Site icon Vistara News

Jailer Movie: ʻತಲೈವಾʼ ರಜನಿಯನ್ನೇ ಓವರ್ ಟೇಕ್ ಮಾಡಿದ ʻಶಿವಣ್ಣʼ! ತಮಿಳು ಪ್ರೇಕ್ಷಕರಿಂದ ಜೈಕಾರ!

Shivarajkumar in Jailer

ಬೆಂಗಳೂರು: ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ಜೈಲರ್‌ ಸಿನಿಮಾ (Jailer Movie) ವಿಶ್ವಾದ್ಯಂತ ಆಗಸ್ಟ್‌ 10ರಂದು ತೆರೆ ಕಂಡಿದೆ. ಮೊದಲನೇ ದಿನವೇ ಭಾರಿ ಗಳಿಕೆ ಕಂಡಿದೆ. ಅಷ್ಟೇ ಅಲ್ಲದೇ ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ ಅವರು ಇದೇ ಮೊದಲ ಬಾರಿಗೆ ತಮಿಳು ಇಂಡಸ್ಟ್ರಿಗೆ ಈ ಸಿನಿಮಾ ಮೂಲಕ ಕಾಲಿಟ್ಟಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಅವರು ಮಂಡ್ಯದ ಡಾನ್ ಆಗಿ ಮಿಂಚಿದ್ದಾರೆ. ಕೆಲವೇ ನಿಮಿಷ ತೆರೆಮೇಲೆ ಕಾಣಿಸಿಕೊಂಡರೂ ಅವರ ನಟನೆಗೆ ಎಲ್ಲರ ಗಮನ ಸೆಳೆದಿದೆ. ಪರಭಾಷಿಗರು ಶಿವಣ್ಣ (Shivanna Movie) ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಶಿವರಾಜ್​ಕುಮಾರ್ ಕುರಿತು ಟ್ವಿಟರ್‌ನಲ್ಲಿ ಅವರ ಫ್ಯಾನ್ಸ್‌ ಹೊಗಳುತ್ತಿದ್ದಾರೆ.

ಇದರ ಮೊದಲ ದಿನದ ಬಾಕ್ಸ್‌ ಆಫೀಸ್‌ (Jailer Box Office Day 1) ಕಲೆಕ್ಷನ್‌ 52 ಕೋಟಿ ರೂಪಾಯಿ ದಾಟಿದೆ ಎಂದು ತಿಳಿದುಬಂದಿದೆ .ರಜನಿ ಅವರ ಬಿಗ್ಗೆಸ್ಟ್‌ ಕಮ್‌ಬ್ಯಾಕ್‌ ಆಗಿರುವ ಜೈಲರ್‌ ಮೊದಲ ಪ್ರದರ್ಶನದಿಂದಲೂ ಮೆಚ್ಚುಗೆಯ ಪ್ರತಿಕ್ರಿಯೆ ಗಳಿಸಿದೆ. ಈ ಚಿತ್ರ ಭಾರತದಲ್ಲಿ 1ನೇ ದಿನ 52 ಕೋಟಿ ರೂಪಾಯಿಗಳ ಬೃಹತ್ ಕಲೆಕ್ಷನ್ ಮಾಡಿತು. ವರದಿಗಳ ಪ್ರಕಾರ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಲವಾರು ದಾಖಲೆಗಳನ್ನು ಮುರಿದಿದೆ. ಇದು 2023ರಲ್ಲಿ ತಮಿಳುನಾಡಿನಲ್ಲಿ ಅತಿ ದೊಡ್ಡ ಓಪನಿಂಗ್ ಮತ್ತು 2023ರಲ್ಲಿ ದೇಶದಲ್ಲಿ ಬಿಡುಗಡೆಯ ಮೊದಲ ದಿನ ಕಾಲಿವುಡ್‌ ಚಿತ್ರವೊಂದು ಮಾಡಿದ ಅತ್ಯಧಿಕ ಮೊತ್ತ.

ಇದನ್ನೂ ಓದಿ: Jailer Movie: ಗದರ್‌ 2, OMG 2ಗೆ ʻಜೈಲರ್‌ʼ ಪೈಪೋಟಿ; ಕೆಜಿಎಫ್ 2 ದಾಖಲೆ ಉಡೀಸ್‌, ಫಸ್ಟ್‌ ಡೇ ಕಲೆಕ್ಷನ್‌ ಎಷ್ಟಾಗಬಹುದು?

ಶಿವರಾಜ್​ಕುಮಾರ್ 125ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈ ಪೈಕಿ ಅವರ ಖಾತೆಯಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳು ಇವೆ. ಶಿವರಾಜ್​ಕುಮಾರ್ ಅವರು ಹಲವು ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ‘ಜೈಲರ್’ ಸಿನಿಮಾ ಇದಕ್ಕೆ ಉತ್ತಮ ಉದಾಹರಣೆ. ಅವರು ಮಾಡಿರುವ ನರಸಿಂಹ ಪಾತ್ರ ಜನರಿಗೆ ಇಷ್ಟವಾಗಿದೆ.

ಜೈಲರ್‌ ಚಿತ್ರ ತಮಿಳುನಾಡಿನಲ್ಲಿ 23 ಕೋಟಿ, ಕರ್ನಾಟಕ 11 ಕೋಟಿ, ಕೇರಳ 5 ಕೋಟಿ, ಎಪಿ-ಟಿಜಿ 10 ಕೋಟಿ, ಭಾರತದ ಉಳಿದ ಭಾಗಗಳಲ್ಲಿ 3 ಕೋಟಿ ಸಂಗ್ರಹಿಸಿದೆ.ತಮ್ಮ ಎರಡು ವರ್ಷಗಳ ವಿರಾಮದ ನಂತರ ಸೂಪರ್‌ಸ್ಟಾರ್ ರಜನಿಕಾಂತ್ ಬೆಳ್ಳಿ ಪರದೆಯ ಮೇಲೆ ಜೈಲರ್‌ ಮೂಲಕ ಮರಳಿದ್ದಾರೆ. ಅವರು ಕೊನೆಯದಾಗಿ ಕಾಣಿಸಿಕೊಂಡದ್ದು ʼಅಣ್ಣಾತ್ತೆʼಯಲ್ಲಿ. ಜೈಲರ್‌ನ ಪಾತ್ರವರ್ಗದಲ್ಲಿ ಶಿವರಾಜ್‌ಕುಮಾರ್‌, ಮೋಹನ್‌ಲಾಲ್‌, ರಮ್ಯಾ ಕೃಷ್ಣನ್, ಜಾಕಿ ಶ್ರಾಫ್, ವಸಂತ್ ರವಿ, ಯೋಗಿ ಬಾಬು ಮತ್ತು ರೆಡಿಂಗ್ ಕಿಂಗ್ಸ್‌ಲಿ ಕೂಡ ಇದ್ದಾರೆ. ಕಾವಾಲಯ್ಯಾ ಹಾಡಿನಲ್ಲಿ ತಮನ್ನಾ ಭಾಟಿಯಾ ಅವರ ಆಕರ್ಷಕ ನೃತ್ಯವು ಈಗಾಗಲೇ ಇಂಟರ್ನೆಟ್‌ನಲ್ಲಿ ಬಿರುಗಾಳಿಯಂತೆ ಆವರಿಸಿದೆ.

ಇದನ್ನೂ ಓದಿ: Jailer Movie: ʻಜೈಲರ್‌ʼ ಫೀವರ್;‌ ತಲೈವಾ ಸಿನಿಮಾ ನೋಡಲು ಚೆನ್ನೈಗೆ ಬಂದ ಜಪಾನ್‌ ದಂಪತಿ!

ಬೆಂಗಳೂರಿನಲ್ಲಿ ಜೈಲರ್ ತಮಿಳು, ತೆಲುಗು ಹಾಗೂ ಕನ್ನಡ ಈ ಮೂರೂ ಭಾಷೆಗಳಲ್ಲಿಯೂ ಬಿಡುಗಡೆಯಾಗಿದ್ದು, ಮೊದಲ ದಿನ ತಮಿಳು ವರ್ಷನ್ 1,021 ಶೋಗಳನ್ನು ಪಡೆದುಕೊಂಡಿದ್ದರೆ, ತೆಲುಗು ವರ್ಷನ್ 41 ಶೋಗಳನ್ನು ಪಡೆದುಕೊಂಡಿದೆ ಹಾಗೂ ಕನ್ನಡ ವರ್ಷನ್ ಕೇವಲ‌ 30 ಪ್ರದರ್ಶನಗಳನ್ನು ಪಡೆದುಕೊಂಡಿದೆ.

Exit mobile version