ಪ್ರಮುಖ ಚಲನಚಿತ್ರಗಳ ಬಿಡುಗಡೆ (movie releases) ಕೊರತೆಯಿಂದಾಗಿ ತೆಲಂಗಾಣದಾದ್ಯಂತ (Telangana) ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು (Single Screen Theaters) 10 ದಿನಗಳ ಕಾಲ ತಾತ್ಕಾಲಿಕ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಯಾವುದೇ ಗಮನಾರ್ಹ ಚಲನಚಿತ್ರ ಬಿಡುಗಡೆಗೆ ಇಲ್ಲದಿರುವ ಪರಿಣಾಮ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಯಾವುದೇ ದೊಡ್ಡ ಬಜೆಟ್ ನ ಚಿತ್ರಗಳು ಬಾರದೇ ಇರುವುದರಿಂದ ಥಿಯೇಟರ್ ಗಳನ್ನು ಮುಚ್ಚುತ್ತಿರುವುದಾಗಿ ಥಿಯೇಟರ್ ಮಾಲೀಕರು ಉಲ್ಲೇಖಿಸಿದ್ದಾರೆ. ಪ್ರೇಕ್ಷಕರನ್ನು ಆಕರ್ಷಿಸಲು ಯಾವುದೇ ಪ್ರಮುಖ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಚಲನಚಿತ್ರ ಪ್ರದರ್ಶನ ಕಾರ್ಯಾಚರಣೆಯ ವೆಚ್ಚ ಮತ್ತು ಕಡಿಮೆಯಾದ ಆದಾಯ ಸೇರಿದಂತೆ ಹಣಕಾಸಿನ ಸವಾಲುಗಳ ನಡುವೆ 2024ರ ಸಂಕ್ರಾಂತಿ ನಂತರ ಯಾವುದೇ ದೊಡ್ಡ ಚಿತ್ರಗಳು ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗಲಿಲ್ಲ.
ಏನು ಕಾರಣ?
ಕಳೆದ ಕೆಲವು ವಾರಗಳಲ್ಲಿ ತೆಲಂಗಾಣದಲ್ಲಿ ಚಲನಚಿತ್ರ ವ್ಯಾಪಾರಿಗಳು ಮೇ 17ರಿಂದ ಥಿಯೇಟರ್ ಗಳನ್ನು ಮುಚ್ಚುವ ನಿರ್ಧಾರವನ್ನು ಕೈಗೊಂಡರು. ಒಂದೆಡೆ ಲೋಕ ಸಭಾ ಚುನಾವಣೆ, ಇನ್ನೊಂದೆಡೆ ದೊಡ್ಡ ಚಿತ್ರಗಳ ಬಿಡುಗಡೆಗಳ ಕೊರತೆ, ಇಂಡಿಯನ್ ಪ್ರೀಮಿಯರ್ ಲೀಗ್ ಗಳು ತೆಲಂಗಾಣ ಮತ್ತು ಆಂಧ್ರಪ್ರದೇಶದಾದ್ಯಂತ ಥಿಯೇಟರ್‌ಗಳ ಮೇಲೆ ಭಾರಿ ಪ್ರಭಾವವನ್ನು ಬೀರಿದೆ.
ಮತ್ತೆ ತೆರೆಯುವ ನಿರೀಕ್ಷೆ
ಮೇ 31 ರಂದು ವಿಶ್ವಕ್ ಸೇನ್ ಅವರ ‘ಗ್ಯಾಂಗ್ಸ್ ಆಫ್ ಗೋದಾವರಿ’ಗಾಗಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಮತ್ತೆ ತೆರೆಯಲ್ಪಡುತ್ತವೆ. ಅಲ್ಲದೆ ಅನೇಕ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ‘ಕಲ್ಕಿ’ಯಂತಹ ದೊಡ್ಡ-ಬಜೆಟ್ ಚಿತ್ರಗಳ ಮೇಲೆ ಭರವಸೆ ಇಡುತ್ತಿವೆ. 2898 AD’, ‘ಪುಷ್ಪ: ದಿ ರೂಲ್’, ‘ಗೇಮ್ ಚೇಂಜರ್’, ‘ವಿಶ್ವಂಭರ’ ಮತ್ತು ‘ಇಂಡಿಯನ್ 2’ ಸೇರಿದಂತೆ ಈ ಬಾರಿ ಹಲವು ಚಿತ್ರಗಳು ತೆರೆಗೆ ಬರುವ ನಿರೀಕ್ಷೆಯಲ್ಲಿದೆ.
ಹತ್ತು ದಿನ ಬಂದ್
ತೆಲಂಗಾಣದಲ್ಲಿ ಚಲನಚಿತ್ರ ವ್ಯವಹಾರವು ಕೆಲವು ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿದೆ. ಇದು ರಾಜ್ಯದ ಮನರಂಜನಾ ವಲಯದಾದ್ಯಂತ ತಲ್ಲಣ ಉಂಟು ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಆದಾಯ ಕಡಿಮೆಯಾಗುತ್ತಿರುವ ಕಾರಣ ತೆಲಂಗಾಣದಾದ್ಯಂತ ಹಲವಾರು ಏಕ-ಪರದೆಯ ಚಿತ್ರಮಂದಿರಗಳು ಮೇ 17ರಿಂದ ಮೇ 26ರವರೆಗೆ ಹತ್ತು ದಿನಗಳ ಕಾಲ ಬಾಗಿಲು ಮುಚ್ಚಲು ಯೋಜಿಸಿದೆ.
ಈ ಬಾರಿ ಬೇಸಿಗೆಯಲ್ಲಿ ಪ್ರಮುಖ ಚಲನಚಿತ್ರ ಬಿಡುಗಡೆಯಾಗಿಲ್ಲ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ದೊಡ್ಡ ಜನಸಮೂಹವನ್ನು ಸೆಳೆಯುವ ಬ್ಲಾಕ್‌ಬಸ್ಟರ್ ಹಿಟ್ ಚಿತ್ರಗಳು ತೆರೆಗೆ ಬರುತ್ತದೆ. ಆದರೆ ಈ ಬಾರಿ ಯಾವುದೇ ಅಂತಹ ಚಿತ್ರಗಳು ಬಂದಿಲ್ಲ. ಇದು ಸಿಂಗಲ್ ಸ್ಕ್ರೀನ್‌ಗಳ ಮೇಲೆ ಗಂಭೀರ ಪರಿಣಾಮವನ್ನೇ ಬೀರಿದೆ.
ಇದನ್ನೂ ಓದಿ: Cannes 2024: ಕಾನ್ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಊರ್ವಶಿ ರೌಟೇಲಾ: ದೀಪಿಕಾ ಸ್ಟೈಲ್ ಕಾಪಿ ಮಾಡಿದ್ರಾ?
ಥಿಯೇಟರ್‌ಗಳು ತಮ್ಮ ಆದಾಯವನ್ನು ಸಂಗ್ರಹಿಸಲು ಕಡಿಮೆ ಅವಕಾಶಗಳನ್ನು ಹೊಂದಿರುತ್ತದೆ. ಚಲನಚಿತ್ರದ ವೇಳಾಪಟ್ಟಿ ಮತ್ತು ಪ್ರೇಕ್ಷಕರ ಸಂಖ್ಯೆಯಲ್ಲಿನ ಏರಿಳಿತಗಳಿಗೆ ಹೆಚ್ಚು ಗುರಿಯಾಗುತ್ತವೆ. ಕಳೆದ ಎರಡು ತಿಂಗಳುಗಳಲ್ಲಿ ಸಣ್ಣ ಮತ್ತು ಮಧ್ಯಮ-ಬಜೆಟ್ ಚಲನಚಿತ್ರಗಳ ಸರಣಿಯು ಛಾಪು ಮೂಡಿಸುವಲ್ಲಿ ವಿಫಲವಾಗಿದೆ. ಇದರಿಂದ ಚಿತ್ರೋದ್ಯಮ ವ್ಯಾಪಾರವನ್ನು ಮತ್ತಷ್ಟು ತಗ್ಗಿದೆ.
ನಷ್ಟ ತಡೆಗೆ ಕ್ರಮ
ತೆಲಂಗಾಣ ಥಿಯೇಟರ್ಸ್ ಅಸೋಸಿಯೇಷನ್ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವ ಮೂಲಕ ಮತ್ತಷ್ಟು ನಷ್ಟವನ್ನು ತಡೆಯಲು ತಡೆಗಟ್ಟಲು ನಿರ್ಧರಿಸಿದೆ.