ಬೆಂಗಳೂರು: ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿದ ಸಿಲ್ಕ್ ಸ್ಮಿತಾ (Silk Smitha) ಮೂಲ ಹೆಸರು ವಿಜಯಲಕ್ಷ್ಮಿ. 1960ರ ಡಿಸೆಂಬರ್ 2ರಂದು ಜನಿಸಿದರು. ಆ ನಂತರದ ದಿನಗಳಲ್ಲಿ ಸಿಲ್ಕ್ ಸ್ಮಿತಾ ಎಂದೇ ಫೇಮಸ್ ಆದರು. ಸೆಪ್ಟೆಂಬರ್ 23 ನಟಿ ಸಿಲ್ಕ್ ಸ್ಮಿತಾ ಅವರ 27ನೇ ಪುಣ್ಯತಿಥಿ. ಇದೀಗ ಕಾಲಿವುಡ್ ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಅವರ ಹಳೆಯ ಹೇಳಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಸಿಲ್ಕ್ ಸ್ಮಿತಾ ಅವರು ಮೃತಪಟ್ಟ ಬಳಿಕ ಅವರ ಶವದ ಮೇಲೆ ಅತ್ಯಾಚಾರ ಮಾಡಲಾಗಿತ್ತು ಎನ್ನುವ ಅವರ ಹೇಳಿಕೆ ಮತ್ತೆ ವೈರಲ್ ಆಗುತ್ತಿದೆ.
ಸಿಲ್ಕ್ ಸ್ಮಿತಾ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ ಮತ್ತು ಅದಕ್ಕಾಗಿಯೇ ಸಿಲ್ಕ್ ಬಾಲ್ಯದಲ್ಲಿ ತಮ್ಮ ಓದನ್ನು ಬಿಡಬೇಕಾಯಿತು. ವರದಿಗಳ ಪ್ರಕಾರ, ಸಿಲ್ಕ್ ಸ್ಮಿತಾ ಅವರು ಕೇವಲ 14 ವರ್ಷದವರಾಗಿದ್ದಾಗ ಮದುವೆಯಾಗಿದ್ದರು ಮತ್ತು ಅವರು ಸಾಕಷ್ಟು ಕೌಟುಂಬಿಕ ಹಿಂಸೆಯನ್ನು ಎದುರಿಸಿದರು. ಸಿಲ್ಕ್ ಸ್ಮಿತಾ ತಮ್ಮ ಗಂಡನ ಮನೆಯಿಂದ ಓಡಿಹೋದ ನಂತರ ಮೇಕಪ್ ಕಲಾವಿದನಾಗಿದ್ದ ತಮ್ಮ ಸ್ನೇಹಿತನ ಮನೆ ಸೇರಿಕೊಂಡಿದ್ದರು. ಮೇಕಪ್ ಕಲಾವಿದರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ತಮಿಳು ನಿರ್ದೇಶಕ ವಿನು ಚಕ್ರವರ್ತಿ ಅವರು ಸಿಲ್ಕ್ ಸ್ಮಿತಾಗೆ ದೊಡ್ಡ ಬ್ರೇಕ್ ನೀಡಿದರು. 1979ರಲ್ಲಿ ತಮಿಳು ಚಲನಚಿತ್ರ ‘ವಂದಿಚಕ್ಕರಂ’ನಲ್ಲಿನ ಅವರ ಅದ್ಭುತ ಅಭಿನಯಕ್ಕಾಗಿ ಮೊದಲ ಬಾರಿಗೆ ಗಮನ ಸೆಳೆದರು. ಸಿಲ್ಕ್ ಸ್ಮಿತಾ ಅವರು 17 ವರ್ಷಗಳ ಕಾಲ ನಟಿಯಾಗಿ, ನೃತ್ಯಗಾತಿಯಾಗಿ ಮಿಂಚಿದರು. 450ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಸೆಪ್ಟೆಂಬರ್ 23, 1996ರಂದು ತಮ್ಮ 35ನೇ ವಯಸ್ಸಿನಲ್ಲಿ ನಿಗೂಢವಾಗಿ ಮೃತಪಟ್ಟರು. ಪೊಲೀಸರಿಗೆ ಸೂಸೈಡ್ ನೋಟ್ ಸಿಕ್ಕಿದೆ ಎಂದು ಹೇಳಲಾಗಿತ್ತು.
ನಟಿ ಕಾಮಪ್ರಚೋದಕ ದೃಶ್ಯಗಳಲ್ಲಿ ನಟಿಸಿ ಫೇಮಸ್ಸಾದ ಕಾರಣ ಅಭಿಮಾನಿಗಳ ಸಂಖ್ಯೆ ಹೆಚ್ಚಿನ ರೀತಿಯಲ್ಲಿ ಇತ್ತು. ಒಮ್ಮೆಯಾದರೂ ಈ ನಟಿಯನ್ನು ನೇರವಾಗಿ ನೋಡಿ ಕಣ್ತುಂಬಿಸಿಕೊಳ್ಳಬೇಕು ಎಂದುಕೊಂಡವರೇ ಹೆಚ್ಚು. ಇದ್ದಕ್ಕಿದ್ದಂತೆ ನಟಿ ಬಾರದ ಲೋಕಕ್ಕೆ ಹೋಗುತ್ತಾರೆ. ʻʻಶವದೊಂದಿಗೆ ಅತ್ಯಾಚಾರ ಮಾಡಲಾಗಿತ್ತು. ಶವಾಗಾರದಲ್ಲಿ ನಟಿಯ ನೌಕರರು ಕುಡಿದ ಅಮಲಿನಲ್ಲಿ ಇರುತ್ತಾರೆ. ಅಲ್ಲಿನ ಹೆಚ್ಚು ನೌಕರರು ಬೆಳಗ್ಗೆ ಕೆಲಸ ಆರಂಭಿಸಿದಾಗಿನಿಂದ ಕುಡಿದಿರುತ್ತಾರೆ. ಇದೇ ಅಮಲಿನಲ್ಲಿ ಕುಡಿದು ಪ್ರಜ್ಞಾಹೀನರಾಗಿರುವ ನೌಕರರು ಹಲವು ಬಾರಿ ಸಿಲ್ಕ್ ಸ್ಮಿತಾ ಅವರ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆʼʼ ಎಂದಿದ್ದಾರೆ ಬೈಲ್ವಾನ್ ರಂಗನಾಥನ್. ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದಾಗ ಶವ ಪರೀಕ್ಷೆ ನಡೆದ ಸ್ಥಳಕ್ಕೆ ಹೋಗಿ ಖುದ್ದು ನೋಡಿದ್ದೆ ಎನ್ನುವ ಅವರ ಮಾತು ಇದೀಗ ಮತ್ತೆ ವೈರಲ್ ಆಗಿದೆ.