Site icon Vistara News

SIIMA 2022 | ಮುಂದಿನ ಸಿನಿಮಾದ ಅಪ್‌ಡೇಟ್‌ ಕೊಟ್ರು ರಾಕಿಂಗ್‌ ಸ್ಟಾರ್‌ ಯಶ್‌: ಇಲ್ಲಿದೆ ಸೈಮಾ ಪ್ರಶಸ್ತಿಗಳ ವಿವರ

SIIMA 2022

ಬೆಂಗಳೂರು: ʻಸೌಂತ್‌ ಇಂಡಿಯನ್‌ ಇಂಟರ್‌ನ್ಯಾಷನಲ್‌ ಮೂವಿ ಅವಾರ್ಡ್‌ (ಸೈಮಾ 2022) (SIIMA 2022) ಇದೇ ಮೊದಲ ಬಾರಿ ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿ (ಸೆ.10 ಹಾಗೂ ಸೆ.11ರಂದು) ನಡೆಯುತ್ತಿದೆ. ಹಲವು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಳೆದ ವರ್ಷ ನಿಧನ ಹೊಂದಿದ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಈ ಕಾರ್ಯಕ್ರಮದಲ್ಲಿ ವಿಶೇಷ ಗೌರವ ಸಲ್ಲಿಕೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ ಯಶ್‌ ಅವರು ಮುಖ್ಯ ಅತಿಥಿಯಾಗಿ ಬಂದಿದ್ದರು. ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ ಅವರು ʻʻನಾನು ಏನೇ ಕೆಲಸ ಮಾಡಿದ್ದರೂ ಅದು ಸರಿಯಾದ ಸಮಯಕ್ಕೆ ಮಾಡುತ್ತೇನೆ. ಒಳ್ಳೆಯ ಸಮಯ ನೋಡಿಕೊಂಡು ತೆರೆ ಮೇಲೆ ಮತ್ತೆ ಬರುತ್ತೇನೆ. ಪ್ಲ್ಯಾನ್‌ ಮಾಡಿಕೊಂಡು ಮುಂದಿನ ಸಿನಿಮಾ ಬಗ್ಗೆ ಅಪ್‌ಡೇಟ್‌ ನೀಡುತ್ತೇನೆ. ಬೆಂಗಳೂರಿನಲ್ಲಿ ಸೈಮಾ ನಡೆಯುತ್ತಿರುವುದು ಖುಷಿಯ ವಿಚಾರ. ಇಷ್ಟು ದಿನ ಈ ಕಾರ್ಯಕ್ರಮಕ್ಕೆ ಬೇರೆ ಕಡೆ ಹೋಗುತ್ತಿದ್ದೇವು. ಇದೀಗ ನಮ್ಮ ಬೆಂಗಳೂರಿನಲ್ಲಿ ಆಗುತ್ತಿರುವುದು ಹೆಮ್ಮೆಯ ವಿಚಾರ. ಈ ಕಾರ್ಯಕ್ರಮವನ್ನು ಅಪ್ಪು ಸರ್‌ಗೆ ಟ್ರಿಬ್ಯುಟ್‌ ಮಾಡಲಾಗಿದೆ. ಅವರು ಇದ್ದಿದ್ದರೆ ಇನ್ನೂ ದೊಡ್ಡ ಮಟ್ಟದಲ್ಲಿ ಸೆಲೆಬ್ರೆಟ್‌ ಮಾಡಬಹುದಿತ್ತುʼʼ ಎಂದು ಹೇಳಿದರು.

ಇದನ್ನೂ ಓದಿ | ಕೀನ್ಯಾದಲ್ಲಿ ಮೊಳಗಲಿದೆ ಕನ್ನಡ ಡಿಂಡಿಮ: ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರದ ಸಿದ್ಧತೆ

ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ಸುರಿಮಳೆ!
ಸೈಮಾ 2012ರಲ್ಲಿ ಪ್ರಾರಂಭಗೊಂಡಿದ್ದು, ಈ ಬಾರಿ 10ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಸಿನಿಮಾಗಳು ಸೈಮಾ ಪ್ರಶಸ್ತಿ ಅಡಿಯಲ್ಲಿ ಬರುತ್ತವೆ. ಪ್ರತಿ ಭಾಷೆಯಲ್ಲಿ ಸುಮಾರು 10 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.

ಸೆ.10ರಂದು ಹಲವು ಪ್ರಶಸ್ತಿಗಳು ಅನಾವರಣಗೊಂಡಿದೆ. 2021ರಲ್ಲಿ ತರುಣ್‌ ಸುಧೀರ್‌ ನಿರ್ದೇಶನದ ʻರಾಬರ್ಟ್‌ʼ ಸಿನಿಮಾ ಬೆಸ್ಟ್‌ ಸಿನಿಮಾಟೋಗ್ರಫಿ ಪ್ರಶಸ್ತಿ ಪಡೆದುಕೊಂಡಿದೆ. ಕನ್ನಡದ ʻನಿನ್ನ ಸನಿಹಕೆʼ ಸಿನಿಮಾದ ʻನೀ ಪರಿಚಯʼ ಹಾಡಿಗೆ ವಾಸುಕಿ ವೈಭವ್‌ಗೆ ಅತ್ಯುತ್ತಮ ಗೀತ ರಚನಕಾರ ಪ್ರಶಸ್ತಿ ಸಿಕ್ಕಿದೆ.

ಇದನ್ನೂ ಓದಿ | Powerful Kannada Movies | ಈ ಹಳೇ ಕನ್ನಡ ಸಿನಿಮಾಗಳಿಗೂ ಪ್ಯಾನ್ ಇಂಡಿಯಾ ಖದರು‌ ಇತ್ತು!

Exit mobile version