ಬೆಂಗಳೂರು: ಬೆಂಗಳೂರಿನಲ್ಲಿ ಓರ್ವ ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್ವಾಡ್ (ರಜನಿಕಾಂತ್) (Actor Rajinikanth) ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರಾಗಿದ್ದು, ಇಡೀ ದೇಶವೇ ಮೆಚ್ಚುವಂತೆ ‘ಸೂಪರ್ ಸ್ಟಾರ್’ ರಜನಿಕಾಂತ್ ಎನಿಸಿಕೊಂಡಿದ್ದು ಸಾಮಾನ್ಯದ ಮಾತಲ್ಲ. ಇದೀಗ ತಲೈವ ರಜನಿಕಾಂತ್ ಬೆಂಗಳೂರಿಗೆ ಆಗಮಿಸಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( Bengaluru Metropolitan Transport Corporation) ಡಿಪೋ -4ಗೆ ದಿಢೀರ್ ಭೇಟಿ ನೀಡಿದ್ದಾರೆ. ರಜನಿಕಾಂತ್ ಅನಿರೀಕ್ಷಿತವಾಗಿ ಭೇಟಿ ಕೊಟ್ಟ ಕಾರಣ ಬಿಎಂಟಿಸಿ ಸಿಬ್ಬಂದಿ ವರ್ಗದವರಿಗೆ ಸಂತಸಕ್ಕೆ ಪಾರವೇ ಇಲ್ಲವಂತಾಗಿದೆ. ರಜನಿ ಕಂಡು ಸೆಲ್ಫಿಗೆ ಅಭಿಮಾನಿಗಳು ಮುಗಿಬಿದ್ದರು. ಇದು ರಜನಿ ಅವರ ಅನಿರೀಕ್ಷಿತ ಭೇಟಿ ಎಂದು ಬಿಎಂಟಿಸಿ ಮಾಹಿತಿ ಹಂಚಿಕೊಂಡಿದೆ.
ಜಯನಗರ ಬಿಎಂಟಿಸಿ ಡಿಪೋದಲ್ಲಿ ಕೆಲಸ ನಿರ್ವಹಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಇದೀಗ ಅದೇ ಡಿಪೋಗೆ ಭೇಟಿ ನೀಡಿದ್ದಾರೆ. ಆಗ ಜಯನಗರ ಡಿಪೋದಲ್ಲೆ ಕೆಲಸ ನಿರ್ವಹಿಸಿದ್ದ ರಜನಿಕಾಂತ್ ಇದೀಗ ಸೂಪರ್ ಸ್ಟಾರ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಹಳೆಯ ನೆನಪು ಮೆಲುಕು ಹಾಕಿದ ರಜನಿ
ಈ ಮೊದಲು ಬಿಎಂಟಿಸಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಜನಿ ಇದೀಗ ತಮ್ಮ ಹಳೆಯ ನೆನಪು ಮೆಲುಕು ಹಾಕಿದ್ದಾರೆ. ಜೈಲರ್ ಸಿನಿಮಾ ಟ್ರೈಲರ್ ವೇಳೆ ಬಿಎಂಟಿಸಿ ಕೆಲಸ ಮಾಡಿರುವ ಬಗ್ಗೆ ನೆನಪುಗಳನ್ನು ಹಂಚಿಕೊಂಡಿದ್ದರು. ಆ ಕಾಲದಲ್ಲಿ ಅವರ ಜತೆ ಇದ್ದ ಸ್ನೇಹಿತ ರಾಜ್ ಬಹದ್ದೂರ್ ಬಿಎಂಟಿಸಿ ಡ್ರೈವರ್ ಆಗಿದ್ದರು. , ಅದೇ ಬಸ್ಗೆ ಕಂಡಕ್ಟರ್ ಆಗಿ ರಜನಿ ಕೆಲಸ ಮಾಡುತ್ತಿದ್ದರು. ಇದೀಗ ಇಬ್ಬರು ಸ್ನೇಹಿತರು ಮತ್ತೆ ಬಿಎಂಟಿಸಿ ಡಿಪೋದಲ್ಲಿ ಕೆಲ ಕಾಲ ಸಂತಸ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಇದಾದ ಬಳಿಕ ರಜನಿಕಾಂತ್ ತಮ್ಮ ನೆಚ್ಚಿನ ಸ್ಥಳಗಳಾದ ರಾಘವೇಂದ್ರ ಸ್ವಾಮೀ ದೇವಸ್ಥಾನ , ವಿದ್ಯಾರ್ಥಿ ಭವನ , ರಜಿನಿ ಓದಿದ ಶಾಲೆ ಹೀಗೆ ಹಲವು ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
ಶಿವಾಜಿ ರಾವ್ ಗಾಯಕ್ವಾಡ್ ಆಗಿ ಜನಿಸಿದ ರಜನಿಕಾಂತ್, ಮರಾಠಿ ಮತ್ತು ಕನ್ನಡ ಮಾತನಾಡುತ್ತಾ ಬೆಳೆದರು. ಸಿನಿ ಲೋಕಕ್ಕೆ ಪ್ರವೇಶಿಸುವ ಮೊದಲು, ರಜನಿಕಾಂತ್ ಕೂಲಿ, ಕಾರ್ಪೆಂಟರ್ ಮತ್ತು ಬಸ್ ನಿರ್ವಾಹಕರಾಗಿ ಕೆಲಸ ಮಾಡಿದ್ದರು.
ಇದನ್ನೂ ಓದಿ: Actor Rajinikanth: ಕೇಕ್ ಕತ್ತರಿಸಿ ಜೈಲರ್ ‘ಸಕ್ಸೆಸ್’ ಸಂಭ್ರಮಿಸಿದ ರಜಿನಿಕಾಂತ್!
ಇದನ್ನೂ ಓದಿ: Actor Rajinikanth: ಕೇಕ್ ಕತ್ತರಿಸಿ ಜೈಲರ್ ‘ಸಕ್ಸೆಸ್’ ಸಂಭ್ರಮಿಸಿದ ರಜಿನಿಕಾಂತ್!
ರಜನಿಕಾಂತ್ ಅವರ ಚಿತ್ರರಂಗ ಪ್ರವೇಶಿಸಿದ್ದು ಬಾಲಚಂದರ್ ನಿರ್ದೇಶನದ ತಮಿಳು ಚಿತ್ರ ಅಪೂರ್ವ ರಾಗಂಗಳ್ (1975) ಮೂಲಕ. ಮೊದಲ ಸಿನಿಮಾದಲ್ಲಿ ರಜನಿಕಾಂತ್ ಅವರದು ಖಳನಾಯಕನ ಪಾತ್ರ. ಈ ಚಿತ್ರದ ಅಭಿನಯಕ್ಕಾಗಿ ರಜನಿಕಾಂತ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂತು. ತೆಲುಗು ಚಿತ್ರ ‘ಚಿಲಕಮ್ಮ ಚೆಪ್ಪಿನಾಡಿ’ (1975) ನಲ್ಲಿ ರಜನಿಕಾಂತ್ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡರು.ರಜನಿಕಾಂತ್ ಅವರಿಗೆ 2000ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು ಮತ್ತು 2014ರಲ್ಲಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ನೀಡಲಾಯಿತು.
ಜೈಲರ್ ಸಿನಿಮಾ ಮೂಲಕ ಗೆದ್ದು ಬೀಗಿದ ತಲೈವಾ
ರಜನಿಕಾಂತ್ ಮತ್ತೆ ಬಾಕ್ಸ್ ಆಫೀಸ್ನಲ್ಲಿ ಗೆದ್ದು ಬೀಗಿದ್ದಾರೆ. ಜೈಲರ್ ಸಿನಿಮಾ ದೇಶ ವಿದೇಶಗಳಿಂದ ಒಟ್ಟು 600 ಕೋಟಿ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಆಗಸ್ಟ್ 10ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಜೈಲರ್ ಸಿನಿಮಾ ದೊಡ್ಡ ಮಟ್ಟದ ಓಪನಿಂಗ್ ಪಡೆದುಕೊಂಡಿತ್ತು. ರಜನಿಕಾಂತ್ ಎಂದಿನ ತಮ್ಮ ಸ್ಟೈಲ್ ಮತ್ತು ಮ್ಯಾನರಿಸಂನಿಂದಲೇ ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರನ್ನು ಸೆಳೆದಿದ್ದರು. ಚಿತ್ರದ ಪ್ರೀ ಕ್ಲೈಮ್ಯಾಕ್ಸ್ನಲ್ಲಿ ಶಿವರಾಜ್ಕುಮಾರ್ ಮತ್ತು ಮೋಹನ್ಲಾಲ್ ಅಚ್ಚರಿಯ ಎಂಟ್ರಿಗೆ ನೋಡುಗರು ನಿಬ್ಬೆರಗಾಗಿದ್ದರು. ಹೀಗೆ ಪಾಸಿಟಿವ್ ಟಾಕ್ ಮೂಲಕವೇ ಶುರುವಾದ ಈ ಸಿನಿಮಾ ಇದೀಗ 600 ಕೋಟಿಯ ಸನಿಹದಲ್ಲಿದೆ.