ಬೆಂಗಳೂರು: ಕಾಲಿವುಡ್ ನಟ ಸಿಂಬು (Simbu Marriage), ಅವರ ನಿಜವಾದ ಹೆಸರು ಸಿಲಂಬರಸನ್ ಥೆಸಿಂಗು ರಾಜೇಂದರ್ (Silambarasan Thesingu Rajendar). ತಮಿಳು ಚಿತ್ರರಂಗದಲ್ಲಿ ನಟನಾಗಿ, ಕಥೆಗಾರ, ಸಂಗೀತ ನಿರ್ದೇಶಕ, ಬರಹಗಾರ, ಗಾಯಕ, ನೃತ್ಯಗಾರ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಟ ಶ್ರೀಲಂಕಾದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮದುವೆಯಾಗಲಿದ್ದಾರೆ ಎಂಬ ಗಾಸಿಪ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಮದುವೆಯಾಗುವ ಹುಡುಗಿಯ ತಂದೆ ಖ್ಯಾತ ಉದ್ಯಮಿ ಎಂದು ಹೇಳಲಾಗುತ್ತಿದೆ.
ಶ್ರೀಲಂಕಾದ ತಮಿಳು ಕುಟುಂಬಕ್ಕೆ ಸೇರಿದ ಯುವತಿಯನ್ನೇ ಸಿಂಬು ವಿವಾಹವಾಗುತ್ತಿದ್ದು, ಸಿಂಬು ಮದುವೆಯಾಗಲಿರುವ ಯುವತಿ ವೈದ್ಯ ವೃತ್ತಿಯಲ್ಲಿ ತೊಡಗಿದ್ದಾರಂತೆ. ಕಳೆದ ಕೆಲ ವರ್ಷಗಳಿಂದಲೂ ಇವರು ಪರಿಚಿತರೇ ಆಗಿದ್ದಾರೆ ಎಂಬ ಮಾತುಗಳು ಸಹ ಇವೆ. ತಮಿಳು ಚಿತ್ರರಂಗದಲ್ಲಿ ಬಾಲನಟನಾಗಿ ಪದಾರ್ಪಣೆ ಮಾಡಿದರು. ಸಿಂಬು ತನ್ನ ಪ್ರತಿಭೆಯಿಂದ ಮಾತ್ರವಲ್ಲದೆ ಕೆಲವು ವಿವಾದಗಳಿಂದಲೂ ಗಮನ ಸೆಳೆದಿದ್ದಾರೆ. ಅವರು ಈ ಹಿಂದೆ ಕೆಲಸ ಮಾಡಿದ ಕೆಲವು ನಟಿಯರೊಂದಿಗೆ ಅವರ ಪ್ರಣಯ ಸಂಬಂಧಗಳ ಬಗ್ಗೆ ಮಾಧ್ಯಮಗಳಲ್ಲಿ ನಿರಂತರ ವರದಿಗಳು ಬಂದಿವೆ.
ಇದನ್ನೂ ಓದಿ: Actor Suriya: ಸಚಿನ್ ತೆಂಡೂಲ್ಕರ್ ಭೇಟಿ ಮಾಡಿದ ಕಾಲಿವುಡ್ ನಟ ಸೂರ್ಯ: ಫೋಟೊ ವೈರಲ್
ನಯನತಾರಾ ಮತ್ತು ಹನ್ಸಿಕಾ ಜತೆ ರಿಲೇಶನ್‌ಶಿಪ್‌ನಲ್ಲಿದ್ರಾ ಸಿಂಬು?
ನಯನತಾರಾ ಮತ್ತು ಹನ್ಸಿಕಾ ಅವರೊಂಗೆ ನಟನ ಹೆಸರು ತುಳುಕು ಹಾಕಿಕೊಂಡಿತ್ತು.ಈ ವಿವಾದಗಳಿಂದಾಗಿ, ಅವರು ಸ್ವಲ್ಪ ಸಮಯದವರೆಗೆ ನಟನೆಯಿಂದ ವಿರಾಮ ತೆಗೆದುಕೊಂಡರು. ಇತ್ತೀಚೆಗಷ್ಟೇ‘ವೆಂದು ತಣಿದತು ಕಾಡು’(vendhu thanindhathu kaadu) ಸಿನಿಮಾ ತೆರೆಕಂಡಿದ್ದು, ಇನ್ನೂ ಹತ್ತು ಸಿನಿಮಾಗಳು ಸದ್ಯದಲ್ಲೇ ತೆರೆಗೆ ಬರಲಿವೆ. ಸಿಂಬು ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ ಮತ್ತು ಅವರ ಅಭಿಮಾನಿಗಳು ಅವರ ಮದುವೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.