Naseeruddin Shah: ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಚಿತ್ರರಂಗಕ್ಕಿಂತಲೂ ಉತ್ತಮ ಎಂದ ನಟ ನಾಸೀರುದ್ದೀನ್ ಶಾ! - Vistara News

ಒಟಿಟಿ

Naseeruddin Shah: ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಚಿತ್ರರಂಗಕ್ಕಿಂತಲೂ ಉತ್ತಮ ಎಂದ ನಟ ನಾಸೀರುದ್ದೀನ್ ಶಾ!

ದಕ್ಷಿಣ ಭಾರತದ ಚಲನಚಿತ್ರೋದ್ಯಮಗಳು ಯಾವಾಗಲೂ ಏನಾದರೂ ಸೃಜನಶೀಲತೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿವೆ. ಆ ಕಾರಣದಿಂದಾಗಿ ಸತತವಾಗಿ ಯಶಸ್ವಿಯಾಗಲು ಕಾರಣ ಎಂದು ಸಂದರ್ಶನವೊಂದರಲ್ಲಿ (Naseeruddin Shah) ಹೇಳಿದರು.

VISTARANEWS.COM


on

Naseeruddin Shah South cinema is doing better than ‘most Hindi films’
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ತಮಿಳು, ಕನ್ನಡ, ಮಲಯಾಳಂ ಮತ್ತು ತೆಲುಗು ಚಿತ್ರರಂಗದ ಕಮರ್ಷಿಯಲ್‌ ಸಿನಿಮಾಗಳ ದೊಡ್ಡ ಶಕ್ತಿ ಎಂದರೆ ಸ್ವಂತಿಕೆ ಎನ್ನುತ್ತಾರೆ ನಟ ನಾಸೀರುದ್ದೀನ್ ಶಾ (Naseeruddin Shah) . ಈ ಚಲನಚಿತ್ರೋದ್ಯಮಗಳು ಯಾವಾಗಲೂ ಏನಾದರೂ ಸೃಜನಶೀಲತೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿವೆ. ಆ ಕಾರಣದಿಂದಾಗಿ ಸತತವಾಗಿ ಯಶಸ್ವಿಯಾಗಲು ಕಾರಣ ಎಂದು ಸಂದರ್ಶನವೊಂದರಲ್ಲಿ ಹೇಳಿದರು.

ದಕ್ಷಿಣ ಭಾರತದ ಸಿನಿಮಾಗಳು ಬಹಳ ಇಮ್ಯಾಜಿನೇಟಿವ್‌

ದಕ್ಷಿಣದ ಚಲನಚಿತ್ರ ನಿರ್ದೇಶಕರು ತಮ್ಮ ಹಾಡಿನ ದೃಶ್ಯಗಳನ್ನು ಚಿತ್ರೀಕರಿಸುವ ವಿಧಾನದಲ್ಲಿಯೂ ಇಮ್ಯಾಜಿನೇಟಿವ್‌ ಆಗಿ, ಅವುಗಳನ್ನು ಭವ್ಯವಾಗಿ, ಅದ್ಭುತವಾಗಿ ಮತ್ತು ಅಪರೂಪವಾಗಿ ಶೂಟ್‌ ಮಾಡುತ್ತಾರೆ. ದೊಡ್ಡದಾದ ಮತ್ತು ಉತ್ತಮವಾದ ಗುರಿಯನ್ನು ಹೊಂದುವುದು ಅವರ ಅಗತ್ಯವಾಗಿದೆ ಎಂದು ಸಂದರ್ಶನದಲ್ಲಿ ಹೇಳಿದರು. ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಚಿತ್ರರಂಗಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸಲು ಕಾರಣ ಎಂದು ಹೇಳಿದರು.

ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಚಿತ್ರರಂಗಕ್ಕಿಂತಲೂ ಉತ್ತಮ

ತಮಿಳು, ಕನ್ನಡ, ಮಲಯಾಳಂ, ತೆಲುಗು ಭಾಷೆಗಳಲ್ಲಿ ತಯಾರಾಗುವ ಕಮರ್ಷಿಯಲ್ ಸಿನಿಮಾಗಳು ಕೂಡ ಕಾಲ್ಪನಿಕವಾಗಿವೆ. ಹಿಂದಿ ಚಲನಚಿತ್ರೋದ್ಯಮವು 2022ರಲ್ಲಿ ನೀರಸವಾಗಿತ್ತು. ಕೆಲವೇ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಈ ವರ್ಷ, ಶಾರುಖ್ ಖಾನ್ ಅವರ ʻಪಠಾಣ್‌ʼ ಐತಿಹಾಸಿಕವಾಗಿ ದಾಖಲೆ ಬರೆದಿದೆʼʼ ಎಂದರು. ನಾನು ಇದನ್ನು ಬಹಳ ಸಮಯದಿಂದ ಕಂಡುಕೊಂಡಿದ್ದೇನೆ. ಜೀತೇಂದ್ರ ಮತ್ತು ಶ್ರೀದೇವಿಯವರ ಹಲವು ಚಿತ್ರಗಳಲ್ಲಿಯೂ ಹಾಡಿನ ಚಿತ್ರಣ ನೋಡಿದಾಗ ಅವರ ಮೂಲ ಕಲ್ಪನೆಯಾಗಿತ್ತು.

ಇದನ್ನೂ ಓದಿ: Naseeruddin Shah: ಭಾರತ ಮುಸ್ಲಿಮರಿಗೆ ಸುರಕ್ಷಿತ ಅಲ್ಲ, ನಟ ನಾಸೀರುದ್ದೀನ್‌ ಶಾಗೆ ಹೀಗೆ ಹೇಳಿದ್ದು ಯಾರು?

ಆನ್‌ಲೈನ್‌ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮುಂದಿನ ಭವಿಷ್ಯ

ಈ ವೇಳೆ ಅವರು ಆನ್‌ಲೈನ್‌ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮನರಂಜನೆಯ ಮುಂದಿನ ಭವಿಷ್ಯ ಎಂತಲೂ ಹೇಳಿದರು. “ನಾವು ಇಷ್ಟಪಟ್ಟರೂ ಇಲ್ಲದಿದ್ದರೂ ಒಟಿಟಿ ಮುಂದಿನ ಭವಿಷ್ಯ. ಪ್ರಪಂಚದಾದ್ಯಂತ ಚಲನಚಿತ್ರ ಮಂದಿರಗಳು ಕಣ್ಮರೆಯಾಗುತ್ತವೆ ಎಂದು ಊಹಿಸುತ್ತಿದ್ದೇನೆ. ಇನ್ನು 10 ವರ್ಷಗಳಲ್ಲಿ ಇದು ಸಂಭವಿಸುತ್ತದೆ ಎಂದು ನಾನು ಭಾವಿಸುತ್ತೇನೆʼʼಎಂದರು. ʻʻನಾನು ವೈಯಕ್ತಿಕವಾಗಿ OTT ನಲ್ಲಿ ಕೆಲಸ ಮಾಡುವುದನ್ನು ಆನಂದಿಸುತ್ತೇನೆ, ಅದು ಪ್ರದರ್ಶನವಾಗಲಿ, ಕವಿತೆ ಓದುವುದಾಗಲಿ, ಕಥೆಯನ್ನು ಹೇಳುವುದಾಗಲಿ. ನಾನು ಅದನ್ನು ಸವಾಲಾಗಿ ಕಾಣುತ್ತೇನೆ ಮತ್ತು ಅದನ್ನು ಉತ್ತಮವಾಗಿ ಬಳಸಿಕೊಳ್ಳುತ್ತೇನೆʼʼಎಂದರು.

Naseeruddin Shah

ಇದನ್ನೂ ಓದಿ: Bollywood Actress: ಶಿಮ್ಮರ್‌ ಸೀರೆಗಳಲ್ಲಿ ಮಿಂಚಿದ ಬಾಲಿವುಡ್‌ ನಟಿಯರು

‘ತಾಜ್​: ಡಿವೈಡೆಡ್​​ ಬೈ ಬ್ಲಡ್​’ ವೆಬ್​ ಸಿರೀಸ್‌ನಲ್ಲಿ ನಾಸೀರುದ್ದೀನ್ ಶಾ

ʻತಾಜ್​: ಡಿವೈಡೆಡ್​​ ಬೈ ಬ್ಲಡ್​’ ವೆಬ್​ ಸಿರೀಸ್‌ನಲ್ಲಿ (Taj-Divided by Blood) ನಾಸೀರುದ್ದೀನ್ ಶಾ ಅವರು ಅಕ್ಬರ್​ನ ಪಾತ್ರವನ್ನು ಮಾಡಿದ್ದಾರೆ. ‘ಜೀ5’ ಮೂಲಕ ಮಾರ್ಚ್​ 3ರಿಂದ ಈ ವೆಬ್​ ಸಿರೀಸ್ಣಿ‌ ವೀಕ್ಷಣೆಗೆ ಲಭ್ಯವಾಗಲಿದೆ. ಹಲವು ಕಲಾವಿದರು ಅಭಿನಯಿಸಿದ್ದಾರೆ. ಸಲೀಂ ಪಾತ್ರದಲ್ಲಿ ಅಶೀಮ್‌​ ಗುಲಾಟಿ, ಮುರಾದ್​ ಪಾತ್ರದಲ್ಲಿ ತಹಾ ಷಾ, ಅನಾರ್ಕಲಿ ಪಾತ್ರದಲ್ಲಿ ಅದಿತಿ ರಾವ್​ ಹೈದರಿ, ಜೋಧಾ ಬಾಯ್​ ಆಗಿ ಸಂಧ್ಯಾ ಮೃದುಲ್​ ಅವರು ನಟಿಸಿದ್ದಾರೆ. ರೊನಾಲ್ಡ್ ಸ್ಕಾಲ್ಪೆಲೊ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Manjummel Boys: ಒಟಿಟಿಗೆ ಎಂಟ್ರಿ ಕೊಡಲು ʻಮಂಜುಮ್ಮೇಲ್ ಬಾಯ್ಸ್ʼ ಸಜ್ಜು; ಯಾವಾಗ, ಎಲ್ಲಿ ಪ್ರಸಾರ?

Manjummel Boys: ʻಮಂಜುಮ್ಮೇಲ್ ಬಾಯ್ಸ್ʼ ಮಲಯಾಳಂನ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ ಬಳಿಕ ಒಟಿಟಿಯಲ್ಲಿ ಮ್ಯಾಜಿಕ್‌ ಮಾಡಲು ಸಜ್ಜಾಗಿದೆ. ಹಾಗಾದರೆ ಚಿತ್ರ ಒಟಿಟಿಯಲ್ಲಿ ಯಾವಾಗ ಪ್ರಸಾರವಾಗಲಿದೆ? ಇಲ್ಲಿದೆ ವಿವರ.

VISTARANEWS.COM


on

Manjummel Boys
Koo

ಬೆಂಗಳೂರು: ಕೆಲವು ಸಮಯದಿಂದ ಮಂಕಾಗಿದ್ದ ಮಲಯಾಳಂ ಚಿತ್ರರಂಗ (Mollywood) ಮತ್ತೆ ಸದ್ದು ಮಾಡತೊಡಗಿದೆ. ಬ್ಯಾಕ್‌ ಟು ಬ್ಯಾಕ್‌ ಮಲಯಾಳಂ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡುವ ಜತೆಗೆ ದೇಶದ ಗಮನ ಸೆಳೆಯುತ್ತಿವೆ. ಅದರಲ್ಲಿಯೂ ʻಮಂಜುಮ್ಮೇಲ್ ಬಾಯ್ಸ್ʼ (Manjummel Boys)ನ ಹವಾ ಜೋರಾಗಿಯೇ ಬೀಸುತ್ತಿದೆ. ಸುಮಾರು 5 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರದ ಗಳಿಕೆ ಬರೋಬ್ಬರಿ 200 ಕೋಟಿ ರೂ ! ಮಲಯಾಳಿಗಳು ಮಾತ್ರವಲ್ಲ ವಿವಿಧ ಬಾಷಿಕರೂ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಥಿಯೇಟರ್‌ನಲ್ಲಿ ಪ್ರೇಕ್ಷಕರ ಗಮನ ಸೆಳೆದ ಈ ಚಿತ್ರ ಒಟಿಟಿ (OTT)ಗೆ ಬರಲು ಸಿದ್ಧವಾಗಿದೆ.

ಒಟಿಟಿಗೆ ಯಾವಾಗ ಎಂಟ್ರಿ? ಯಾವ ಫ್ಲಾಟ್‌ಫಾರ್ಮ್‌?

ಥಿಯೇಟರ್‌ಗಳಲ್ಲಿ ʻಮಂಜುಮ್ಮೇಲ್ ಬಾಯ್ಸ್ʼನನ್ನು ನೋಡಲಾಗದವರು ಒಟಿಟಿಗೆ ಯಾವಾಗ ಬರುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಅವರ ಕಾತುರಕ್ಕೆ ಕೊನೆಗೂ ತೆರೆ ಬಿದ್ದಿದೆ. ಡಿಸ್ನಿ ಪ್ಲಸ್ ಹಾಟ್​​ಸ್ಟಾರ್ ಮೂಲಕ ‘ಮಂಜುಮ್ಮೇಲ್ ಬಾಯ್ಸ್’ ವೀಕ್ಷಣೆಗೆ ಲಭ್ಯವಾಗಲಿದೆ. ಏಪ್ರಿಲ್ 5ರಿಂದ ಸಿನಿಮಾ ಪ್ರಸಾರವಾಗಲಿದೆ ಎಂದು ಮೂಲಗಳು ತಿಳಿಸಿವೆ. ಮಲಯಾಳಂ ಜತೆಗೆ ತಮಿಳು, ಕನ್ನಡದಲ್ಲೂ ಸಿನಿಮಾ ನೋಡಬಹುದು. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರ ಬರಬೇಕಿದೆ.

ಅತ್ಯಧಿಕ ಗಳಿಕೆ ಕಂಡ ಮಾಲಿವುಡ್‌ ಚಿತ್ರ

ಚಿದಂಬರಂ ನಿರ್ದೇಶನದ ಈ ಚಿತ್ರ ಫೆಬ್ರವರಿ 22ರಂದು ಥಿಯೇಟರ್​ನಲ್ಲಿ ಬಿಡುಗಡೆಯಾಗಿತ್ತು. ಅಂದಿನಿಂದ ಇದು ಸುಮಾರು 200 ಕೋಟಿ ರೂ. ಕಲೆಕ್ಷನ್‌ ಮಾಡಿದ್ದು, ಈ ಮೂಲಕ ಅತ್ಯಧಿಕ ಗಳಿಕೆ ಕಂಡ ಮಲಯಾಳಂ ಚಿತ್ರ ಎನ್ನುವ ದಾಖಲೆ ಬರೆದಿದೆ. ಇದು ಚಿದಂಬರಂ ಅವರ ಎರಡನೇ ಸಿನಿಮಾ. 2021ರಲ್ಲಿ ಇವರು ಆ್ಯಕ್ಷನ್‌ ಕಟ್‌ ಹೇಳಿದ್ದ ʼಜಾನ್‌.ಇ.ಮಾನ್‌ʼ ಚಿತ್ರ ಬಿಡುಗಡೆಯಾಗಿತ್ತು. ನಟ ʻಮಂಜುಮ್ಮೇಲ್ ಬಾಯ್ಸ್ʼ ಸಿನಿಮಾವನ್ನು ಸೌಬಿನ್ ಶಾಹಿರ್ ಚಿತ್ರವನ್ನು ನಿರ್ಮಾಣ ಮಾಡುವ ಜತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಮತ್ತು ಜೀನ್ ಪಾಲ್ ಲಾಲ್ ಮತ್ತಿತರರು ನಟಿಸಿದ್ದಾರೆ.

ಕಥೆ ಏನು?

2006ರಲ್ಲಿ ಕೇರಳದಿಂದ ತಮಿಳುನಾಡಿನ ಕೊಡೈಕೆನಲ್​ಗೆ ಫ್ರೆಂಡ್ಸ್ ಗ್ರೂಪೊಂದಕು ಟ್ರಿಪ್ ಹೊರಡುತ್ತದೆ. ʻಡೆವಿಲ್ಸ್ ಕಿಚನ್ʼ ಹೆಸರಿನ ಗುಹೆಯಲ್ಲಿ ಸುಭಾಷ್ ಎಂಬಾತ ಬೀಳುತ್ತಾನೆ. ಆತನನ್ನು ರಕ್ಷಿಸಲು ಫ್ರೆಂಡ್ಸ್ ಪ್ರಯತ್ನಿಸುತ್ತಾರೆ. ಇದರಲ್ಲಿ ಯಶಸ್ವಿ ಆಗ್ತಾರಾ ಇಲ್ಲವಾ ಎಂಬುದೇ ಕಥೆ.

ನೈಜ ಘಟನೆ

ವಿಶೇಷ ಎಂದರೆ ಇದು ನೈಜ ಘಟನೆ ಆಧಾರಿತ ಸಿನಿಮಾ. ನೈಜವಾಗಿ, ಸರಳವಾಗಿ ಚಿತ್ರವನ್ನು ನಿರೂಪಿಸಲಾಗಿದೆ. ಇದು ಈ ಚಿತ್ರದ ಯಶಸ್ಸಿಗೆ ಮುಖ್ಯ ಕಾರಣ ಎಂದು ಸಿನಿಮಾ ತಜ್ಞರು ಅಭಿಪ್ರಾಯ ಪಡುತ್ತಾರೆ. ಈ ಹಿಂದೆ ಸಿನಿಮಾ ರಂಗದ ಹಲವು ದಿಗ್ಗಜರು ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಇದನ್ನೂ ಓದಿ: OTT Releases: ʼಫೈಟರ್‌ʼನಿಂದ ʼಓಪನ್‌ಹೈಮರ್‌ʼವರೆಗೆ; ಈ ವಾರ ಒಟಿಟಿಯಲ್ಲಿ ನೀವು ನೋಡಬಹುದಾದ ಚಿತ್ರಗಳ ಪಟ್ಟಿ ಇಲ್ಲಿದೆ

ʻಮಂಜುಮ್ಮೇಲ್ ಬಾಯ್ಸ್ʼ ಚಿತ್ರದ ಮೂಲಕ ಮಾಲಿವುಡ್‌ ಭರ್ಜರಿ ಕಂಬ್ಯಾಕ್‌ ಮಾಡಿದೆ. ಇತ್ತೀಚೆಗೆ ತೆರೆಕಂಡ ಹಲವು ಮಲಯಾಳಂ ಚಿತ್ರಗಳಯ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿವೆ. ʼಪ್ರೇಮುಲುʼ, ʼಭ್ರಮಯುಗಂʼ, ʼಅಬ್ರಹಾಂ ಓಜ್ಲರ್ʼ ಮುಂತಾದ ಸಿನಿಮಾಗಳು ಹಿಟ್‌ ಆಗಿವೆ.

Continue Reading

ಸಿನಿಮಾ

Siren Movie: ಕಾಲಿವುಡ್‌ನ ʼಸೈರನ್‌ʼ ಒಟಿಟಿಗೆ ಬರಲು ಸಜ್ಜು; ಜಯಂ ರವಿ-ಕೀರ್ತಿ ಸುರೇಶ್‌ ಚಿತ್ರ ಯಾವಾಗ ಪ್ರಸಾರ?

Siren Movie: ಇತ್ತೀಚೆಗೆ ತೆರೆಕಂಡ ತಮಿಳು ಚಿತ್ರ ʼಸೈರನ್‌ʼ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಗಳಿಸಿದೆ. ಜಯಂ ರವಿ, ಕೀರ್ತಿ ಸುರೇಶ್‌ ಮತ್ತು ಅನುಪಮಾ ಪರಮೇಶ್ವರನ್‌ ಮೊದಲ ಬಾರಿ ತೆರೆ ಹಂಚಿಕೊಂಡಿದ್ದ ಈ ಈ ಸಸ್ಪೆನ್ಸ್‌ ಥ್ರಿಲ್ಲರ್‌ ಇದೀಗ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ. ಯಾವಾಗ, ಯಾವ ಫ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್‌ ಆಗಲಿದೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

siren movie
Koo

ಚೆನ್ನೈ: ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಗಳಿಸಿದ ಕಾಲಿವುಡ್‌ನ ಜನಪ್ರಿಯ ನಟ ಜಯಂ ರವಿ (Jayam Ravi) ಅಭಿನಯದ ‘ಸೈರನ್‌’ (Siren Movie) ಚಿತ್ರ ಇದೀಗ ಒಟಿಟಿಗೆ ಬರಲು ಸಜ್ಜಾಗಿದೆ. ಫೆಬ್ರವರಿ 16ರಂದು ಬಿಡುಗಡೆಯಾಗಿದ್ದ ಈ ಸಸ್ಪೆನ್ಸ್‌ ಥ್ರಿಲ್ಲರ್‌ ಪ್ರೇಕ್ಷಕರ ಗಮನ ಸೆಳೆದಿತ್ತು. ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದಿದ್ದ ʼಸೈರನ್‌ʼ ಕೆಲವೇ ದಿನಗಳಲ್ಲಿ ಒಟಿಟಿ (OTT) ಮೂಲಕ ಮನೆ ಮನೆಗೂ ತಲುಪಲಿದೆ.

ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌?

ಆ್ಯಂಟನಿ ಭಾಗ್ಯರಾಜ್ ಮೊದಲ ಬಾರಿ ಆ್ಯಕ್ಷನ್‌ ಕಟ್‌ ಹೇಳಿರುವ ‘ಸೈರನ್’ ಸಿನಿಮಾದಲ್ಲಿ ಕೀರ್ತಿ ಸುರೇಶ್‌ ಮತ್ತು ಅನುಪಮಾ ಪರಮೇಶ್ವರನ್‌ ನಾಯಕಿಯರಾಗಿ ನಟಿಸಿದ್ದಾರೆ. ಇದು ಏಪ್ರಿಲ್‌ 11ರಿಂದ ಸೈರನ್‌ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ʼಸೈರನ್‌ʼ ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್‌ ಆಗಿತ್ತು. ಒಟಿಟಿಯಲ್ಲಿ ತಮಿಳು, ತೆಲುಗು ಜತೆಗೆ ಕನ್ನಡ ಹಾಗೂ ಮಲಯಾಳಂನಲ್ಲೂ ಲಭಿಸಲಿದೆ. ಜಿ.ವಿ.ಪ್ರಕಾಶ್‌ ಕುಮಾರ್‌ ಸಂಗೀತ ನಿರ್ದೇಶನದ ಈ ಸಿನಿಮಾ ತಂದೆ-ಮಗಳ ಬಾಂಧವ್ಯದ ಸುತ್ತ ಸುತ್ತುತ್ತದೆ.

ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ಕೀರ್ತಿ ಸುರೇಶ್‌

ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ಪ್ರತಿಭಾವಂತ ನಟಿ ಕೀರ್ತಿ ಸುರೇಶ್‌ ಈ ಸಿನಿಮಾದಲ್ಲಿ ಇನ್ಸ್‌ಪೆಕ್ಟರ್‌ ಪಾತ್ರ ನಿರ್ವಹಿಸಿದ್ದಾರೆ. ಕೆ.ನಂದಿನಿ ಎಂಬ ಖಡಕ್‌ ಪೊಲೀಸ್‌ ಆಫೀಸರ್‌ ಪಾತ್ರದಲ್ಲಿ ಅವರು ಗಮನ ಸಳೆದಿದ್ದಾರೆ. ಕೀರ್ತಿ ಸುರೇಶ್‌ ಮೊದಲ ಬಾರಿ ಜಯಂ ರವಿ ಜತೆ ತೆರೆ ಹಂಚಿಕೊಂಡಿರುವುದು ಕೂಡ ಈ ಚಿತ್ರದ ವಿಶೇಷತೆ. ಮಾತ್ರವಲ್ಲ ಬಹು ಭಾಷಾ ನಟಿ ಅನುಪಮಾ ಪರಮೇಶ್ವರನ್‌ ಜೆನ್ನಿಫರ್‌ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ.

ಬಹು ತಾರಾಗಣ

ಬಹು ತಾರಾಗಣ ʼಸೈರನ್‌ʼ ಚಿತ್ರದ ಮತ್ತೊಂಡು ಹೆಗ್ಗಳಿಕೆ. ತಿಲಗನ್ (ಜಯಂ ರವಿ) ಕಾಂಚೀಪುರಂನ ಪ್ರಾಮಾಣಿಕ ಆಂಬ್ಯುಲೆನ್ಸ್ ಚಾಲಕ. ತನ್ನ ಪತ್ನಿ ಜೆನ್ನಿಫರ್ ಮತ್ತು ತನ್ನ ಸ್ನೇಹಿತ ಕಥಿರ್‌ನನ್ನು ಕೊಲೆ ಮಾಡಿದ ಸುಳ್ಳು ಆರೋಪದ ಜೀವಾವಧಿ ಶಿಕ್ಷೆಗೆ ಗುರಿಯಾಗುತ್ತಾನೆ. 14 ವರ್ಷಗಳ ನಂತರ ಜೆನ್ನಿಫರ್ ಮತ್ತು ಕಥಿರ್ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ತಿಲಗನ್ 14 ದಿನಗಳ ಪೆರೋಲ್‌ನಲ್ಲಿ ಹೊರ ಬರುತ್ತಾನೆ. ಹೀಗೆ ಕಥೆ ರೋಚಕವಾಗಿ ಸಾಗುತ್ತದೆ.

ಸದ್ಯ ಜಯಂ ರವಿ ʼಜೀನಿʼ (Genie) ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅರ್ಜುನನ್ ಜೂನಿಯರ್ (ಭುವನೇಶ್‌ ಅರ್ಜುನನ್‌) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದ್ದು, ಕೂತೂಹಲ ಮೂಡಿಸಿದೆ. ʼಜೀನಿʼ ಫ್ಯಾಂಟಸಿ ಸಿನಿಮಾ. ಇದೇ ಮೊದಲ ಬಾರಿಗೆ ಜಯಂ ರವಿ ಫ್ಯಾಂಟಸಿ ಕಥೆಯಲ್ಲಿ ಬಣ್ಣ ಹಚ್ಚಿದ್ದಾರೆ. ಹೀಗಾಗಿ ಫಸ್ಟ್ ಲುಕ್ ಕೂಡ ವಿಭಿನ್ನವಾಗಿದೆ. ಸರಪಣಿಯಲ್ಲಿ ಬಂಧಿಯಾಗಿರುವ ಜಯಂ ರವಿ, ಜುಟ್ಟು ಕಟ್ಟಿ ಸ್ಟೈಲೀಶ್ ಲುಕ್‌ನಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ: Jayam Ravi: ಫ್ಯಾಂಟಸಿ ‘ಜೀನಿ’ ಸಿನಿಮಾದ ಫಸ್ಟ್‌ ಲುಕ್ ರಿಲೀಸ್; ಹೊಸ ಅವತಾರದಲ್ಲಿ ಜಯಂ ರವಿ ಮೋಡಿ

ಸೈರನ್‌ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದರೆ ಜೀನಿಯಲ್ಲಿ ಮೂವರು ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಜಯಂ ರವಿಗೆ ಜತೆಗೆ ಮೊದಲ ಬಾರಿ ಕಲ್ಯಾಣಿ ಪ್ರಿಯದರ್ಶನ್, ಕನ್ನಡತಿ ಕೃತಿ ಶೆಟ್ಟಿ ಮತ್ತು ವಾಮಿಕಾ ಗಬ್ಬಿ ತೆರೆ ಹಂಚಿಕೊಳ್ಳುತ್ತಿದ್ದು, ಆಸ್ಕರ್ ವಿಜೇತ ಎ.ಆರ್‌.ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಶೇ. 75ರಷ್ಟು ಶೂಟಿಂಗ್ ಪೂರ್ತಿಯಾಗಿದ್ದು, ಕೇವಲ 3 ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ಇನ್ನು 10 ದಿನಗಳಲ್ಲಿ ಆ ಚಿತ್ರೀಕರಣ ಮುಗಿಸಿ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಲ್ಲಿ ತೊಡಗಿಸಿಕೊಳ್ಳಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Article 370 Movie: ಚುನಾವಣೆ ಮಧ್ಯೆ ಒಟಿಟಿಗೆ ಲಗ್ಗೆ ಇಡಲಿದೆ ʼಆರ್ಟಿಕಲ್‌ 370ʼ ಚಿತ್ರ; ಎಲ್ಲಿ, ಯಾವಾಗ ಪ್ರಸಾರ?

Article 370 Movie: ಜಮ್ಮು ಕಾಶ್ಮೀರದ ವಿಶೇಷಾಧಿಕಾರವಾದ ಆರ್ಟಿಕಲ್‌ 370 ಅನ್ನು ಕೇಂದ್ರ ಸರ್ಕಾರ ರದ್ದು ಪಡಿಸಿದ ಐತಿಹಾಸಿಕ ನಿರ್ಧಾರವನ್ನು ಆಧರಿಸಿ ತಯಾರಾದ ಹಿಂದಿ ಚಿತ್ರ ʼಆರ್ಟಿಕಲ್‌ 370ʼ ಸದ್ಯ ದೇಶದ ಗಮನ ಸೆಳೆದಿದೆ. ಈ ಸಿನಿಮಾ ಒಟಿಟಿಯಲ್ಲಿ ಪ್ರಸಾರವಾಗುವ ದಿನಾಂಕದ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಯಾವಾಗ, ಎಲ್ಲಿ ಪ್ರಸಾರವಾಗಲಿದೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ.

VISTARANEWS.COM


on

article 370 movie
Koo

ಮುಂಬೈ: ಜಮ್ಮು ಕಾಶ್ಮೀರದ ವಿಶೇಷಾಧಿಕಾರವಾದ ಆರ್ಟಿಕಲ್‌ 370 (Article 370) ಅನ್ನು ಕೇಂದ್ರ ಸರ್ಕಾರ ರದ್ದು ಪಡಿಸಿದ ಐತಿಹಾಸಿಕ ನಿರ್ಧಾರವನ್ನು ಆಧರಿಸಿ ತಯಾರಾದ ಹಿಂದಿ ಚಿತ್ರ ʼಆರ್ಟಿಕಲ್‌ 370ʼ (Article 370 Movie) ಸದ್ಯ ಬಾಕ್ಸ್‌ ಆಫೀಸ್‌ನಲ್ಲಿ ಇತ್ತಮ ಕಲೆಕ್ಷನ್‌ ಮಾಡುತ್ತಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಆದಿತ್ಯ ಸುಹಾಸ್ ಜಂಭಾಲೆ (Aditya Suhas Jambhale) ನಿರ್ದೇಶನದ ಈ ಪಾಲಿಟಿಕಲ್‌ ಥ್ರಿಲ್ಲರ್‌ ಫೆಬ್ರವರಿ 23ರಂದು ತೆರೆಕಂಡಿತ್ತು. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಪಾಸಿಟಿವ್‌ ಪ್ರತಿಕ್ರಿಯೆ ಪಡೆದುಕೊಂಡಿರುವ ಈ ಚಿತ್ರ ಇದೀಗ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ.

ಯಾವ ಒಟಿಟಿ, ಯಾವಾಗ ಪ್ರಸಾರ?

ಯಾಮಿ ಗೌತಮ್‌, ಕನ್ನಡತಿ ಪ್ರಿಯಾಮಣಿ ಮತ್ತಿತರರು ನಟಿಸಿರುವ ಈ ಚಿತ್ರ ಸದ್ಯ ಗಲ್ಲಾ ಪಟ್ಟಿಗೆಯಲ್ಲಿ ಉತ್ತಮ ಕಮಾಯಿ ಮಾಡಿದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಚಿತ್ರ ಭಾರತದಲ್ಲಿ 76 ಕೋಟಿ ರೂ. ಮತ್ತು ಜಾಗತಿಕವಾಗಿ 105 ಕೋಟಿ ರೂ. ಗಳಿಸಿದೆ. ಹಿಟ್‌ ಎನಿಸಿಕೊಂಡ ಈ ಚಿತ್ರ ಏಪ್ರಿಲ್​ 19ರಂದು ಒಟಿಟಿಗೆ ಕಾಲಿಡಲಿದೆ ಎನ್ನಲಾಗುತ್ತಿದೆ. ಜಿಯೋ ಸಿನಿಮಾದಲ್ಲಿ ʼಆರ್ಟಿಕಲ್‌ 370ʼ ಸ್ಟ್ರೀಮಿಂಗ್‌ ಆಗಲಿದೆ ಎಂದು ವರದಿಯೊಂದು ತಿಳಿಸಿದೆ.

ಗಮನ ಸೆಳೆದ ಯಾಮಿ ಗೌತಮ್‌, ಪ್ರಿಯಾಮಣಿ

ಸ್ಥಳೀಯ ಏಜೆಂಟ್ ಮತ್ತು ಗುಪ್ತಚರ ಫೀಲ್ಡ್ ಆಫೀಸರ್ ಝೂನಿ ಹಕ್ಸರ್ ಪಾತ್ರದಲ್ಲಿ ಯಾಮಿ ಗೌತಮ್ ಮತ್ತು ಪಿಎಂಒ ಕಾರ್ಯದರ್ಶಿ ರಾಜೇಶ್ವರಿ ಸ್ವಾಮಿನಾಥನ್ ಪಾತ್ರದಲ್ಲಿ ಪ್ರಿಯಾಮಣಿ ಅಭಿನಯಿಸಿದ್ದು, ಇವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಜತೆಗೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟ ರೀತಿಗೆ ಪ್ರೇಕ್ಷಕರು ಜೈ ಎಂದಿದ್ದಾರೆ.

ಭಾಷಣದಲ್ಲಿ ಉಲ್ಲೇಖಿಸಿದ್ದ ಮೋದಿ

ಕಳೆದ ತಿಂಗಳು ಜಮ್ಮುವಿಗೆ ಭೇಟಿ ನೀಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ʼಆರ್ಟಿಕಲ್‌ 370ʼ ಸಿನಿಮಾವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ʼʼಈ ವಾರ ʼಆರ್ಟಿಕಲ್‌ 370ʼ ಚಿತ್ರ ಬಿಡುಗಡೆಯಾಗಲಿದೆ ಎನ್ನುವುದು ತಿಳಿದು ಬಂತು. ಆರ್ಟಿಕಲ್‌ 370 ವಿಧಿಯ ಬಗ್ಗೆ ಸಮರ್ಪಕ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಈ ಸಿನಿಮಾ ನೆರವಾಗಲಿದೆʼʼ ಎಂದು ಅವರು ಹೇಳಿದ್ದರು. ಅದರಂತೆ ಈ ಚಿತ್ರ ಆರ್ಟಿಕಲ್‌ 370 ಕುರಿತು ಸರಿಯಾದ ಮಾಹಿತಿ ಹೊಂದಿಲ್ಲದೆ ಇರುವವರಿಗೆ ʼಶಿಕ್ಷಣʼ ನೀಡುವಂತಹ ಕೆಲಸವನ್ನೂ ಮಾಡುತ್ತದೆ ಎಂದು ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಜತೆಗೆ ಕಾಶ್ಮೀರದಲ್ಲಿ ನಡೆಯುತ್ತಿದ್ದ ಹಿಂಸಾಚಾರ, ಗಲಭೆಗಳು ಹೇಗೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ಉತ್ತೇಜಿಸಿತು ಎನ್ನುವುದನ್ನೂ ಈ ಚಿತ್ರ ಪ್ರೇಕ್ಷಕರ ಮುಂದಿಡುತ್ತದೆ.

ಇದನ್ನೂ ಓದಿ: Article 370: ಬಾಲಿವುಡ್‌ ಚಿತ್ರವನ್ನು ಹಾಡಿ ಹೊಗಳಿದ ಮೋದಿ; ಯಾವ ಸಿನಿಮಾ? ಏನಿದರ ವೈಶಿಷ್ಟ್ಯ?

ಈ ನೈಜ ಘಟನೆ ಆಧಾರಿತ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪಾತ್ರಗಳೂ ಇವೆ. ಪ್ರಧಾನಿಯಾಗಿ ಅರುಣ್ ಗೋವಿಲ್ ಮತ್ತು ಗೃಹ ಸಚಿವರಾಗಿ ಕಿರಣ್ ಕರ್ಮಾರ್ಕರ್ ನಟಿಸಿದ್ದಾರೆ. ವೈಭವ್‌ ತತ್ವವಾಡಿ, ಸುಮಿತ್‌ ಕೌಲ್‌, ಮೋಹನ್‌ ಅಗಶೆ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

OTT Releases: ʼಫೈಟರ್‌ʼನಿಂದ ʼಓಪನ್‌ಹೈಮರ್‌ʼವರೆಗೆ; ಈ ವಾರ ಒಟಿಟಿಯಲ್ಲಿ ನೀವು ನೋಡಬಹುದಾದ ಚಿತ್ರಗಳ ಪಟ್ಟಿ ಇಲ್ಲಿದೆ

OTT Releases: ಇತ್ತೀಚೆಗೆ ತೆರೆಕಂಡು ಯಶಸ್ಸು ಪಡೆದ ಬಾಲಿವುಡ್‌ನ ಫೈಟರ್‌ ಚಿತ್ರದಿಂದ ಹಿಡಿದು ಆಸ್ಕರ್‌ ವಿಜೇತ ಓಪನ್‌ಹೈಮರ್‌ ಹಾಲಿವುಡ್‌ ಸಿನಿಮಾದವರೆಗೆ ಒಟಿಟಿಯಲ್ಲಿ ಈ ವಾರ ನೀವು ನೋಡಬಹುದಾದ ಚಲನಚಿತ್ರ, ಶೋಗಳ ವಿವರ ಇಲ್ಲಿದೆ.

VISTARANEWS.COM


on

OTT Releases
Koo

ಬೆಂಗಳೂರು: ಈಗ ಏನಿದ್ದರೂ ಒಟಿಟಿ ಜಮಾನ. ಹೀಗಾಗಿ ಇತ್ತೀಚೆಗೆ ಒಟಿಟಿ ಫ್ಲಾಟ್‌ಫಾರ್ಮ್‌ಗೆ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ವಿವಿಧ ಒಟಿಟಿ ಫ್ಲಾಟ್‌ಫಾರ್ಮ್‌ಗಳ ಪ್ರತಿ ವಾರ ಚಿತ್ರ, ವೆಬ್‌ ಸೀರಿಸ್‌ ಬಿಡುಗಡೆ ಮಾಡಿ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಈ ವಾರವೂ ಬಹು ನಿರೀಕ್ಷಿತ ಚಿತ್ರಗಳು, ನಿಮ್ಮ ನೆಚ್ಚಿನ ಶೋಗಳು ಸ್ಟ್ರೀಮಿಂಗ್‌ ಆಗುತ್ತವೆ. ಎಲ್ಲಿ, ಯಾವಾಗ ಎನ್ನುವ ವಿವರ ಇಲ್ಲಿದೆ (OTT Releases).

ಫೈಟರ್‌ (ನೆಟ್‌ಫ್ಲಿಕ್ಸ್‌)-ಮಾರ್ಚ್‌ 21

ಈ ವರ್ಷದ ಬಾಲಿವುಡ್‌ ಮೊದಲ ಹಿಟ್‌ ಚಿತ್ರ ʼಫೈಟರ್‌ʼ. ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಈ ಚಿತ್ರದಲ್ಲಿ ಮೊದಲ ಬಾರಿಗೆ ಹೃತಿಕ್‌ ರೋಷನ್‌ ಮತ್ತು ದೀಪಿಕಾ ಪಡುಕೋಣೆ ತೆರೆ ಹಂಚಿಕೊಂಡಿದ್ದಾರೆ. ಜನವರಿ 25ರಂದು ತೆರೆಕಂಡ ಈ ಬಹುಕೋಟಿ ವೆಚ್ಚದ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಮಾರ್ಚ್‌ 21ರಿಂದ ಲಭ್ಯ.

ಏ ವತನ್ ಮೇರೆ ವತನ್ (ಅಮೆಜಾನ್ ಪ್ರೈಮ್ ವಿಡಿಯೊ)-ಮಾರ್ಚ್‌ 21

ಸಾರಾ ಅಲಿ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಏ ವತನ್ ಮೇರೆ ವತನ್’ ಹಿಂದಿ ಚಿತ್ರ ಸ್ವಾತಂತ್ರ್ಯ ಹೋರಾಟಗಾರ್ತಿ ಉಷಾ ಮೆಹ್ತಾ ಅವರ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಚಿಕ್ಕ ಹುಡುಗಿಯಾಗಿದ್ದಾಗ ಮೆಹ್ತಾ 1942ರಲ್ಲಿ ಭೂಗತ ರೇಡಿಯೋ ಕೇಂದ್ರವನ್ನು ಪ್ರಾರಂಭಿಸಿದರು. ಹೀಗೆ ಸಾಕಷ್ಟು ಕುತೂಹಲಕಾರಿ ಸಂಗತಿಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆ. ಕಣ್ಣನ್‌ ಅಯ್ಯರ್‌ ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಮಾರ್ಚ್‌ 21ರಂದು ಇದು ಬಿಡುಗಡೆಯಾಗಿದೆ.

ಓಪನ್‌ಹೈಮರ್‌ (ಜಿಯೋ ಸಿನೆಮಾ)-ಮಾರ್ಚ್‌ 21

ಆಸ್ಕರ್‌ ಪ್ರಶಸ್ತಿ ವಿಜೇತ ಹಾಲಿವುಡ್‌ ಚಿತ್ರ ‘ಓಪನ್‌ಹೈಮರ್‌’. ಇದು ಎರಡನೇ ಮಹಾಯುದ್ಧದ ಸಮಯದಲ್ಲಿ ಮೊದಲ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದ ಅಮೇರಿಕನ್ ಸೈದ್ಧಾಂತಿಕ ಭೌತಶಾಸ್ತ್ರಜ್ಞ ಜೆ. ರಾಬರ್ಟ್ ಓಪನ್‌ಹೈಮರ್‌ ಅವರ ಜೀವನದ ಏಳು ಬೀಳನ್ನು ವಿವರಿಸುತ್ತದೆ. ಈ ಚಿತ್ರದಲ್ಲಿ ಸಿಲಿಯನ್ ಮರ್ಫಿ, ಎಮಿಲಿ ಬ್ಲಂಟ್, ಮ್ಯಾಟ್ ಡ್ಯಾಮನ್, ರಾಬರ್ಟ್ ಡೌನಿ ಜೂನಿಯರ್ ಮತ್ತು ಫ್ಲಾರೆನ್ಸ್ ಪಗ್ ನಟಿಸಿದ್ದಾರೆ. ಮಾರ್ಚ್ 21ರಿಂದ ಜಿಯೋ ಸಿನೆಮಾದಲ್ಲಿ ಪ್ರಸಾರವಾಗುತ್ತಿರುವ ಈ ಸಿನಿಮಾದ ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌.

ಟಾಪ್ ಶೆಫ್ (ಜಿಯೋ ಸಿನೆಮಾ)-ಮಾರ್ಚ್‌ 21

ಜಿಯೋ ಸಿನೆಮಾದಲ್ಲಿ ಮಾರ್ಚ್ 21ರಿಂದ ಪ್ರಸಾರವಾಗುವ ಇನ್ನೊಂದು ಬಹು ನಿರೀಕ್ಷಿತ ಶೋ ಇದು. ಟಾಪ್ ಶೆಫ್ ಅಮೆರಿಕ ಜನಪ್ರಿಯ ರಿಯಾಲಿಟಿ ಶೋ ಆಗಿದ್ದು. ಇದರ 21ನೇ ಸೀಸನ್ ಸ್ಟ್ರೀಮಿಂಗ್‌ ಆಗುತ್ತಿದೆ. ಇದು ಅಡುಗೆ ಸ್ಪರ್ಧೆಯನ್ನೊಳಗೊಂಡ ರಿಯಾಲಿಟಿ ಶೋ.

ಲೂಟೆರೆ (ಡಿಸ್ನಿ+ ಹಾಟ್ ಸ್ಟಾರ್)-ಮಾರ್ಚ್‌ 22

ಹಿಂದಿಯ ಈ ವೆಬ್‌ ಸೀರಿಸ್‌ ಮಾರ್ಚ್‌ 22ರಿಂದ ಡಿಸ್ನಿ+ ಹಾಟ್ ಸ್ಟಾರ್‌ನಲ್ಲಿ ವೀಕ್ಷಣೆಗೆ ಲಭ್ಯ. ಸೊಮಾಲಿಯನ್ ಸಮುದ್ರದಲ್ಲಿ ಕಡಲ್ಗಳ್ಳರು ಅಪಹರಿಸಿದ ಭಾರತೀಯ ಹಡಗಿನ ನೈಜ ಘಟನೆಯನ್ನು ಆಧರಿಸಿದ ಈ ವೆಬ್‌ ಸೀರಿಸ್‌ ಅನ್ನು ಹನ್ಸಲ್ ಮೆಹ್ತಾ ಮತ್ತು ಶೈಲೇಶ್‌ ಆರ್‌. ಸಿಂಗ್‌ ರಚಿಸಿದ್ದಾರೆ. ವಿವೇಕ್ ಗೊಂಬರ್, ದೀಪಕ್ ತಿಜೋರಿ, ರಜತ್ ಕಪೂರ್, ಚಂದನ್ ರಾಯ್ ಸನ್ಯಾಲ್ ಮತ್ತು ಅಮೃತಾ ಮತ್ತಿತರರು ನಟಿಸಿದ್ದಾರೆ.

ಅಬ್ರಹಾಂ ಓಜ್ಲರ್ (ಡಿಸ್ನಿ+ ಹಾಟ್ ಸ್ಟಾರ್)-ಮಾರ್ಚ್‌ 21

ಮಲಯಾಳಂನ ಕ್ರೈಂ ಥ್ರಿಲ್ಲರ್‌ ಚಿತ್ರ ‘ಅಬ್ರಹಾಂ ಓಜ್ಲರ್’ ಮಾರ್ಚ್‌ 21ರಿಂದ ಡಿಸ್ನಿ+ ಹಾಟ್ ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ. ಈ ವರ್ಷದ ಮಲಯಾಳಂನ ಹಿಟ್‌ ಚಿತ್ರಗಳಲ್ಲಿ ಇದೂ ಒಂದು. ಜಯರಾಮ್‌, ಅನಸ್ವರಾ ರಾಜನ್‌, ಆರ್ಯಾ ಸಲೀಂ, ಸೆಂಥಿಲ್‌ ಕೃಷ್ಣ, ಸೈಜು ಕುರುಪ್‌, ಅರ್ಜುನ್‌ ಅಶೋಕನ್‌ ಮತ್ತಿತರರು ಅಭಿನಯಿಸಿರುವ ಈ ಸಿನಿಮಾದಲ್ಲಿ ಮೆಗಾ ಸ್ಟಾರ್‌ ಮಮ್ಮುಟ್ಟಿ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಮಿಧುನ್‌ ಮ್ಯಾನುವೆಲ್‌ ಥಾಮಸ್‌ ನಿರ್ದೇಶನದ ಈ ಚಿತ್ರ ಕನ್ನಡದಲ್ಲೂ ಲಭ್ಯ.

ಇದನ್ನೂ ಓದಿ: Amazon Prime Video: ಪ್ರೈಮ್ ವಿಡಿಯೊ ಮತ್ತೊಂದು ಸಾಹಸ; 70 ಹೊಸ ಪ್ರಾಜೆಕ್ಟ್​ಗಳ ಘೋಷಣೆ!

Continue Reading
Advertisement
Lok Sabha Election 2024 Brijesh Chowta declares assets
Lok Sabha Election 20241 min ago

Lok Sabha Election 2024: ಅವಿವಾಹಿತ ಬ್ರಿಜೇಶ್ ಚೌಟ ಬಳಿ ಇಲ್ಲ ಕೋಟಿ ಕೋಟಿ ಆಸ್ತಿ! ಸಾಲ ಮಾಡಿ ಕಾರು ಖರೀದಿ

Drowned in canal
ದಾವಣಗೆರೆ13 mins ago

Bhadra canal : ಭದ್ರಾ ನಾಲೆಗೆ ಬಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು

Unmukt Chand
ಕ್ರೀಡೆ27 mins ago

Unmukt Chand: ಭಾರತ ತಂಡ ತೊರೆದು ಯುಎಸ್​ಎ ಸೇರಿದ ಉನ್ಮುಕ್ತ್‌ಗೆ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಅನುಮಾನ

Bullet Train
ದೇಶ1 hour ago

Bullet Train: ಬುಲೆಟ್‌ ರೈಲು ಓಡೋದು ಯಾವಾಗ? ರೈಲ್ವೆ ಸಚಿವ ಹೇಳೋದಿಷ್ಟು

Lok Sabha Election 2024 BJP JDS coordination committee meeting successful Fight to win with the workers
Lok Sabha Election 20241 hour ago

Lok Sabha Election 2024: ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಯಶಸ್ವಿ; ಎಲೆಕ್ಷನ್‌ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್!

tcs jobs IT hiring
ಉದ್ಯೋಗ1 hour ago

IT Hiring: ಟಿಸಿಎಸ್‌ನಲ್ಲಿ ಫ್ರೆಶರ್‌ಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ? ಯಾವಾಗ ಕೊನೆಯ ದಿನ?

Road Accident
ಬೆಂಗಳೂರು ಗ್ರಾಮಾಂತರ1 hour ago

Road Accident : ತಲೆ ಮೇಲೆ ಹರಿದ ಲಾರಿ; ಅರಣ್ಯ ಇಲಾಖೆ ಸಿಬ್ಬಂದಿ ಸಾವು, ಮತ್ತೊಬ್ಬ ಗಂಭೀರ

Sonarika Bhadoria
ಕಿರುತೆರೆ2 hours ago

Sonarika Bhadoria: ಹನಿಮೂನ್‌ನ ಹಾಟ್‌ ಫೋಟೊ ಶೇರ್‌ ಮಾಡಿದ ಹಿಂದಿ ಸೀರಿಯಲ್‌ ನಟಿ!

Riyan Parag
ಕ್ರೀಡೆ2 hours ago

Riyan Parag: 3 ದಿನ ನೋವು ನಿವಾರಕ ಮಾತ್ರೆ ಸೇವಿಸಿ ಹಾಸಿಗೆಯಲ್ಲಿದ್ದೆ; ಪಂದ್ಯಶ್ರೇಷ್ಠ ಪ್ರಶಸ್ತಿ ವೇಳೆ ಭಾವುಕರಾದ ​ಪರಾಗ್

Accident Case
ತುಮಕೂರು2 hours ago

Accident Case : ಮರ ಕಡಿಯುವಾಗ ಕರೆಂಟ್‌ ಶಾಕ್‌ಗೆ ಬಲಿ; ಹುಣಸೆ ಹಣ್ಣು ಕೊಯ್ಯುವಾಗ ಬಿದ್ದು ಸಾವು

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌