ಕನ್ನಡದ ಖ್ಯಾತ ನಿರ್ದೇಶಕ ತರುಣ್ ಸುಧೀರ್ (Tharun Sudhir) ಹಾಗೂ ಸೋನಲ್ ಮೊಂಥೆರೋ (Sonal Monteiro) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ಬೆಂಗಳೂರಿನನ ಮೈಸೂರು ರೋಡಿನಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಎಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.
ಈಗ ಇನ್ನೊಮ್ಮೆ ಸೆಪ್ಟೆಂಬರ್ 1ರಂದು ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲು ಹೊರಟಿದ್ದಾರೆ. ಈಗಾಗಲೆ ಮದುವೆ ಸಮಾರಂಭ ಆರಂಭವಾಗಿದ್ದು, ಫೋಟೊಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.
ಈಗಾಗಲೆ ಹತ್ತಿರದವರಿಗೆ ಆಮಂತ್ರಣ ನೀಡಿರುವ ಸೋನಲ್-ತರುಣ್, ಕುಟುಂಬಸ್ಥರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಈ ಮದುವೆ ನಡೆಯಲಿದೆ. ಈ ಹಿಂದೆ ಚಿರಂಜೀವಿ ಸರ್ಜಾ-ಮೇಘನಾ ಸರ್ಜಾ ಅವರು ಹಿಂದು-ಕ್ರಿಶ್ಚಿಯನ್ ಧರ್ಮದ ಪ್ರಕಾರ ಮದುವೆಯಾಗಿದ್ದರು.
ಈಗ ಸೋನಲ್, ತರುಣ್ ಸಹ ಸಜ್ಜಾಗಿದ್ದಾರೆ. ಕ್ರಿಶ್ಚಿಯನ್ ಧರ್ಮದಲ್ಲಿ ಮದುವೆ ಹೆಣ್ಣು ಗುರುಗಳು ಅಥವಾ ಗುರುಗಳ ಪ್ರತಿನಿಧಿಯ ಮುಂದೆ ಎಲ್ಲರೆದುರಿಗೆ ತನ್ನ ಒಪ್ಪಿಗೆಯನ್ನು ವ್ಯಕ್ತಪಡಿಸಬೇಕಾಗುತ್ತದೆ.
ಮಂಗಳೂರಿನಲ್ಲಿ ವಿವಾಹ ಸಂಭ್ರಮ ಆರಂಭವಾಗಿದ್ದು ಮದುವೆ ಪ್ರಯುಕ್ತ ಸುಂದರವಾಗಿ ಡೆಕೋರೇಶನ್ ಮಾಡಲಾಗಿದೆ. ಸೋನಲ್ ಅವರ ಕುಟುಂಬಸ್ಥರು ಹೆಚ್ಚಾಗಿ ಭಾಗಿಯಾಗಿದ್ದು, ವಿವಾಹ ಪೂರ್ವದ ಶಾಸ್ತ್ರಕ್ಕೆ ಸೋನಲ್ ಅವರು ಹಳದಿ ಬಣ್ಣದ ಡ್ರೆಸ್ ಧರಿಸಿದ್ದರು. ಈಗಾಲೆ ಹಿಂದು ಸಂಪ್ರದಾಯದಲ್ಲಿ ಮದುವೆಯಾದ ಸೋನಲ್, ಮತ್ತೊಮ್ಮೆ ಮದುವೆಯಾಗುತ್ತಿರುವ ಖುಷಿಯಲ್ಲಿ ಇದ್ದಾರೆ.
ಇದನ್ನೂ ಓದಿ: Namratha Gowda: ಕಪ್ಪು ಸೀರೆಯುಟ್ಟು ನೋಡುಗರ ನಿದ್ದೆಗೆಡಿಸಿದ ಕಿರುತೆರೆ ನಟಿ ನಮ್ರತಾ ಗೌಡ