Site icon Vistara News

Sidharth Kiara Reception: ಮುಂಬೈನಲ್ಲಿ ಸಿದ್ಧಾರ್ಥ್‌-ಕಿಯಾರಾ ಅದ್ಧೂರಿ ರಿಸೆಪ್ಶನ್‌, ಯಾವ ಗಣ್ಯರು ಭಾಗಿ?

Sidharth Kiara Reception

#image_title

ಮುಂಬೈ: ಕೆಲ ದಿನಗಳ ಹಿಂದಷ್ಟೇ ಹಸೆಮಣೆ ಏರಿದ ಬಾಲಿವುಡ್‌ನ ತಾರಾ ಜೋಡಿಯಾದ ಸಿದ್ಧಾರ್ಥ್‌ ಮಲ್ಹೋತ್ರಾ ಹಾಗೂ ಕಿಯಾರಾ ಆಡ್ವಾಣಿ ಅವರು ಭಾನುವಾರ (ಜನವರಿ ೧೨) ರಾತ್ರಿ ಮುಂಬೈನಲ್ಲಿ ಅದ್ಧೂರಿ ರಿಸೆಪ್ಶನ್‌ (Sidharth Kiara Reception) ಆಯೋಜಿಸಿದ್ದು, ಬಾಲಿವುಡ್‌ನ ಗಣ್ಯಾತಿಗಣ್ಯರು ಆಗಮಿಸಿ ಜೋಡಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: Sidharth Kiara Wedding: ಕಿಯಾರ- ಸಿದ್ಧಾರ್ಥ್‌ ಜೋಡಿಗೆ ರಾಮ್ ಚರಣ್ ಪತ್ನಿ ಉಪಾಸನಾ ಕ್ಷಮೆಯಾಚಿಸಿದ್ದು ಏಕೆ?

ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್‌ ಜೋಹರ್‌, ನಟ ವಿಕ್ಕಿ ಕೌಶಲ್‌, ಅಜಯ್‌ ದೇವಗನ್‌, ಕಾಜೋಲ್‌, ಆಯುಷ್ಮಾನ್‌ ಖುರಾನಾ, ಕರೀನಾ ಕಪೂರ್‌, ವಿದ್ಯಾ ಬಾಲನ್‌, ರಣವೀರ್‌ ಸಿಂಗ್‌, ಆಲಿಯಾ ಭಟ್‌, ಅಭಿಷೇಕ್‌ ಬಚ್ಚನ್‌ ಸೇರಿ ಹಲವಾರು ಗಣ್ಯರು ಪಾಲ್ಗೊಂಡರು.

ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಸಿದ್ಧಾರ್ಥ್‌ ಹಾಗೂ ಕಿಯಾರಾ, ಫೆಬ್ರವರಿ ೭ರಂದು ರಾಜಸ್ಥಾನದ ಜೈಪುರದಲ್ಲಿ ಮದುವೆಯಾಗಿದ್ದಾರೆ. ಮದುವೆಗೆ ಕುಟುಂಬಸ್ಥರು ಸೇರಿ ಕೆಲವು ಆಪ್ತರಿಗೆ ಮಾತ್ರ ಆಹ್ವಾನವಿತ್ತು. ಹಾಗಾಗಿ, ಜೋಡಿಯು ಎಲ್ಲ ಗಣ್ಯರನ್ನು ಆಹ್ವಾನಿಸಿ ಮುಂಬೈನಲ್ಲಿ ರಿಸೆಪ್ಶನ್‌ ಮಾಡಿಕೊಂಡಿದ್ದಾರೆ.

Exit mobile version