Site icon Vistara News

SIIMA 2022 | ತಮಿಳು-ಮಲಯಾಳಂ ಸೈಮಾ ಪ್ರಶಸ್ತಿಗಳ ಅನಾವರಣ: ಮಿಂಚಿದ ಶಿವಕಾರ್ತಿಕೇಯನ್‌, ಟೊವಿನೊ ಥಾಮಸ್‌!

SIIMA 2022

ಬೆಂಗಳೂರು: ʻಸೌಂತ್‌ ಇಂಡಿಯನ್‌ ಇಂಟರ್‌ನ್ಯಾಷನಲ್‌ ಮೂವಿ ಅವಾರ್ಡ್‌ (ಸೈಮಾ 2022) (SIIMA 2022) ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿ (ಸೆ.10 ಹಾಗೂ ಸೆ.11ರಂದು) ನಡೆದಿದೆ. ಶನಿವಾರ ಕನ್ನಡ ಮತ್ತು ತೆಲುಗು ಸಿನಿಮಾಗಳ ಪ್ರಶಸ್ತಿಯನ್ನು ನೀಡದ ಬೆನ್ನಲ್ಲೆ ಭಾನುವಾರ ತಮಿಳು ಮತ್ತು ಮಲಯಾಳಂ ಸಿನಿಮಾಗಳ ಪ್ರಶಸ್ತಿಗಳು ಅನಾವರಣಗೊಂಡಿವೆ.

ಸೈಮಾ 2012ರಲ್ಲಿ ಪ್ರಾರಂಭಗೊಂಡಿದ್ದು, ಈ ಬಾರಿ 10ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಸಿನಿಮಾಗಳು ಸೈಮಾ ಪ್ರಶಸ್ತಿ ಅಡಿಯಲ್ಲಿ ಬರುತ್ತವೆ. ಪ್ರತಿ ಭಾಷೆಯಲ್ಲಿ ಸುಮಾರು 10 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.

ʻಡಾಕ್ಟರ್‌; ಸಿನಿಮಾ ನಟ ಶಿವಕಾರ್ತಿಕೇಯನ್, ʻಮನಾಡುʼ ಸಿನಿಮಾ ನಟ ಶಿಂಬು ಹಾಗೂ ʻಮಿನ್ನಲ್ ಮುರಳಿʼ ಸಿನಿಮಾ ನಟ ಟೊವಿನೊ ಥಾಮಸ್ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡರು. ಆರ್ಯ, ಸೀಲಾಂಬರಸನ್, ಪ್ರಿಯಾಂಕಾ ಮೋಹನ್ ಮತ್ತು ನಿಮಿಷಾ ಸಜ್ರಿಯಾನ್ ವಿಜೇತರಾದವರಲ್ಲಿ ಪ್ರಮುಖರಾಗಿದ್ದಾರೆ.

ಇದನ್ನೂ ಓದಿ | SIIMA 2022 | ಅತ್ಯುತ್ತಮ ನಟ ಪ್ರಶಸ್ತಿಗೆ ಅಲ್ಲು ಅರ್ಜುನ್‌ ಭಾಜನ: ಜನಪ್ರಿಯ ಹಿಂದಿ ತಾರೆ ಪಟ್ಟ ಇವರಿಗೇ!

ತಮಿಳು ಸಿನಿಮಾ ಪ್ರಶಸ್ತಿಗಳು

ಮಲಯಾಳಂ ಸಿನಿಮಾ ಪ್ರಶಸ್ತಿಗಳು

ತಮಿಳು ಮತ್ತು ಮಲಯಾಳಂ ಚಲನಚಿತ್ರೋದ್ಯಮಗಳಲ್ಲಿ ಈ ಪ್ರಶಸ್ತಿಗಳನ್ನು ಹೊರತುಪಡಿಸಿ, SIIMA ಎರಡು ಹೊಸ ವಿಭಾಗಗಳಲ್ಲಿ ವಿಶೇಷ ಪ್ರಶಸ್ತಿಗಳನ್ನು ಘೋಷಿಸಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ದಶಕದ ಅತ್ಯುತ್ತಮ ಸಾಧನೆಗೆ ʻಹಂಸಿಕಾ ಮೋಟ್ವಾನಿʼ ಹೊರಹೊಮ್ಮಿದ್ದಾರೆ. ವರ್ಷದ ಅತ್ಯುತ್ತಮ ನಿರ್ವಹಣೆಗೆ ʼಯೋಗಿ ಬಾಬುʼ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ | SIIMA 2022 | ಮುಂದಿನ ಸಿನಿಮಾದ ಅಪ್‌ಡೇಟ್‌ ಕೊಟ್ರು ರಾಕಿಂಗ್‌ ಸ್ಟಾರ್‌ ಯಶ್‌: ಇಲ್ಲಿದೆ ಸೈಮಾ ಪ್ರಶಸ್ತಿಗಳ ವಿವರ

Exit mobile version