ಮುಂಬೈ: ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ರೋಹಿತ್ ಶೆಟ್ಟಿ ಪೊಲೀಸ್ ಕಥೆಗಳನ್ನಾಧರಿಸಿದ ಸಿನಿಮಾಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಅಜಯ್ ದೇವಗನ್ ನಟನೆಯ ಸಿಂಗಂ ಸೀರಿಸ್, ಅಕ್ಷಯ್ ಕುಮಾರ್ ನಟನೆಯ ʼಸೂರ್ಯವಂಶಿʼ, ರಣವೀರ್ ಸಿಂಗ್ ನಟನೆಯ ʼಸಿಂಬಾʼ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದವರವರು. ಇದೀಗ ಅಜಯ್ ದೇವಗನ್ ಅವರಿಗಾಗಿಯೇ ʼಸಿಂಗಂ ಅಗೇಯ್ನ್ʼ (Singham Again) ಸಿನಿಮಾವನ್ನೂ ಮಾಡುತ್ತಿದ್ದು, ಅದರಲ್ಲಿ ತಾರೆಗಳ ಸಮಾಗಮವೇ ಇರಲಿದೆ.
ಇದನ್ನೂ ಓದಿ: Police Dog | ದಾವಣಗೆರೆಯಲ್ಲಿ ಲೇಡಿ ಸಿಂಗಂ ತುಂಗಾ ಡೆಂಗ್ಯುಗೆ ಬಲಿ!
ಹೌದು. ʼಸಿಂಗಂ ಅಗೇಯ್ನ್ʼ ಸಿನಿಮಾದಲ್ಲಿ ಕೇವಲ ಅಜಯ್ ದೇವಗನ್ ಮಾತ್ರ ಇರುವುದಿಲ್ಲ. ಸೂರ್ಯವಂಶಿಯಾದ ಅಕ್ಷಯ್, ಸಿಂಬಾ ಆದ ರಣವೀರ್ ಕೂಡ ಈ ಸಿನಿಮಾದಲ್ಲಿ ಮಿಂಚಲಿದ್ದಾರೆ. ಈ ಸಿನಿಮಾದಲ್ಲಿ ಮೂರೂ ಪೊಲೀಸ್ ಅಧಿಕಾರಿಗಳು ಒಟ್ಟಾಗಿ ನಟಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಹಾಗೆಯೇ ವಿಶೇಷವಾಗಿ ನಟಿ ದೀಪಿಕಾ ಪಡುಕೋಣೆ ಕೂಡ ಈ ಸಿನಿಮಾದಲ್ಲಿ ಲೇಡಿ ಸಿಂಗಂ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಈವರೆಗೆ ಪೊಲೀಸ್ ಕಥೆಗಳ ಸಿನಿಮಾಗಳನ್ನು ರೋಹಿತ್ ಮಾಡಿದ್ದಾರಾದರೂ ಅದರಲ್ಲಿ ನಾಯಕ ನಟಿಯರಿಗೆ ಪೊಲೀಸ್ ಪಾತ್ರ ಕೊಟ್ಟಿರಲಿಲ್ಲ. ಆದರೆ, ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಜಯ್ ಮುಖ್ಯ ಪಾತ್ರದಲ್ಲಿರುವುದರಿಂದ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮತ್ತು ರಣವೀರ್ ಕೊನೆಯವರೆಗೂ ಕಾಣಿಸಿಕೊಳ್ಳಲಿದ್ದಾರೆಯೇ ಅಥವಾ ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರೆಯೇ ಎನ್ನುವ ವಿಚಾರ ಇನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿ: Kajol Birthday | ಸ್ಪೆಷಲ್ ಕ್ಯಾಪ್ಷನ್ ಮೂಲಕ ವಿಶ್ ಮಾಡಿದ ಅಜಯ್ ದೇವಗನ್