Site icon Vistara News

Aishwarya Rajinikanth: ಮಗಳ ಹೊಸ ಮನೆ ಕಂಡು ಹುಬ್ಬೇರಿಸಿದ ರಜನಿಕಾಂತ್!

Aishwarya Rajinikanth new house priceless reaction Rajinikanth

ಬೆಂಗಳೂರು: ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ (Aishwarya Rajinikanth) ಹೊಸ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ರಜನಿ ಮತ್ತು ಪತ್ನಿ ಲತಾ ಮಗಳ ಹೊಸ ಮನೆಗೆ ಭೇಟಿ ನೀಡಿದ್ದರು. ಮಾತ್ರವಲ್ಲ ಮನೆಯ ಒಳಾಂಗಣ ಮತ್ತು ಇಂಟಿರಿಯರ್‌ ಡಿಸೈನ್‌ ಕಂಡು ರಜನಿ ಫುಲ್‌ ಫಿದಾ ಆದರು. ಮನೆಯ ಒಳಗೆ ಬರಬರುತ್ತಲೇ ಅಲಂಕಾರಗಳನ್ನು ಕಂಡು ಹುಬ್ಬೇರಿಸಿದ್ದಾರೆ. ಇದೀಗ ಈ ವಿಡಿಯೊಗಳು ವೈರಲ್‌ ಆಗಿವೆ.

ರಜನಿಕಾಂತ್ ಮಗಳು ಐಶ್ವರ್ಯಾ ಅವರು ಹೊಸದಾಗಿ ಖರೀದಿಸಿದ ಮನೆಗೆ ರಜನಿ ದಂಪತಿ ಭೇಟಿ ಕೊಟ್ಟಿದ್ದಾರೆ. . ಬಾಗಿಲಲ್ಲಿ ಮಗಳು ತಂದೆ ತಾಯಿಗೆ ಸ್ವಾಗತಿಸಿದ ಬಳಿಕ ರಜನಿ ಬಾಲ್ಕನಿಗೆ ಹೋಗಿ ಮನೆ ತುಂಬ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇಡೀ ಮನೆ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು. ಬಳಿಕ ಲತಾ ಅವರು ದೇವರ ಮನೆಯಲ್ಲಿ ದೀಪ ಹಚ್ಚಿ ಮಗಳಿಗೆ ವಿಶ್‌ ಮಾಡಿದ್ದಾರೆ.

 ನಟ ಧನುಷ್ (Actor Dhanush) ಹಾಗೂ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಇತ್ತೀಚೆಗೆ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅಕ್ಟೋಬರ್ 7ರಂದು ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ. ಈ ಸಂಬಂಧ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Aishwaryaa Rajinikanth: ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಕದ್ದ ಕಳ್ಳರು ಕೊನೆಗು ಸಿಕ್ಕಿಬಿದ್ದರು; ಯಾರವರು?

ಪರಸ್ಪರ ಒಪ್ಪಿಗೆ ಮೇರೆಗೆ ಜೋಡಿ ವಿಚ್ಛೇದನ ಸಲ್ಲಿಸಿತ್ತು. ಕಳೆದ ಎರಡು ವರ್ಷಗಳಿಂದ ಧನುಷ್ ಮತ್ತು ಐಶ್ವರ್ಯ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಧನುಷ್ ಹಾಗೂ ಐಶ್ವರ್ಯಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಮದುವೆಯಾಗಿ ಬರೋಬ್ಬರಿ 18 ವರ್ಷಗಳ ಬಳಿಕ ದೂರಾಗುತ್ತಿರುವುದಾಗಿ ಹೇಳಿದ್ದರು. ವಿಚ್ಛೇದನ ವಿಚಾರ ಘೋಷಣೆ ಬಳಿಕ ಇಬ್ಬರು ತಮ್ಮ ಮಕ್ಕಳಾದ ಯಾತ್ರಾ ಮತ್ತು ಲಿಂಗ ಶಾಲೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.

ಜನವರಿ 2022ರಲ್ಲಿ ಬೇರೆಯಾಗುತ್ತಿದ್ದೇವೆ ಎಂದು ದಂಪತಿ ಘೋಷಿಸಿದ್ದರು. “18 ವರ್ಷಗಳ ಕಾಲ ಸ್ನೇಹಿತರು, ದಂಪತಿಗಳಾಗಿ , ಪೋಷಕರಾಗಿ ಹಿತೈಷಿಗಳಾಗಿ ಒಟ್ಟಿಗೆ ಇದ್ದೆವು. ಈ ಪಯಣ ನಮ್ಮಿಬ್ಬರ ಪ್ರಗತಿ, ತಿಳಿವಳಿಕೆ, ಹೊಂದಾಣಿಕೆ ಮತ್ತು ಪರಸ್ಪರ ಸ್ವೀಕಾರದ ಹಾದಿಯಾಗಿತ್ತು. ಇಂದು ನಾವು ನಮ್ಮ ಪ್ರತ್ಯೇಕ ಮಾರ್ಗಗಳನ್ನು ಕಂಡುಕೊಂಡಿದ್ದೇವೆ. ಐಶ್ವರ್ಯಾ ಮತ್ತು ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ಹಿಡಿಯಲಿದೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ. ಓಂ ನಮಶಿವಾಯ” ಎಂದು ಒಂದೂವರೆ ವರ್ಷದ ಹಿಂದೆ ಧನುಷ್ ಟ್ವೀಟ್ ಮಾಡಿದ್ದರು. ಹಿರಿಯ ನಟ ರಜನಿಕಾಂತ್ ಅವರ ಪುತ್ರಿ ಧನುಷ್ ಮತ್ತು ಐಶ್ವರ್ಯಾ ಅವರು 2004ರಲ್ಲಿ ವಿವಾಹವಾಗಿದ್ದರು.
ಇಬ್ಬರೂ ಮತ್ತೆ ಒಂದಾಗಬೇಕು ಎಂದು ಆಪ್ತರು, ಅಭಿಮಾನಿಗಳು ಬಯಸಿದ್ದರು. ಆದರೆ ಈಗ ಸದ್ಯದಲ್ಲೇ ಇವರ ವಿಚ್ಛೇದನ ಅಂತಿಮಗೊಳ್ಳಲಿದೆ. ಈ ವಿಚಾರದಲ್ಲಿ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಐಶ್ವರ್ಯಾ ಇತ್ತೀಚೆಗೆ ʻಲಾಲ್ ಸಲಾಂʼ ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳಿದ್ದರು. ಇದರಲ್ಲಿ ರಜನಿಕಾಂತ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು

Exit mobile version