ನವದೆಹಲಿ: ಕನ್ನಡದ ‘ಮುಂಗಾರು ಮಳೆ-2’ ಚಿತ್ರದ ‘ಸರಿಯಾಗಿ ನೆನಪಿದೆ ನನಗೆ…’ (Sariyaagi Nenapide Nanage) ಎಂಬ ಅದ್ಭುತ ಹಾಡನ್ನು ಹಾಡಿದ ಬಾಲಿವುಡ್ ಗಾಯಕ ಅರ್ಮಾನ್ ಮಲಿಕ್ (Singer Armaan Malik) ಅವರು ಅಕ್ಟೋಬರ್ 22ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗಾಯಕ ಅರ್ಮಾನ್ ಮಲಿಕ್ ಮತ್ತು ಗೆಳತಿ ಆಶ್ನಾ ಶ್ರಾಫ್ (Aashna Shroff) ಅವರು ಮುತ್ತಿನೊಂದಿಗೆ ತಮ್ಮ ಸಂಬಂಧಕ್ಕೆ ಮುದ್ರೆ ಹಾಕಿದರು(engagement ceremony). ಅರ್ಮಾನ್ ಮಲಿಕ್, ಸರಿಯಾಗಿ ನನೆಪಿದೆ ನನಗೆ…, ಒಂದು ಮಳೆ ಬಿಲ್ಲು…, ನಾ ಹೇಗೆ ಹೇಳಲಿ… ಸೇರಿದಂತೆ ಕನ್ನಡ ಅನೇಕ ಚಿತ್ರಗಳ ಸೂಪರ್ ಹಿಟ್ ಸಾಂಗ್ಸ್ ಹಾಡಿದ್ದಾರೆ. ಬಾಲಿವುಡ್ನಲ್ಲೂ ಅವರು ಬಹು ಬೇಡಿಕೆಯ ಗಾಯಕರಾಗಿದ್ದಾರೆ.
ಸೋಷಿಯಲ್ ಮೀಡಿಯಾ ಇನ್ಫ್ಲೂನ್ಸರ್ ಆಗಿರುವ ಆಶ್ನಾ ಶ್ರಾಫ್- ಅರ್ಮಾನ್ ಮಲಿಕ್ ಅವರು ಅಭಿಮಾನಿಗಳಿಗೆ ತಮ್ಮ ಸಂಬಂಧವನ್ನು ಜಾಹೀರು ಮಾಡಿದ್ದಾರೆ. ಮಲಿಕ್ ಅವರ ಕಸಮ್ ಸೇ.. ಹಾಡು ಬಿಡುಗಡೆಗೊಂಡ ಬಳಿಕ ಈ ಜೋಡಿ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಹಾಕಿತ್ತು. ತಮ್ಮ ನಿಶ್ಚಿತಾರ್ಥ ಫೋಟೋಗಳನ್ನು ಅರ್ಮಾನ್ ಮಲಿಕ್ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ್ದಾರೆ.
ನಿಶ್ಚಿತಾರ್ಥ ಸಮಾರಂಭದಿಂದ ಅರ್ಮಾನ್ ಹಂಚಿಕೊಂಡ ಫೋಟೋಗಳಲ್ಲಿ ಜೋಡಿಯು ಮುತ್ತು ಮತ್ತು ಉಂಗುರಗಳನ್ನು ವಿನಿಮಯ ಮಾಡಿಕೊಳ್ಳುವ ಕ್ಷಣಗಳನ್ನು ಸೆರೆ ಹಿಡಿಯಲಾಗಿದೆ.
ಅರ್ಮಾನ್ ಮಲಿಕ್ ಮತ್ತು ಆಶ್ನಾ ನಡುವಿನ ಪ್ರೇಮಕಥೆಯು ನಿಜ ಜೀವನದ ಕಾಲ್ಪನಿಕ ಕಥೆಯಂತೆ ತೋರುತ್ತದೆ. ಆಗಸ್ಟ್ನಲ್ಲಿ, ಅರ್ಮಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರ ಪ್ರೀತಿಯ ಪ್ರಯಾಣದ ಒಂದು ನೋಟವನ್ನು ಹಂಚಿಕೊಂಡರು ಮತ್ತು ತಾವಿಬ್ಬರು ‘ಶಾಶ್ವತವಾಗಿ’ ಜೊತೆಯಾಗಿರುವ ಮಾಹಿತಿಯನ್ನು ಬಹಿರಂಗಪಡಿಸಿದರು. ಪ್ರಪೋಸಲ್ ಚಿತ್ರವನ್ನು ಪೋಸ್ಟ್ ಮಾಡಿ, ಹೃದಯದ ಎಮೋಜಿಯ ಜೊತೆಗೆ “ನಮ್ಮ ಮುಗಿಯದ ಪಯಣ ಈಗಷ್ಟೇ ಪ್ರಾರಂಭವಾಗಿದೆ” ಎಂದು ಬರೆದುಕೊಂಡಿದ್ದರು. ಮೊದಲ ಚಿತ್ರದಲ್ಲಿ, ಆಫ್-ವೈಟ್ ಸೂಟ್ನಲ್ಲಿ ಧರಿಸಿರುವ ಅರ್ಮಾನ್, ತನ್ನ ಮೊಣಕಾಲುಗಳ ಮೇಲೆ ಕೆಳಗೆ ಹೋಗುತ್ತಿರುವುದನ್ನು ಮತ್ತು ಬಿಳಿ-ಕೆಂಪು ಬಣ್ಣದ ಹೂವಿನ ಪ್ರಿಂಟ್ ಡ್ರೆಸ್ನಲ್ಲಿ ಸುಂದರವಾಗಿ ಕಾಣುತ್ತಿದ್ದ ಆಶ್ನಾ ಅವರ ಬೆರಳಿಗೆ ಉಂಗುರವನ್ನು ಹಾಕುತ್ತಿರುವುದು ಕಾಣಬಹುದಾಗಿದೆ.
ಎರಡನೇ ಫೋಟೋದಲ್ಲಿಆಶ್ನಾ ತನ್ನ ದೊಡ್ಡ ವಜ್ರದ ಬೆರಳನ್ನು ಪ್ರದರ್ಶಿಸಿದ್ದಾರೆ. ಫೋಟೋಗಳನ್ನು ಹಂಚಿಕೊಂಡಿರುವ ಆಶ್ನಾ, “ನಿಮ್ಮ ನಂಬಿಕೆಯ ನೆಗೆತವು ನನ್ನ ಎಲ್ಲಾ ನಂಬಿಕೆಯನ್ನು ನಿಮ್ಮ ಮೇಲೆ ಇರಿಸುವಂತೆ ಮಾಡಿದೆ” ಎಂದು ಶೀರ್ಷಿಕೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Karisma Kapoor: ಫ್ಯಾಮಿಲಿ ಜತೆಗೆ ಕರಿಷ್ಮಾ ಕಪೂರ್ ಡಿನ್ನರ್, ಗೆಟ್-ಟುಗೆದರ್ ಫೋಟೊ ವೈರಲ್!
ಗಾಯಕ ಅರ್ಮಾನ್ ಮಲಿಕ್ ಮತ್ತು ಲೈಫ್ಸ್ಟೈಲ್ ಬ್ಲಾಗರ್ ಆಶ್ನಾ ಶ್ರಾಫ್ ಅವರು 2019ರಿಂದಲೂ ಸಂಬಂಧದಲ್ಲಿದ್ದರು. ಆಗಾಗ ಅವರಿಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಮ್ಮಿಬ್ಬರ ಬಗ್ಗೆ ಮಾಹಿತಿಯನ್ನು ಷೇರ್ ಮಾಡಿಕೊಳ್ಳುವುದರಿಂದ ಹಿಂಜರಿಯುತ್ತಿರಲಿಲ್ಲ.
ವೃತ್ತಿಯ ಪ್ರಕಾರ ಹೇಳುವುದಾದರೆ, ಅರ್ಮಾನ್ ಅವರ ಬಾಲಿವುಡ್ನಲ್ಲಿ ಗಾಯಕರಾಗಿ ದೊಡ್ಡ ಹೆಸರು ಮಾಡಿದ್ದಾರೆ. ತಮ್ಮ ಮಧುರ ಕಂಠದ ಮೂಲಕ ಕೇಳಗರನ್ನು ಸೆಳೆಯುತ್ತಾರೆ. ಮೈ ಹೂನಾ ಹೀರೋ ತೇರಾ, ಹುವಾ ಹೈ ಆಜ್ ಪೆಹ್ಲಿ, ಬೋಲ್ ನ ಝರಾ, ತುಮ್ ಜೋ ಮಿಲೇ, ಕೌನ್ ತುಜ್ಹೇ ಸೇರಿದಂತೆ ಅನೇಕ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಮತ್ತೊಂದೆಡೆ, ಆಶ್ನಾ ಶ್ರಾಫ್ ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ಫ್ಯಾಷನ್ ಬ್ಲಾಗರ್ ಮತ್ತು ಮಾಡೆಲ್ ಆಗಿದ್ದಾರೆ.