ಬೆಂಗಳೂರು : ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Hassan) ಆಗಾಗ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಬಾಯ್‌ಫ್ರೆಂಡ್ ಜತೆಗಿನ ಫೋಟೊವನ್ನು ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಶ್ರುತಿ ಹಾಸನ್ ಅವರು ಶಾಂತನು ಹಜಾರಿಕಾ (Santanu Hazarika) ಜತೆ ನಟಿ ಡೇಟಿಂಗ್ ಮಾಡುತ್ತಿದ್ದು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಒಬ್ಬರನೊಬ್ಬರು ತಬ್ಬಿಕೊಂಡಿರುವ ಫೋಟೊ ಶೇರ್ ಮಾಡಿ, ʻʻನನಗೆ ಬೇಕಾಗಿರುವುದುʼʼ ಎಂದು ಕ್ಯಾಪ್ಷನ್ ನೀಡಿ ಪೋಸ್ಟ್ ಮಾಡಿದ್ದಾರೆ. ಪೋಟೊ ನೋಡಿ ನೆಟ್ಟಿಗರು, ಕಮೆಂಟ್‌ನಲ್ಲಿ ಮದುವೆ ಯಾವಾಗ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | Actress Shruti Haasan | ʻನನ್ನ ತಂದೆ-ತಾಯಿ ಸಿನಿಮಾ ನನಗೆ ಪ್ರೇರಣೆ ಆಗಲಿಲ್ಲʼ: ಶ್ರುತಿ ಹಾಸನ್!
ಪ್ರಸ್ತುತ ನಟಿ ಪ್ರಭಾಸ್ ಅವರ ಸಲಾರ್, ಬಾಲಯ್ಯ ಅವರ 107 ನೇ ಚಿತ್ರ, ಚಿರಂಜೀವಿ ಮತ್ತು ಬಾಬಿಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಸಲಾರ್ ಸಿನಿಮಾದಲ್ಲಿ ಶ್ರುತಿ ಹಾಸನ್ ‘ಆದ್ಯ’ ಪಾತ್ರ ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಮಲೆಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ವಿಲನ್ ಆಗಿ ನಟಿಸುತ್ತಿದ್ದಾರೆ.
ಇದನ್ನೂ ಓದಿ | Niranjan Sudhindra | ʻಸೂಪರ್ ಸ್ಟಾರ್ʼ ನಿರ್ದೇಶಕರ ಮೇಲೆ ಕೇಸ್: ನಟ ಉಪೇಂದ್ರ ಕುಟುಂಬದ ಕುಡಿ ಈ ಸಿನಿಮಾ ಹೀರೊ!