ಬೆಂಗಳೂರು: ಮರಿ ಟೈಗರ್ ವಿನೋದ್ ಪ್ರಭಾಕರ್ (Vinod Prabhakar) ಹಾಗೂ ಸೌಂದರ್ಯ ಜಯಮಾಲಾ ಈ ಇಬ್ಬರು ಚಿತ್ರರಂಗದ ತಾರೆಯರು. ಎಲ್ಲದಕ್ಕಿಂತ ಹೆಚ್ಚಾಗಿ ಅಣ್ಣ-ತಂಗಿ. ಆದರೆ ಇಲ್ಲಿವರೆಯೂ ವಿನೋದ್ ಆಗಲಿ, ಸೌಂದರ್ಯ ಆಗಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಒಬ್ಬರನ್ನೊಬ್ಬರು ಭೇಟಿಯಾಗಿಲ್ಲ. ಆದರೀಗ ಈ ಅಣ್ಣ ತಂಗಿ ಅಭಿಷೇಕ್ ಅಂಬರೀಷ್ ಹಾಗೂ ಅವಿವ ಬಿಡಪ ಆರತಕ್ಷತೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಇಬ್ಬರ ನಡುವಿನ ಸಂಬಂಧ ಏನು?
ನಟ ವಿನೋದ್ ಪ್ರಭಾಕರ್ ಹಾಗೂ ನಟಿ ಸೌಂದರ್ಯ ಜಯಮಾಲಾ ಸಹೋದರ ಸಹೋದರಿಯರು. ಇಬ್ಬರಿಗೂ ಅಪ್ಪ ಟೈಗರ್ ಪ್ರಭಾಕರ್. ಆದರೆ ಇಬ್ಬರ ಅಮ್ಮ ಬೇರೆ ಬೇರೆ. ಟೈಗರ್ ಪ್ರಭಾಕರ್ ಮತ್ತು ಜಯಮಾಲ ಬೇರೆ ಬೇರೆಯಾದ ನಂತರ ವಿನೋದ್ ಪ್ರಭಾಕರ್ ಅಪ್ಪನ ಜತೆ ಇದ್ದರು. ಜಯಮಾಲಾ ತಮ್ಮ ಮಗಳು ಸೌಂದರ್ಯ ಜತೆಗೆ ಬೇರೆಯಾಗಿ ವಾಸವಿದ್ದರು. ವಿನೋದ್ ಪ್ರಭಾಕರ್ ತಾಯಿ ಮೇರಿ ಅಲ್ಫೋನ್ಸಾ (Mary Alphonsa).
ಇದೀಗ ಅಣ್ಣ ತಂಗಿ ಏಕಾಏಕಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ನಡೆದ ಅಭಿಷೇಕ್ ಅಂಬರೀಷ್ ಹಾಗೂ ಅವಿವ ಬಿಡಪ ಆರತಕ್ಷಣೆಯಲ್ಲಿ ಮುಖಾಮುಖಿಯಾಗಿದ್ದಾರೆ. ಬಹಳ ವರ್ಷದ ಬಳಿಕ ತಂಗಿ ನೋಡಿದ ಖುಷಿ ವಿನೋದ್ ಅವರದ್ದು, ಅಣ್ಣನನ್ನೂ ನೋಡಿದ ಖುಷಿ ಸೌಂದರ್ಯಗೆ. ಭೇಟಿ ಕ್ಷಣದಲ್ಲಿ ಅಣ್ಣ ತಂಗಿ ಮತ್ತೆ ಬಾಲ್ಯದ ದಿನಗಳಿಗೆ ಜಾರಿದ್ದಾರೆ.
ಇದನ್ನೂ ಓದಿ: Maadeva Film | ಮರಿ ಟೈಗರ್‌ಗೆ ಮತ್ತೆ ಜೋಡಿಯಾದ ನಟಿ ಸೋನಲ್ ಮೊಂಥೆರೋ
ಬಾಲ್ಯದ ಆಟ-ತುಂಟಾಟ ನೆನಪುಕೊಂಡು ಒಂದಷ್ಟು ಸಮಯ ಚರ್ಚೆ ನಡೆಸಿದ್ದಾರೆ. ಅಣ್ಣನ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜತೆಯಲ್ಲಿಯೂ ಸೌಂದರ್ಯ ಖುಷಿ ಖುಷಿಯಿಂದ ಕಾಲ ಕಳೆದಿದ್ದು ಮೂವರು ಫೋಟೊಗೆ ಪೋಸ್ ಕೊಟ್ಟಿದ್ದಾರೆ.