ಬೆಂಗಳೂರು: ʻಜೈಲರ್’ ಬಳಿಕ ರಜನಿಕಾಂತ್ (Actor Rajinikanth) ‘ಲಾಲ್ ಸಲಾಂ’ (Lal Salaam) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ನಂತರ ಜ್ಞಾನವೇಲ್ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಎರಡೂ ಸಿನಿಮಾಗಳು ಮುಗಿದ ಬಳಿಕ ಕಾಲಿವುಡ್ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ತಲೈವಾ ನಟಿಸುವುದು ಫಿಕ್ಸ್ ಆಗಿದೆ. ‘ತಲೈವರ್ 171’ ಗಾಗಿ (Thailaiver 171) ಲೋಕೇಶ್ ಕನಕರಾಜ್ (Lokesh Kanagaraj) ಅವರೊಂದಿಗೆ ಕೈ ಜೋಡಿಸುವುದು ಪಕ್ಕಾ ಎಂದು ಸನ್ ಪಿಕ್ಚರ್ಸ್‌ನ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಈ ಹಿಂದೆ ಪೋಸ್ಟ್ ಮಾಡಿತ್ತು. ಇದೀಗ ಹೊಸ ಮಾಹಿತಿ ಪ್ರಕಾರ ಅಕ್ಕಿನೇನಿ ನಾಗಾರ್ಜುನ ಅವರು ಈ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಈ ಸುದ್ದಿ ನಿಜ ಅಂತಾದರೆ ರಜನಿಕಾಂತ್ ಹಾಗೂ ನಾರ್ಜುನ ಅವರು 32 ವರ್ಷಗಳ ಬಳಿಕ ತೆರೆ ಮೇಲೆ ನೋಡಬಹುದು. ನಾಗಾರ್ಜುನಗೆ ಮಲ್ಟಿಸ್ಟಾರರ್ ಸಿನಿಮಾ ಹೊಸದೇನು ಅಲ್ಲ. ಇತ್ತೀಚೆಗೆ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಜತೆ ಕಾಣಿಸಿಕೊಂಡಿದ್ದರು. ಈಗ ಧನುಷ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಊಪಿರಿ’ ಸಿನಿಮಾದಲ್ಲೂ ಕಾರ್ತಿ ಜೊತೆ ನಾಗಾರ್ಜುನ ಜತೆ ನಟಿಸಿದ್ದರು. ಹೀಗಾಗಿ ರಜನಿಕಾಂತ್ ಜತೆ ನಟಿಸಬಹುದು ಎಂದು ಹೇಳಲಾಗುತ್ತಿದೆ.
ಟಿ.ಜೆ.ಜ್ಞಾನವೇಲ್ ನಿರ್ದೇಶನದ ಈ ಸಿನಿಮಾದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಇಬ್ಬರು ಜತೆಯಾಗಿ ನಟಿಸುತ್ತಿರುವ ಫೋಟೊ ಇಂಟರ್‌ನೆಟ್‌ನಲ್ಲಿ ಹರಿದಾಡಿ ವೈರಲ್ ಆಗಿತ್ತು. ವಿಶೇಷ ಎಂದರೆ ಈ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಬಾಲಿವುಡ್ ನಟ ಅಮಿತಾಭ್ ಬಚ್ಚನ್, ರಾಣಾ ದಗ್ಗುಬಾಟಿ, ಮಲಯಾಳಂ ನಟಿ ಮಂಜು ವಾಯಿಯರ್, ರಿತಿಕಾ ಸಿಂಗ್, ದುಶಾರಾ ವಿಜಯನ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಲಿದ್ದಾರೆ.
ಇದನ್ನೂ ಓದಿ: Actor Rajinikanth: ಬಾಲಿವುಡ್ ಖ್ಯಾತ ನಿರ್ಮಾಪಕರೊಂದಿಗೆ ಕೈ ಜೋಡಿಸಿದ ರಜನಿಕಾಂತ್; ತಲೈವಾ ಹೊಸ ಚಿತ್ರ ಯಾವಾಗ?
Wommala just 3.5 hours away 💥
— Parthiban (@parthispeaks) April 22, 2024
The Strom is coming 💥💥#Thalaivar171 #Thalaivar171TitleReveal pic.twitter.com/zTaU6XRPfh
ಕಥೆ ಏನು?
‘ವೆಟ್ಟೈಯನ್’ ಚಿತ್ರದಲ್ಲಿ ರಜನಿಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ತಿರುವನಂತಪುರಂ, ತಿರುನೆಲ್ವೇಲಿ ಮತ್ತು ಮುಂಬೈ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಈಗಾಗಲೇ ಚಿತ್ರೀಕರಣ ನಡೆದಿದೆ. ತಮಿಳು ಜತೆಗೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.
ಟೀಸರ್ ಬಿಡುಗಡೆ
ಇತ್ತೀಚೆಗೆ ‘ವೆಟ್ಟೈಯನ್’ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಲಾಠಿ ಹಿಡಿದು ರಜನಿಕಾಂತ್ ಆಗಮಿಸುವ ದೃಶ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಜತೆಗೆ ರಜನಿಕಾಂತ್ ತಮ್ಮದೇ ಶೈಲಿಯಲ್ಲಿ ಕನ್ನಡಕ ಹಾಕಿಕೊಳ್ಳುತ್ತ ಡೈಲಾಗ್ ಹೇಳುವ ದೃಶ್ಯ, ಕೈ ಹಿಂಬದಿಯಲ್ಲಿಟ್ಟುಕೊಂಡು ಚಿಟಿಕೆ ಹೊಡೆಯುವ ಸೀನ್ ಗಮನ ಸೆಳೆದಿತ್ತು. ʼವೆಟ್ಟೈಯನ್ʼ ಎಂದರೆ ಕನ್ನಡದಲ್ಲಿ ಬೇಟೆಗಾರ ಎಂದರ್ಥ. ಈ ಸಿನಿಮಾದಲ್ಲಿ ರಜನಿಕಾಂತ್ ಅಪರಾಧಿಗಳ ಬೇಟೆಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಆಗಲೇ ಪ್ರೇಕ್ಷಕರು ಊಹಿಸಿದ್ದರು.