿ ಇದ್ದರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಂಡಿಲ್ಲ! ಅರ್ಜುನ್​-ಮಲೈಕಾ ಬ್ರೇಕಪ್‌ ಖಚಿತ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ16 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ17 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ18 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ19 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌