ಬೆಂಗಳೂರು: ಸಂಗೀತ ಮಾಂತ್ರಿಕ ಇಳಯರಾಜ ಮತ್ತು ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರಿಗೆ ಇಂದು (ಜೂನ್ 2) ಜನುಮದಿನದ ಸಂಭ್ರಮ. ವಿಶೇಷ ಸಂದರ್ಭದಲ್ಲಿ, ನಟರಾದ ಕಮಲ್ ಹಾಸನ್ ಮತ್ತು ಧನುಷ್ ಶುಭ ಹಾರೈಸಿದರು. ಇಳಯರಾಜ 81ನೇ ವಂಸತಕ್ಕೆ ಕಾಲಿಟ್ಟಿದ್ದಾರೆ. ತಮಿಳು ನಟ ಧನುಷ್ (Actor Dhanush) ಅವರು ಇಳಯರಾಜ ಬಯೋಪಿಕ್‌ನಲ್ಲಿ ಅವರ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಅಧಿಕೃತಗೊಂಡಿದೆ. ಅರುಣ್ ಮಾಥೇಶ್ವರನ್ ನಿರ್ದೇಶನ ಕನೆಕ್ಟ್ ಮೀಡಿಯಾ ಮತ್ತು ಪಿಕೆ ಪ್ರೈಮ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದ ಫಸ್ಟ್ ಲಕ್ ಪೋಸ್ಟರ್ (Ilaiyaraaja first poster) ಚೆನ್ನೈನಲ್ಲಿ ಅನಾವರಣಗೊಂಡಿತ್ತು. ಕನ್ನಡದಲ್ಲೂ ಸಿನಿಮಾ ಬರಲಿದೆ.
ಇದೀಗ ಧನುಷ್ ತಮ್ಮ ಮುಂಬರುವ ಚಿತ್ರವಾದ ಇಳಯರಾಜ ಅವರ ಜೀವನಚರಿತ್ರೆಯ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಸಾವಿರಾರು ಜನರ ಮುಂದೆ ಹಾರ್ಮೋನಿಯಂ ಹಿಡಿದು ವೇದಿಕೆಯಲ್ಲಿ ನಿಂತಿರುವ ಪೋಸ್ಟರ್ ಹಂಚಿಕೊಂಡಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಮೇಷ್ಟ್ರೇ’ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.
ಕಮಲ್ ಹಾಸನ್ ಎಕ್ಸ್‌ನಲ್ಲಿ ಇಳಯರಾಜ ಮತ್ತು ಮಣಿರತ್ನಂ ಜತೆಗಿರುವ ಫೋಟೊವನ್ನು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. “ಡಬಲ್ ಹ್ಯಾಪಿನೆಸ್. ಸಂತೋಷವನ್ನು ಅಳೆಯಲು ಸಾಧ್ಯವೇ? ಇಂದು ನನ್ನ ದೊಡ್ಡಣ್ಣ ಹಾಗೂ ಚಿಕ್ಕಣ್ಣನ ಜನ್ಮದಿನವಾಗಿರುವುದರಿಂದ ಇದು ಸಂತೋಷದ ಕ್ಷಣವಾಗಿದೆ. ನನ್ನ ಪ್ರೀತಿಯ ಸಹೋದರ ಇಳಯರಾಜ ಅವರು ಸಂಗೀತದಲ್ಲಿ ಕಥೆಯನ್ನು ಹೇಳಲಿದ್ದಾರೆ. ನಿಮ್ಮಿಬ್ಬರಿಗೂ ಜನ್ಮದಿನದ ಶುಭಾಶಯಗಳು. ನಮ್ಮ ಮೂವರ ಪರಂಪರೆ ಶಾಶ್ವತವಾಗಿ ಮುಂದುವರಿಯಲಿ. ಹ್ಯಾಪಿ ಬರ್ತ್‌ಡೇ ಇಳಯರಾಜ ಮತ್ತು ಹ್ಯಾಪಿ ಬರ್ತ್‌ಡೇ ಮಣಿರತ್ನಂ. ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Actor Dhanush: ಧನುಷ್‌ಗೆ ಐಶ್ವರ್ಯಾ ದೋಖಾ; ಐಶ್ವರ್ಯಾಗೆ ಧನುಷ್ ಮೋಸ! ಖ್ಯಾತ ಗಾಯಕಿಯಿಂದ ಸೆನ್ಷೆಷನಲ್ ಮಾಹಿತಿ
ತಮಿಳು ನಟ ಧನುಷ್ (Actor Dhanush) ಅವರು ಇಳಯರಾಜ ಬಯೋಪಿಕ್‌ನಲ್ಲಿ ಅವರ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಅಧಿಕೃತಗೊಂಡಿದೆ. ಅರುಣ್ ಮಾಥೇಶ್ವರನ್ ನಿರ್ದೇಶನ ಕನೆಕ್ಟ್ ಮೀಡಿಯಾ ಮತ್ತು ಪಿಕೆ ಪ್ರೈಮ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದ ಫಸ್ಟ್ ಲಕ್ ಪೋಸ್ಟರ್ (Ilaiyaraaja first poster) ಚೆನ್ನೈನಲ್ಲಿ ಅನಾವರಣಗೊಂಡಿತ್ತು.
ಚಿತ್ರವು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ದೇಶಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇಷ್ಟು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಸಾಕಾಗುವುದಿಲ್ಲ. ಇತರ ಹಲವು ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಬೇಕು ಎಂದು ಕಮಲ್ ಹಾಸನ್ ಅಭಿಪ್ರಾಯಪಟ್ಟರು.
ಈ ಬಯೋಪಿಕ್‌ಗೆ ಇಳಯರಾಜ ಅವರೇ ಸ್ವತಃ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಿತ್ರಕ್ಕೆ ನೀರವ್ ಷಾ ಕ್ಯಾಮೆರಾ ನಿರ್ವಹಿಸುತ್ತಿದ್ದು, ಮುತ್ತುರಾಜ ನಿರ್ಮಾಣ ವಿನ್ಯಾಸವನ್ನು ನೋಡಿಕೊಳ್ಳುತ್ತಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಮತ್ತು ಇತರ ವಿವರಗಳು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಇಳಯರಾಜ ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ. ಏಳು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. 1,400 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. 20 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಸಂಗೀತವಾದ್ಯ ನೀಡಿದ್ದಾರೆ. ಭಾರತದ ಅದರಲ್ಲೂ ತಮಿಳಿನ ಜಾನಪದ ಸಂಗೀತವನ್ನು ಆಧರಿಸಿಯೇ ಹೆಚ್ಚಾಗಿ ಇವರು ಹಾಡು ಕಟ್ಟಿದ್ದಾರೆ. ಇದೀಗ ಇಳಯರಾಜ ಅವರ ಜೀವನ ಪ್ರಯಾಣದ ಕುರಿತಾದ ಚಿತ್ರ ಸೆಟ್ಟೇರಲು ಸಜ್ಜಾಗುತ್ತಿದೆ.
ಧನುಷ್ ಈಗಾಗಲೇ ʻಕುಬೇರʼ ಮತ್ತು ʻರಾಯನ್ʼ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ʻನಿಲವುಕು ಎನ್ಮೇಲ್ ಎನ್ನದಿ ಕೋಬಂʼ ಚಿತ್ರವನ್ನು ಸಹ ನಿರ್ದೇಶಿಸುತ್ತಿದ್ದಾರೆ.