Site icon Vistara News

Sophia Leone: ಪೋರ್ನ್ ತಾರೆ ಸೋಫಿಯಾ ಲಿಯೋನ್ ಸಾವಿನ ರಹಸ್ಯ ಬಯಲು!

Sophia Leone

ನೀಲಿ ಚಿತ್ರ ತಾರೆ (Porn star ) ಸೋಫಿಯಾ ಲಿಯೋನ್ (Sophia Leone) ಸಾವಿನ ಕಾರಣವನ್ನು ಪೊಲೀಸ್ ಅಧಿಕಾರಿಗಳು ಕೊನೆಗೂ ಬಹಿರಂಗಪಡಿಸಿದ್ದಾರೆ. ಮಿತಿಮೀರಿದ ಮದ್ಯ ಸೇವನೆಯೇ ಆಕೆಯ ಸಾವಿಗೆ ಕಾರಣ ಎನ್ನಲಾಗಿದೆ. 26 ವರ್ಷದ ಸೋಫಿಯಾ ಲಿಯೋನ್ ಮಾರ್ಚ್‌ನಲ್ಲಿ ತನ್ನ ಅಪಾರ್ಟ್‌ಮೆಂಟ್‌ನೊಳಗೆ ಶವವಾಗಿ (Sophia Leone death) ಪತ್ತೆಯಾಗಿದ್ದಳು.

ಆಕೆಯ ಸಾವಿನ ಕುರಿತು ಮಾತನಾಡಿರುವ ಆಕೆಯ ತಾಯಿ, ಸೋಫಿಯಾ ಈ ಹಿಂದೆಯೂ ಹಲವು ಬಾರಿ ಆತ್ಮಹತ್ಯೆಯ ಯೋಚನೆಯನ್ನು ಮಾಡಿದ್ದಳು, ಅತಿಯಾಗಿ ಮಧ್ಯಪಾನ ಮಾಡುತ್ತಿದ್ದಳು ಎಂದು ತಿಳಿಸಿದ್ದಾರೆ.

ಮಾರ್ಚ್ 1 ರಂದು, ಲಿಯೋನ್ ನ್ಯೂ ಮೆಕ್ಸಿಕೋದಲ್ಲಿನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದು, ಬಳಿಕ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದರು.

ಅಲ್ಬುಕರ್ಕ್ ಪೊಲೀಸ್, ಲಿಯೋನ್ ಅವರ ಆಕಸ್ಮಿಕ ಸಾವಿಗೆ ಮಿತಿಮೀರಿದ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸಿರುವುದು ಕಾರಣ ಎಂಬುದನ್ನು ದೃಢಪಡಿಸಿದರು. ಆದರೆ ಯಾವ ರೀತಿಯ ಮದ್ಯ ಎಂಬುದು ಸ್ಪಷ್ಟವಾಗಿಲ್ಲ.
ತನ್ನ ಸಾವಿಗೆ ತಿಂಗಳುಗಳ ಮೊದಲು, ಲಿಯೋನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜೀವನದಲ್ಲಿ ಹೆಚ್ಚಿನದನ್ನು ಸಾಧಿಸುವ ಬಗ್ಗೆ ಸಕಾರಾತ್ಮಕತೆಯ ಸಂದೇಶವನ್ನು ಹಂಚಿಕೊಂಡಿದ್ದರು.


“ಹೊರಗೆ ಹೋಗಿ ಮತ್ತು ಇಂದು ಜೀವನವನ್ನು ಸ್ವಲ್ಪ ಹೆಚ್ಚು ಪ್ರಶಂಸಿಸಿ” ಎಂದು ಅವರು ಸೆಪ್ಟೆಂಬರ್ 2023 ರಲ್ಲಿ ಹೇಳಿಕೊಂಡಿದ್ದರು.

ಸೋಫಿಯಾ ಸಾವಿನ ಬಳಿಕ ಪ್ರಪಂಚದಾದ್ಯಂತ ಅನೇಕರು ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಿದ್ದಾರೆ.

ಸೋಫಿಯಾ ಸಾಕುಪ್ರಾಣಿಗಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು. ಪ್ರಯಾಣ ಮಾಡುವುದೆಂದರೆ ಅವರಿಗೆ ಇಷ್ಟವಾಗಿತ್ತು. ತಮ್ಮ ಸುತ್ತಲಿರುವ ಎಲ್ಲರನ್ನು ನಗಿಸುವ ಮಾರ್ಗಗಳನ್ನು ಹಡುಕುತ್ತಿದ್ದರು ಎಂದು ಅವರ ಬಗ್ಗೆ ರೊಮೆರೊ ನಿಧಿಸಂಗ್ರಹ ಪುಟದಲ್ಲಿ ಬರೆದಿದ್ದಾರೆ.

ಮಿಸ್ ಲಿಯೋನ್ 1997ರ ಜೂನ್ 10ರಂದು ಯುಎಸ್ ನ ಮಿಯಾಮಿಯಲ್ಲಿ ಜನಿಸಿದರು. 18 ನೇ ವಯಸ್ಸಿನಲ್ಲಿ ಪೋರ್ನ್ ಉದ್ಯಮವನ್ನು ಪ್ರವೇಶಿಸಿದರು. 1 ಮಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿರುವ ಅವರು 80ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Anushka Sharma: ಲಂಡನ್​ ಬಿಟ್ಟು ಮಗನ ಜತೆ ಮತ್ತೆ ಮುಂಬೈಗೆ ಮರಳಲಿದ್ದಾರೆ ಕೊಹ್ಲಿ ಪತ್ನಿ ಅನುಷ್ಕಾ!

ಸಾಮಾಜಿಕ ಜಾಲತಾಣದ ಕಾಮೆಂಟ್ ನಲ್ಲಿ ಒಬ್ಬರು ನೀವು ಎಷ್ಟು ಪ್ರೀತಿಸುತ್ತಿದ್ದೀರಿ ಎಂದು ನೀವು ತಿಳಿದಿದ್ದೀರಿ ಎಂದು ನಾನು ಭಾವಿಸುತ್ತೇನೆ. ಈ ಜಗತ್ತು ತುಂಬಾ ಕ್ರೂರವಾಗಿದೆ. ಎಲ್ಲದಕ್ಕೂ ಧನ್ಯವಾದಗಳು ಎಂದು ಹೇಳಿದ್ದು, ಇನ್ನೊಬ್ಬರು ಶಾಂತಿಯಲ್ಲಿ ವಿಶ್ರಾಂತಿ ಸುಂದರ, ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ನಾವು ಕಂಡುಕೊಳ್ಳುತ್ತೇವೆ ನಿನಗೆ ನ್ಯಾಯ ಎಂದು ತಿಳಿಸಿದ್ದಾರೆ.

ಮೂರನೆಯವರು ಸಲಹೆ ನೀಡಿ, ಸುರಕ್ಷಿತ ಕೆಲಸದ ಪರಿಸ್ಥಿತಿಗಳಿಗಾಗಿ ಅಶ್ಲೀಲ ಉದ್ಯಮದ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.

Exit mobile version