Site icon Vistara News

Shruti Haasan: ʻನೀನು ಅನ್‌ರೊಮ್ಯಾಂಟಿಕ್ ಮನುಷ್ಯʼ ಬಾಯ್‌ಫ್ರೆಂಡ್‌ಗೆ ಶ್ರುತಿ ಹಾಸನ್ ಸಖತ್‌ ಕ್ಲಾಸ್‌!

Santanu Hazarika the most unromantic human

ಬೆಂಗಳೂರು: ನಟಿ ಶ್ರುತಿ ಹಾಸನ್ (Shruti Haasan) ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಬಾಯ್‌ಫ್ರೆಂಡ್‌ ಶಾಂತನು ಹಜಾರಿಕಾ ಪೋಸ್ಟ್‌ಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಆದರೀಗ ನಟಿ ಬಾಯ್‌ಫ್ರೆಂಡ್‌ ಬಗ್ಗೆ ಕೊಂಚ ಅಸಮಾಧಾನ ಹೊಂದಿದ್ದಾರೆ ಎಂದು ತೋರಿದಂತಿದೆ. ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ವಿಡಿಯೊ ಹಂಚಿಕೊಂಡು ʻಭೂಮಿಯ ಮೇಲಿನ ಅತ್ಯಂತ ಅನ್‌ ರೊಮ್ಯಾಂಟಿಕ್ ಮನುಷ್ಯ ನೀನುʼ ಎಂದು ಬಾಯ್‌ಫ್ರೆಂಡ್‌ ಶಾಂತನು ಹಜಾರಿಕಾ ಅವರಿಗೆ ಶ್ರುತಿ ಹಾಸನ್ ಹೇಳಿದ್ದಾರೆ.

ಶ್ರುತಿ ಹಾಸನ್ ಅವರು ಶಾಂತನು ಹಜಾರಿಕಾ (Santanu Hazarika) ಜತೆ ನಟಿ ಡೇಟಿಂಗ್ ಮಾಡುತ್ತಿದ್ದು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಆಗಾಗ ನಟಿ ಬಾಯ್‌ಫ್ರೆಂಡ್‌ ಶಾಂತನು ಹಜಾರಿಕಾ ಜತೆ ಇರುವ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಆದರೀಗ ಶಾಂತನು ಹಜಾರಿಕಾ ಅವರಿಗೆ ತಮಾಷೆ ಮಾಡಿದ್ದು ವಿಡಿಯೊ ಹಂಚಿಕೊಂಡಿದ್ದಾರೆ. ಶ್ರುತಿ ಹಾಸನ್‌ ಅವರು ತಮಗಾಗಿ ಹೂವುಗಳನ್ನು ಆರ್ಡರ್ ಮಾಡಿಕೊಂಡಿದ್ದರು. ಆದರೆ ಶಾಂತನು ಹಜಾರಿಕಾ ಹೂಗಳ ಗುಚ್ಛವನ್ನು ಕೈಯಲ್ಲಿ ಹಿಡಿದಿದ್ದರು. ಆಗ ನಟಿ “ಈ ಹೂವುಗಳನ್ನು ನನಗಾಗಿ ಆರ್ಡರ್ ಮಾಡಿದ್ದೇನೆ. ನನಗಾಗಿ ನೀನು ಎಂದಿಗೂ ಹೂವುಗಳನ್ನು ತಂದುಕೊಡಲಿಲ್ಲ. ಅದಕ್ಕಾಗಿ ತಂದು ಕೊಟ್ಟೆ, ನೀನು ಭೂಮಿಯ ಮೇಲಿನ ಅತ್ಯಂತ ಅನ್‌ರೊಮ್ಯಾಂಟಿಕ್ ಮನುಷ್ಯʼʼಎಂದು ಬಾಯ್‌ಫ್ರೆಂಡ್‌ ಕಾಲೆಳೆದಿದ್ದಾರೆ.

ಇದನ್ನೂ ಓದಿ: Shruti Haasan: ಹೊಸ ಟ್ಯಾಟೂ ಹಾಕಿಸಿಕೊಂಡ ಶ್ರುತಿ ಹಾಸನ್; ಇದರ ವಿಶೇಷವೇನು?

ಪ್ರಸ್ತುತ ನಟಿ ಪ್ರಭಾಸ್ ಅವರ ಸಲಾರ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಲಾರ್‌ ಸಿನಿಮಾದಲ್ಲಿ ಶ್ರುತಿ ಹಾಸನ್ ‘ಆದ್ಯ’ ಪಾತ್ರ ಮಾಡುತ್ತಿದ್ದಾರೆ. ಶ್ರುತಿ ಇತ್ತೀಚೆಗೆ ತೆಲುಗು ಚಿತ್ರ ‘ವಾಲ್ತೇರ್‌ ವೀರಯ್ಯ’ದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ ವೀರಸಿಂಹ ರೆಡ್ಡಿ ಮತ್ತು ವಾಲ್ತೇರ್‌ ವೀರಯ್ಯ ಜನವರಿ ತಿಂಗಳಲ್ಲಿ ಒಟ್ಟಿಗೆ ತೆರೆಗೆ ಬಂತು. ವೀರಸಿಂಹ ರೆಡ್ಡಿ ಸಿನಿಮಾವನ್ನು ಗೋಪಿಚಂದ್ ಮಲಿನೇನಿ ನಿರ್ದೇಶಿಸಿದ್ದಾರೆ.

Exit mobile version