ಬೆಂಗಳೂರು: ʻಸೂರ್ಯವಂಶ’, ‘ನಾಗಮಂಡಲ’, ಸಿನಿಮಾ ಖ್ಯಾತಿಯ ಬಹುಭಾಷಾ ನಟಿ ವಿಜಯಲಕ್ಷಿ (Actress Vijayalakshmi) ಮತ್ತೆ ವಿವಾದದಲ್ಲಿದ್ದಾರೆ. ನಾಮ್ ತಮಿಳರ್ ಪಾರ್ಟಿಯ ಸೀಮಾನ್ (Naam Tamilar Party) (Seeman) ವಿರುದ್ಧ ಅವರು ಗಂಭೀರ ಆರೋಪಗಳನ್ನು ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೊ ಮೂಲಕ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಇದು ತನ್ನ ಕೊನೆಯ ವಿಡಿಯೊ ಎಂದು ಹೇಳಿಕೊಂಡಿದ್ದಾರೆ.
ʻʻ2023ರಲ್ಲಿ ನನ್ನನ್ನು ಮದುವೆ ಆಗುವುದಾಗಿ ಭರವಸೆ ನೀಡಿ, ನನ್ನ ಜತೆ ಸೀಮಾನ್ ಮೂರು ವರ್ಷ ಇದ್ದ. ಯಾರಿಗೂ ಗೊತ್ತಾಗದಂತೆ ಆತ ನನ್ನ ಜತೆ ರಹಸ್ಯವಾಗಿ ಮದುವೆ ಆದ. ನನ್ನ ಬದುಕನ್ನೇ ಹಾಳು ಮಾಡಿದʼʼ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಫೆಬ್ರವರಿ 29ರಂದು ವಿಜಯಲಕ್ಷ್ಮಿ ಅವರು ತಮ್ಮ ನಿವಾಸದ ಟೆರೇಸ್‌ನಿಂದ ವಿಡಿಯೊವನ್ನು ಹಂಚಿಕೊಂಡಿದ್ದರು. ಸೀಮಾನ್ ತಮ್ಮ ಜತೆ ಮಾತನಾಡಬೇಕು ಎಂದು ವಿಡಿಯೊದಲ್ಲಿ ಮನವಿ ಮಾಡಿಕೊಂಡಿದ್ದರು. ಇದೀಗ ಹೊಸ ವಿಡಿಯೊ ಶೇರ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ವಿಜಯಲಕ್ಷ್ಮಿ ಅವರು ಈಗ 2 ನಿಮಿಷ 45 ಸೆಕೆಂಡ್‌ಗಳ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಜಯಲಕ್ಷ್ಮಿ ಅವರು ಆ ವಿಡಿಯೊ ಹಂಚಿಕೊಂಡು 5 ದಿನ ಕಳೆದರೂ ಕೂಡ ಸೀಮಾನ್ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಈ ರೀತಿ ವಿಡಿಯೊ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ನನಗೆ ಭಾವನಾತ್ಮಕವಾಗಿ ಎಷ್ಟು ನೋವಾಗಿರಬಹುದು ಎಂದು ನೀವೇ ಯೋಚಿಸಿ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
ಇದನ್ನೂ ಓದಿ: Actor Ravichandran: ಪ್ರೇಮಲೋಕ 2 : ಸಿನಿಮಾದಲ್ಲಿ ಎಲ್ಲರಿಗೂ ನಟಿಸೋ ಅವಕಾಶ ಇದೆ ಎಂದ ರವಿಚಂದ್ರನ್!
#WATCH | உண்மையிலேயே இதுதான் என்னோட கடைசி வீடியோ!
— Reflect News Tamil (@reflectnewstn) March 5, 2024
நடிகை விஜயலட்சுமி வெளியிட்ட தற்கொலை மிரட்டல் வீடியோ!
“என் மரணம் சீமான் யாருன்னு காமிக்கும்… எல்லாருக்கும் நன்றி!”#ActressVijayalaxmi | #Seeman | #vijayalaxmi | #விஜயலட்சுமி | #vijayalakshmi | #ntk | #NaamThamizharKatchi pic.twitter.com/oOLgbuImzi
ʻʻನನ್ನ ಸಹೋದರಿಯ ಸಮಸ್ಯೆಯಿಂದಾಗಿ ನಾನು ಸೀಮಾನ್ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದೆ. ಆಗ ಸೀಮಾನ್ ಅವಿವಾಹಿತರಾಗಿದ್ದರು. ಮದುವೆಯಾಗುವುದಾಗಿ ಭರವಸೆ ನೀಡಿ ಮೂರು ವರ್ಷಗಳ ಕಾಲ ನನ್ನೊಂದಿಗೆ ಇದ್ದು ನನ್ನ ಜೀವನವನ್ನು ಹಾಳು ಮಾಡಿದರು. ನನ್ನನ್ನು ರಹಸ್ಯವಾಗಿ ಮದುವೆಯಾದರು. ನನ್ನ ಇಡೀ ಜೀವನವನ್ನು ನಾಶ ಮಾಡಿದರು. ನಂತರ ಅವರಿಗೆ ಯಾವುದೋ ಸಮಸ್ಯೆ ಎದುರಾದಾಗ ನನ್ನನ್ನು ತ್ಯಜಿಸಿದರುʼʼ ಎಂದು ತಮಿಳಿನಲ್ಲಿ ಹೇಳಿಕೊಂಡಿದ್ದಾರೆ.
ʻʻಇದು ನನ್ನ ಕೊನೆಯ ವಿಡಿಯೋ. ಇನ್ನು ಎರಡು ದಿನದೊಳಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನು ಕರ್ನಾಟಕದಲ್ಲಿ ಸಾಯಲು ಸಿದ್ಧ. ಇದಕ್ಕೆಲ್ಲ ಸೀಮಾನ್ ಕಾರಣ’ ಎಂದು ವಿಜಯಲಕ್ಷ್ಮಿ ವಿಡಿಯೊದಲ್ಲಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ವಿಜಯಲಕ್ಷ್ಮಿ ಅವರು ಈಗಾಗಲೇ 2023ರಲ್ಲಿ ಚೆನ್ನೈನಲ್ಲಿರುವ ಕಮಿಷನರ್ ಕಚೇರಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಸೀಮಾನ್ ಪತ್ನಿ ಎಂದು ಒಪ್ಪಿಕೊಂಡರೆ ಪ್ರಕರಣವನ್ನು ಹಿಂಪಡೆಯುವುದಾಗಿ ನಟಿ ಹೇಳಿಕೊಂಡಿದ್ದರು.