ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ (super star rajinikanth) ಹಾಗೂ ಮಾಲಿವುಡ್ ಸ್ಟಾರ್ ಮೋಹನ್ಲಾಲ್ (Mohan Lal), ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ (Shiva Rajkumar) ಅಭಿನಯದ ಜೈಲರ್ ಸಿನಿಮಾ (Jailer Cinema) ಗೆಲುವಿನ ನಗೆ ಬೀರಿದೆ. ಒಟ್ಟಾರೆ 450 ಕೋಟಿ ಗಳಿಕೆ ಮಾಡಿ ಅಬ್ಬರಿಸಿದೆ. ಕೇವಲ ತಮಿಳು ನಾಡು ಮಾತ್ರವಲ್ಲದೇ ಕರ್ನಾಟಕ, ಕೇರಳ, ತೆಲುಗು ರಾಜ್ಯಗಳು ಹಾಗೂ ಹಿಂದಿ ಭಾಷೆಗಳಲ್ಲಿಯೂ ಸಹ ಅಬ್ಬರದ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿರುವ ಜೈಲರ್ ಚಿತ್ರದಲ್ಲಿ ಶಿವಣ್ಣನ ಹವಾ ಮಾತ್ರ ಸಖತ್ ಆಗೇ ಇದೆ. ಕರ್ನಾಟಕ ಮಾತ್ರವಲ್ಲದೇ ತಮಿಳುನಾಡಿನಲ್ಲಿ ಶಿವಣ್ಣನ ಆರಾಧನೆ ಹೆಚ್ಚಾಗಿದೆ. ಆದರೀಗ ಶಿವಣ್ಣನಿಗೆ ತಮಿಳಿನ ಸ್ಟಾರ್ ಕ್ಯೂಟ್ ನಟರೊಬ್ಬರ (Ajith Kumar) ಜತೆ ನಟಿಸುವಾಸೆಯಂತೆ.
ಈಗಾಗಲೇ ಶಿವಣ್ಣ ಹಲವು ಸಂದರ್ಶನಗಳನ್ನು ನೀಡಿದ್ದಾರೆ. ಸನ್ ಮ್ಯೂಸಿಕ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ ಶಿವರಾಜ್ಕುಮಾರ್ ತಮಿಳಿನ ಯಾವ ನಟನ ಜತೆ ನಟಿಸುವಾಸೆ ಎಂಬುದನ್ನು ವ್ಯಕ್ತಪಡಿಸಿದ್ದಾರೆ. ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಜತೆ ನಟಿಸಬೇಕು ಎಂದು ಶಿವಣ್ಣ ಆಸೆ ಪಟ್ಟಿದ್ದಾರೆ. ಶಿವಣ್ಣ ಮಾತನಾಡಿ “ನನಗೆ ಅಜಿತ್ ಜತೆ ನಟಿಸುವಾಸೆ. ಅವರು ತುಂಬಾ ರಾ (ಖಡಕ್) ಹಾಗೂ ಕ್ಯೂಟ್ ಹ್ಯುಮನ್ ಬಿಯಿಂಗ್, ಅವರು ಬೈಕ್ನಲ್ಲಿ ಸಿಂಪಲ್ ಆಗಿ ತೆರಳಿ ಸಾಮಾನ್ಯ ಜನರ ಜತೆ ಬೆರೆಯುವುದನ್ನು ನಾನು ನೋಡಿದ್ದೇನೆ. ಅವರ ಈ ಸರಳತೆ ನನಗೆ ಇಷ್ಟ. ಎಂದು ಹೇಳಿಕೆ ನೀಡಿದರು. ಈ ಮೂಲಕ ಶಿವಣ್ಣ ಅಜಿತ್ ಚಿತ್ರದಲ್ಲಿ ನಟಿಸುವ ಆಸೆಯನ್ನು ಹೊರಹಾಕಿದರು.
ಇದೀಗ ಶಿವಣ್ಣನ ಮುಂದಿನ ತಮಿಳು ಸಿನಿಮಾ ಕ್ಯಾಪ್ಟನ್ ಮಿಲ್ಲರ್ (captain miller)ಸಿನಿಮಾಗಾಗಿ ಅವರ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ ಜೈಲರ್ ಬಳಿಕ ಧನುಷ್ (Dhanush) ನಟನೆಯ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿಯೂ ಸಹ ಶಿವರಾಜ್ಕುಮಾರ್ ನಟಿಸಿದ್ದಾರೆ. ಇದು ಶಿವರಾಜ್ಕುಮಾರ್ ನಟನೆಯ ಎರಡನೇ ತಮಿಳು ಚಿತ್ರವಾಗಲಿದೆ. ಚಿತ್ರದಲ್ಲಿ ಶಿವರಾಜ್ಕುಮಾರ್ ಧನುಷ್ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನರಸಿಂಹ ಪಾತ್ರದಲ್ಲಿ ಗೆದ್ದ ಶಿವಣ್ಣ
ಜೈಲರ್ ಚಿತ್ರದಲ್ಲಿ ನರಸಿಂಹ ಪಾತ್ರವನ್ನು ನಿರ್ವಹಿಸಿರುವ ಶಿವರಾಜ್ಕುಮಾರ್ ಅದೆಷ್ಟೋ ಅಭಿಮಾನಿಗಳ ಮೆಚ್ಚಿನ ಹೀರೊ ಆಗಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ಮಂಡ್ಯ ಮೂಲದ ಗ್ಯಾಂಗ್ಸ್ಟರ್ ನರಸಿಂಹನಾಗಿ ಮಾಸ್ ಆಗಿ ಎಂಟ್ರಿ ನೀಡುವ ಶಿವರಾಜ್ಕುಮಾರ್ ಕ್ಲೈಮ್ಯಾಕ್ಸ್ನಲ್ಲಿ ಸಿಗರ್ ಸೇದುತ್ತಾ ಪಂಚೆ ಉಟ್ಟು ನಡೆಯುವ ಮೂಲಕವೇ ಸೌತ್ ಸಿನಿ ರಸಿಕರ ಮನ ಗೆದ್ದಿದ್ದಾರೆ.
ಈ ಹಿಂದೆ ʻಅಣ್ಣಾತ್ತೆ ʼ ಸಿನಿಮಾ ಮಾಡುವ ಮೂಲಕ ಸೋತಿದ್ದ ರಜನಿಕಾಂತ್ ಹಾಗೂ ಕಳೆದ ವರ್ಷ ವಿಜಯ್ಗೆ ಬೀಸ್ಟ್ ಚಿತ್ರವನ್ನು ನಿರ್ದೇಶಿಸಿ ಸೋತಿದ್ದ ನಿರ್ದೇಶಕ ನೆಲ್ಸನ್ ಕುಮಾರ್ ಜೈಲರ್ ಮೂಲಕ ಮತ್ತೆ ಗೆದ್ದಿದ್ದಾರೆ.