ಬೆಂಗಳೂರು: ನಟ ಅಜಿತ್ ಕುಮಾರ್ (Ajith Kumar) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ವಕ್ತಾರರು ಖಚಿತಪಡಿಸಿದ್ದಾರೆ. ಅವರು ತಮ್ಮ ಮೆದುಳಿನಲ್ಲಿನ ನರ ಸಂಬಂಧಿ ಸಮಸ್ಯೆಯಿಂದ ಪಾರಾಗಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ವದಂತಿಗಳಿತ್ತು. ನಟ ನರಗಳ ಊತಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಅಜಿತ್ ಅವರ ವಕ್ತಾರ ಸುರೇಶ್ ಚಂದ್ರ ಮಾಧ್ಯಮದ ಜತೆ ಮಾತನಾಡಿ ʻಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಸುದ್ದಿ ಸುಳ್ಳು. ನರಗಳ ಊತಕ್ಕೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾನ್ಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಜಿತ್ ಆರೋಗ್ಯವಾಗಿದ್ದಾರೆ. ಎರಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುವುದುʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Ajith Kumar : ತಮಿಳು ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲು
Happy New Year 2024 Everyone 🎊🎉
— Ajith Kumar (@ThalaFansClub) December 31, 2023
Let's begin the new year with some awesome #VidaaMuyarchi updates.
Satellite Rights: @SunTV
OTT Rights: @NetflixIndia
Music Rights: @SonyMusicSouth#AjithKumar pic.twitter.com/9Sg3VpjZej
ವಿಡಾ ಮುಯಾರ್ಚಿ’ ಸಿನಿಮಾದಲ್ಲಿ ನಟ ಸದ್ಯ ಬ್ಯುಸಿಯಾಗಿದ್ದರು. ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದ್ದು, ಅವರೀಗ ಚೆನ್ನೈನಲ್ಲಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಮಗನ ಹುಟ್ಟುಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಆಚರಿಸಿಕೊಂಡಿದ್ದರು. ತಮಿಳಿನಲ್ಲಿ ವಿಡಾ ಮುಯಾರ್ಚಿ ಎಂದರೆ ದೃಢಸಂಕಲ್ಪ,. ಚಿತ್ರಕ್ಕೆ ನೀರವ್ ಶಾ ಅವರ ಛಾಯಾಗ್ರಹಣವಿದೆ. ಅಜಿತ್ ಅವರ ಇತ್ತೀಚಿನ ಹಲವು ಸಿನಿಮಾಗಳಲ್ಲಿ ನೀರವ್ ಛಾಯಾಗ್ರಹಣ ನಿಭಾಯಿಸಿದ್ದಾರೆ.
ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದ ‘ವಿಡಾ ಮುಯಾರ್ಚಿ’ ಅಜಿತ್, ತ್ರಿಶಾ, ಅರ್ಜುನ್, ಆರವ್, ರೆಜಿನಾ ಕಸ್ಸಂಡ್ರಾ, ಮೇಬು ಜಾರ್ಜ್ ತಾರೆಗಳು ಇದ್ದಾರೆ. ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಎನ್ ಬಿ ಶ್ರೀಕಾಂತ್ ಸಂಕಲನ ಓಂ ಪ್ರಕಾಶ್ ಮತ್ತು ನೀರವ್ ಶಾ ಅವರ ಛಾಯಾಗ್ರಹಣವಿದೆ. ಚುನಾವಣೆ ನಂತರ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.