Site icon Vistara News

Shruti Haasan | ನನ್ನ ಹೈಟ್‌ ನನಗೆ ಮೈನಸ್‌ ಅನ್ನುತ್ತಿದ್ದರು, ಅದೇ ಪ್ಲಸ್‌ ಆಯಿತು: ಶ್ರುತಿ ಹಾಸನ್‌

Shruti Haasan

ಬೆಂಗಳೂರು: ಕಾಲಿವುಡ್‌ ನಟಿ ಶ್ರುತಿ ಹಾಸನ್‌ (Shruti Haasan) ಆಗಾಗ ತಮ್ಮ ಹೇಳಿಕೆ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ನಟನಾ ಜೀವನದಲ್ಲಿ ತಾವು ಎದುರಿಸಿರುವ ಕಮೆಂಟ್‌ಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ನಟ ಕಮಲ್‌ ಹಾಸನ್‌ ಅವರ ಪುತ್ರಿ ಶ್ರುತಿ ಹಾಸನ್‌ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಪ್ರಶಾಂತ್‌ ನೀಲ್‌ ನಿರ್ದೇಶನದ ʻಸಲಾರ್‌ʼ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಶ್ರುತಿ ಹಾಸನ್‌ ʻʻಸಿನಿರಂಗಕ್ಕೆ ನಾನು ಪದಾರ್ಪಣೆ ಮಾಡುವ ಸಮಯದಲ್ಲಿ ನನ್ನ ಹೈಟ್‌ ನನಗೆ ಮೈನಸ್‌ ಆಗಿತ್ತು. ಕೆಲವರು ಇಷ್ಟೇ ಹೈಟ್‌ ಇದ್ದೀಯ, ಇದೇ ನಿನಗೆ ಮೈನಸ್‌ ಎಂದು ಹೇಳುತ್ತಿದ್ದರು. ಅದು ತುಂಬ ನೋವು ತರುತ್ತಿತ್ತು. ಆಮೇಲೆ ನನಗೆ ಗೊತ್ತಾಯಿತು, ಇದೇ ನನಗೆ ಪ್ಲಸ್‌ ಎಂದು. ಕಡಿಮೆ ಹೈಟ್‌ ಇದ್ದುದಕ್ಕಾಗಿಯೇ ನನಗೆ ಮಹೇಶ್‌ ಬಾಬು, ಪ್ರಭಾಸ್‌ ಅವರಂತಹ ಸ್ಟಾರ್‌ ನಟರುಗಳ ಜತೆ ಸ್ಕ್ರೀನ್‌ ಶೇರ್‌ ಮಾಡುವ ಅವಕಾಶ ಸಿಕ್ಕಿತುʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Actress Shruti Haasan | ʻನನ್ನ ತಂದೆ-ತಾಯಿ ಸಿನಿಮಾ ನನಗೆ ಪ್ರೇರಣೆ ಆಗಲಿಲ್ಲʼ: ಶ್ರುತಿ ಹಾಸನ್‌!

ಹಲವು ಸಂದರ್ಶನಗಳಲ್ಲಿ ಶ್ರುತಿ ಹಾಸನ್‌ ತಮ್ಮ ಸಿನಿ ಜರ್ನಿ ಕುರಿತು ಹೇಳಿಕೊಂಡಿದ್ದಾರೆ. ಈ ಹಿಂದೆ ʻʻನಾನು ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುವಾಗ ಒಬ್ಬರನ್ನೂ ನೋಡಿ ಕಲಿತಿಲ್ಲ. ಇವರಂತೆ ನಟಿಸಬೇಕು ಎಂದು ಆಸೆ ಪಟ್ಟವಳು ನಾನಲ್ಲ. ನನ್ನ ತಂದೆ-ತಾಯಿಯ ಸಿನಿಮಾ ನನಗೆ ಪ್ರೇರಣೆ ಆಗಲಿಲ್ಲ. ಎಲ್ಲವೂ ನಾನೇ ಕಲಿತದ್ದುʼʼ ಎಂದು ಹೇಳಿಕೊಂಡಿದ್ದರು.

ಸಿನಿಮಾಗಳಲ್ಲಿ ಬ್ಯುಸಿಯಾದ ಶ್ರುತಿ
ಮೆಗಾಸ್ಟಾರ್‌ ಚಿರಂಜೀವಿ ಜೋಡಿಯಾಗಿ ʻವಾಲ್ತೇರು ವೀರಯ್ಯʼʼ ಸಿನಿಮಾದಲ್ಲಿ ಮಿಂಚಲಿದ್ದಾರೆ. ‘ವೀರಸಿಂಹ ರೆಡ್ಡಿ’ ಚಿತ್ರದಲ್ಲಿ ಬಾಲಕೃಷ್ಣಗೆ ಜೋಡಿಯಾಗಿದ್ದಾರೆ. ಎರಡೂ ಚಿತ್ರಗಳು ಸಂಕ್ರಾಂತಿ ಸಂದರ್ಭದಲ್ಲಿ ಬಿಡುಗಡೆಯಾಗಲಿವೆ. ʻದಿ ಐʼಎನ್ನುವ ಇಂಗ್ಲೀಷ್‌ ಪ್ರಾಜೆಕ್ಟ್‌ನಲ್ಲಿಯೂ ಕೆಲಸ ಮಾಡಿದ್ದಾರೆ.

ಡೇಟಿಂಗ್‌ನಲ್ಲಿ ಶ್ರುತಿ ಹಾಸನ್‌!
ಶ್ರುತಿ ಹಾಸನ್ ಡೂಡಲ್ ಆರ್ಟಿಸ್ಟ್ ಶಂತನು ಹಜಾರಿಕಾ ಜತೆ ಡೇಟಿಂಗ್ ನಡೆಸುತ್ತಿದ್ದಾರೆ. ಇಬ್ಬರೂ ಮುಂಬೈನಲ್ಲಿ ಒಂದೇ ಫ್ಲಾಟ್‌ನಲ್ಲಿ ಲಿವ್ ಇನ್‌ ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ. ಕ್ರಿಸ್ಮಸ್‌ ದಿನ ಈ ಜೋಡಿ ಸಂಭ್ರಮಾಚರಣೆಯ ಪೋಸ್ಟ್‌ ಹಂಚಿಕೊಂಡಿತ್ತು.

ಇದನ್ನೂ ಓದಿ | Shruti Hassan | ಬಾಯ್‌ಫ್ರೆಂಡ್‌ ಜತೆ ಫೋಟೊ ಹಂಚಿಕೊಂಡ ನಟಿ ಶ್ರುತಿ ಹಾಸನ್‌

Exit mobile version