ಬೆಂಗಳೂರು: ಇಂದು (ಜುಲೈ 23)ಕಾಲಿವುಡ್ ನಟ ಸೂರ್ಯ (Actor Suriya) ಅವರಿಗೆ ಜನುಮದಿನದ ಸಂಭ್ರಮ ಸೂರ್ಯ 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೀಗ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರು ತಾತ್ಕಾಲಿಕವಾಗಿ ಸೂರ್ಯ 44 ಎಂದು ಕರೆಯಲ್ಪಡುವ ಸಿನಿಮಾದಿಂದ ಸೂರ್ಯ ಫ್ಯಾನ್ಸ್‌ಗೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ. ಈ ಸಿನಿಮಾದ ಪ್ರೋಮೊ ಇದೀಗ ಔಟ್ ಆಗಿದೆ. ಪ್ರೋಮೊದಲ್ಲಿ ಗ್ಯಾಂಗ್‌ಸ್ಟರ್ ಆಗಿ ಮಿಂಚಿದ್ದಾರೆ ಸೂರ್ಯ. ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ.
ಕಾರ್ತಿಕ್ ಸುಬ್ಬರಾಜ್ ಅವರು ಪ್ರೋಮೋ ಜತೆಗೆ ಟ್ವೀಟ್ “ಜನ್ಮದಿನದ ಶುಭಾಶಯಗಳು ಸೂರ್ಯ ಸರ್. ಟೀಮ್ ಸೂರ್ಯ 44 ರಿಂದ.” ಎಂದು ವಿಶ್ ಮಾಡಿದ್ದಾರೆ. ಒಂದು ನಿಮಿಷ-37-ಸೆಕೆಂಡುಗಳ ಪ್ರೋಮೊದಲ್ಲಿ ರಗಡ್ ಆಗಿ ಕಂಡಿದ್ದಾರೆ.
ಸೂರ್ಯ ಅವರ ರೆಟ್ರೋ ಲುಕ್ ಈಗಾಗಲೇ ಅನಾವರಣಗೊಂಡಿದೆ. ಜಯರಾಮ್, ಕರುಣಾಕರನ್ ಮತ್ತು ಜೋಜು ಜಾರ್ಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜುಲೈನಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸುಮಾರು ಒಂದು ತಿಂಗಳ ಕಾಲ ಚಿತ್ರೀಕರಣದ ನಂತರ, ಪೂಜಾ ಅವರು ಚಿತ್ರದ ಮೊದಲ ಶೆಡ್ಯೂಲ್ ಅನ್ನು ಪೂರ್ಣಗೊಳಿಸಿದಾಗ ಪೋಸ್ಟ್ ಅನ್ನು ಹಂಚಿಕೊಂಡಿದ್ದರು.
ಈ ಸಿನಿಮಾವನ್ನು ತಮಿಳಿನ ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಲಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಾದ ‘ಜಿಗರ್ಥಂಡಾ’, ರಜನೀಕಾಂತ್ ನಟನೆಯ ‘ಪೆಟ್ಟಾ’, ‘ಜಿಗರ್ ಥಂಡಾ ಡಬಲ್ ಎಕ್ಸ್’, ‘ಮಹಾನ್’ ಇನ್ನಿತರೆ ಸಿನಿಮಾಗಳನ್ನು ಇವರು ನಿರ್ದೇಶಿಸಿದ್ದಾರೆ.2022 ರಲ್ಲಿ ಬಿಡುಗಡೆ ಆದ ‘ಆಚಾರ್ಯ’ ಸಿನಿಮಾ ಬಳಿಕ ಪೂಜಾ ಹೆಗ್ಡೆ ಯಾವುದೇ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೀಗ ‘ಸೂರ್ಯ 44’ ಸಿನಿಮಾ ಮೂಲಕ ಪೂಜಾ ಕಮ್ ಬ್ಯಾಕ್ ಮಾಡಿದ್ದಾರೆ
ಇದನ್ನೂ ಓದಿ: Actor Suriya: ರೆಟ್ರೋ ಲುಕ್‌ನಲ್ಲಿ ಕಂಡ ನಟ ಸೂರ್ಯ; ಸಖತ್ ಥ್ರಿಲ್ ಆದ್ರು ಫ್ಯಾನ್ಸ್!
ʻಕಂಗುವʼ ಸಿನಿಮಾ
ಈಗಾಗಲೇ ಸೂರ್ಯ ಅಭಿನಯದ ಕಂಗುವ ಸಿನಿಮಾ (Kanguva vs Alia Bhatt) ರಿಲೀಸ್ ಡೇಟ್ ಅನೌನ್ಸ್ ಆಗಿದೆ. “ಕಂಗುವ” ಪ್ರೇಕ್ಷಕರಿಗೆ ಹೆಚ್ಚು ನಿರೀಕ್ಷಿತ ಚಿತ್ರವಾಗಿದೆ. ಶಿವ ನಿರ್ದೇಶನದ ಈ ಚಿತ್ರದಲ್ಲಿ ಸೂಪರ್‌ಸ್ಟಾರ್ ಸೂರ್ಯ ಸಂಪೂರ್ಣವಾಗಿ (Kanguva Movie) ಹೊಸ ಅವತಾರದಲ್ಲಿ ನಟಿಸಿದ್ದಾರೆ. ಮೂರು ಅವತಾರದಲ್ಲಿ ಸೂರು ಮಿಂಚುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಸೂರ್ಯ ಅವರ ಪ್ರತಿಯೊಂದು ಪಾತ್ರವು ಹಿಂದೆಂದೂ ನೋಡಿರದ ವಿಭಿನ್ನ ಲುಕ್ ಇರಲಿದೆ ಎಂದಿದ್ದಾರೆ.
ಶಿವ-ನಿರ್ದೇಶನದ ಈ ಸಿನಿಮಾ ಅಕ್ಟೋಬರ್ 10 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಕಂಗುವಾದಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ನಟಿಸಿದ್ದಾರೆ. ಈ ಸಿನಿಮಾ 38 ಜಾಗತಿಕ ಭಾಷೆಗಳಲ್ಲಿ 3D ನಲ್ಲಿ ಬಿಡುಗಡೆಯಾಗಲಿದೆ.
ಮೂಲಗಳ ಪ್ರಕಾರ ಅಮೆಜಾನ್ ಪ್ರೈಂ ಸಂಸ್ಥೆ ಬರೋಬ್ಬರಿ 80 ಕೋಟಿ ರೂ. ಖರೀದಿ ಮಾಡಿದೆಯಂತೆ. ಇದು ಎಲ್ಲ ಭಾಷೆಯ ಹಕ್ಕುಗಳನ್ನೂ ಒಳಗೊಂಡಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಕೋವೈ ಸರಳಾ, ಯೋಗಿ ಬಾಬು, ಆನಂದ್ ರಾಜ್, ರೆಡಿನ್ ಕಿಂಗ್ಸ್ಲಿ, ರವಿ ರಾಘವೇಂದ್ರ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.