Site icon Vistara News

Actor Dhanush: ಸಿನಿಮಾ ಬಿಡುಗಡೆಗೂ ಮುನ್ನ ದೇವರ ಮೊರೆ ಹೋದ ನಟ ಧನುಷ್

Actor Dhanush shares pic of him meditating at ancestral temple

ಬೆಂಗಳೂರು: ಧನುಷ್ ಬರೆದು ನಿರ್ದೇಶಿಸಿರುವ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ʻರಾಯನ್ʼ ಸಿನಿಮಾವನ್ನು ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಜುಲೈ 26ಕ್ಕೆ ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಇನ್ನು ಸಿನಿಮಾದ ಟ್ರೈಲರ್‌ ಬಹಳ ರೂಚಕತೆಯಿಂದ ಕೂಡಿತ್ತು. ಈಗಾಗಲೇ ಸಿನಿಮಾದ ಆಡಿಯೊ ಲಾಂಚ್‌ ಬಹಳ ಅದ್ಧೂರಿಯಾಗಿ ನೆರವೇರಿದೆ. ಇದೀಗ ಸಿನಿಮಾ ಬಿಡುಗಡೆಗೂ ಮುಂಚೆ ನಟ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಾಲಯದಲ್ಲಿ ಧ್ಯಾನ ಮಾಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಪುತ್ರರಾದ ಯಾತ್ರಾ ಮತ್ತು ಲಿಂಗ ಕೂಡ ಜತೆಗೆ ಇದ್ದರು. ಜುಲೈ 26 ರಂದು ತಮಿಳು ಮತ್ತು ತೆಲುಗಿನಲ್ಲಿ ಥಿಯೇಟರ್‌ಗಳಲ್ಲಿ ಗ್ರ್ಯಾಂಡ್ ರಿಲೀಸ್‌ಗೆ ಸಜ್ಜಾಗಿದೆ. ಇನ್ನು ಈ ಸಿನಿಮಾ ಧನುಷ್‌ ಅವರ 50ನೇ ಸಿನಿಮಾ ಎನ್ನುವುದು ವಿಶೇಷ. ಚಿತ್ರದಲ್ಲಿ ಎಸ್‌ಜೆ ಸೂರ್ಯ, ಸಂದೀಪ್ ಕಿಶನ್, ಕಾಳಿದಾಸ್ ಜಯರಾಮ್, ಅಪರ್ಣಾ ಬಾಲಮುರಳಿ, ದುಶಾರ ವಿಜಯನ್, ಪ್ರಕಾಶ್ ರಾಜ್ ಮತ್ತು ಸೇವಾರಾಘವನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಚಿತ್ರ ‘ಎ’ ಸರ್ಟಿಫಿಕೇಟ್‌ ಪಡೆದುಕೊಂಡಿದೆ. ‘ರಾಯನ್ಸ್’ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ, ಓಂ ಪ್ರಕಾಶ್ ಅವರ ಛಾಯಾಗ್ರಹಣ ಮತ್ತು ಪ್ರಸನ್ನ ಜಿಕೆ ಸಂಕಲನವಿದೆ.

ಇದನ್ನೂ ಓದಿ: Actor Suriya: ಕಾಲಿವುಡ್‌ ನಟ ಸೂರ್ಯ ಸಿನಿಮಾಗಾಗಿ ಈ ಕನ್ನಡ   ಸ್ಟಾರ್ ಹೀರೋಗೆ ಬಂದಿತ್ತು ಆಫರ್‌!

ಧನುಷ್ (Actor Dhanush) ಅವರ ಎರಡನೇ ನಿರ್ದೇಶನದ ಸಿನಿಮಾ ರಾಯನ್‌’ (Raayan). ಧನುಷ್ ಕಳೆದ ವರ್ಷ ಜುಲೈನಲ್ಲಿ ಈ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಿನಿಮಾಗಾಗಿ ನಟ ತಲೆಯನ್ನು ಬೋಳಿಸಿಕೊಂಡಿದ್ದರು. 2017 ರಲ್ಲಿ ತೆರೆಕಂಡ ‘ಪಾ ಪಾಂಡಿ’ ಚಿತ್ರದ ಮೂಲಕ ಧನುಷ್ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೀಗ ʻರಾಯನ್‌ʼ ಅವರ ಎರಡನೇ ನಿರ್ದೇಶನದ ಸಿನಿಮಾ. ಧನುಷ್‌ ಕೊನೆಯದಾಗಿ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಕಾಣಿಸಿಕೊಂಡರು. ಅರುಣ್ ಮಾಥೇಶ್ವರನ್ ನಿರ್ದೇಶನದ ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್, ಪ್ರಿಯಾಂಕಾ ಮೋಹನ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್ ಮತ್ತು ಮೂರ್ ಪ್ರಮುಖ ಪಾತ್ರಗಳಲ್ಲಿದ್ದರು.

ಸದ್ಯ ‘ಕುಬೇರ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಸೂಟಿಂಗ್‌ ಮುಕ್ತಾಯವಾಗುವ ನಿರೀಕ್ಷೆಯಿದೆ. ‘ಕುಬೇರ’ ತ್ರಿಭಾಷಾ ಚಿತ್ರವಾಗಿದ್ದು, ಏಕಕಾಲದಲ್ಲಿ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರೀಕರಣವಾಗುತ್ತಿದೆ.ʻಕುಬೇರ’ ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಒಂದಾಗಿದೆ, ಇದನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ.

Exit mobile version