Site icon Vistara News

Naseeruddin Shah: ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಚಿತ್ರರಂಗಕ್ಕಿಂತಲೂ ಉತ್ತಮ ಎಂದ ನಟ ನಾಸೀರುದ್ದೀನ್ ಶಾ!

Naseeruddin Shah South cinema is doing better than ‘most Hindi films’

ಬೆಂಗಳೂರು: ತಮಿಳು, ಕನ್ನಡ, ಮಲಯಾಳಂ ಮತ್ತು ತೆಲುಗು ಚಿತ್ರರಂಗದ ಕಮರ್ಷಿಯಲ್‌ ಸಿನಿಮಾಗಳ ದೊಡ್ಡ ಶಕ್ತಿ ಎಂದರೆ ಸ್ವಂತಿಕೆ ಎನ್ನುತ್ತಾರೆ ನಟ ನಾಸೀರುದ್ದೀನ್ ಶಾ (Naseeruddin Shah) . ಈ ಚಲನಚಿತ್ರೋದ್ಯಮಗಳು ಯಾವಾಗಲೂ ಏನಾದರೂ ಸೃಜನಶೀಲತೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿವೆ. ಆ ಕಾರಣದಿಂದಾಗಿ ಸತತವಾಗಿ ಯಶಸ್ವಿಯಾಗಲು ಕಾರಣ ಎಂದು ಸಂದರ್ಶನವೊಂದರಲ್ಲಿ ಹೇಳಿದರು.

ದಕ್ಷಿಣ ಭಾರತದ ಸಿನಿಮಾಗಳು ಬಹಳ ಇಮ್ಯಾಜಿನೇಟಿವ್‌

ದಕ್ಷಿಣದ ಚಲನಚಿತ್ರ ನಿರ್ದೇಶಕರು ತಮ್ಮ ಹಾಡಿನ ದೃಶ್ಯಗಳನ್ನು ಚಿತ್ರೀಕರಿಸುವ ವಿಧಾನದಲ್ಲಿಯೂ ಇಮ್ಯಾಜಿನೇಟಿವ್‌ ಆಗಿ, ಅವುಗಳನ್ನು ಭವ್ಯವಾಗಿ, ಅದ್ಭುತವಾಗಿ ಮತ್ತು ಅಪರೂಪವಾಗಿ ಶೂಟ್‌ ಮಾಡುತ್ತಾರೆ. ದೊಡ್ಡದಾದ ಮತ್ತು ಉತ್ತಮವಾದ ಗುರಿಯನ್ನು ಹೊಂದುವುದು ಅವರ ಅಗತ್ಯವಾಗಿದೆ ಎಂದು ಸಂದರ್ಶನದಲ್ಲಿ ಹೇಳಿದರು. ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಚಿತ್ರರಂಗಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸಲು ಕಾರಣ ಎಂದು ಹೇಳಿದರು.

ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಚಿತ್ರರಂಗಕ್ಕಿಂತಲೂ ಉತ್ತಮ

ತಮಿಳು, ಕನ್ನಡ, ಮಲಯಾಳಂ, ತೆಲುಗು ಭಾಷೆಗಳಲ್ಲಿ ತಯಾರಾಗುವ ಕಮರ್ಷಿಯಲ್ ಸಿನಿಮಾಗಳು ಕೂಡ ಕಾಲ್ಪನಿಕವಾಗಿವೆ. ಹಿಂದಿ ಚಲನಚಿತ್ರೋದ್ಯಮವು 2022ರಲ್ಲಿ ನೀರಸವಾಗಿತ್ತು. ಕೆಲವೇ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಈ ವರ್ಷ, ಶಾರುಖ್ ಖಾನ್ ಅವರ ʻಪಠಾಣ್‌ʼ ಐತಿಹಾಸಿಕವಾಗಿ ದಾಖಲೆ ಬರೆದಿದೆʼʼ ಎಂದರು. ನಾನು ಇದನ್ನು ಬಹಳ ಸಮಯದಿಂದ ಕಂಡುಕೊಂಡಿದ್ದೇನೆ. ಜೀತೇಂದ್ರ ಮತ್ತು ಶ್ರೀದೇವಿಯವರ ಹಲವು ಚಿತ್ರಗಳಲ್ಲಿಯೂ ಹಾಡಿನ ಚಿತ್ರಣ ನೋಡಿದಾಗ ಅವರ ಮೂಲ ಕಲ್ಪನೆಯಾಗಿತ್ತು.

ಇದನ್ನೂ ಓದಿ: Naseeruddin Shah: ಭಾರತ ಮುಸ್ಲಿಮರಿಗೆ ಸುರಕ್ಷಿತ ಅಲ್ಲ, ನಟ ನಾಸೀರುದ್ದೀನ್‌ ಶಾಗೆ ಹೀಗೆ ಹೇಳಿದ್ದು ಯಾರು?

ಆನ್‌ಲೈನ್‌ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮುಂದಿನ ಭವಿಷ್ಯ

ಈ ವೇಳೆ ಅವರು ಆನ್‌ಲೈನ್‌ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮನರಂಜನೆಯ ಮುಂದಿನ ಭವಿಷ್ಯ ಎಂತಲೂ ಹೇಳಿದರು. “ನಾವು ಇಷ್ಟಪಟ್ಟರೂ ಇಲ್ಲದಿದ್ದರೂ ಒಟಿಟಿ ಮುಂದಿನ ಭವಿಷ್ಯ. ಪ್ರಪಂಚದಾದ್ಯಂತ ಚಲನಚಿತ್ರ ಮಂದಿರಗಳು ಕಣ್ಮರೆಯಾಗುತ್ತವೆ ಎಂದು ಊಹಿಸುತ್ತಿದ್ದೇನೆ. ಇನ್ನು 10 ವರ್ಷಗಳಲ್ಲಿ ಇದು ಸಂಭವಿಸುತ್ತದೆ ಎಂದು ನಾನು ಭಾವಿಸುತ್ತೇನೆʼʼಎಂದರು. ʻʻನಾನು ವೈಯಕ್ತಿಕವಾಗಿ OTT ನಲ್ಲಿ ಕೆಲಸ ಮಾಡುವುದನ್ನು ಆನಂದಿಸುತ್ತೇನೆ, ಅದು ಪ್ರದರ್ಶನವಾಗಲಿ, ಕವಿತೆ ಓದುವುದಾಗಲಿ, ಕಥೆಯನ್ನು ಹೇಳುವುದಾಗಲಿ. ನಾನು ಅದನ್ನು ಸವಾಲಾಗಿ ಕಾಣುತ್ತೇನೆ ಮತ್ತು ಅದನ್ನು ಉತ್ತಮವಾಗಿ ಬಳಸಿಕೊಳ್ಳುತ್ತೇನೆʼʼಎಂದರು.

Naseeruddin Shah

ಇದನ್ನೂ ಓದಿ: Bollywood Actress: ಶಿಮ್ಮರ್‌ ಸೀರೆಗಳಲ್ಲಿ ಮಿಂಚಿದ ಬಾಲಿವುಡ್‌ ನಟಿಯರು

‘ತಾಜ್​: ಡಿವೈಡೆಡ್​​ ಬೈ ಬ್ಲಡ್​’ ವೆಬ್​ ಸಿರೀಸ್‌ನಲ್ಲಿ ನಾಸೀರುದ್ದೀನ್ ಶಾ

ʻತಾಜ್​: ಡಿವೈಡೆಡ್​​ ಬೈ ಬ್ಲಡ್​’ ವೆಬ್​ ಸಿರೀಸ್‌ನಲ್ಲಿ (Taj-Divided by Blood) ನಾಸೀರುದ್ದೀನ್ ಶಾ ಅವರು ಅಕ್ಬರ್​ನ ಪಾತ್ರವನ್ನು ಮಾಡಿದ್ದಾರೆ. ‘ಜೀ5’ ಮೂಲಕ ಮಾರ್ಚ್​ 3ರಿಂದ ಈ ವೆಬ್​ ಸಿರೀಸ್ಣಿ‌ ವೀಕ್ಷಣೆಗೆ ಲಭ್ಯವಾಗಲಿದೆ. ಹಲವು ಕಲಾವಿದರು ಅಭಿನಯಿಸಿದ್ದಾರೆ. ಸಲೀಂ ಪಾತ್ರದಲ್ಲಿ ಅಶೀಮ್‌​ ಗುಲಾಟಿ, ಮುರಾದ್​ ಪಾತ್ರದಲ್ಲಿ ತಹಾ ಷಾ, ಅನಾರ್ಕಲಿ ಪಾತ್ರದಲ್ಲಿ ಅದಿತಿ ರಾವ್​ ಹೈದರಿ, ಜೋಧಾ ಬಾಯ್​ ಆಗಿ ಸಂಧ್ಯಾ ಮೃದುಲ್​ ಅವರು ನಟಿಸಿದ್ದಾರೆ. ರೊನಾಲ್ಡ್ ಸ್ಕಾಲ್ಪೆಲೊ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದಾರೆ.

Exit mobile version