Site icon Vistara News

Siddhanth kapoor drugs case: ನಟನಷ್ಟೇ ಅಲ್ಲ, ಗಾಯಕನೂ ಹೌದು ಈ ಸಿದ್ಧಾಂತ್‌!

Siddhant Kapoor

ಬೆಂಗಳೂರು: ಇಲ್ಲಿನ ಹಲಸೂರು ಗೇಟ್‌ನಲ್ಲಿರುವ ದಿ ಪಾರ್ಕ್‌ ಹೋಟೆಲ್‌ನಲ್ಲಿ ನಡೆದ ರೇವ್‌ ಪಾರ್ಟಿಯಲ್ಲಿ ಭಾಗವಹಿಸಿ ಡ್ರಗ್ಸ್‌ ಸೇವನೆ ಆರೋಪದಲ್ಲಿ (‌Siddhanth kapoor drugs case) ಬಂಧಿತನಾಗಿರುವ ಖ್ಯಾತ ನಟ ಸಿದ್ಧಾಂತ್‌ ಕಪೂರ್‌ ಪ್ರತಿಭಾವಂತನೇ ಹೌದು. ಬಾಲಿವುಡ್‌ನ ಶಕ್ತಿವಂತ ಕುಟುಂಬ ಶಕ್ತಿ ಕಪೂರ್‌ ಫ್ಯಾಮಿಲಿಯಲ್ಲಿ ಜನಿಸಿ ಹುಟ್ಟುತ್ತಲೇ ಸೆಲೆಬ್ರಿಟಿ ಸ್ಥಾನವನ್ನು ಪಡೆದ ಈತ ಈಗ ಮಾಡಬಾರದ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ. ಸಿದ್ಧಾಂತ್‌ ಕಪೂರ್‌ನ ಕೌಟುಂಬಿಕ ಮತ್ತು ಚಿತ್ರ ಪಯಣದ ಸಣ್ಣ ಝಲಕ್‌ ಇಲ್ಲಿದೆ.

ಯಾರಿವನು ಸಿದ್ದಾಂತ್‌ ಕಪೂರ್‌ ?

ಹಲವು ಸಿನಿಮಾ, ವೆಬ್‌ ಶೋಗಳಲ್ಲಿ ಬ್ಯುಸಿಯಾಗಿರುವ ಸಿದ್ಧಾಂತ್‌ ಕಪೂರ್‌ ತಂದೆ ಖ್ಯಾತ ಖಳ ನಟ, ಕಾಮಿಡಿ ಆಕ್ಟರ್‌ ಶಕ್ತಿ ಕಪೂರ್‌ ಅವರ ಪುತ್ರ. ಇವರ ಸಹೋದರಿ ಶ್ರದ್ಧಾ ಕಪೂರ್‌ ಕೂಡ ಬಾಲಿವುಡ್‌ನ ಜನಪ್ರಿಯ ನಟಿ.

ಶಕ್ತಿ ಕಪೂರ್‌ ಹಾಗೂ ಶಿವಾಂಗಿ ಕಪೂರ್‌ ಅವರ ಪುತ್ರ ಸಿದ್ದಾಂತ್‌ ಕಪೂರ್‌ ಹುಟ್ಟಿನಿಂದಲೇ ಸ್ಟಾರ್‌ ಪಟ್ಟ ದೊರೆತಿತ್ತು. ಸಿದ್ಧಾಂತ್‌ಗೆ ಚಿತ್ರರಂಗದಲ್ಲೂ ಹತ್ತಿರದ ಸಂಬಂಧಿಕರಿದ್ದು, ಭಾರತೀಯ ಚಿತ್ರರಂಗದ ಗಾನಕೋಗಿಲೆ ಲತಾಮಂಗೇಶ್ಕರ್‌ ಮತ್ತು ಆಶಾ ಭೋಂಸ್ಲೇ ಸಿದ್ಧಾಂತ್‌ ಅವರಿಗೆ ದೂರದ ಸಂಬಂಧದಲ್ಲಿ ಅಜ್ಜಿ. ಪದ್ಮಿನಿ ಕೊಲ್ಹಾಪುರೆ ಮತ್ತು ತೇಜಸ್ವಿನಿ ಕೊಲ್ಹಾಪುರೆ ಕೂಡ ಸಿದ್ದಾಂತ್‌ ತಾಯಿಯ ಸಂಬಂಧಿಕರಾಗಿದ್ದಾರೆ.

ಸಿದ್ದಾಂತ್‌ ಕಪೂರ್‌ ಸಿನಿಮಾ ಜೀವನ

ಬಾಲಿವುಡ್‌ ನಿರ್ಮಾಪಕ ಪ್ರಿಯದರ್ಶನ್‌ ಅವರ ಸಹಾಯಕರಾಗಿ ಬಾಲಿವುಡ್‌ ಪ್ರವೇಶಿಸಿದ ಸಿದ್ದಾಂತ್‌ ಚುಪ್‌ ಚುಪ್‌ ಕೆ ಮತ್ತು ಭೂಲ್‌ ಭುಲೈಯಾ ಮತ್ತು ಧೋಲ್‌ ಚಿತ್ರಗಳಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು. ಇದಾದ ಬಳಿಕ 2013ರಲ್ಲಿ ಶೂಟೌಟ್‌ ಅಟ್‌ ವಡಾಲಾ ಚಿತ್ರದಲ್ಲಿ ಗ್ಯಾಂಚೋ ಪಾತ್ರದಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ಜಜ್ಬಾ ಪಲ್ಟನ್‌, ಬೊಂಬೈರಿಯಾ, ಯಾರಂ, ಹಲೋ ಚಾರ್ಲಿ ಮತ್ತು ಭೂತ್‌ ಚಿತ್ರಗಳಲ್ಲಿ ನಾಯಕ ನಟನಾಗಿ ಮಿಂಚಿದ್ದರು. 2014ರಲ್ಲಿ ಅಗ್ಲಿ ಸಿನಿಮಾಗೆ ಅನುರಾಗ್‌ ಕಶ್ಯಪ್‌ಗೆ ಸಹಾಯಕರಾಗಿ ಕೆಲಸ ಮಾಡಿದ್ದಲ್ಲದೆ ಅತಿಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದರು. 2017ರಲ್ಲಿ ಸಹೋದರಿ ಶ್ರದ್ಧಾ ಕಪೂರ್‌ ಅಭಿನಯದ ಹಸೀನಾ ಪಾರ್ಕರ್‌ ಚಿತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ 2020ರಲ್ಲಿ ಭೌಕಾಲ್‌ ಎಂಬ ವೆಬ್‌ ಸಿರೀಸ್‌ ನಲ್ಲಿ ಕಾಣಿಸಿಕೊಂಡರು. ಕೊನೆಯದಾಗಿ ಅಮಿತಾಬ್‌ ಬಚ್ಚನ್‌ ಮತ್ತು ಇಮ್ರಾನ್‌ ಹಷ್ಮಿ ಅವರ ಚೆಹ್ರೆ ಚಿತ್ರದಲ್ಲೂ ನಟಿಸಿದ್ದರು.

ಇದನ್ನು ಓದಿ| ಪಾರ್ಕ್ ಹೋಟೆಲ್‌ನಲ್ಲಿ ಡ್ರಗ್ಸ್‌ ಪಾರ್ಟಿ, ಬಾಲಿವುಡ್‌ ನಟನ ಪುತ್ರ ವಶಕ್ಕೆ

ಹಾಡುಗಾರಿಕೆಯಲ್ಲೂ ಸಿದ್ಧಾಂತ್‌ ಫೇಮಸ್‌

ಸಿದ್ದಾಂತ್‌ ಕಪೂರ್‌ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಹಾಡುಗಾರಿಕೆಯಲ್ಲೂ ಸಖತ್‌ ಫೇಮಸ್‌ ಆಗಿದ್ದಾರೆ. ಖ್ಯಾತ ಗಾಯಕಿ ಲತಾಮಂಗೇಶ್ಕರ್‌ ಸಿದ್ಧಾಂತ್‌ ಅವರ ಅಜ್ಜಿಯಾಗಿರುವುದರಿಂದ ಅವರಿಗೆ ಈ ಹಾಡುಗಾರಿಕೆಯೂ ಹುಟ್ಟಿನಿಂದಲೇ ಬಂದಿದೆ. ಈ ಹಿಂದೆ ಧಮಾಕಾ ರೆಕಾರ್ಡ್‌ಗಾಗಿ ಹಮ್‌ ಹಿಂದೂಸ್ತಾನಿ ಹಾಡಿಗೆ ಧ್ವನಿ ನೀಡಿದ್ದರು. ಸದ್ಯ ಆ ಹಾಡು ಈಗ ಯೂಟ್ಯೂಬ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಇದನ್ನು ಓದಿ| ಕ್ರೂಸ್‌ನಲ್ಲಿ ಡ್ರಗ್ಸ್‌ ಕೇಸ್‌, ಶಾರುಖ್‌ ಪುತ್ರ ಆರ್ಯನ್‌ ಖಾನ್‌ಗೆ ಕ್ಲೀನ್‌ ಚಿಟ್‌

Exit mobile version