Site icon Vistara News

Actor Rajinikanth: ಈ ಬಾರಿಯೂ ಮೋದಿ ಗೆಲ್ಲಬಹುದಾ ಎಂಬ ಪ್ರಶ್ನೆಗೆ ರಜನಿಕಾಂತ್ ಕೊಟ್ಟ ಉತ್ತರ ಏನು?

Actor Rajinikanth response to political questions is unmissable

ಬೆಂಗಳೂರು: ಪ್ರತಿ ಚಿತ್ರ ಮುಗಿದ ನಂತರ, ರಜನಿಕಾಂತ್ (Actor Rajinikanth) ಹಿಮಾಲಯದ ಪ್ರವಾಸವನ್ನು ಕೈಗೊಳ್ಳುತ್ತಾರೆ. ನಟ ರಜನಿಕಾಂತ್‌ ಅವರು ಆಗಾಗ ಆಧ್ಯಾತ್ಮಿಕದ ಕಡೆಗೆ ಹೊರಳುವುದನ್ನು ನೋಡಿಯೇ ಇರುತ್ತೀರ. ಭಕ್ತಿ, ದೇವರ ವಿಚಾರದಲ್ಲಿ ಅವರು ಮನಸ್ಸು ಸದಾ ಜಾಗೃತವಾಗಿರುತ್ತದೆ. ಈಗಾಗಲೆ ಹಲವಾರು ಸಲ ಹಿಮಾಲಕ್ಕೆ ಹೋಗಿ ಬಂದಿದ್ದಾರೆ. ಈ ಆಧ್ಯಾತ್ಮಿಕ ಪ್ರವಾಸವನ್ನು ಕೈಗೊಳ್ಳುವ ಸಂಪ್ರದಾಯವನ್ನು ಬಹು ವರ್ಷಗಳಿಂದ ನಟ ಹೊಂದಿದ್ದಾರೆ. ಈ ಹಿಂದೆ ಹಿಮಾಲಯಕ್ಕೆ ಆಧ್ಯಾತ್ಮಿಕ ಪ್ರವಾಸಗಳನ್ನು ಮಾಡಿದ್ದ ರಜನಿಕಾಂತ್ ಈಗ ಮತ್ತಷ್ಟು ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸುತ್ತಿದ್ದಾರೆ. ಈ ವೇಳೆ ಲೋಕಸಭಾ ಚುನಾವಣಾ ಫಲಿತಾಂಶಗಳ ಬಗ್ಗೆ ನಟನಿಗೆ ಪ್ರಶ್ನೆ ಎದುರಾಗಿದೆ. ಈ ವೇಳೆ ರಜನಿ ʻʻಯಾವುದೇ ರೀತಿಯ ರಾಜಕೀಯ ಪ್ರಶ್ನೆಗಳನ್ನು ಕೇಳಬೇಡಿʼʼ ಎಂದು ನಗುತ್ತ ವಿನಂತಿಸಿದ್ದಾರೆ.

ಈ ಹಿಂದೆ ಹಿಮಾಲಯಕ್ಕೆ ಆಧ್ಯಾತ್ಮಿಕ ಪ್ರವಾಸಗಳನ್ನು ಮಾಡಿದ್ದ ರಜನಿಕಾಂತ್ ಈಗ ಮತ್ತಷ್ಟು ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸುತ್ತಿದ್ದಾರೆ. ಸೂಪರ್‌ಸ್ಟಾರ್ ಚೆನ್ನೈನಿಂದ ಹೊರಟು ಉತ್ತರಾಖಂಡದ ಡೆಹ್ರಾಡೂನ್‌ಗೆ ಆಗಮಿಸಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಈ ವೇಳೆ ಮಾಧ್ಯಮಗಳು ಲೋಕಸಭಾ ಚುನಾವಣಾ ಫಲಿತಾಂಶಗಳ ಬಗ್ಗೆ ನಟನಿಗೆ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ರಜನಿ ʻʻಯಾವುದೇ ರೀತಿಯ ರಾಜಕೀಯ ಪ್ರಶ್ನೆಗಳನ್ನು ಕೇಳಬೇಡಿ. “ಅಣ್ಣಾ…ನೋ ಕಮೆಂಟ್ಸ್ ಎಂದು ಅಲ್ಲಿಂದ ಮುಂದೆ ತೆರಳಿದ್ದಾರೆ.

ಇದನ್ನೂ ಓದಿ: Actor Rajinikanth: ಮೊಮ್ಮಗನ ಕ್ರಿಕೆಟ್‌ ಥೀಮ್‌ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾದ ತಲೈವಾ!

ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ, ರಜನಿಕಾಂತ್ ತಮ್ಮ ಆಧ್ಯಾತ್ಮಿಕ ಪ್ರವಾಸಗಳ ಬಗ್ಗೆ ಮಾಧ್ಯಮದ ಜತೆ ಮಾತನಾಡಿದರು. “ಪ್ರತಿ ವರ್ಷ ನಾನು ಹೊಸ ಅನುಭವವನ್ನು ಪಡೆಯುತ್ತಿದ್ದೆ, ಅದು ನನ್ನ ಆಧ್ಯಾತ್ಮಿಕ ಪ್ರಯಾಣವನ್ನು ಮತ್ತೆ ಮತ್ತೆ ಮುಂದುವರಿಸುವಂತೆ ಮಾಡಿತು. ಈ ಬಾರಿಯೂ ನಾನು ಹೊಸ ಅನುಭವಗಳನ್ನು ಪಡೆಯುತ್ತೇನೆ ಎಂದು ನಾನು ನಂಬುತ್ತೇನೆ” ಎಂದು ಅವರು ಹೇಳಿದರು.

ರಜನಿಕಾಂತ್ ಅವರು ಆಧ್ಯಾತ್ಮಿಕತೆ ಏಕೆ ಮುಖ್ಯ ಎಂಬುದರ ಕುರಿತು ಮಾತನಾಡಿದರು. “ಇಡೀ ಜಗತ್ತಿಗೆ ಆಧ್ಯಾತ್ಮಿಕತೆಯ ಅಗತ್ಯವಿದೆ, ಏಕೆಂದರೆ ಅದು ಪ್ರತಿಯೊಬ್ಬ ಮನುಷ್ಯನಿಗೂ ಮುಖ್ಯವಾಗಿದೆ. ಆಧ್ಯಾತ್ಮಿಕವಾಗಿರುವುದು ಎಂದರೆ ಶಾಂತಿ ಮತ್ತು ನೆಮ್ಮದಿಯನ್ನು ಅನುಭವಿಸುವುದು ಮತ್ತು ಮೂಲಭೂತವಾಗಿ ಇದು ದೇವರಲ್ಲಿ ನಂಬಿಕೆಯನ್ನು ಒಳಗೊಂಡಿರುತ್ತದೆʼʼಎಂದರು.

ಇತ್ತೀಚೆಗೆ ರಜನಿಕಾಂತ್ ಅವರು ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಭೇಟಿ ನೀಡಿದ್ದರು. ಕೆಲವು ದಿನಗಳ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್, ನಟ ರಜನಿಕಾಂತ್ ಅವರಿಗೆ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ. ವೆಟ್ಟೈಯನ್ ಚಿತ್ರದ ಶೂಟಿಂಗ್ ಮುಗಿಸಿರು ರಜನಿಕಾಂತ್​ (Rajinikanth) ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ವಿಶ್ರಾಂತಿ ಪಡೆದಿದ್ದರು. ಅಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ರಜನಿಕಾಂತ್ ಭಾಗವಹಿಸಿದ್ದರು. ಗೋಲ್ಡನ್​ ವೀಸಾ ನೀಡಿದ ಅಬುಧಾಬಿ ಸರ್ಕಾರಕ್ಕೆ ನಟ ರಜನಿಕಾಂತ್​ ಧನ್ಯವಾದ ಕೂಡ ಹೇಳಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ ರಜನಿಕಾಂತ್ ಅವರು ಟಿಜೆ ಜ್ಞಾನವೇಲ್ ನಿರ್ದೇಶನದ ʻವೆಟ್ಟೈಯಾನ್ʼ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ವೆಟ್ಟೈಯನ್ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್ ಕೂಡ ನಟಿಸಿದ್ದಾರೆ.

ರಜನಿಕಾಂತ್ ಅವರ 170ನೇ ಚಿತ್ರವಾಗಿರುವ ವೆಟ್ಟೈಯಾನ್ ಈ ವರ್ಷದ ಅಕ್ಟೋಬರ್‌ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ಮಂಜು ವಾರಿಯರ್ ಮತ್ತು ದುಶಾರಾ ವಿಜಯನ್ ಸೇರಿದಂತೆ ಸಮಗ್ರ ತಾರಾಗಣವಿದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೆಟ್ಟೈಯಾನ್ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿರಲಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ‌ ನಡೆಸಲಾಗಿದೆ.

Exit mobile version