ಬೆಂಗಳೂರು: ಕಾಲಿವುಡ್ ನಟ ಧನುಷ್ (Actor Dhanush) ಅವರು ತಮ್ಮ ಮುಂಬರುವ ಚಿತ್ರ ʻರಾಯನ್ʼ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ತಮ್ಮ ಭಾಷಣದ ಮೂಲಕ ಹಲವಾರು ವಿಚಾರಗಳಿಗೆ ರಗಡ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ಪೋಯಸ್ ಗಾರ್ಡನ್‌ನಲ್ಲಿ ಮನೆ ಖರೀದಿಸಲು ತಾನು ಹೇಗೆ ಶ್ರಮಿಸಿದ್ದೇನೆ ಎಂಬ ಬಗ್ಗೆ ನಟ ಹೇಳಿಕೊಂಡರು. ಈಚೆಗೆ ಅವರು ತಮ್ಮ 150 ಕೋಟಿ ರೂ. ಮೌಲ್ಯದ ಮನೆ ವಿಚಾರಕ್ಕಾಗಿ ಸುದ್ದಿಯಾಗಿದ್ದರು. ಚೆನ್ನೈನ ಅತ್ಯಂತ ದುಬಾರಿ ಮತ್ತು ಪ್ರತಿಷ್ಠಿತ ಏರಿಯಾ ಅಂದ್ರೆ, ಅದು ಪೋಯಸ್ ಗಾರ್ಡನ್. ಇಂತಹ ಏರಿಯಾದಲ್ಲಿ ಮನೆ ಕಟ್ಟಬೇಕು ಎಂಬುದು ಧನುಷ್ ಕನಸಾಗಿತ್ತು. ಈ ಮನೆ ಬಗ್ಗೆ ದೊಡ್ಡಮಟ್ಟದಲ್ಲಿ ಚರ್ಚೆ ಆಗುತ್ತದೆ. “ನಾವೆಲ್ಲಾ ಪೋಯಸ್ ಗಾರ್ಡನ್‌ನಲ್ಲಿ ಮನೆ ಖರೀದಿಸಬಾರದಾ? ನಾನು ಬೀದಿಯಲ್ಲಿ ವಾಸಿಸಬೇಕಾ” ಎಂದು ಪ್ರಶ್ನೆ ಮಾಡಿದ್ದಾರೆ.
ರಜನಿಕಾಂತ್ ಮತ್ತು ದಿವಂಗತ ಜಯಲಲಿತಾ ಅಂತಹ ಘಟನುಘಟಿಗಳು ಪೋಯಸ್ ಗಾರ್ಡನ್‌ನಲ್ಲಿ ಮನೆ ಖರೀದಿಸಿದ್ದರು. ಈ ಪಟ್ಟಿಗೆ ಧನುಷ್ ಅವರ ಹೆಸರು ಸೇಪರ್ಡೆಯಾಗಿತ್ತು. ಮಾತ್ರವಲ್ಲ ಈ ಬಗ್ಗೆ ಭಾರಿ ಚರ್ಚೆಗಳು ಆದವು. ಇದೀಗ ವೇದಿಕೆಯಲ್ಲಿ ಧನುಷ್ ಮಾತನಾಡಿ ʻʻಪೋಯಸ್ ಗಾರ್ಡನ್‌ನಲ್ಲಿ ಮನೆ ಖರೀದಿಸುವುದು ಇಷ್ಟು ದೊಡ್ಡ ಚರ್ಚೆ ಆಗುತ್ತಿತ್ತು ಎಂದು ನನಗೆ ತಿಳಿದಿದ್ದರೆ, ನಾನು ಕೇವಲ ಒಂದು ಸಣ್ಣ ಅಪಾರ್ಟ್ಮೆಂಟ್ ಅಲ್ಲಿ ಇರುತ್ತಿದ್ದೆ. ಹಾಗಾದರೆ ನಾನು ಪೋಯಸ್ ಗಾರ್ಡನ್‌ನಲ್ಲಿ ಮನೆ ಖರೀದಿಸಬಾರದೇ? ಬೀದಿಯಲ್ಲಿ ಇರುವವನು ಬೀದಿಯಲ್ಲೇ ಇರಬೇಕೇ?ಎಂದು ಮತ್ತಷ್ಟು ವಿಚಾರ ಹೇಳಿಕೊಂಡರು.
ಧನುಷ್ ಅವರು 16 ವರ್ಷದವರಾಗಿದ್ದಾಗ ರಜನಿಕಾಂತ್ ಅವರ ಮನೆಯನ್ನು ನೋಡಲು ಕಾಯುತ್ತಿದ್ದರಂತೆ. ಈ ಬಗ್ಗೆ ನಟ ಮಾತನಾಡಿ ʻʻನನಗೆ ಆಗ 16 ವರ್ಷ ಇರಬೇಕು. ಈ ಏರಿಯಾಗೆ ಬಂದಾಗ ಮುಂಚೆ ಜಯಲಲಿತಾ ಅವರ ಮನೆ ಎಂದು ಗೊತ್ತಾಯ್ತು. ನಾನು ಬೈಕ್ ನಿಲ್ಲಿಸಿ ನೋಡಿದೆ – ಒಂದು ಕಡೆ ರಜನಿ ಸರ್ ಮನೆ, ಇನ್ನೊಂದು ಕಡೆ ಜಯಲಲಿತಾ ಅಮ್ಮನ ಮನೆ. ಒಂದು ದಿನ, ಹೇಗಾದರೂ, ನಾನು ಪೋಯಸ್ ಗಾರ್ಡನ್‌ನಂತಹ ಐಷಾರಾಮಿ ಪ್ರದೇಶದಲ್ಲಿ ಕನಿಷ್ಠ ಒಂದು ಸಣ್ಣ ಮನೆಯನ್ನು ಖರೀದಿಸಬೇಕು ಎಂದು ನಿರ್ಧಾರ ಮಾಡಿದ್ದೆ. ಅಂದು ಕನಸು ಕಂಡ ವೆಂಕಟೇಶ್ ಪ್ರಭುಗೆ (ಧನುಷ್ ಮೂಲ ಹೆಸರು) ಇಷ್ಟು ವರ್ಷ ಕಷ್ಟಪಟ್ಟು ಧನುಷ್ ನೀಡಿದ ಗಿಫ್ಟ್ ಆ ಪೋಯಸ್ ಗಾರ್ಡನ್ ಮನೆ” ಎಂದು ನಟ ಧನುಷ್ ಹೇಳಿದ್ದಾರೆ.
ಇದನ್ನೂ ಓದಿ: Actor Suriya: ಕಾಲಿವುಡ್ ನಟ ಸೂರ್ಯ ಸಿನಿಮಾಗಾಗಿ ಈ ಕನ್ನಡ ಸ್ಟಾರ್ ಹೀರೋಗೆ ಬಂದಿತ್ತು ಆಫರ್!
ಇದೀಗ ನಟನ ಮಾತುಗಳಿಗೆ ಹೆಚ್ಚಾಗಿ ನೆಗೆಟಿವ್ ಕಮೆಂಟ್ ಬಂದಿವೆ. , “ಧನುಷ್ ಅವರಂತಹ ನೆಪೋ ಕಿಡ್ ವ ಬಗ್ಗೆ ಮಾತನಾಡುತ್ತಿರುವುದು ತಮಾಷೆಯಾಗಿದೆ.. ಹಾಗೆ, ನಿಮ್ಮ ಕುಟುಂಬವು ಸಿನಿಮಾ ಹಿನ್ನೆಲೆಯನ್ನು ಹೊಂದಿದೆ ಮತ್ತು ಯಾವುದೇ ಪ್ರತಿಭೆಗಳಿಲ್ಲದೆ ನೀವು ಅದನ್ನು ಸುಲಭವಾಗಿ ಪ್ರವೇಶಿಸಬಹುದು. ಬೀದಿ ಎಂದರೇನು ಎಂದು ನಿಮಗೆ ತಿಳಿದಿದೆಯೇ? ”ಎಂದು ಒಬ್ಬರು ಪ್ರಶ್ನಿಸಿದ್ದಾರೆ.
ʻ”ಈ ನಟರು ಸಾಮಾನ್ಯವಲ್ಲದವರಂತೆ ಏಕೆ ವರ್ತಿಸುತ್ತಾರೆ? ಸರಳವಾದ ಉಡುಗೆ ಮತ್ತು ರುದ್ರಾಕ್ಷಿಯನ್ನು ಧರಿಸುವುದರಿಂದ ಯಾರಾದರೂ ಸರಳ ಮತ್ತು ವಿನಮ್ರರು ಎಂದು ಅರ್ಥವಲ್ಲ. ಮನಸ್ಥಿತಿಯೇ ಮುಖ್ಯ! ಈ ಕಥೆಗಳ ಮೂಲಕ ತನ್ನ ಮಾಜಿ ಮಾವನಿಗೆ ಮಣೆ ಹಾಕುತ್ತಿದ್ದಾರೆʼʼಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಧನುಷ್ (Actor Dhanush) ಅವರ ಎರಡನೇ ನಿರ್ದೇಶನದ ಸಿನಿಮಾ ರಾಯನ್’ (Raayan). ಧನುಷ್ ಕಳೆದ ವರ್ಷ ಜುಲೈನಲ್ಲಿ ಈ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಿನಿಮಾಗಾಗಿ ನಟ ತಲೆಯನ್ನು ಬೋಳಿಸಿಕೊಂಡಿdfdru. 2017 ರಲ್ಲಿ ತೆರೆಕಂಡ ‘ಪಾ ಪಾಂಡಿ’ ಚಿತ್ರದ ಮೂಲಕ ಧನುಷ್ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೀಗ ʻರಾಯನ್ʼ ಅವರ ಎರಡನೇ ನಿರ್ದೇಶನದ ಸಿನಿಮಾ. ಧನುಷ್ ಕೊನೆಯದಾಗಿ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಕಾಣಿಸಿಕೊಂಡರು. ಅರುಣ್ ಮಾಥೇಶ್ವರನ್ ನಿರ್ದೇಶನದ ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್, ಪ್ರಿಯಾಂಕಾ ಮೋಹನ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್ ಮತ್ತು ಮೂರ್ ಪ್ರಮುಖ ಪಾತ್ರಗಳಲ್ಲಿದ್ದರು.
ಸಂದೀಪ್ ಕಿಶನ್ ಮತ್ತು ಕಾಳಿದಾಸ್ ಜಯರಾಮ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದಲ್ಲಿ ಎಸ್‌ಜೆ ಸೂರ್ಯ, ಸೆಲ್ವರಾಘವನ್, ಪ್ರಕಾಶ್ ರಾಜ್, ದುಶಾರ ವಿಜಯನ್, ಅಪರ್ಣಾ ಬಾಲಮುರಳಿ ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶೀಘ್ರದಲ್ಲೇ ಶೇಖರ್ ಕಮ್ಮುಲ ಅವರ ತೆಲುಗು-ತಮಿಳು ದ್ವಿಭಾಷಾ ಚಿತ್ರ `ಕು
ಬೇರ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗಾರ್ಜುನ, ರಶ್ಮಿಕಾ ಮಂದಣ್ಣ ಮತ್ತು ಜಿಮ್ ಸರ್ಭ್ ಕೂಡ ಇದರಲ್ಲಿ ನಟಿಸಿದ್ದಾರೆ.