Site icon Vistara News

Shruti Haasan: ನನ್ನ ಬಾಯ್‌ಫ್ರೆಂಡ್‌ನ ಹೂಸು ಕೂಡ ನಂಗಿಷ್ಟ ಎಂದ ಕಮಲ್‌ ಹಾಸನ್‌ ಪುತ್ರಿ!

Shruti Haasan with her boyfriend Santanu Hazarika

ನಟಿ ಶ್ರುತಿ ಹಾಸನ್ (Shruti Haasan) ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಬಾಯ್‌ಫ್ರೆಂಡ್‌ ಶಾಂತನು ಹಜಾರಿಕಾ (Santanu Hazarika) ಪೋಸ್ಟ್‌ಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೇ ಆಗಾಗ ಅವಾಂತರಗಳನ್ನು ಮಾಡುತ್ತಲೇ ಸಾಕಷ್ಟು ವಿವಾದಕ್ಕೂ ಗುರಿಯಾಗುತ್ತಲೇ ಇರುತ್ತಾರೆ. ಇದೀಗ ಮತ್ತೆ ನಟಿ ತಮ್ಮ ಹೇಳಿಕೆಗೆ ಸಖತ್‌ ಟ್ರೋಲ್‌ಗೆ ಗುರಿಯಾಗಿದ್ದಾರೆ. ಶಾಂತನು ಹಜಾರಿಕಾ ದಯೆ (Shruti Haasan boyfriend ), ಕಾಳಜಿಯುಳ್ಳ, ಪ್ರೀತಿಯ, ಬುದ್ಧಿವಂತ, ತಮಾಷೆ, ಪ್ರತಿಭಾವಂತ ಎಂದು ಕರೆದಿದ್ದಾರೆ. ಶ್ರುತಿ ಹಾಸನ್‌ ನಗುವಿನೊಂದಿಗೆ ಶಾಂತನು ಹಜಾರಿಕಾನ ಕಣ್ಣು ಅಷ್ಟೇ ಅಲ್ಲ, ಮತ್ತು ಆತ ಬಿಡುವ ಹೂಸು ಕೂಡ ನನಗೆ ತುಂಬಾ ಇಷ್ಟ ಎಂದಿದ್ದಾರೆ!

ಶ್ರುತಿ ಹಾಸನ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ತಮ್ಮ ಗೆಳೆಯ ಶಾಂತನು ಹಜಾರಿಕಾ ಕುರಿತ ಈ ವಿಚಾರವನ್ನು ಶೇರ್‌ ಮಾಡಿದ್ದಾರೆ. ಶ್ರುತಿ ಹಾಸನ್‌ ತಮ್ಮ ಗೆಳೆಯನನ್ನು ಹಾಡಿ ಹೊಗಳಿದ್ದಾರೆ. ಯಾರು ಅಡುಗೆ ಮಾಡುತ್ತಾರೆ, ಯಾರು ಹೆಚ್ಚು ತಿನ್ನುತ್ತಾರೆ, ಯಾರು ಮೊದಲು ಕ್ಷಮೆ ಕೇಳುತ್ತಾರೆ ಇತ್ಯಾದಿ ಮೋಜಿನ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ. ಶ್ರುತಿ ಹಾಸನ್ ಮತ್ತು ಶಾಂತನು ಹಜಾರಿಕಾ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವ ಜೋಡಿ ಎಂತಲೇ ಹೇಳಬಹುದು. ಶ್ರುತಿ ಅವರು 2018ರಲ್ಲಿ ಶಾಂತನು ಹಜಾರಿಕಾ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು.

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ತಮ್ಮ ಸಿನಿಮಾಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇರುತ್ತಾರೆ. ಹಾಗೆಯೇ ಬಾಯ್‌ಫ್ರೆಂಡ್ ವಿಚಾರದಲ್ಲೂ ಅವರು ಅಷ್ಟೇ ಸುದ್ದಿಯಲ್ಲಿ ಇರುತ್ತಾರೆ.

ಇದನ್ನೂ ಓದಿ: Shruti Haasan: ʻನೀನು ಅನ್‌ರೊಮ್ಯಾಂಟಿಕ್ ಮನುಷ್ಯʼ ಬಾಯ್‌ಫ್ರೆಂಡ್‌ಗೆ ಶ್ರುತಿ ಹಾಸನ್ ಸಖತ್‌ ಕ್ಲಾಸ್‌!

ಶ್ರುತಿ ಹಾಸನ್ ಅವರು ಶಾಂತನು ಹಜಾರಿಕಾ (Santanu Hazarika) ಜತೆ ನಟಿ ಡೇಟಿಂಗ್ ಮಾಡುತ್ತಿದ್ದು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಆಗಾಗ ನಟಿ (Shruti Haasan) ಬಾಯ್‌ಫ್ರೆಂಡ್‌ ಶಾಂತನು ಹಜಾರಿಕಾ ಜತೆ ಇರುವ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. 2018ರಲ್ಲಿ ಶ್ರುತಿ ಹಾಸನ್ ಶಾಂತನು ಹಜಾರಿಕಾ ಅವರನ್ನು ಭೇಟಿಯಾಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಿದಾಗ ಮೊದಲು ಪ್ರಪೋಸ್ ಮಾಡಿದ್ದು ಕೂಡ ಇವರೇ.

ಇದನ್ನೂ ಓದಿ: Shruti Haasan: ಬಾಯ್‌ಫ್ರೆಂಡ್‌ ಜತೆ ಜನುಮದಿನ ಆಚರಿಸಿಕೊಂಡ ಶ್ರುತಿ ಹಾಸನ್‌

ಶ್ರುತಿ ಹಾಸನ್ ಫುಲ್ ಬ್ಯುಸಿ ಶ್ರುತಿ ಹಾಸನ್ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿವೆ.ಪ್ರಸ್ತುತ ನಟಿ ಪ್ರಭಾಸ್ ಅವರ ಸಲಾರ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಲಾರ್‌ ಸಿನಿಮಾದಲ್ಲಿ ಶ್ರುತಿ ಹಾಸನ್ ‘ಆದ್ಯ’ ಪಾತ್ರ ಮಾಡುತ್ತಿದ್ದಾರೆ. ಶ್ರುತಿ ಇತ್ತೀಚೆಗೆ ತೆಲುಗು ಚಿತ್ರ ‘ವಾಲ್ತೇರ್‌ ವೀರಯ್ಯ’ದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ ವೀರಸಿಂಹ ರೆಡ್ಡಿ ಮತ್ತು ವಾಲ್ತೇರ್‌ ವೀರಯ್ಯ ಜನವರಿ ತಿಂಗಳಲ್ಲಿ ಒಟ್ಟಿಗೆ ತೆರೆಗೆ ಬಂತು. ವೀರಸಿಂಹ ರೆಡ್ಡಿ ಸಿನಿಮಾವನ್ನು ಗೋಪಿಚಂದ್ ಮಲಿನೇನಿ ನಿರ್ದೇಶಿಸಿದ್ದಾರೆ.

Exit mobile version